ಮು೦ಬೈ: ರೂಪಿಕಾ ಚಾವ್ಲಾ ಬರೆದಿರುವ `ರಾಜಾ ರವಿವರ್ಮ ...ಇಂಡಿಯಾ' ಕೃತಿ ಬಿಡುಗಡೆ |
ಪ್ರಕಟಿಸಿದ ದಿನಾಂಕ : 2010-03-11
(ಚಿತ್ರ ವರದಿ-ರೋನ್ಸ್ ಬ೦ಟ್ವಾಳ್)
ಮುಂಬಯಿ, ಮಾ.೧೦: ಚಿರಸ್ಮರಣೀಯ ಚಿತ್ರಕಲಾವಿದ ರಾಜಾ ರವಿವರ್ಮ ಕುರಿತು ಮುಖ್ಯ ಚುನಾವಣಾ ಆಯುಕ್ತ ನವೀನ್ ಚಾವ್ಲಾ ಅವರ ಪತ್ನಿ ರೂಪಿಕಾ ಚಾವ್ಲಾ ಬರೆದಿರುವ `ರಾಜಾ ರವಿ ವರ್ಮ : ಪೈಂಟರ್ ಆಫ್ ಕಾಲೊನಿಯಲ್ ಇಂಡಿಯಾ' ಕೃತಿಯನ್ನು ರಾಜ್ಯಪಾಲ ಕೆ.ಶಂಕರ್ ನಾರಾಯಣನ್ ಅವರು ಇಲ್ಲಿ ಬಿಡುಗಡೆಗೊಳಿಸಿ, ಖ್ಯಾತ ಕಲಾವಿದನಿಗೆ ಗೌರವ ಅರ್ಪಿಸಿದರು.

ರಾಜಾ ರವಿವರ್ಮ ಭಾರತೀಯ ಚಿತ್ರಕಲೆಯನ್ನು ಜಗತ್ತಿನಾದ್ಯಂತ ಪರಿಚಯಿಸಿದ ಅಪ್ರತಿಮ ಕಲಾವಿದ. ಮುಂಬಯಿಗೂ ಅವರು ನಿಕಟವಾಗಿದ್ದರು. ಇಲ್ಲಿನ ಜನರನ್ನು, ವಾಸ್ತುಶಿಲ್ಪವನ್ನು ಮತ್ತು ಬೀದಿಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದ. ರಾಜಾ ರವಿವರ್ಮರ ಕಲಾ ಕೃತಿಗಳು ಜನರಿಗೆ ಸುಲಭದಲ್ಲಿ ಸಿಗುವಂತಾಗಲು ಮಾಡಿದ ಪ್ರಯತ್ನ ಸ್ತುತ್ಯರ್ಹ ಎಂದು ರಾಜ್ಯಪಾಲರು ಹೇಳಿದರು.
ರವಿವರ್ಮ ಅವರ ಮರಿ ಮೊಮ್ಮಗ ಪದ್ಮನಾಭ ದಾಸಾ ಮಾರ್ತಾಂಡ ವರ್ಮ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ರೋನ್ಸ್ ಬ೦ಟ್ವಾಳ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|