|
ಪ್ರಕಟಿಸಿದ ದಿನಾಂಕ : 2010-03-11
ಹೈದರಾಬಾದ್: ಪ್ರತ್ಯೇಕ ರಾಜ್ಯ ರಚನೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ನೇಮಿಸಿರುವ ಶ್ರೀಕೃಷ್ಣ ಸಮಿತಿ ಸದಸ್ಯರು ಇಲ್ಲಿಗೆ ಆಗಮಿಸುವುದನ್ನು ಗಮನದಲ್ಲಿಟ್ಟು ಕೊಂಡು ತೆಲಂಗಾಣ ಪರ ಕೆಲವು ವಕೀಲರು ಗುರುವಾರ ಇಲ್ಲಿನ ರಾಜೀವ್ ಗಾಂಧಿ ಅಂತರರಾ ಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ನಿಲ್ದಾಣದಲ್ಲಿ ಧರಣಿ ಕುಳಿತುಕೊಳ್ಳಲು ಯತ್ನಿಸಿದ ವಕೀಲರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ತೆಲಂಗಾಣಕ್ಕೆ ಸಮಿತಿ ಸದಸ್ಯರು: ಶ್ರೀಕೃಷ್ಣ ಸಮಿತಿಯ ನಾಲ್ವರು ಸದಸ್ಯರು ಗುರುವಾರ ಇಲ್ಲಿಗೆ ಆಗಮಿಸಿದ್ದು, ಅವರಿಗೆ ಸಾಕಷ್ಟು ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಆಂಧ್ರ ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್, ಮುಖ್ಯಮಂತ್ರಿ ಕೆ. ರೋಸಯ್ಯ, ವಿರೋಧ ಪಕ್ಷದ ನಾಯಕರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಿತಿ ಸದಸ್ಯರು ಚರ್ಚೆ ಕೈಗೊಳ್ಳಲಿದ್ದಾರೆ. ಚರ್ಚೆ ಮುಗಿಸಿಕೊಂಡು ಶುಕ್ರವಾರವೇ ಸದಸ್ಯರೆಲ್ಲ ನವದೆಹಲಿಗೆ ಮರಳಲಿದ್ದಾರೆ.
ಪ್ರತ್ಯೇಕ ಮಸೂದೆಗೆ ಬಿಜೆಪಿ ಆಗ್ರಹ: ನವದೆಹಲಿ ವರದಿ: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಭರವಸೆ ನೀಡಿರುವ ಕೇಂದ್ರ ಸರ್ಕಾರ ಕೂಡಲೇ ಈ ಕುರಿತು ಮಸೂದೆ ಮಂಡಿಸ ಬೇಕೆಂದು ವಿರೋಧ ಪಕ್ಷ ಬಿಜೆಪಿ ಆಗ್ರಹಿಸಿದೆ.ರಾಜ್ಯಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್, ‘ ಆದಷ್ಟು ಶೀಘ್ರ ಬೇಡಿಕೆಯನ್ನು ಈಡೇರಿಸಬೇಕು’ ಎಂದರು.
ವರದಿಯ ವಿವರಗಳು |
 |
ಕೃಪೆ : ಪಿಟಿಐ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-11
|
|
|