ಬಿಲ್ಲವರ ಎಸೋಸಿಯೇಶನ್‌ನಲ್ಲಿ ಓಂ-ಶನಿ-ಓಂ: ಶ್ರೀ ಶನೀಶ್ವರ ಗ್ರಂಥ ಪಾರಾಯಣ ಮತ್ತು ಶ್ರೀ ಶನೀಶ್ವರ ಮಹಾಪೂಜೆ |
ಪ್ರಕಟಿಸಿದ ದಿನಾಂಕ : 2010-03-11
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಯೋಗಾ ಗುರು ಸ್ವಾಮಿ ರಾಮದೇವ್ ಬಾಬಾ ಇವರ ಪತಂಜಲಿ ಯೋಗ ಪೀಠ್ ಸಂಸ್ಥೆಯು ಬಿಲ್ಲವರ ಎಸೋಸಿಯೇಶನ್ ಮುಂಬಯಿ ನೇತೃತ್ವದಲ್ಲಿ ಕಳೆದ (೦೯.ಮಾರ್ಚ್೨೦೧೦) ಮಂಗಳ ವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಎಸೋಸಿಯೇಶನ್‌ನ ಬಿಲ್ಲವರ ಭವನದಲ್ಲಿ ಯೋಗ ಸಾಪ್ತಾಹವನ್ನು ಆಯೋಜಿಸಿತ್ತು. ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ಜಯ ಸಿ.ಸುವರ್ಣ ಇವರು ದೀಪ ಪ್ರಜ್ವಲಿಸಿ ಯೋಗ ಸಾಪ್ತಾಹ'ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು.

ಈ ಆರೋಗ್ಯ ಭಾಗ್ಯದ ಕಾರ್ಯಕ್ರಮದಲ್ಲಿ ಎಸೋಸಿಯೇಶನ್‌ನ ಗೌರವಾಧ್ಯಕ್ಷ ವೈ.ನಾಗೇಶ್, ಉಪಾಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಜ್ಯೋತಿ ಕೆ.ಸುವರ್ಣ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್, ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಗೌ. ಕಾರ್ಯದರ್ಶಿ ಲಕ್ಷ್ಮೀ ಎನ್. ಕೋಟ್ಯಾನ್ ಪ್ರಾರ್ಥನೆಗೈದರು. ಜೊತೆ ಕಾರ್ಯದರ್ಶಿ ಧರ್ಮೇಶ್ ಎಸ್. ಸಾಲ್ಯಾನ್ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿ ದರು.

ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|