ಮಂಗಳೂರು: ನಂತೂರು ಬಳಿ ಬಸ್ಸು - ರಿಕ್ಷಾ ಡಿಕ್ಕಿ : ಒರ್ವ ವಿದ್ಯಾರ್ಥಿ ಸಾವು. ಇಬ್ಬರಿಗೆ ಗಂಭೀರ ಗಾಯ. |
ಪ್ರಕಟಿಸಿದ ದಿನಾಂಕ : 2010-03-11
ಮಂಗಳೂರು, ಮಾ.11: ನಗರದ ನಂತೂರು - ಪದವು ಎಂಬಲ್ಲಿ ಇಂದು ಬೆಳಿಗ್ಗೆ ಬಸ್ಸೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಗಾಯಗೊಂಡು ನಗರದ ಎ.ಜೆ.ಅಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಅಸ್ಪತ್ರೆ ಮೂಲಗಳು ತಿಳಿಸಿವೆ.
ರಾಷ್ಟ್ರೀಯಾ ಹೆದ್ದಾರಿ ೧೭ರಲ್ಲಿ ಪದವು ಹೈಸ್ಕೂಲ್ ಬಳಿಯ ಕೊಚ್ಚಿನ್ ಬೇಕರಿ ಎದುರು ಇಂದು ಬೆಳಿಗ್ಗೆ ೯ ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಕುತ್ತೆತೂರಿನಿಂದ ಮಂಗಳಾದೇವಿಗೆ ಹೋಗುತ್ತಿದ್ದ ’ರೂಟ್ ನಂ 15 ಭೂಮಿಕ’ ಹೆಸರಿನ ಸಿಟಿ ಬಸ್ (ಕೆ ಎ 19:ಬಿ 301) ನಂತೂರಿನಿಂದ ಕೆಪಿಟಿ ಕಡೆಗೆ ಹೋಗುತ್ತಿದ್ದ ’ಶ್ರೀ ಸತ್ಯದೇವತೆ’ ಹೆಸರಿನ ರಿಕ್ಷಾ(ಕೆ ಎ 19: ಬಿ 7573)ಕ್ಕೆ ಮುಖಾಮುಖಿ ಅಪ್ಪಳಿಸಿದ ಪರಿಣಾಮ, ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು ಅದರಲ್ಲಿದ್ದ ಮೂವರು ಗಾಯಗೊಂಡಿದ್ದರು.
ಈ ಪೈಕಿ ಮೂಡಬಿದ್ರೆ ಸುಭಾಷ್ ನಗರದ ಸಬೀರ್ ಅಹ್ಮದ್ ಅವರ ಪುತ್ರ ಮಹಮ್ಮದ್ ಮುಜಿಮ್(19) ಎಂಬಾತ ಅಪಘಾತದ ತೀವ್ರತೆಗೆ ರಿಕ್ಷಾದಿಂದ ಹೊರಕ್ಕೆಸೆಯಲ್ಲಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಅವರು ಮ್ರತ ಪಟ್ಟಿದ್ದಾರೆ ಎಂದು ಅಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಇತರ ಇಬ್ಬರು ಗಾಯಾಳುಗಳಲ್ಲಿ ಮೂಡಬಿದ್ರೆಯ ಕರ್ನಾಟಕ ಟಿಂಬರ್ ಬಳಿಯ ಮಹಮ್ಮದ್ ಮುಜಾಮಿಲ್(21) ಮತ್ತು ಕಾಜಿಲಾ ಮಳಲಿಯ ಸೀನಪ್ಪ ಪೂಜಾರಿಯವರ ಪುತ್ರ ರಿಕ್ಷಾ ಚಾಲಕ ನಾರಾಯಣ(40) ಎಂದು ಹೆಸರಿಸಲಾಗಿದೆ. ಇವರಿಗೆ ಹೆಚ್ಚಿನ ಗಾಯಗಳಾಗಿದ್ದರೂ, ತುರ್ತು ಚಿಕಿತ್ಸೆ ನಡೆಸಿದ ನಂತರ ವಾರ್ಡ್ ಗೆ ಸ್ಥಳಾಂತರಿಸಲಾಗಿದೆ.
ಮುಜಿಮ್ ಮತ್ತು ಮುಜಾಯಿಲ್ ಕೆ.ಪಿ.ಟಿ ಬಳಿಯ ವೆಸ್ಟ್‌ರ್ನ್ ಗೇಟ್ ಇನ್ಸ್‌ಸ್ಟಿಟ್ಯೂಟ್‌ನ ವಿಧ್ಯಾರ್ಥಿಗಳು ಎನ್ನಲಾಗಿದೆ ಗಾಯಾಳುಗಳನ್ನು ಸ್ಥಳೀಯರು ತಕ್ಷಣವೇ ಎ.ಜೆ.ಅಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಾದಿತ ಬಸ್ ಚಾಲಕ ಪರಾರಿಯಾಗಿದ್ದಾನೆಂದು ತಿಳಿದು ಬಂದಿದೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|