ನವದೆಹಲಿ: ಮಹಿಳಾ ಮೀಸಲಾತಿಯಾಗಿದೆ. ಇನ್ನು ಮುಸ್ಲಿಮರಿಗೂ ಕೇಂದ್ರದಿಂದ ಮೀಸಲಾತಿ ದೊರಕಬಹುದೇ? |
ಪ್ರಕಟಿಸಿದ ದಿನಾಂಕ : 2010-03-11
ನವದೆಹಲಿ: ಅಂತೂ ಇಂತೂ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.೩೩ ಮೀಸಲಾತಿಯ ಕನಸು ನನಸಾಗುತ್ತಿದೆ. ಈಗ ಮುಸ್ಲಿಮರಿಗೆ ಕೋಟಾ ಮೀಸಲಿಡುವ ಬಗ್ಗೆ ಸರ್ಕಾರ ಚಿಂತಿಸಿದೆಯೇ ಎಂಬ ಪ್ರಶ್ನೆ ಮೂಡಿದೆ.
ಮಹಿಳಾ ಮೀಸಲಾತಿಯಿಂದ ಮುಸ್ಲಿಮರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ಲಾಭವಿಲ್ಲ ಎಂದು ಆರೋಪಿಸಿ ಎಸ್‌ಪಿ ಮತ್ತು ಆರ್‌ಜೆಡಿ ಪಕ್ಷಗಳು ಗದ್ದಲ ಎಬ್ಬಿಸಿರುವುದು ಎಲ್ಲರಿಗೂ ಗೊತ್ತಿದೆ. ಈಗ ಮುಸ್ಲಿಮರ ಓಲೈಕೆಗೆ ಮುಂದಾಗಿರುವ ಪ್ರಧಾನಿ ಮನಮೋಹನ್ ಸಿಂಗ್, ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ಕಾಪಾಡುವುದಾಗಿ ಭರವಸೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ, ಮುಸ್ಲಿಮರು ಅಭಿವೃದ್ಧಿಯ ಫಲ ಪಡೆಯುತ್ತಿಲ್ಲ ಎನ್ನು ವುದು ತನಗೆ ಗೊತ್ತಿದೆ. ದೇಶದಲ್ಲಿ ಅಲ್ಪಸಂಖ್ಯಾತರಿಗಾಗುವ ತಾರತಮ್ಯವನ್ನು ಸಂಪೂರ್ಣವಾಗಿ ಹೋಗಲಾಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಈ ಮೂಲಕ ಸಿಂಗ್ ಮುಸ್ಲಿಮರನ್ನು ಓಲೈಸುವ ಆರ್‌ಜೆಡಿ ಮತ್ತು ಎಸ್‌ಪಿಯ ತಂತ್ರವನ್ನು ವಿಫಲಗೊಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-11
|
|
|