ಪುಣೆ: ಅಪ್ಪನನ್ನೇ ಕೋರ್ಟಿಗೆಳೆದ ಮಗರಾಯ |
ಪ್ರಕಟಿಸಿದ ದಿನಾಂಕ : 2010-03-11
ಪುಣೆ, ಮಾ.೧೦: ಗಂಡ ಕಿರುಕುಳ ನೀಡುತ್ತಾನೆ ಎಂದು ಹೆಂಡತಿ ಕೇಸ್ ದಾಖಲಿಸುವುದು ನೋಡಿ ದ್ದೇವೆ. ಮಕ್ಕಳು ಜೀವನಾಂಶ ನೀಡುತ್ತಿಲ್ಲ ಎಂದು ಅಪ್ಪ, ಅಮ್ಮಂದಿರು ಇಳಿ ವಯಸ್ಸಲ್ಲಿ ಕೋರ್ಟ್ ಗೆ ಅಲೆದಾಡುವುದೂ ಕಂಡಿದ್ದೇವೆ. ಆದರೆ ಇಲ್ಲೊಬ್ಬ ೧೦ ವರ್ಷದ ಹುಡುಗ ಅಪ್ಪನ ವಿರುದ್ಧವೇ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾನೆ!
ಇವನ ದೂರಾದರೂ ಏನು ಗೊತ್ತೆ? ಅಪ್ಪ ಶೈಕ್ಷಣಿಕ ಖರ್ಚು ವೆಚ್ಚ ಭರಿಸುತ್ತಿಲ್ಲ ಎಂಬುದೇ ಇವನ ಆರೋಪ. ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿ ಪುಣೆಯ ಬಾಲಕ ಚಿನ್ಮಯ್ (ಹೆಸರು ಬದಲಿಸ ಲಾಗಿದೆ) ಕೇಸ್ ದಾಖಲಿಸಿದ್ದಾನೆ. ವಿಶೇಷವೆಂದರೆ, ೨೦೦೫ರಲ್ಲಿ ಜಾರಿಗೆ ಬಂದ ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿ ಒಬ್ಬ ಗಂಡು ದೂರು ನೀಡಿದ್ದು ಇದೇ ಪ್ರಥಮ.
ಏನಿದು ಕೇಸು?: ೧೯೯೯ರ ಜುಲೈನಲ್ಲಿ ಚಿನ್ಮಯ್‌ನ ಹೆತ್ತವರು ವಿವಾಹವಾಗಿದ್ದರು. ಮೇ, ೨೦೦೫ರಲ್ಲಿ ಅವರಿಬ್ಬರು ವಿಚ್ಛೇದನ ಪಡೆದಿದ್ದರು. ಆಗ ಚಿನ್ಮಯ್‌ನನ್ನು ಆತನ ತಾಯಿಗೊಪ್ಪಿಸು ವಂತೆ ಕೋರ್ಟ್ ಆದೇಶ ನೀಡಿತ್ತು.
ಅಲ್ಲದೆ, ಪುತ್ರನ ಶೈಕ್ಷಣಿಕ ವೆಚ್ಚಕ್ಕೆಂದು ಪ್ರತಿ ತಿಂಗಳು ೫೦೦ ರು.ಗಳನು ನೀಡುವಂತೆ ಚಿನ್ಮಯ್ ತಂದೆಗೆ ಸೂಚಿಸಿತ್ತು. ಆದರೆ, ಅಪ್ಪ ಕೋರ್ಟ್ ಆದೇಶದಂತೆ ನಡೆಯುತ್ತಿಲ್ಲ ಹಾಗೂ ತನ್ನ ಶೈಕ್ಷಣಿಕ ವೆಚ್ಚವನ್ನು ಭರಿಸುತ್ತಿಲ್ಲ. ಇದರಿಂದ ತಾನು ಮಾನಸಿಕವಾಗಿ ನೊಂದಿದ್ದೇನೆ ಎಂದು ಚಿನ್ಮಯ್ ಪುಣೆಯ ಕೋರ್ಟ್‌ನಲ್ಲಿ ಆರೋಪಿಸಿದ್ದಾನೆ. ಸೋಮವಾರ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಎಳೆ ಬಾಲಕರಿಗೂ ಇದೆ ಅವಕಾಶ: ಮಹಿಳೆಯರು ಅಥವಾ ಹುಡುಗಿಯರಿಗಷ್ಟೇ ಕೌಟುಂಬಿಕ ದೌರ್ಜನ್ಯ ಕಾಯಿದೆಯ ಲಾಭವಲ್ಲ. ೧೮ ವರ್ಷದೊಳಗಿನ ಬಾಲಕರೂ ಕೇಸ್ ದಾಖಲಿಸಬಹು ದಾಗಿದೆ. ಈವರೆಗೆ ಮಹಿಳೆಯರು ಮಾತ್ರ ಕೇಸು ದಾಖಲಿಸುತ್ತಿದ್ದರು. ಆದರೆ, ಬಾಲಕನೊಬ್ಬ ಈ ಕಾಯ್ದೆಯಡಿ ಕೇಸು ದಾಖಲಿಸಿರುವುದು ಇದೇ ಮೊದಲು ಎಂದು ಮಾನವ ಹಕ್ಕುಗಳ ಹೋರಾಟ ಗಾರರೂ ಆಗಿರುವ ಚಿನ್ಮಯ್ ಪರ ವಕೀಲ ಅಸೀಮ್ ಸರೋದ್ ಹೇಳುತ್ತಾರೆ.
ಏನಿದು ವಿವಾದ?
ವಿಚ್ಛೇದಿತ ತಾಯಿ ಜತೆ ವಾಸಿಸುತ್ತಿದ್ದಾನೆ ಬಾಲಕ ಚಿನ್ಮಯ್
ಆಕೆಯೇ ಮಗನನ್ನು ಪೋಷಿಸುವಂತೆ ಕೋರ್ಟ್ ಆದೇಶಿಸಿತ್ತು
ತಂದೆ ಮಗನ ಶೈಕ್ಷಣಿಕ ವೆಚ್ಚಕ್ಕಾಗಿ ತಿಂಗಳಿಗೆ ೫೦೦ ರು. ನೀಡಬೇಕು ಎಂದಿತ್ತು ಕೋರ್ಟ್
ಆದರೆ, ತಂದೆ ಈ ಆದೇಶ ಪಾಲಿಸುತ್ತಿಲ್ಲ ಎಂದು ದೂರಿ ಮಗ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ
ಅಪ್ಪನ ನಿರ್ಲಕ್ಷ್ಯತನ ತನಗೆ ಮಾನಸಿಕ ನೋವು ನೀಡಿದೆ ಎಂಬುದು ಅವನ ಆರೋಪ
ಸೋಮವಾರ ಪುಣೆ ನ್ಯಾಯಾಲಯ ಪ್ರಕರಣ ವಿಚಾರಣೆ ನಡೆಸಲಿದೆ
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|