ಶನಿವಾರ, 11-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಾಂಗ್ರೆಸ್ಸಿಗರಿಂದ ವಿನಾ ಕಾರಣ ನನ್ನ ಟಾರ್ಗೆಟ್ : ರಾಜೀನಾಮೆ ನೀಡಲು ನಾನೇನು ಅಶ್ಲೀಲತೆಯಲ್ಲಿ ತೊಡಗಿಲ್ಲ : ಕಾಂಗ್ರೆಸ್ ಆರೋಪಕ್ಕೆ ರಘುಪತಿಭಟ್ ಅಸಮಾಧಾನ
Latest news item ಅಶುದ್ದವಾದ ಸೇಂಟ್ ಮೇರಿಸ್ ದ್ವೀಪಕ್ಕೆ ಕಾಂಗ್ರೇಸ್ ನಿಂದ ಗಣಹೋಮ
Latest news item ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ'
Latest news item ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು?
Latest news item ವಿಜೃಂಬಣೆಯಿಂದ ಸಂಪನ್ನಗೊಂಡ ಹೆರ್ಗ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ
Latest news item `ಹಾಲ್ ಆಫ್ ಫೇಮ್'ಗೆ ಗಾವಸ್ಕರ್
Latest news item ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ
Latest news item ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ
Latest news item ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಜಾನಪದದ ಹರಿವಿನ ಸೆಲೆಯಾದ ನಾಟಕ ಸ್ಪರ್ಧೆ

ಮುಂಬಯಿಯ ಕರ್ನಾಟಕ ಸಂಘವು ಹತ್ತು ಹಲವು ಅರ್ಥ ಪೂರ್ಣ ಚಟುವಟಿಕೆಗಳ ಮೂಲಕ ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಮಹತ್ತರ ಕೊಡುಗೆ ನೀಡುತ್ತಿದೆ. ಪ್ರತಿ ವರ್ಷವೂ ನಡೆಯುವ ಕನ್ನಡ ನಾಟಕ ಸ್ಪರ್ಧೆ ಇದಕ್ಕೊಂದು ನಿದರ್ಶನ. ಈ ವರ್ಷದ ೧೪ನೇ ಅಖಿಲ ಭಾರತ ಕುವೆಂಪು ಸ್ಮಾರ ಕ ಕನ್ನಡ ಏಕಾಂಕ ಜಾನಪದ ನಾಟಕ ಸ್ಪರ್ಧೆ ಯಲ್ಲಿ ೧೪ ತಂಡಗಳು ಭಾಗವಹಿಸಿದ್ದು, ತಲಾ ಒಂದು ಗಂಟೆ ಅವಧಿಯ ನಾಟಕಗಳನ್ನು ಪ್ರದರ್ಶಿಸಿದವು.

ಮೂರು ದಿನಗಳ ಕಾಲ ನಡೆದ ಈ ಸ್ಪರ್ಧೆಯು ವಸ್ತುಶಃ ನಾಟಕೋತ್ಸವವೇ ಆಗಿತ್ತು. ಸಂಘಟಕರ ಕೌಶಲ ಮತ್ತು ಆತ್ಮೀಯತೆ, ತಂಡಗಳ ಶಿಸ್ತು ಮತ್ತು ಉತ್ಸಾಹ, ನಾಟಕಗಳ ಗುಣಮಟ್ಟ ಮತ್ತು ವೈವಿಧ್ಯ ಹಾಗೂ ಎಲ್ಲಕ್ಕಿಂತಲೂ ಮಿಗಿಲಾಗಿ ಕನ್ನಡದ ಪ್ರೇಕ್ಷಕರ ನಾಟಕ ಪ್ರೀತಿ ಮತ್ತು ಪ್ರೋ ತ್ಸಾಹ ಹಬ್ಬದ ವಾತಾವರಣವನ್ನು ಸೃಷ್ಟಿಸಿದವು. ಹೊರನಾಡ ಕನ್ನಡಿಗರಲ್ಲಿ ಕನ್ನಡದ ಛಾಪು ಎದ್ದು ಕಾಣುತ್ತಿತ್ತು. ಸಂಸ್ಕೃತಿ ಎಂದರೆ ಹೋರಾಟದ ವಸ್ತುವಲ್ಲ, ಅದು ಮನಸ್ಸುಗಳನ್ನು ಬೆಸೆಯುವ ಸಂಬಂಧ ಎನ್ನುವುದನ್ನು ಸಾಬೀತುಪಡಿಸಿದ ಸಂಘಟಕರು ಹಾಗೂ ನಾಟಕ ತಂಡಗಳು ಅಭಿನಂ ದನಾರ್ಹರು.

ಈ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ನಾಟಕಗಳು `ಜಾನಪದ' ಅರ್ಥ ವಿಸ್ತಾರವನ್ನು ಹೆಚ್ಚಿಸಿ ದವು. ಸಂಗ್ಯಾ ಬಾಳ್ಯಾ ದಂತಹ ನಾಟಕಗಳಿಂದ ಹಿಡಿದು ಕೊಂಬಿನ ಕುದುರೀ, ಸಂಕರ, ಈಡಿಪ ಸ್, ಕಾಲ ಇತ್ಯಾದಿ ನಾಟಕಗಳು ಜಾನಪದವನ್ನು ಪ್ರಸ್ತುತ ಗೊಳಿಸಿದ ರೀತಿ ಉಲ್ಲೇಖನಾರ್ಹ. ತಮ್ಮ ಕಥೆಗಳಲ್ಲಿ, ಶೈಲಿಯಲ್ಲಿ, ನಿರೂಪಣಾ ತಂತ್ರಗಳಲ್ಲಿ ಅಥವಾ ಜಾನಪದ ಅರ್ಥ ವಿಶ್ಲೇಷಣೆ ಯನ್ನು ಮಾಡುವಲ್ಲಿ ಈ ನಾಟಕಗಳು ಜಾನಪದ ಲೋಕದ ವ್ಯಾಖ್ಯಾನಕ್ಕೆ ಹೊಂಬೆಳಕು ಚೆಲ್ಲಿದ ವು.

ಪ್ರದರ್ಶನಗೊಂಡ ನಾಟಕಗಳನ್ನು `ಜಾನಪದ' ಪರಿಕಲ್ಪನೆಯಡಿ ಯಲ್ಲಿ ಈ ರೀತಿ ವಿಂಗಡಿಸ ಬಹುದು. ಮೊದಲನೆಯದಾಗಿ, ಸಾಮಾನ್ಯ ವಾಗಿ ಜಾನಪದ ನಾಟಕಗಳೆಂದು ಈವರೆಗೆ ಗುರುತಿ ಸಿಕೊಂಡು ಬಂದಿರುವ ನಾಟಕಗಳು, (ಮುಖ್ಯವಾಗಿ ಕಂಬಾರರ ಜೋಕುಮಾರಸ್ವಾಮಿ, ಸಂಗ್ಯಾ ಬಾಳ್ಯಾ, ಬೆಪ್ಪುತಕ್ಕಡಿ ಬೋಳೇ ಶಂಕರ, ಹುಲಿಯ ನೆರಳು) ಎರಡನೆಯದಾಗಿ, ಜಾನಪದ ಮತ್ತು ಆಧುನಿಕ ಜಗತ್ತುಗಳ ಹೊಯ್ದಾಟಗಳನ್ನು ಜಾನಪದ ಶೈಲಿಯಲ್ಲಿ ಬಿತ್ತರಿಸುವ ನಾಟಕಗಳು (ರಾಕ್ಷಸ, ಕೊಂಬಿನ ಕುದುರೀ), ಮೂರನೆ ಯದಾಗಿ ಜಾನಪದ ಕಥೆಯನ್ನು ಆಧರಿಸಿದ ನಾಟಕ ಗಳು (ಮೃತ್ಯು, ಕೆರೆಗೆಹಾರ, ದೊರೆ, ಈಡಿಪಸ್, ಭೂತಾಳ ಪಾಂಡ್ಯ) ಹಾಗೂ ನಾಲ್ಕನೆಯದಾಗಿ ಜಾನಪದ ಆಚರಣೆಗಳನ್ನು ಆಧುನಿಕ ವಿಶ್ಲೇಷಣೆಗೆ ಒಡ್ಡುವ ನಾಟಕಗಳು (ಡೋಲು, ಅಶುದ್ಧ, ಸಂಕರ ಮತ್ತು ಕಾಲ).

ನಾಟಕದ ವಸ್ತು ಮತ್ತು ಶೈಲಿಯನ್ನು ಗಮನಿಸಿದಾಗ ಡಾ| ಚಂದ್ರ ಶೇಖರ ಕಂಬಾರರ ನಾಟಕ ಗಳನ್ನು `ಜಾನಪದ ನಾಟಕ'ಗಳೆಂದು ಕರೆಯಬಹುದಾದರೂ ಅವುಗಳೊಳಗಿನ ತಾಕಲಾಟಗಳು ಆಧುನಿಕ ಪ್ರಜ್ಞೆಯನ್ನು ಬಿಂಬಿಸಿ ವಿಶ್ಲೇಷಿಸುತ್ತವೆ. ಈ ನಾಟಕಗಳನ್ನು ಒಂದು ಗಂಟೆಯ ಮಿತ ಅವಧಿಯ ಪ್ರದರ್ಶನವಾಗಿಸುವುದೂ ನಿರ್ದೇಶಕ ರಿಗೊಂದು ಸವಾಲು. ರಂಗ ಪ್ರಸ್ತುತಿಗೊಳ್ಳು ವಾಗ ಜಾನಪದ, ಆಧುನಿ ಕತೆಗಳ ಮೇಳೈಸುವಿಕೆಯಲ್ಲಿ ಈ ನಾಟಕಗಳು ಆಕರ್ಷಕವೂ ಮತ್ತು ಅಷ್ಟೇ ಚಿಂತನಾಶೀಲವೂ, ಪ್ರಗತಿಪರವೂ ಆಗಬಲ್ಲವು. ಇಂತಹ ಸಂಕೀರ್ಣತೆಯುಳ್ಳ ನಾಟಕಗಳ ನ್ನು ೪ ತಂಡಗಳು ಪ್ರದರ್ಶಿಸಿದವು.

ಕಂಬಾರರ ಜೋಕುಮಾರಸ್ವಾಮಿಯನ್ನು ಕನ್ನಡ ಕಲಾ ಸಂಘ, ತುಂಗಭದ್ರಾ ಡ್ಯಾಂ ಇವರಿಗಾಗಿ ಧನಂಜಯ ಕುಲಕರ್ಣಿ ಅವರು ನಿರ್ದೇಶಿಸಿದ್ದರು. ಸಂಕಲನದ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿ ಹೆಣ್ಣು/ಗಂಡು, ಪ್ರೇಮ/ಕಾಮ, ಶೀಲ/ಅಶ್ಲೀಲ ಅಥವಾ ಮಡಿ/ಮೈಲಿಗೆಗಳ ನಿರ್ಮಿತ ಆವರಣಗಳನ್ನು ಒಡೆಯುತ್ತಾ ಸಾಗುವ ನಾಟಕ ಮಾನವೀಯ ಸಂಬಂಧಗಳತ್ತ ಮುಖ ಮಾಡಿರು ವುದನ್ನು ಸೂಚಿಸುತ್ತದೆ. ಜಾನಪದ ನಾಟಕದ ಶೈಲಿಯನ್ನು ಶಿಸ್ತು ಬದ್ಧವಾಗಿ, ಚುರುಕಾಗಿ ನಿರ್ವ ಹಿಸಿದ ತಂಡವು ಸುಮಧುರ ಸಂಗೀತ, ಆಕರ್ಷಕ ರಂಗ ವಿನ್ಯಾಸಗಳಿಂದಾಗಿ ಹಾಗೂ ಗುಣಮಟ್ಟ ದ ಸಾಂಘಿಕ ಅಭಿನಯದಿಂದಾಗಿ ಪ್ರಥಮ ಬಹುಮಾನ ಪಡೆಯಿತು.

ಕಂಬಾರರ ಬೆಪ್ಪುತಕ್ಕಡಿ ಬೋಳೇಶಂಕರ (ನಿ.: ಮೈಮ್ ರಮೇಶ್, ತಂಡ: ಜಿಪಿ‌ಐ‌ಆರ್ ಮೈಸೂ ರು) ಸರಳ ನಿರೂಪಣೆಯಿಂದ ಆಹ್ಲಾದ ಕಾರಿಯಾಗಿತ್ತು. ಆಕರ್ಷಕ ವೇಷಭೂಷಣ, ಸುಂದರ ಸಂಗೀತ ನಾಟಕಕ್ಕೆ ಕಳೆಕಟ್ಟಿದವು. ಸುಮನಸಾ ಕೊಡವೂರು ಇವರ `ಹುಲಿ ನೆರಳು' (ನಿ.: ಬಾಸುಮ ಕೊಡಗು) ಗಂಭೀರ ನಾಟಕವಾದರೂ, ನಟರ ಅಭಿನಯದ ಸಾಮರ್ಥ್ಯದಿಂದ ಹಾಗೂ ಸುಂದರ ಬೆಳಕಿನ ವಿನ್ಯಾಸದಿಂದ ಪ್ರೇಕ್ಷಕರನ್ನು ಹಿಡಿದಿಟ್ಟಿತು.

ಶ್ರೀಮಾತಾ ಸಾಂಸ್ಕೃತಿಕ ಸಂಘದ ಸುಧಾ ಅನಂತ ಮೂರ್ತಿ ಅವರು ನಿರ್ದೇಶಿಸಿದ ಸಂಗ್ಯಾ ಬಾಳ್ಯಾ ಜಾನಪದ ನಾಟಕದ ಚೌಕಟ್ಟಿನಲ್ಲಿದ್ದೇ ಆಧುನಿಕ ಪ್ರಜ್ಞೆ ಯನ್ನು ತಟ್ಟಿತು. ಮುಖ್ಯವಾಗಿ ಸ್ನೇಹ-ಪ್ರೀತಿ-ಕಾಮ ಗಳ ಶೋಧನೆಯೊಂದಿಗೆ ಸಂಪತ್ತಿನ ಒಡೆತನ ತರುವ ದೌರ್ಬಲ್ಯಗಳನ್ನೂ ಎತ್ತಿ ತೋರಿಸಿದ್ದು ಈ ರಂಗ ಪ್ರಸ್ತುತಿಯ ವಿಶೇಷ. ಮಹಿಳೆಯರೇ ಎಲ್ಲ ಪಾತ್ರಗಳನ್ನು ನಿರ್ವಹಿ ಸಿದ್ದು ಶ್ಲಾಘನೆಗೊಳಗಾಯಿತು. ಮಹಿಳಾ ತಂಡವೆಂಬ `ಅನುಕಂಪ'ಕ್ಕೆ ಆಸ್ಪದ ನೀಡದೇ ಸ್ವಶಕ್ತಿಯಿಂದ ತೃತೀಯ ಬಹುಮಾನ ಗಳಿಸಿತು.

ಜಾನಪದ ಶೈಲಿಯನ್ನು ರೂಢಿಸಿಕೊಂಡು ಆಧುನಿಕ ತಲ್ಲಣಗಳನ್ನು ಅರ್ಥೈಸುವ ನಾಟಕಗಳ ವರ್ಗದಲ್ಲಿ ರಾಕ್ಷಸ ಪ್ರಮುಖ ನಾಟಕ. ಹೂಲಿ ಚಂದ್ರಶೇಖರ್ ಅವರ ರಚನೆಯನ್ನು ನಿರ್ದೇಶಿಸಿದ ಮಾಲತೇಶ ಬಡಿಗೇರ ಆಧುನಿಕ ಜಗತ್ತಿನ ಕುಡಿತದ ವ್ಯಸನದ ರಾಕ್ಷಸ ನನ್ನೇ ಗುರಿಯಾಗಿಸಿ ನಿರೂಪಣೆಯನ್ನು ಕಟ್ಟಲು ಸಫಲರಾಗಿದ್ದಾರೆ. ಆಧುನಿಕತೆ ಮತ್ತು ಸಂಪ್ರದಾಯಗಳ ಕಸಿಯಾಗಿ ರುವ ಗಿಂಡಿ ಸ್ವಾಮಿ, ನಾಟಕದ ಸಮಕಾಲೀನತೆಗೆ ಸಾಕ್ಷಿ. ಮಾಧ್ಯಮದ ಸತ್ಯವನ್ನೂ, ಜಾನಪದ ಕತೆಯೊಳಗಿನ ಸತ್ಯಗಳನ್ನೂ ಬಿಚ್ಚಿಡುತ್ತಾ ಸಾಗುವ ನಾಟಕ ವನ್ನು ನಟ ವರ್ಗವು ಸಮರ್ಥವಾಗಿ ರಂಗಕ್ಕೇರಿಸಿದೆ. ಹಾಗಾಗಿ ಈ ಪ್ರಯೋಗ ಎರಡನೇ ಬಹುಮಾನ ಗಳಿಸಿತು.

ಪ್ರಸನ್ನ ಕುಮಾರ್ ಅವರ ಕೊಂಬಿನ ಕುದುರೀ (ನಿ.: ರಮೇಶ್ ಕುಮಾರ್ ಎಂ.ಜಿ.)ಯನ್ನು ಈ ಪ್ರಸ್ತುತಗೊಳಿಸಿದ ರಂಗಶಿಲ್ಪಿ ಕಲಾವಿ ದರ ಬದ್ಧತೆ, ನಾಟಕದ ಸರಳ ಸೂತ್ರಗಳನ್ನು ಧಿಕ್ಕರಿಸು ತ್ತಾ ನಾಟಕ ಕಟ್ಟಿ ಕೊಳ್ಳುತ್ತಾ ಹೋಗುವ ರಂಗಪ್ರಕ್ರಿಯೆ ಪರಿಣಾಮಕಾರಿಯಾಗಿತ್ತು.

ಮೂರನೇ ವರ್ಗದ, ಜಾನಪದ ಕಥೆ ಆಧಾರಿತ ಮೃತ್ಯು ನಾಟಕದ ತಂಡ ಸ್ಫೂರ್ತಿ, ಬೆಳಕಿನ ಆಟಗಳು ಖುಷಿ ನೀಡಿದವು. ಕೆರೆಗೆ ಹಾರದ ನಟಿಯರ ಅಭಿವ್ಯಕ್ತಿ ಪರಿಣಾಮಕಾರಿಯಾಗಿತ್ತು.

ಗ್ರೀಕ್ ಜಾನಪದ ಕಥೆ ಆಧಾರಿತ ದೊರೆ ಈಡಿಪಸ್‌ನ ಅಂತ್ಯ ದಲ್ಲಿ ಈಡಿಪಸ್‌ನನ್ನು ಅರಮನೆಯ ಒಳಗೆ ಸ್ವೀಕರಿಸುವ ಭಾವನೆ ಮೆಚ್ಚುಗೆಗೆ ಪಾತ್ರವಾಯಿತು. ಜಾನಪದ ಆಚರಣೆಗಳನ್ನು ವಿಶ್ಲೇಷಿ ಸುವ ನಾಟಕಗಳಲ್ಲಿ ಜಾನಪದ ರಂಗ ಮಾಧ್ಯಮ, ಚನ್ನರಾಯಪಟ್ಟಣ ಇವರ ಸಂಕರ (ರ.: ಡಾ| ಚಂದ್ರು ಕಾಳೇಹಳ್ಳಿ, ನಿ.: ಚರಣ್) ಪ್ರಮುಖ ವಾದುದು. ಜಾತಿಯ ನಿಲುವುಗಳನ್ನು ಪ್ರಶ್ನಿಸುವ, ಜಾತಿಯ ಆಚಾರ ಗಳೊಳಗೆ ಶೋಷಣೆಗೊಳಗಾಗಿರುವ ಧ್ವನಿ ಸಂಕರದಲ್ಲಿದೆ.

ನಮ ತುಳುವೆರ್ ಕಲಾ ಸಂಘಟನೆ, ಮುದ್ರಾಡಿ ಇವರ ಅಶುದ್ಧ (ರೂಪಾಂತರ/ನಿರ್ದೇಶನ ಸುಕುಮಾರ್ ಮೋಹನ್) ಶೋಷಣೆಯ ವ್ಯವಸ್ಥೆಯ ಹಿಂದಿರುವ ಧರ್ಮ ಮತ್ತು ರಾಜಕೀಯದ ಆಟಗಳನ್ನು ಬಯಲು ಮಾಡುತ್ತಾ, ಜಾನಪದ ವಾದ್ಯವನ್ನು ನುಡಿಸುವಲ್ಲಿ ಜಾತೀ ಯತೆಯ ಪ್ರಶ್ನೆಗಳನ್ನು ಎತ್ತುತ್ತದೆ. ಶೋಷಣೆಯ ಕ್ರೌರ್‍ಯಕ್ಕೆ ಜಾನಪದ ಬಲಿಯಾಗುವುದನ್ನು ಸಂಕೇತಿ ಸುತ್ತದೆ. ಕನ್ನಡ ಸೇವಾ ಸಂಘ, ಪೂವಾಯ್ ಇವರ ಡೋಲು ಕೂಡ ಡೋಲು ಬಾರಿಸುವ ಜಾತಿ ಶೋಷಣೆಯನ್ನು ತೆರೆದಿಟ್ಟು, ಡೋಲು ಬಾರಿಸುವವನು ಅಸಹಾಯಕನಾಗುವುದನ್ನು ತೋರಿಸು ತ್ತದೆ. ಪ್ರಯೋಗಶೀಲ ನಾಟಕ ಕಾಲ (ತಂಡ: ರಂಗ ಲೋಕ, ರ/ನಿ: ಗುರುರಾಜ ಮಾರ್ಪಳ್ಳಿ) ಮನುಷ್ಯನು ಅಧಿಕಾರ, ಧರ್ಮ ಮತ್ತು ರಾಜಕೀಯದ ಕೆಸರಲ್ಲಿ ತೊಳಲಿ ಪ್ರಕೃತಿಗೆ/ಜಾನಪದಕ್ಕೆ ಮರಳಬೇಕಾದ ಅನಿವಾರ್ಯತೆ ಮೂಡುವುದನ್ನು ಸಂಕೇತಿಸುತ್ತದೆ.

ಈ ಎಲ್ಲ ನಾಟಕಗಳೂ ಜಾನಪದ ಎಂದರೆ ಹಿಂದಿನ ತಲೆಮಾರು ಕಟ್ಟಿಕೊಟ್ಟ ಸ್ಥಿರ, ಸುಂದರ ಕಲಾಪ್ರಕಾರ ಎನ್ನುವ ಸಾಮಾನ್ಯ ಧೋರಣೆಯನ್ನು ಪ್ರಶ್ನಿಸುತ್ತದೆ. ಜಾನಪದವನ್ನು ಮಾನವನ ಬದುಕಿನ ಸ್ಥಿತ್ಯಂತರಗಳ ಮೂಲಕ ಗ್ರಹಿಸಲು ಪ್ರಯತ್ನಿಸುವುದನ್ನು ಮತ್ತು ತಮ್ಮ ತಮ್ಮ ದೃಷ್ಟಿ ಕೋನಗಳನ್ನು ಪ್ರಾಸಂಗಿಕವಾಗಿ ನಿರೂಪಿಸುತ್ತಾ ವರ್ತಮಾನಕ್ಕೆ ಅಳವಡಿಸಿ ಶಾಂತಿ ಸಮಷ್ಟಿ ಯತ್ತ ಮುಖ ಮಾಡಿರುವುದನ್ನು ಗಮನಿಸಬಹುದು. ಹೀಗೆ ಜಾನಪದವನ್ನು ಆರೋಗ್ಯಪೂರ್ಣ ವಾಗಿ, ವಿಶಾಲ ಮನೋಭಾವದಿಂದ ನೋಡುವ ಪ್ರಯತ್ನ ಸಫಲವಾಗಲಿ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-11 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಮೂಡಿಗೆರೆ: ಜನಪರ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಶೂದ್ರ, ದಲಿತ ಸಂಸ್ಕೃತಿಗಳು ಕೀಳಲ್ಲ: ನಿಡುಮಾಮಿಡಿ ಶ್ರೀ
»ಡಾ| ಕಮಲಾ ಹಂಪನಾ ಅವರಿಗೆ 'ಚಾವುಂಡರಾಯ ಪ್ರಶಸ್ತಿ' ಪ್ರದಾನ
»‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
»ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
»ಡಾ. ಗೀತಾ ನಾಗಭೂಷಣಗೆ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ
»ಮುಳಿಯ ಪ್ರಶಸ್ತಿ ಪ್ರದಾನ: ರೋಚಕ ಕೃತಿಗಳು ಕಡಿಮೆಯಾದಾಗ ಸಾಂಸ್ಕೃತಿಕ ಶ್ರೀಮಂತಿಕೆ ಮರೆಯಾಗುತ್ತದೆ: ಮಾಧವ ಆಚಾರ್ಯ
»ಕನ್ನಡ ಭಾಷೆ, ಸಾಹಿತ್ಯ ಪರಂಪರೆಗೆ ಐತಿಹಾಸಿಕ ಹಿನ್ನೆಲೆಗಳಿವೆ: ಮೂಡಿಗೆರೆ: 3ನೆ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಸಮ್ಮೇಳನಾಧ್ಯಕ್ಷ ಡಿ.ಬಿ.ಸುಬ್ಬೇಗೌಡ
»ರಷ್ಯನ್‌ ಕಥೆಗಳು ಪುಸ್ತಕ ಬಿಡುಗಡೆ: ಕನ್ನಡ ಸಾಹಿತ್ಯ ಲೋಕದಲ್ಲಿ ಅನುವಾದಕರಿಗೆ ವಿಪುಲ ಅವಕಾಶ: ಪ್ರೋ.ಸಿ. ನಾಗಣ್ಣ
» ಪ್ರಶಂಸೆಗೆ ಪಾತ್ರವಾದ ಸಿಕ್ಕಿಂ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ : ನೆರೆದವರ ರಂಜಿಸಿದ ಜಟಾಯು ಮೋಕ್ಷ
»ಜಾತಿ, ಮತದ ಗಡಿ ದಾಟಿದರೆ ಮಾತ್ರ ಕವಿಯಾಗಬಲ್ಲ: ಎಚ್.ಎಸ್.ವೆಂಕಟೇಶಮೂರ್ತಿ
»2011ನೇ ಸಾಲಿನ ಪ.ಗೋ. ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಅರ್ಜಿ ಆಹ್ವಾನ
»ಕುಕ್ಕೆ ಸುಬ್ರಹ್ಮಣ್ಯ: ಮಲೆ ಮಾದೇಶ್ವರಕ್ಕೆ ISO ಅಂತಾರಾಷ್ಟ್ರೀಯ ಮಾನ್ಯತೆ
»ಕವನ : ಕ್ಲಾಸ್ ಶಯನ...
»ಮಾತು ಬೇರೆ ಬೇಕೆ ಗೆಳೆಯ....
»ಚಂದ್ರಶೇಖರ ಕೆದ್ಲಾಯರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ; ಫೆ.4ರಂದು ಪ್ರಶಸ್ತಿ ಪ್ರದಾನ
»ಉಡುಪಿ :ದಿವಂಗತ ಸೂರ್ಯನಾರಾಯಣ ಚಡಗ ಸ್ಮಾರಕ ಪ್ರಶಸ್ತಿ ಪ್ರದಾನ
»ಕವಿ, ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ
»ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಯಕ್ಷಗಾನಕ್ಕೆ ನಿರ್ದಿಷ್ಟ ಸ್ವರೂಪ ಅಗತ್ಯ- ಗೋವಿಂದ ಭಟ್‌
»ತೋನ್ಸೆ ಕಾಂತಪ್ಪ ಮಾಸ್ತರರ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭ: ಪರಿಪೂರ್ಣ ಕಲಾವಿದನಾಗಬೇಕಾದರೆ ಯಕ್ಷಗಾನದ ಬಗ್ಗೆ ಆಸಕ್ತಿ ಜ್ಞಾನ ಅಗತ್ಯ- ಡಾ. ಭಾಸ್ಕರಾನಂದ ಕುಮಾರ್
»ಮೈಸೂರು ಉದ್ಯಾನಕಲಾ ಸಂಘದ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರಿಗೆ ಸನ್ಮಾನ
»ಕವನ : ನನ್ನ ಸುಬ್ಬಿ
»ಮಲಯಾಳಂನ ಖ್ಯಾತ ಸಾಹಿತಿ ಸುಕುಮಾರ್ ಅಝಿಕೋಡ್ ನಿಧನ
»ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೋವಿಂದ ಭಟ್ಟ
»ಭಾರತದ ಪ್ರಪಿತಾಮಹನೆ ...
»ಖ್ಯಾತ ಸಾಹಿತಿ ನಾಡೋಜ ಪ್ರೊ. ಹಂಪ. ನಾಗರಾಜಯ್ಯರಿಗೆ ‘ವಿಶ್ವಮಾನವ ಪ್ರಶಸ್ತಿ’; ಕನ್ನಡ ಸಾಹಿತ್ಯಕ್ಕೆ ಸಂಕುಚಿತತೆ ಇಲ್ಲ: ಎಚ್.ಆರ್.ಭಾರದ್ವಾಜ್
» ಅನಂತಮೂರ್ತಿ ವಿಚಾರಧಾರೆ : ಅನಂತಮೂರ್ತಿ ಸೃಜನಶೀಲ ಸಾಹಿತಿ:ಡಾ.ನ. ರತ್ನ
»ಅದೆರಳಿದೆ....
»ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ತಾನೂ ಆಕಾಂಕ್ಷಿ: ಚಂಪಾ
»ಡಾ| ಪಾಟೀಲ ಪುಟ್ಟಪ್ಪಗೆ ನಾಗರಿಕ ಸಮ್ಮಾನ: ಗಾಂಧೀಜಿ ತತ್ವ ಪ್ರಚುರಪಡಿಸಲು ಗಾಂಧಿ ಗ್ರಾಮ ಸ್ಥಾಪನೆ:ಜಗದೀಶ ಶೆಟ್ಟರ್
»ಆಸ್ಟ್ರೋ ಮೋಹನ್ ರವರ ’ಪಿಕ್ಟೋರಿಯಲ್ ಜರ್ನಿ ಟು ಉಡುಪಿ”ಪುಸ್ತಕ ಬಿಡುಗಡೆ ಸಮಾರಂಭ
»ಮತ್ತೆ ಮಳೆ ಬರುವುದೆ....
»ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ:ಗಣಿತ ನನಗೆ ಕಬ್ಬಿಣದ ಕಡಲೆಯಾಗಿತ್ತು: ಡಾ. ಚಂದ್ರಶೇಖರ ಕಂಬಾರ
»ಡಾ.ಜಿ.ಎನ್. ಉಪಾಧ್ಯಗೆ ‘ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ’
»ಕಾಳಿಂಗ ನಾವಡ ಯಶೋಗಾಥೆ ಸಾಕ್ಷ್ಯಚಿತ್ರ ವಿಡಿಯೋ
»ಕುವೆಂಪು ಕಂಚಿನ ಪ್ರತಿಮೆಗೆ ಪ್ಲಾಸ್ಟಿಕ್ ಮುಸುಕು!: ರಾಷ್ಟ್ರ ಕವಿ ಪ್ರತಿಮೆಗೂ ಬಿಜೆಪಿ ಭಿನ್ನಮತದ ಕರಿನೆರಳು; ಸಿಎಂಗಾಗಿ ಕಾದು ಕುಳಿತಿರುವ ಅಧಿಕಾರಿಗಳು
»ಗಾಯಕಿ ಎಸ್.ಜಾನಕಿಗೆ ಬಸವಭೂಷಣ ಪ್ರಶಸ್ತಿ ಪ್ರದಾನ
»ಜ್ಞಾನಪೀಠ ಶ್ರೇಷ್ಠವಾದದ್ದಲ್ಲ; ನಾಟಕ ಬರೆದದ್ದೇ ಆಕಸ್ಮಿಕ: ಡಾ| ಗಿರೀಶ ಕಾರ್ನಾಡ
»ಪಾರ್ಥಸಾರಥಿಯವರಿಗೆ ಕೊಲರಾಡೋ ಕನ್ನಡ ಪ್ರಶಸ್ತಿ
»ಯಕ್ಷಗಾನದ ಮೇರುನಟರ ಕ್ಯಾಲೆಂಡರ್‌ ಬಿಡುಗಡೆ; ಸಮಗ್ರ ಮಾಹಿತಿಯುಳ್ಳ ವೆಬ್‌ಸೈಟ್‌ ಕೂಡ ತಯಾರಿಯಲ್ಲಿ.
»30 ಜಿಲ್ಲೆಗಳಲ್ಲಿ ಕಂಬಾರರ ನಾಟಕಗಳ ಉತ್ಸವ
»ಎಲೆಯ ಮರೆಯ ಹೂ...
»ಪುತಿನ ಕಲಾಮಂದಿರ ಲೋಕಾರ್ಪಣೆ
»ಸುಳ್ಯ ಯಶಸ್ವೀ ಸಂಗೀತ ಸಂಭ್ರಮ 2011
»ಹಿರಿಯ ಸಾಹಿತಿ ಏರ್ಯ ಲಕ್ಷಿನಾರಾಯಣ ಆಳ್ವ ರಿಂದ ಡಾ| ಮೋಹನ ಆಳ್ವರಿಗೆ ಕಿಲ್ಲೆ ಪ್ರಶಸ್ತಿ ಪ್ರಧಾನ
»`ಕುವೆಂಪು ಪ್ರಭಾವ ಎಲ್ಲೆಡೆ ಪಸರಿಸಲಿ' ....
»ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚಂಪಾ, ಹಾಲಂಬಿ ಸ್ಪರ್ಧೆ?
»ಕವನ : ಕನಸಿನಾಳದಿಂದ .....
»ನಾಲ್ವರು ಸಾಧಕರಿಗೆ `ನಾಡೋಜ' ಗೌರವ ಪದವಿ ನೀಡಿ ಸನ್ಮಾನ
»ಸಂತೆ ಶಿವಾರದಲ್ಲಿ ಸಾಹಿತಿ ಡಾ ಭೈರಪ್ಪರಿಗೆ ಸನ್ಮಾನ
»ಕವನ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri