ಬೆ೦ಗಳೂರು: ಬ೦ಗಾಳಿ ಚಿತ್ರನಿರ್ದೇಶಕ ಅತಾನು ಘೋಷ್‌ಗೆ ಲಂಕೇಶ್ ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2010-03-11
ಬೆಂಗಳೂರು: ಪ್ರಸಕ್ತ ಸಾಲಿನ ಲಂಕೇಶ್ ಪ್ರಶಸ್ತಿ ಬಂಗಾಳಿ ಭಾಷೆಯ ಚಿತ್ರನಿರ್ದೇಶಕ ಅತಾನು ಘೋಷ್‌ಗೆ ಒಲಿದಿದೆ.
ಲಂಕೇಶ್ ಜನ್ಮದಿನವಾದ ಮಾರ್ಚ್ 7ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅಂದು ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಈ ಸಮಾರಂಭ ನಡೆಯಲಿದೆ ಎಂದು ಚಿತ್ರನಿರ್ದೇಶಕಿ ಕವಿತಾ ಲಂಕೇಶ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಶಸ್ತಿ ವಿಜೇತ ಬಂಗಾಳಿ ಚಲನಚಿತ್ರ ‘ಅನ್‌ಶ್ಯೂಮನ್ನರ್ ಚಬ್ಬಿ’ ಪ್ರದರ್ಶನ ಕೂಡ ನಡೆಯಲಿದೆ. ಪ್ರವೇಶ ಉಚಿತ ಎಂದು ಹೇಳಿದರು.
ಒಟ್ಟು 15 ಸಿನಿಮಾಗಳು ಪ್ರಶಸ್ತಿಯ ಪೈಪೋಟಿಯಲ್ಲಿದ್ದವು ಎಂದೂ ಅವರು ತಿಳಿಸಿದರು. ನಟ ಪ್ರಕಾಶ್ರಾಜ್, ಕವಿತಾ ಲಂಕೇಶ್ ಹಾಗೂ ಚಿತ್ರ ವಿಮರ್ಶಕ ಸಂದೀಪ ನಾಯಕ್ ಆಯ್ಕೆ ಸಮಿತಿಯ ತೀರ್ಪುಗಾರರಾಗಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|