21 ಅಡಿ ಏಕಶಿಲಾ ಸುಬ್ರಹ್ಮಣ್ಯ |
ಪ್ರಕಟಿಸಿದ ದಿನಾಂಕ : 2010-03-11
ರಾಮೋಹಳ್ಳಿ ದೊಡ್ಡ ಆಲದ ಮರದ ರಸ್ತೆಯ ಮುಕ್ತನಾಗ ದೇವಾಲಯದಲ್ಲಿ 21 ಅಡಿ ಎತ್ತರ, 56 ಟನ್ ತೂಕದ ಶ್ರೀ ಶಕ್ತಿಧರ ಸುಬ್ರಹ್ಮಣ್ಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆಯಾಗಿದೆ. ಇದರ ಜತೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ವಿವಿಧ ಸ್ವರೂಪದ ಇನ್ನೂ ಐದು ವಿಗ್ರಹಗಳು ಇಲ್ಲಿ ಸ್ಥಾಪನೆಗೊಳ್ಳಲಿವೆ.
ಆಸ್ತಿಕರ ಮನಸ್ಸಿನಲ್ಲಿ ಭಕ್ತಿ ಭಾವ, ನೆಮ್ಮದಿ ಮೂಡಿಸುವ ಪ್ರಶಾಂತ ವಾತಾವರಣದಲ್ಲಿ ಪ್ರತಿಷ್ಠಾಪ ನೆಗೊಂಡಿದೆ ‘ಶಕ್ತಿಧರ ಸುಬ್ರಹ್ಮಣ್ಯಸ್ವಾಮಿ’.
ಕರಿ ಏಕ ಶಿಲೆಯಲ್ಲಿ 21 ಅಡಿ ಎತ್ತರದ ನಯನ ಮನೋಹರ, ಪ್ರಸನ್ನ ಚಿತ್ತ, ಶಾಂತ ಮುಖ ಮುದ್ರೆಯ ಈ ವಿಗ್ರಹವನ್ನು ಕೆತ್ತಿದವರು ಹೆಸರಾಂತ ಶಿಲ್ಪ ಕಲಾವಿದ ಪದ್ಮಶ್ರೀ ಗಣಪತಿ ಸ್ಥಪತಿ ಹಾಗೂ ಅವರ ಪುತ್ರರಾದ ಶಂಕರ ಮತ್ತು ಜಯೇಂದ್ರ. ಇದಕ್ಕಾಗಿ ಅವರಿಗೆ ಬರೋಬ್ಬರಿ ಎರಡು ವರ್ಷ ಹಿಡಿದಿದೆ. ಇದರ ಒಟ್ಟು ತೂಕ 56 ಟನ್.
ಕೆಂಗೇರಿ ಹೋಬಳಿ ರಾಮೋಹಳ್ಳಿಯಲ್ಲಿನ (ದೊಡ್ಡ ಆಲದಮರದ ರಸ್ತೆ) ಮುಕ್ತಿನಾಗ ದೇವಾಲ ಯದ ಆವರಣದಲ್ಲಿ ಈ ಸುಂದರ ವಿಗ್ರಹದ ಪ್ರತಿಷ್ಠಾಪನೆ ಕಳೆದ ಭಾನುವಾರ ನೆರವೇರಿತು. ಈ ಸಂದರ್ಭದಲ್ಲಿ ಧರ್ಮದರ್ಶಿ ಸುಬ್ರಹ್ಮಣ್ಯ ಸ್ವಾಮೀಜಿ, ಕಾಳಿಕಾಶ್ರಮದ ವಿಶುಕುಮಾರ ಸ್ವಾಮೀಜಿ, ಮಧ್ವನಾರಾಯಣ ಆಶ್ರಮದ ವಿಶ್ವೇಶಭೂಷಣತೀರ್ಥ ಸ್ವಾಮೀಜಿ ಮತ್ತಿತರರು ಹಾಜರಿದ್ದರು.
ಈಗಾಗಲೆ ಇಲ್ಲಿ ಅತಿ ದೊಡ್ಡ ಮುಕ್ತಿ ನಾಗ ವಿಗ್ರಹವಿದೆ. ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತಿ ದೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-11
|
|
|