ಹಿಂದೂ-ಮುಸ್ಲಿಂ ಭಾವೈಕ್ಯ: ಒಂದೇ ಕಡೆ ಬಾಬಾ ಸಮಾಧಿ-ಹನುಮಾನ್ ದೇಗುಲ |
ಪ್ರಕಟಿಸಿದ ದಿನಾಂಕ : 2010-03-12
ಹರ್ದೋಯಿ ಜಿಲ್ಲೆಯ ಈ ಗ್ರಾಮದಲ್ಲಿ ಹನುಮಾನ್ ದೇವಾಲಯ ಮತ್ತು ಜಿಂದ್ ಪೀರ್‌ಬಾಬಾ ಅವರ ಸಮಾಧಿ ಒಂದೇ ಸ್ಥಳದಲ್ಲಿದ್ದು ಇಲ್ಲಿಗೆ ಬರುವ ಭಕ್ತರು ಎರಡೂ ಕಡೆ ನಮನ ಸಲ್ಲಿಸುತ್ತಾರೆ.
ಗದ್ದಿಯಾಜಿಪುರ (ಉತ್ತರ ಪ್ರದೇಶ), (ಐಎಎನ್‌ಎಸ್): ಉತ್ತರ ಪ್ರದೇಶದ ರಾಜಧಾನಿ ಲಖನೌದಿಂದ ಸುಮಾರು 110 ಕಿ.ಮೀ. ದೂರದಲ್ಲಿನ ಗದ್ದಿಯಾಜಿಪುರ ಹಿಂದೂ- ಮುಸ್ಲಿಂ ಭಾವೈಕ್ಯಕ್ಕೆ ಪ್ರಸಿದ್ಧಿಯಾಗಿದ್ದು ಜಾತ್ಯತೀತ ನಡವಳಿಕೆಗೆ ಉತ್ತಮ ಆದರ್ಶ ತಾಣ ಎನಿಸಿದೆ.
ಹರ್ದೋಯಿ ಜಿಲ್ಲೆಯ ಈ ಗ್ರಾಮದಲ್ಲಿ ಹನುಮಾನ್ ದೇವಾಲಯ ಮತ್ತು ಜಿಂದ್ ಪೀರ್‌ಬಾಬಾ ಅವರ ಸಮಾಧಿ ಒಂದೇ ಸ್ಥಳದಲ್ಲಿದ್ದು ಇಲ್ಲಿಗೆ ಬರುವ ಭಕ್ತರು ಎರಡೂ ಕಡೆ ನಮನ ಸಲ್ಲಿಸುತ್ತಾರೆ.
ಯಾರಾದರೂ ಕೇವಲ ಬಾಬಾರ ಸಮಾಧಿ ಅಥವಾ ಹನುಮಾನ್ ದೇವಾಲಯಕ್ಕೆ ಮಾತ್ರವೇ ತಮ್ಮ ಭಕ್ತಿ ಸಮರ್ಪಣೆ ಮಾಡಿದ್ದೇ ಆದರೆ ಅಪೂರ್ಣವಾಗುತ್ತದೆ ಎಂಬ ನಂಬಿಕೆ ಇಲ್ಲಿನ ಸ್ಥಳೀಯರದ್ದು. ಹೀಗಾಗಿ ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬ ಭಕ್ತರೂ ಎರಡೂ ಸ್ಥಳಗಳಿಗೆ ತಮ್ಮ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುವುದು ವಾಡಿಕೆಯಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ 59 ವರ್ಷದ ಕಾಂತಾ ಪುಷ್ಪಕ್. ಈ ಸ್ಥಳಕ್ಕೆ ಕನಿಷ್ಠ 80 ವರ್ಷಗಳ ಇತಿಹಾಸ ಹೊಂದಿದೆ ಎಂಬುದು ಸ್ಥಳೀಯರ ಅಂದಾಜು. 1930ರ ಸುಮಾರಿನಲ್ಲಿ ಇಲ್ಲಿ ವಾಸಿಸುತ್ತಿದ್ದ ಜಿಂದ್ ಪೀರ್ ಬಾಬಾ ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಇಲ್ಲಿನ ಜನರ ಹಲವು ಕಾಯಿಲೆಗಳನ್ನು ವಾಸಿ ಮಾಡುತ್ತಿದ್ದರು. ಇವರು ಕೇವಲ ಮುಸ್ಲಿಮರಿಗೆ ಮಾತ್ರವೇ ಪೂಜನೀಯರಾಗಿರದೆ ಹಿಂದೂಗಳಿಗೂ ಆರಾಧ್ಯ ಪುರುಷರಾಗಿದ್ದರು.
ತಮ್ಮಲ್ಲಿ ಬರುವ ಹಿಂದೂ ಭಕ್ತರು ತಮ್ಮನ್ನು ಪೂಜಿಸುವ ಬದಲಿಗೆ ಹಿಂದೂ ದೇವತೆಯನ್ನು ಪೂಜಿಸುವಂತೆ ಅವರು ಹೇಳುತ್ತಿದ್ದರು. ಇದರ ಪರಿಣಾಮವೇ ಅವರ ನಿಧನಾನಂತರ ಬಾಬಾರ ಸಮಾಧಿ ಸ್ಥಳದಲ್ಲಿ ಜನರು ಹನುಮಾನ್ ದೇವಾಲಯವನ್ನೂ ನಿರ್ಮಿಸಿ ಪೂಜಿಸಲು ಆರಂಭಿಸಿದರು. ವಾರದ ಏಳೂ ದಿನಗಳು ಇಲ್ಲಿ ಪೂಜೆ ನಡೆಯುತ್ತದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-12 00:00:00
|
|
|