ಮಂಗಳೂರು: ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಅವರ ಅಂತಿಮ ಯಾತ್ರೆ : ಅಂತಿಮ ದರ್ಶನದಲ್ಲಿ ಪಾಲ್ಗೊಂಡ ಸಾವಿರಾರು ಅಭಿಮಾನಿಗಳು. |
ಪ್ರಕಟಿಸಿದ ದಿನಾಂಕ : 2010-03-11
ಮಂಗಳೂರು, ಮಾ.11: ಮಾ.9 ರಂದು ನಿಧನ ಹೊಂದಿದ್ದ ’ಕೊಂಕಣಿ ಕೋಗಿಲೆ’ ವಿಲ್ಫಿ ರೆಬಿಂಬಸ್ ಅವರ ಅಂತಿಮ ಯಾತ್ರೆ ಇಂದು ನಡೆಯಿತು.
ನಗರದ ಕಂಕನಾಡಿ ಬಳಿಯ ಸಂತ ಜೋಸೆಫ್ ಚರ್ಚ್ (ಜೆಪ್ಪು ಸೆಮಿನರಿ) ನಲ್ಲಿ ಇಂದು ಮದ್ಯಾಹ್ನ 2 ಗಂಟೆಯಿಂದ 4 ಗಂಟೆವರೆಗೆ ಅವರ ಪ್ರಾರ್ಥೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಮಂಗಳೂರಿನ ಬಿಷಪ್ ವ| ಅಲೋಶಿಯಸ್ ಪೌಲ್ ಡಿ’ಸೋಜಾ ರವರ ನೇತ್ರತ್ವದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳೊಂದಿಗೆ ರೆಬಿಂಬಸ್ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು. ವಿವಿಧ ಚರ್ಚ್‌ಗಳ ಕ್ರೈಸ್ತ ಧರ್ಮಗುರುಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅಂತಿಮ ದರ್ಶನಕ್ಕೆ ಅಗಮಿಸಿದ ಕ್ರೈಸ್ತ ಬಾಂದವರಿಗೆ ಪವಿತ್ರ ಪ್ರಸಾದ ವಿತರಿಸಲಾಯಿತು.
ಕಳೆದ 50 ವರ್ಷಗಳಿಂದ ಕೊಂಕಣಿ ಹಾಡುಗಳನ್ನು ಬರೆದು ರಾಗ ಸಂಯೋಜನೆಮಾಡಿ, ಹಾಡುವ ಮೂಲಕ ಕೊಂಕಣಿಗರ ಹ್ರದಯಗಳನ್ನು ತಟ್ಟುತಿದ್ದ ಖ್ಯಾತ ಕಲಾವಿದ " ಕೊಂಕಣಿ ಕೋಗಿಲೆ" ಬಿರುದಾಂಕಿತ ವಿಲ್ಫಿ ರೆಬಿಂಬಸ್ (67) ಅವರು ಮಾ. 9ರಂದು ನಗರದ ಕಂಕನಾಡಿಯ ಫಾದರ್ ಮುಲ್ಲರ್ ಅಸ್ಪತ್ರೆಯಲ್ಲಿ ನಿಧನ ಹೊಂದಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|