| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಭೂ ಅತಿಕ್ರಮಣ: ಬಿಬಿಎಂಪಿಗೆ ನೋಟಿಸ್ |
ಪ್ರಕಟಿಸಿದ ದಿನಾಂಕ : 2010-03-11
ಬೆಂಗಳೂರು, ಮಾ.೧೦: ನಗರದ ಅಲಸೂರಿನ ಲ್ಲಿರುವ ಮದ್ರಾಸ್ ಎಂಜಿನಿಯರ್ ಗ್ರೂಪ್ (ಎಂಇಜಿ)ಗೆ ಸೇರಿದೆ ಎನ್ನಲಾದ ೭ ಸಾವಿರ ಚ.ಅ.ಭೂಮಿಗೆ ಸಂಬಂಧಿಸಿದ ಪೂರ್ವಾಪರ ದಾಖಲೆಗಳ ಸಮಗ್ರ ಮಾಹಿತಿಯನ್ನು ೧೦ ದಿನದೊಳಗೆ ಸಲ್ಲಿಸುವಂತೆ ಆದೇಶಿಸಿ ಹೈಕೋರ್ಟ್ ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದೆ.
ಜೇಕಬ್ ಮ್ಯಾಥ್ಯೋ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿ.ಗೋಪಾಲ್‌ಗೌಡ ಮತ್ತು ನ್ಯಾ. ಬಿ.ಎಸ್.ಪಾಟೀಲ್ ಅವರಿದ್ದ ವಿಭಾUಯ ಪೀಠ ಈ ಆದೇಶ ನೀಡಿದೆ.
ಮದ್ರಾಸ್ ಎಂಜಿನೀಯರ್ ಗ್ರೂಪ್‌ಗೆ ಸೇರಿದ ೭ ಸಾವಿರ ಚ.ಅ. ಜಮೀನನ್ನು ಸ್ಥಳೀಯ ಶಾಸಕರ ಪ್ರಭಾವ ಬಳಸಿ ಕೆಲವು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಅರ್ಜಿದಾರರ ಆರೋಪವಾಗಿತ್ತು.
ವಾರ್ಡ್ ಮೀಸಲಾತಿ: ಅರ್ಜಿ ವಜಾ: ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಸಂಖ್ಯೆ ೭೯ (ಸರ್ವಜ್ಞ ನಗರ) ಮೀಸಲಾತಿ ಪ್ರಶ್ನಿಸಿ, ಸರ್ವಜ್ಞ ನಗರ ನಾಗರಿಕರ ವೇದಿಕೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
೨೦೦೧ರಲ್ಲಿ ಸರ್ವಜ್ಞನಗರ ವಾರ್ಡ್ ಎಸ್‌ಸಿ (ಮಹಿಳೆ)ಗೆ ಮೀಸಲಾಗಿತ್ತು. ೨೦೦೯ ಮತ್ತು ೧೦ನೆ ಸಾಲಿನ ಪರಿಷ್ಕೃತ ಮೀಸಲು ಪಟ್ಟಿಯಲ್ಲೂ ಈ ವಾರ್ಡ್‌ಗೆ ಅದೇ ಮೀಸಲಾತಿ ನೀಡಲಾಗಿದೆ. ಇದನ್ನು ಬದಲಾಯಿಸಬೇಕು ಎಂದು ಅರ್ಜಿದಾರರ ವಾದವಾಗಿತ್ತು. ಈಗಾಗಲೇ ಚುನಾವಣಾ ವೇಳಾ ಪಟ್ಟಿ ಪ್ರಕಟಗೊಂಡಿದ್ದು ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಮೀಸಲಾತಿ ವಿಚಾರಣೆ ಉಚಿತವಲ್ಲ ಎಂದು ಅಭಿಪ್ರಾಯಪಟ್ಟ ನ್ಯಾ.ವಿ. ಗೋಪಾಲ್ ಗೌಡ ಮತ್ತು ನ್ಯಾ. ಬಿ.ಎಸ್.ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿತು.
ಇದನ್ನೆ ಪ್ರಶ್ನಿಸಿ ಪ್ರದೀಪ್ ಕುಮಾರ್ ಮತ್ತು ನಾರಾಯಣ ಸ್ವಾಮಿ ಎಂಬುವರು ಸಲ್ಲಿಸಿದ್ದ ತಕಾರುರು ಅರ್ಜಿಯನ್ನು ನ್ಯಾ. ರಾಮಮೋಹನ್ ರೆಡ್ಡಿ ವಜಾ ಗೊಳಿಸಿದರು.
ಜಯಲಲಿತಾ ಅರ್ಜಿ ವಜಾ: ತಮ್ಮ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆಯನ್ನು ಕೈಬಿಡಬೇಕೆಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ.
೧೯೯೨ ರಿಂದ ೯೬ ರ ಅವಧಿಯಲ್ಲಿ ಜಯಲಲಿತಾ ವಿರುದ್ಧ ಆಕ್ರಮ ಆಸ್ತಿ ಗಳಿಕೆ ಆರೋಪದಡಿಯಲ್ಲಿ ತಮಿಳುನಾಡು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಅಧಿಕಾರದ ಪ್ರಭಾವ ಬಳಿಸಿ ಪ್ರಕರಣವನ್ನು ಮುಚ್ಚಿಹಾಕುವ ಸಾಧ್ಯತೆ ಹಿನ್ನಲೆಯಲ್ಲಿ ಈ ಪ್ರಕರಣವನ್ನು ರಾಜ್ಯ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು.
ಪ್ರಕರಣ ದಾಖಲಾದ ೧೫ ವರ್ಷಗಳ ನಂತರ ಸಮನ್ಸ್ ನೀಡಲಾಗಿದೆ. ಉದ್ದೇಶಪೂರ್ವಕವಾಗಿ ತಮ್ಮ ವಿರುದ್ಧ ಈ ಪ್ರಕರಣವನ್ನು ದಾಖಲಿಸಲಾಗಿದೆ. ಆದ್ದರಿಂದ ಈ ಬಗ್ಗೆ ವಿಚಾರಣೆ ಕೈಬಿಡಬೇಕೆಂದು ಜಯಲಲಿತಾ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೇಶವ ನಾರಾಯಣ ಅರ್ಜಿಯನ್ನ್ನು ವಜಾಗೊಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|
|
|