ಕಾನ್-ಸ್ಟೆಬಲ್ ಕೊಲೆ ಯತ್ನ: ಐವರ ಬಂಧನ |
ಪ್ರಕಟಿಸಿದ ದಿನಾಂಕ : 2010-03-12
ಪುತ್ತೂರು, ಮಾ. ೧೧: ಮೂರು ದಿನಗಳ ಹಿಂದೆ ನೆಲ್ಯಾಡಿ ಪೇಟೆಯಲ್ಲಿರುವ ರಬ್ಬರ್ ಖರೀದಿ ಕೇಂದ್ರದ ಗೋದಾಮಿನಿಂದ ಕಳವಿಗೆ ವಿಫಲ ಯತ್ನ ನಡೆಸಿದ್ದಲ್ಲದೇ, ಬೆನ್ನಟ್ಟಿ ಬಂದ ಪೊಲೀಸ್ ಕಾನ್-ಸ್ಟೆಬಲ್ ನವೀನ್‌ಗೆ ಸರಳಿನಿಂದ ಹೊಡೆದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಆರೋಪಿಗಳನ್ನು ಪುತ್ತೂರು ಗ್ರಾಮಾಂ-ತರ ಪೊಲೀಸ್ ಸರ್ಕಲ್ ಇನ್ಸ್-ಪೆಕ್ಟರ್ ಬಿ.ಕೆ. ಮಂಜಯ್ಯ ಮತ್ತು ಸಿಬಂದಿ ಪತ್ತೆ ಹಚ್ಚಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ದೊರೆತ ಆರೋಪಿಗಳಿಗೆ ಸಂಬಂಧಿಸಿದ ಬೈಕ್‌ನ ಆಧಾರದಲ್ಲಿ ಪೊಲೀಸರು ಎಲ್ಲ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಹಳೆ ಆರೋಪಿ ಹಕ್ವಾಡಿ ಗೋಳಿ ನಿವಾಸಿ ಹರೀಶ್ ಯಾನೆ ಲಕ್ಷ್ಮಣ ಪೂಜಾರಿ, ಗುರುಪ್ರಸಾದ್, ಲಕ್ಷ್ಮೀಕಾಂತ ಮತ್ತು ಕೊಣಾಲು ಗ್ರಾಮದ ಕೊಲ್ಪೆಯ ನಿವಾಸಿಯಾಗಿರುವ ಸಮದ್ ಬಂಧಿತರು.
ಬೈಕ್‌ನ ನೋಂದಣಿ ಸಂಖ್ಯೆಯನ್ನು ಗುರುತಿಸಿ, ಅದರ ಮಾಲಕರು ಯಾರು ಎಂಬುದನ್ನು ಪತ್ತೆ ಹಚ್ಚುವ ಮೂಲಕ ಪೊಲೀ-ಸರು ಇಡೀ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.
ಬೈಕ್ ಮಾಲಕ ಕುಳಾಯಿ ನಿವಾಸಿಯಾಗಿದ್ದು, ಈತ ದುಬೈಯಲ್ಲಿದ್ದಾನೆ. ಈತನ ಸಹೋದರನ ಬಳಿ ಇದ್ದ ಮೋಟಾರ್ ಬೈಕನ್ನು ಮಂಗಳೂರು ಸಮೀಪದ ಕುಳಾಯಿಯಲ್ಲಿ ಇಸ್ತ್ರಿ ಹಾಕುವ ಅಂಗಡಿ ನಡೆಸುತ್ತಿರುವ ಹರೀಶ್ ಪೂಜಾರಿ ಪಡೆದು ಕೊಂಡಿದ್ದನು.
ಇತರ ಆರೋಪಿಗಳೊಂದಿಗೆ ಮಿನಿ ಲಾರಿ ಮತ್ತು ಈ ಮೋಟಾರ್ ಬೈಕ್ನಲ್ಲಿ ಆರೋಪಿಗಳು ನೆಲ್ಯಾಡಿಗೆ ಬಂದಿದ್ದನು. ಮೂವರು ಅಂಗಡಿಯ ಶೆಟರ್ ಮುರಿದು ಕಳ್ಳ-ತನಕ್ಕೆ ಯತ್ನಿಸುತ್ತಿದ್ದಾಗ ಸ್ಥಳಕ್ಕೆ ಬಂದ ಪೊಲೀಸರನ್ನು ಕಂಡು ಓಡಲು ಯತ್ನಿಸಿದರು.
ಈ ಸಂದರ್ಭದಲ್ಲಿ ಬೆನ್ನಟ್ಟಿ ಬಂದ ನೆಲ್ಯಾಡಿ ಹೊರ ಠಾಣೆಯ ಪೊಲೀಸ್ ಕಾನ್ಸ್ಟೆ-ಬಲ್ ನವೀನ್ ಅವರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರುಎನ್ನಲಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-12 00:00:00
|
|
|