ಕೆನಡಾದಲ್ಲಿ ಭಾರತೀಯರ ಸಂಖ್ಯೆ ಹೆಚ್ಚಳ |
ಪ್ರಕಟಿಸಿದ ದಿನಾಂಕ : 2010-03-11
ಕೆನಡಾದಲ್ಲಿ ವಾಸಿಸುತ್ತಿರುವ ವಿದೇಶಿಯರಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶವರದ್ದೇ ಸಿಂಹಪಾಲು ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಟೊರೆಂಟೊ (ಐಎಎನ್‌ಎಸ್): ಕೆನಡಾದಲ್ಲಿ ವಾಸಿಸುತ್ತಿರುವ ವಿದೇಶಿಯರಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶವರದ್ದೇ ಸಿಂಹಪಾಲು ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ವಲಸಿಗರ ಜನನ ಪ್ರಮಾಣದಲ್ಲಿ ಏರಿಕೆ ಮತ್ತು ವಲಸೆ ಬರುತ್ತಿರುವ ಕಂದು ವರ್ಣೀಯರ ಸಂಖ್ಯೆಯಲ್ಲಿ ಹೆಚ್ಚಳವೇ ಇದಕ್ಕೆ ಕಾರಣ. 2031ರ ವೇಳೆಗೆ ಇಲ್ಲಿ ನೆಲೆಸಿರುವ ವಿದೇಶೀಯರ ಸಂಖ್ಯೆ ಒಟ್ಟು ಜನಸಂಖ್ಯೆಯ ಮೂರನೇ ಒಂದು ಪಾಲು ಆಗಲಿದೆ.
2006 ರ ಜನಗಣತಿ ಪ್ರಕಾರ ಇಲ್ಲಿ ನೆಲೆಸಿದ್ದ ಭಾರತ, ಪಾಕ್, ಬಾಂಗ್ಲಾ ಮೂಲದವರು ಸೇರಿದಂತೆ ವಿದೇಶೀಯರ ಸಂಖ್ಯೆ 32 ಲಕ್ಷ ಇತ್ತು. ಈಗ ಅದು 41 ಲಕ್ಷಕ್ಕೆ ಏರಿದೆ. ಇಲ್ಲಿನ ಜನಸಂಖ್ಯೆ 3 ಕೋಟಿ 30 ಲಕ್ಷ, ಇವರಲ್ಲಿ ಕಂದು ವರ್ಣೀಯರ ಸಂಖ್ಯೆ 53 ಲಕ್ಷ. ವಲಸಿಗರ ಸಂಖ್ಯೆ ಮತ್ತು ವಲಸಿಗರ ಜನನ ದರ ಈಗಿನ ಪ್ರಮಾಣದಲ್ಲಿ ವೃದ್ಧಿಯಾದರೆ 2031ರ ಸುಮಾರಿಗೆ ಮೂವರಲ್ಲಿ ಒಬ್ಬರು ಕಂದು ವರ್ಣೀಯ ಇರುತ್ತಾರೆ ಎಂದು ವರದಿ ಹೇಳಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|