ಭಾವನಾತ್ಮಕ ಅವಲ೦ಬನೆಗೆ ಸಿಲುಕಿಕೊಳ್ಳದಿದ್ದರೆ ಮಾತ್ರ ಮಹಿಳೆ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಸಾಧ್ಯ: ನಟಿ ಸುಹಾಸಿನಿ |
ಪ್ರಕಟಿಸಿದ ದಿನಾಂಕ : 2010-03-11
ಬೆಂಗಳೂರು: ‘ಮದುವೆಯ ಬಗ್ಗೆ ಒಲವು ತೋರಿಸುವ ಯುವತಿಯರ ಸಂಖ್ಯೆ ಕಡಿಮೆಯಾಗುತ್ತಿ ದೆ. ಸ್ವಾತಂತ್ರ್ಯ ಕಳೆದುಕೊಳ್ಳುವ ಭಯದಲ್ಲಿ ಅವಿವಾಹಿತರಾಗಿ ಉಳಿಯಲು ಬಯಸುತ್ತಿದ್ದಾರೆ’ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಸುಭಾ ಷಿಣಿ ಅಲಿ ತಿಳಿಸಿದರು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂ ಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಥಮ ರಾಷ್ಟ್ರೀಯ ಯುವತಿಯರ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಕರ್ನಾಟಕ ಒಳಗೊಂಡಂತೆ 13 ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 2460 ಯುವತಿಯರು ಭಾಗಿಯಾಗಿದ್ದರು. ದಲಿತ, ಮುಸ್ಲಿಂ ಹಾಗೂ ಬುಡಕಟ್ಟು ಜನಾಂಗದ ಯುವತಿಯರನ್ನು ಸಮೀಕ್ಷೆ ಗೊಳಪಡಿಸಲಾಗಿತ್ತು. ವೈಯಕ್ತಿಕ ಸ್ವಾತಂತ್ರ್ಯ ಹರಣದ ಭಯ ಅವರನ್ನು ಆವರಿಸಿಕೊಂಡ ಕಾರಣ ಬಹುಪಾಲು ಯುವತಿಯರು ಮದುವೆಯನ್ನೇ ನಿರಾಕರಿಸುವ ಮನಃಸ್ಥಿತಿಗೆ ತಲುಪಿದ್ದಾರೆ’ ಎಂದು ಅವರು ವಿವರಿಸಿದರು.
‘ಅಂತರ್‌ಜಾತಿ ಹಾಗೂ ಸ್ವಗೋತ್ರ ವಿವಾಹದ ನೆಪದಲ್ಲಿ ಅನೇಕ ಯುವತಿಯರು ಕುಟುಂಬದವ ರಿಂದಲೇ ಶೋಷಣೆಗೆ ಒಳಗಾಗುತ್ತಿದ್ದಾರೆ. ಹರಿಯಾಣಾ, ಪಂಜಾಬ್‌ನಲ್ಲಿ ಇದು ತೀವ್ರ ಸ್ವರೂಪ ಪಡೆದುಕೊಂಡಿದೆ. ಇನ್ನೊಂದೆಡೆ ಕುಟುಂಬದವರಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹುಡುಗಿಯರು ಮದುವೆ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ’ ಎಂದರು ಅವರು ತಿಳಿಸಿದರು.
‘ಸುರಕ್ಷಿತ ಪ್ರಯಾಣವೆಂಬುದು ಇಲ್ಲದಂತಾಗಿದೆ. ಹುಡುಗಿಯರು, ಯುವತಿಯರು ಭಯದ ನೆರಳ ಲ್ಲೇ ದಿನನಿತ್ಯ ರೈಲು, ಬಸ್ಸಿನಲ್ಲಿ ಸಂಚರಿಸುತ್ತಿದ್ದಾರೆ ಎನ್ನುವುದು ಸಮೀಕ್ಷೆಯಿಂದ ಸಾಬೀತಾಗಿದೆ’ ಎಂದು ಅವರು ಹೇಳಿದರು.
ಸಮಾವೇಶದ ಸಿದ್ಧತಾ ಸಮಿತಿಯ ಅಧ್ಯಕ್ಷ ಪ್ರೊ. ಬಸವರಾಜ ಕಲ್ಗುಡಿ, ‘ಇತ್ತೀಚಿನ ದಶಕಗಳಲ್ಲಿ ಯುವತಿಯರ ಧ್ವನಿ ಬದಲಾಗಿದೆ. ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗಲೂ ಜಾತಿ, ಧರ್ಮದ ಕರಾಳ ನೆರಳು ಅವರನ್ನು ಅಧೈರ್ಯರನ್ನಾಗಿಸುತ್ತದೆ. ಕೋಮುವಾದಿ ಸಂಘಟನೆಗಳ ವಿರೋಧಿ ಧೋರಣೆಗೆ ಯುವತಿಯರು ಬಲಿಯಾಗುತ್ತಿದ್ದಾರೆ’ ಎಂದರು.
‘ಈಗಿನ ಯುವತಿಯರು ವೈಯಕ್ತಿಕ ಸ್ವಾತಂತ್ರ್ಯ ಕಾಪಾಡಿಕೊಂಡು, ಅತ್ಯುತ್ತಮ ವ್ಯಕ್ತಿತ್ವ ರೂಢಿಸಿ ಕೊಳ್ಳುವಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಆದ್ದರಿಂದ ಸಾಮಾಜಿಕ ವಾತಾವರಣವೂ ಅವರಿಗೆ ಪೂರಕವಾಗಿ ಬದಲಾಗಬೇಕಿದೆ’ ಎಂದು ಹೇಳಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುಧಾ ಸುಂದರರಾಮನ್, ಜಂಟಿ ಕಾರ್ಯದರ್ಶಿ ಕಿರಣ್ ಮೋಘೆ, ಚಿತ್ರನಟಿ ಸುಹಾಸಿನಿ ಇನ್ನಿತರರು ಉಪಸ್ಥಿತರಿದ್ದರು.
ನಾನು ಕೆಟ್ಟ ಹುಡುಗಿ- ಸುಹಾಸಿನಿ
‘ನಾನು ಕೆಟ್ಟ ಹುಡುಗಿ, ನನ್ನ ಮೇಲೆ 8 ಕೇಸ್‌ಗಳಿವೆ...’ ನಟಿ ಸುಹಾಸಿನಿ ವೇದಿಕೆಯ ಮೇಲೆ ಹೇಳಿಕೊಂಡಾಗ ನೆರೆದ ಮಹಿಳೆಯರೆಲ್ಲ ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳತೊಡಗಿದರು.
‘ಶೋಷಣೆಗೊಳಗಾದ ಮಹಿಳೆಯರನ್ನು ರಕ್ಷಿಸಲು ಹೋದ ತನ್ನ ವಿರುದ್ಧವೇ 8 ಪ್ರಕರಣಗಳು ದಾಖಲಾಗಿವೆ. ಎಂಬುದನ್ನು ಸುಹಾಸಿನಿ ಕನ್ನಡದಲ್ಲಿ ಹೇಳಲು ಪ್ರಯತ್ನಿಸಿದ ಬಗೆ ಹೀಗಿತ್ತಷ್ಟೆ!
‘ಭಾವನಾತ್ಮಕ ಅವಲಂಬನೆಗೆ ಸಿಲುಕಿಕೊಳ್ಳದ ಮಹಿಳೆ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಸಾಧ್ಯ. ಪುರುಷರ ದಬ್ಬಾಳಿಕೆ ಸಿಟ್ಟು ಬರುತ್ತದೆ. ಆದರೆ ಆ ಸಿಟ್ಟನ್ನು ಖುಷಿಯಾಗಿ ಪರಿವರ್ತಿಸಿಕೊಳ್ಳುವ ತಂತ್ರವನ್ನು ನಾವು ಅರಿತಿರಬೇಕು. ಕ್ರಿಯಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ನಮ್ಮನ್ನು ನಾವು ಖುಷಿಯಾಗಿಟ್ಟುಕೊಳ್ಳಬೇಕು’ ಎಂದರು.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|