ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪುರಭವನದಲ್ಲಿ ಚಪ್ಪರ ಮುಹೂರ್ತ |
ಪ್ರಕಟಿಸಿದ ದಿನಾಂಕ : 2010-03-11
.ಮಂಗಳೂರು, ಮಾ.11: ಮಂಗಳೂರಿನ ಪುರಭವನದ ವಠಾರದಲ್ಲಿ ಮಾ 15,16 ಹಾಗೂ 17 ರಂದು ನಡೆಯುವ ದ.ಕ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಇಂದು ಬೆಳಿಗ್ಗೆ ಮೇಯರ್ ರಜನಿ ದುಗ್ಗಣ ಅವರು ಚಪ್ಪರ ಮುಹೂರ್ತ ನೆರವೇರಿಸಿದರು.
ನಗರದ ಕದ್ರಿ ದೇವಸ್ಥಾನ, ಕುದ್ರೋಳಿ ದೇವಸ್ಥಾನ ಹಾಗೂ ಶರವು ದೇವಸ್ಥಾನದ ಪುರೋಹಿತರ ನೇತ್ರತ್ವದಲ್ಲಿ ಧಾರ್ಮಿಕ ಕಾರ್ಯಗಳು ನೆರವೇರಿದವು. ದ.ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉಪ ಮೇಯರ್ ರಾಜೇಂದ್ರ ಕುಮಾರ್, ಎಂ.ಬಿ.ಪುರಾಣಿಕ್, ಕಲ್ಲೂರಾಯ, ಐವನ್ ಡಿ’ಸೋಜಾ, ಡಿ.ಕೆ.ಆಶೋಕ್, ಅಬ್ದುಲ್ ರೆಹಮಾನ್ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|