ಕಲ್ಯಾಣಪುರ, ಮಾ.೧೧: ಸ್ಥಳೀಯ ಮಿಲಾಗ್ರಿಸ್ ಕಾಲೇಜಿನ ಸಮಾಜ ಕಾರ್ಯ ಸ್ನಾತಕೋತ್ತರ ಪದವಿ ವಿಭಾಗವು ಕೊರಗ ಸಮೃದ್ಧಿ ಯೋಜನೆ, ಮೈರಡ ಮೈಸೂರು ಹಾಗೂ ಸಿಂಚನ ನಿರಂತರ ಗುಂಪು ಕುದ್ಮಲ ರಂಗರಾವ್ ನಗರ ಇವರ ಸಹಯೋಗದೊಂದಿಗೆ ಎರಡು ದಿನಗಳ ಗ್ರಾಮೀಣ ಸಹಭಾಗಿತ್ವ ಅಧ್ಯಯನ ತರಬೇತಿಯನ್ನು ಇತ್ತೀಚೆಗೆ ಕಾಲೇಜಿನಲ್ಲಿ ಆಯೋಜಿಸಿತ್ತು.
ಈ ಅಧ್ಯಯನ ತರಬೇತಿಯಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಸಮಾಕಾರ್ಯ ವಿದ್ಯಾರ್ಥಿಗಳು, ಖಾಸಗಿ ನಿಯೋಗಗಳ ಪ್ರತಿನಿಧಿಗಳು ಹಾಗೂ ಸಮುದಾಯ ಸದಸ್ಯರು ಸೇರಿದಂತೆ ಒಟ್ಟು ೫೦ ಸದಸ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ವಂ. ಫ್ರೆಡ್ ಮಸ್ಕರೇನಸ್ ವಹಿಸಿದ್ದರು. ಕುದ್ಮಲ ರಂಗರಾವ್ ನಗರದ ಸಿಂಚನ ನಿರಂತರ ಗುಂಪಿನ ಅಧ್ಯಕ್ಷರಾದ ಸುಧಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ಯಿಗಳಾಗಿ ಮೈಸೂರಿನ ಮೈರಡ ಸಂಸ್ಥೆಯ ತರಬೇತುದಾರ ರವಿಪ್ರಕಾಶ್ ಹಾಗೂ ಎಚ್.ಎಸ್.ಶಂಕರ್ ಉಪಸ್ಥಿತರಿದ್ದರು.