| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಕೃಷ್ಣಭಟ್ ಹೇಳಿಕೆಗೆ ಮನನೊಂದ ನಾಣಯ್ಯ: ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದರು ಜೆಡಿಎಸ್ ಸದಸ್ಯರು |
ಪ್ರಕಟಿಸಿದ ದಿನಾಂಕ : 2010-03-11
ಬೆಂಗಳೂರು, ಮಾ.೧೦: ‘ಸದನದಲ್ಲಿ ಸಮಯ ಪಾಲನೆ ಮಾಡಿ’ ಎಂಬ ಬಿಜೆಪಿ ನೂನತ ಸದಸ್ಯ ಕೃಷ್ಣಭಟ್‌ರ ಮಾತಿನಿಂದ ಮನನೊಂದ ಜೆಡಿಎಸ್ ಸದಸ್ಯ ಎಂ.ಸಿ.ನಾಣಯ್ಯ, ತನ್ನ ಭಾಷಣವನ್ನು ಮೊಟಕುಗೊಳಿಸಿದ ಪ್ರಸಂಗ ವಿಧಾನಪರಿಷತ್‌ನಲ್ಲಿ ನಡೆಯಿತು.
ವಿಧಾನಪರಿಷತ್ ಸದನ ಕಲಾಪದಲ್ಲಿ ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ವಂದನಾ ನಿರ್ಣಯದ ಮೇಲೆ ಬುಧವಾರ ನಡೆದ ಮುಂದುವರಿದ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಕೃಷ್ಣಭಟ್, ನಾಣಯ್ಯ ಅವರು ಏಕಪಕ್ಷೀಯವಾಗಿ ಮಾತನಾಡುತ್ತಿದ್ದಾರೆ. ಒಬ್ಬ ಸದಸ್ಯರೆ ಮಾತನಾಡಲು ಹೆಚ್ಚು ಅವಕಾಶ ತೆಗೆದುಕೊಂಡರೆ ಹೇಗೆ, ಸಮಯಪಾಲನೆ ಮಾಡಬೇಕು. ಇತರ ಸದಸ್ಯರಿಗೂ ಮಾತನಾಡಲು ಅವಕಾಶ ನೀಡಬೇಕು ಎಂದರು.
ಕೃಷ್ಣಭಟ್‌ರ ಮಾತಿನಿಂದ ಬೇಸರಗೊಂಡ ನಾಣಯ್ಯ, ನಿಮ್ಮ ಸಲಹೆಯನ್ನು ಸ್ವೀಕರಿಸುತ್ತೇನೆ. ನಾನು ಮಾತನಾಡುವ ವಿಷಯ ಅಪ್ರಸ್ತುತ ಎನ್ನುವುದಾದರೆ ಮಾತನಾಡುವುದಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಇಂತಹ ಬೇಸರ ಆಗಿರಲಿಲ್ಲ. ಹೀಗಾಗಿ ನಾನು ಮಾತನಾಡುವುದಿಲ್ಲ ಎಂದು ಹೇಳಿ ಕುಳಿತುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೃಷ್ಣಭಟ್‌ರ್ ಮಾತನ್ನು ಅನ್ಯತಾ ಭಾವಿಸಬೇಕಾದ ಅವಶ್ಯಕತೆ ಇಲ್ಲ. ಜನತೆ ಸಂಕಷ್ಟದಲ್ಲಿದ್ದಾರೆ. ಅವರ ಪರಿಸ್ಥಿತಿಯನ್ನು ಸುಧಾರಿಸಲು ಸರಕಾರಕ್ಕೆ ಉತ್ತಮ ಸಲಹೆಗಳನ್ನು ನೀಡುತ್ತೀರ ಎಂದು ಸದನದಲ್ಲೆ ಕುಳಿತಿದ್ದೇನೆ. ಮಾತನ್ನು ಮುಂದುವರಿಸಬೇಕೆಂದು ಮನವಿ ಮಾಡಿದರು.
ಆಡಳಿತ ಪಕ್ಷದ ಸದಸ್ಯರು ಕೂಡ ನಾಣಯ್ಯರನ್ನು ಮಾತನಾಡುವಂತೆ ಮನವಿ ಮಾಡಿದರೂ, ಅವರು ಮಾತನಾಡಲು ಒಪ್ಪಲಿಲ್ಲ. ನಾನು ಸರಕಾರಕ್ಕೆ ಅನೇಕ ಸಲಹೆಗಳನ್ನು ನೀಡಬೇಕೆಂದಿದ್ದೆ. ಆದರೆ ಈಗ ಏನು ಹೇಳಬೇಕೆಂದು ತೋಚದಂತಾಗಿದೆ. ಈಗ ಮಾತನಾಡಲು ಸಾಧ್ಯವೆ ಇಲ್ಲ ಎಂದು ಪಟ್ಟು ಹಿಡಿದರು.
ಜೆಡಿಎಸ್‌ನ ಸದಸ್ಯ ಎಚ್.ಸಿ.ನೀರಾವರಿ ಮಾತನಾಡಿ, ನಾಣಯ್ಯ ಯಾವುದೆ ಅಪ್ರಸ್ತುತ ವಿಷಯಗಳನ್ನು ಸದನದಲ್ಲಿ ಹೇಳಲಿಲ್ಲ. ಆಡಳಿತ ಪಕ್ಷದ ಸದಸ್ಯರು ಅನಾವಶ್ಯಕವಾಗಿ ನಾಣಯ್ಯ ಭಾಷಣಕ್ಕೆ ಅಡಚಣೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಸದನದಲ್ಲೆ ಇದ್ದರೂ, ತನ್ನ ಸದಸ್ಯರನ್ನು ತಡೆಯಲಿಲ್ಲ. ಹೀಗಾಗಿ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಜೆಡಿಎಸ್ ಸದಸ್ಯರು ಭಾಗವಹಿಸುವುದಿಲ್ಲ ಎಂದರು.
ನಂತರ ಕಾಂಗ್ರೆಸ್‌ನ ಸದಸ್ಯರು ಮಾತ್ರ ಚರ್ಚೆಯಲ್ಲಿ ಭಾಗಹಿಸಿ, ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೆ ರಾಜ್ಯಪಾಲರಿಂದ ಸುಳ್ಳು ಹೇಳಿಸಿದೆ ಎಂದು ಕಿಡಿಕಾರಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|
|
|