| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಸದನದಲ್ಲಿ ಚರ್ಚೆಗೆ ಸಭಾಪತಿ ಅವಕಾಶ: ಕೃಷಿ ಜಮೀನು ಸ್ವಾಧೀನ ಪಡಿಸಿಕೊಂಡಿರುವ ಸರಕಾರದ ಕ್ರಮಕ್ಕೆ ಆಕ್ರೋಶ |
ಪ್ರಕಟಿಸಿದ ದಿನಾಂಕ : 2010-03-11
ಬೆಂಗಳೂರು, ಮಾ.೧೦: ಕೈಗಾರಿಕೆಗಳ ಸ್ಥಾಪನೆ ಹೆಸರಿನಲ್ಲಿ ಸರಕಾರ ಕೃಷಿ ಜಮೀನನ್ನು ಸ್ವಾಧೀನಪಡಿಸಿ ಕೊಳ್ಳುತ್ತಿದೆ ಎಂದು ವಿಧಾಪರಿಷತ್ ವಿರೋಧ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಈ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.
ವಿಧಾನಪರಿಷತ್ ಸದನ ಕಲಾಪದಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಕೇಳಿದ ಪ್ರಶ್ನೆಯೊಂದಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಉತ್ತರಿಸಿದರು.
ಜೂನ್ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಈ ಸಮಾವೇಶ ನಡೆಯುವ ವೇಳೆಗೆ ಹೂಡಿಕೆದಾರರಿಗೆ ಅವಶ್ಯಕತೆ ಇರುವ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ನಿರಾಣಿ ಹೇಳಿದರು.
ಬಂಜರು ಹಾಗೂ ಒಣ ಭೂಮಿಯನ್ನು ಮಾತ್ರ ಕೈಗಾರಿಕೆಗಳ ಸ್ಥಾಪನೆಗಾಗಿ ಸ್ವಾಧೀನ ಮಾಡಿಕೊಳ್ಳಲಾ ಗುತ್ತಿದ್ದು, ಕೃಷಿ ಜಮೀನನ್ನು ಯಾವುದೆ ಕಾರಣಕ್ಕೂ ಸ್ವಾಧೀನಪಡಿಸಿಕೊಂಡಿಲ್ಲ ಎಂದು ಅವರು ಉತ್ತರಿಸಿದರು.
ನಿರಾಣಿ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ ಜೆಡಿಎಸ್ ಸದಸ್ಯ ನಾಣಯ್ಯ, ಶ್ರೀಕಂಠೇಗೌಡ, ದತ್ತಾ, ಕೃಷಿ ಜಮೀನನ್ನು ಸ್ವಾಧೀನಪಡಿಸಿಕೊಂಡಿರುವುದಕ್ಕೆ ಸಾಕ್ಷಾಧಾರಗಳನ್ನು ಒದಗಿಸಲು ಮುಂದಾದರು.
ಕೈಗಾರಿಕೆಗಳ ಸ್ಥಾಪನೆ ಹೆಸರಿನಲ್ಲಿ ಸರಕಾರ ವಶಪಡಿಸಿಕೊಂಡಿರುವ ಶೇ.೧೦೦ರಷ್ಟು ಜಮೀನಿನಲ್ಲಿ ಶೇ.೯೦ರಷ್ಟು ಬಡ ರೈತರ ಕೃಷಿ ಜಮೀನಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ೧೨೮೫ ಎಕರೆ ಕೃಷಿ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀಕಂಠೇಗೌಡ ಮಾತನಾಡಿ, ಕೈಗಾರಿಕೆಗಳ ಸ್ವಾಪನೆಗೆಂದು ವಶಪಡಿಸಿಕೊಂಡಿರುವ ರೈತರ ಜಮೀನನ್ನು ವಾಣಿಜ್ಯ ಉದ್ದೇಶಗಳಿಗೆ, ರಿಯಲ್ ಎಸ್ಟೇಟ್‌ಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಮಧ್ಯೆ ಪ್ರವೇಶಿಸಿದ ನಾಣಯ್ಯ, ಈ ವಿಷಯದ ಕುರಿತು ಸದನದಲ್ಲಿ ಸಮಗ್ರವಾಗಿ ಚರ್ಚೆ ನಡೆಯಬೇಕು. ಚರ್ಚೆಗೆ ಅವಕಾಶ ನೀಡಬೇಕು ಎಂದು ಸಭಾಪತಿಗೆ ಮನವಿ ಮಾಡಿದರು.
ಸಭಾಪತಿ ರಣ್ಣ ಮತ್ತೀಕಟ್ಟಿ ಮುಂದಿನ ಕಲಾಪದಲ್ಲಿ ಒಂದು ಗಂಟೆ ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|
|
| »ಟೆಂಪೊ ಉರುಳಿ 10 ಸಾವು, 20ಕ್ಕೂ ಹೆಚ್ಚು ಜನ ಗಂಭೀರ ಗಾಯ | | »ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ | | »ಜುವೆಲ್ಲರ್ಸ್ ವ್ಯಾಪಾರಿಯ ಹತ್ಯೆ; ಮೂವರು ಆರೋಪಿಗಳ ಸೆರೆ | | »ಮೈಸೂರು: ತೆರೆದ ತೊಟ್ಟಿಗೆ ಬಿದ್ದು ಆರು ವರ್ಷದ ಬಾಲಕ ಸಾವು | | »ಮಂಡ್ಯ: ನಗರಸಭೆ ಸಾವಾನ್ಯ ಸಭೆಗೆ ಅಡ್ಡಿ: ಜೆಡಿಎಸ್‌ನ ನಾಲ್ವರ ಅವಾನತು | | »ತುಮಕೂರಿನಲ್ಲಿ ಹೆಣ್ಣು ಮಕ್ಕಳ ಪತ್ತೆ: ಅನಾಥ ಮಕ್ಕಳ ಹಿಂದೆ ಭಿಕ್ಷಾಟನಾ ಜಾಲದ ಶಂಕೆ | | »ಮಂಡ್ಯ ಬಳಿ ಕಂದಕಕ್ಕೆ ಬಿದ್ದ ಟೆಂಪೊ: 10 ಮಂದಿಯ ದಾರುಣ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ | | »ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ; ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ | | »ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ | | »ಬೋಧಿ ದಮ್ಮ ಬಂತೇಜಿ ಬಿಡುಗಡೆಗೆ ಆಗ್ರಹಿಸಿ ಧರಣಿ | | »ಗಣಿಗಾರಿಕೆ ಸ್ಥಗಿತ : 20,000 ಕೋಟಿ ರು ನಷ್ಟ | | »ಕೆ.ಎಸ್.ಸಿ.ಎ. ಡೆಲ್ ಶಾಲಾ ಟೂರ್ನಿ ಬಳ್ಳಾರಿ ಶಾಲಾ ತಂಡ ಚಾಂಪಿಯನ್ | | »ಮಾಜಿ ಸಚಿವರ ಮೊಂಡು ವಾದ; ಕ್ಷಮೆ ಕೇಳುವಂತಹ ತಪ್ಪು ಮಾಡಿಲ್ಲ | | »ಕಾಂಗ್ರೆಸ್‌ನಂತೆ ನಾವು ಚಿಲ್ಲರೆ ರಾಜಕಾರಣ ಮಾಡಲ್ಲ: ಡಿ.ವಿ. ಸದಾನಂದ ಗೌಡ | | »ತಮಿಳುನಾಡು ರಾಜ್ಯಪಾಲ ರೋಸಯ್ಯರ ಸಂಬಂಧಿ ಮನೋಜ್ ಹತ್ಯೆ ಪ್ರಕರಣ: ಮೂವರು ವಶಕ್ಕೆ | | » ಬನ್ನೂರಮಠ ಲೋಕಾಯುಕ್ತ ಹುದ್ದೆ ನಿರಾಕರಣೆ: ರಾಜ್ಯ ಸರ್ಕಾರ ಯಾರ ಹೆಸರು ಶಿಫಾರಸು ಮಾಡಲಿದೆಂಬ ಕುತೂಹಲ | | »ಬಳೆ ಅತ್ತಿಗುಪ್ಪೆ: ನಿಧಿ ಆಸೆಗೆ ದೇವರ ವಿಗ್ರಹ ಭಗ್ನ | | »ಕುವೆಂಪು ವಿಶ್ವವಿದ್ಯಾಲಯದ 22ನೇ ವಾರ್ಷಿಕ ಘಟಿಕೋತ್ಸವ: ಕಷ್ಟ ಕಾರ್ಪಣ್ಯ; ಆದರೂ ಬಿಡಲಿಲ್ಲ ಚಿನ್ನದ ಬೇಟೆ | | »ನರಗುಂದ, ಅಥಣಿ ಬಂದ್: ಮೈಸೂರು, ಮಂಗಳೂರಿನಲ್ಲಿ ಆಕ್ರೋಶ | | »ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ.. | | »ಭಿಕ್ಷೆ ಎತ್ತಿದ ಹಣದಿಂದ ತುಮಕೂರಿನಲ್ಲಿ ರೇಣುಕಾ ಎಲ್ಲಮ್ಮ ದೇಗುಲ ನಿರ್ಮಿಸಿದ ಮಂಗಳಮುಖಿಯರು | | »ಅಶ್ಲೀಲ ಕಲಾಪಕ್ಕೆ ಸದನ ಬಲಿ | | »ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ | | »ವಿಧಾನಸೌಧದಲ್ಲಿ ಸಚಿವತ್ರಯರಿಂದ ಅಶ್ಲೀಲ ಚಿತ್ರ ವೀಕ್ಷಣೆ: ಸರಕಾರ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ | | »ಹಾಸನ: ವಿಟಿಯು ಕುಲಪತಿ ವಿರುದ್ಧ ಪ್ರತಿಭಟನೆ | | »ಬನ್ನೇರುಘಟ್ಟಕ್ಕೆ ಪಠಾಣ್, ಸಂದೀಪ್ ಪಾಟೀಲ್ ಭೇಟಿ | | »ಪಾವಗಡಕ್ಕೆ ಕುಡಿಯುವ ನೀರಿಗೆ ಆಗ್ರಹಿಸಿ ಪಾದಯಾತ್ರೆ: ‘ಬೆಂಗಳೂರು ಚಲೋ’ಗೆ ವಿದುಕ್ತ ಚಾಲನೆ | | »‘ಬ್ಲೂ ಫಿಲಂ’ ಸಚಿವರ ವಿರುದ್ಧ ಭುಗಿಲೆದ್ದ ಆಕ್ರೋಶ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ; ಶಾಸಕ ಸ್ಥಾನದಿಂದಲೂ ಅನರ್ಹಕ್ಕೆ ಒತ್ತಾಯ | | »ಶಾಸಕತ್ವ ಅನರ್ಹಗೊಳಿಸಲು ಆಗ್ರಹಿಸಿ ಸಿಪಿಐ ಧರಣಿ | | »ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ? | | »ನಾವೇಕೆ ಕ್ಷಮೆಯಾಚಿಸ್ಬೇಕು-ಡೀವಿ; ಕಳಂಕಿತರಿಗೆ ಬಿಜೆಪಿ ಬೆಂಬಲ | | »ಸದನದಲ್ಲಿ ‘ಬ್ಲೂಫಿಲಂ’ ವೀಕ್ಷಣೆ: ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ; ಸಿದ್ದರಾಮಯ್ಯ | | »ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ 'ಕೈ' ಪ್ರತಿಭಟನೆ, ಪ್ರತಿಕೃತಿ ದಹನ | | »ಬಿಬಿಎಂಪಿ ಹಗರಣ:ಎಲ್ಲ ಕಾಮಗಾರಿಗಳ ತನಿಖೆಗೆ ಸರ್ಕಾರ ಆದೇಶ | | »ಐಷಾರಾಮಿ ಪ್ರವಾಸಿ ರೈಲು 'ಗೋಲ್ಡನ್ ಚಾರಿಯಟ್' 'ಹೌಸ್ ಫುಲ್ ಜರ್ನಿ' ಆರಂಭ: ರೈಲಿನಲ್ಲಿ ಅಮೆರಿಕ, ಆಸ್ಟ್ರಿಯಾದ 80 ಪ್ರವಾಸಿಗರು | | »ಅನುದಾನ ಬಿಡುಗಡೆಗೆ ಆಗ್ರಹಿಸಿ ಆಮರಣ ಉಪವಾಸ : ಕಣ್ತೆರೆಯದ ಸರ್ಕಾರ: ಅತಂತ್ರರಾದ ಶಿಕ್ಷಕರು | | »ಯೋಗ ವಿಜ್ಞಾನ ಶಿಬಿರ: ಬಜೆಟ್‌ನಲ್ಲಿ ಯೋಗಕ್ಕೆ ವಿಶೇಷ ಒತ್ತು: ಸಿಎಂ | | »ನನ್ನ ಮೇಲಿನ ಆರೋಪಗಳೆಲ್ಲ ನಿರಾಧಾರ: ಮಾಜಿ ಸಿಎಂ ಯಡಿಯೂರಪ್ಪ ನನ್ನ ಸಂಬಂಧಿಕರಲ್ಲ: ನ್ಯಾ. ಬನ್ನೂರಮಠ ( Update) | | »ಸದನದಲ್ಲಿ ಮೊಬೈಲ್ ಫೋನ್ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್ ಮಂತ್ರಿ ಸ್ಥಾನಕ್ಕೆ ರಾಜಿನಾಮೆ | | »ಹೂವಿನಹಡಗಲಿಯಲ್ಲಿ ಪ್ರತ್ಯೇಕ ದುರಂತ : ಅಪಘಾತದಲ್ಲಿ 8, ತೆಪ್ಪ ಮುಳುಗಿ 5ಸಾವು | | »ಆಧಾರ್ ಕಾರ್ಡ್‌ಗೆ ಲಂಚವೇ ಆಧಾರ: ಸರ್ಕಾರದಿಂದ ತನಿಖೆ ಭರವಸೆ | | »50 ಕೋಟಿ ಯುವಕರಿಗೆ ಕೌಶಲ ತರಬೇತಿ: ಖರ್ಗೆ | | »ಏಡ್ಸ್ ಜಾಗೃತಿ ಜಾಥಾಕ್ಕೆ ಡಾ.ಸಲೀಂ ಚಾಲನೆ | | »ಕಲ್ಲಡ್ಕ ಭಟ್ಟರ ಗಡಿಪಾರಿಗೆ ಒತ್ತಾಯ: ಸದನದಲ್ಲಿ ಕೋಲಾಹಲ; ವಿಪಕ್ಷದಿಂದ ಸಭಾತ್ಯಾಗ | | »ತರಕಾರಿ ಸೇವಿಸಿ; ರೋಗ ತಡೆಗಟ್ಟಿ: ಡಾ.ಎಂ.ಆರ್. ಹುಲಿನಾಯ್ಕರ್ | | »ಸರಕಾರಿ ಜಾಗದಲ್ಲಿ ಅನಧಿಕೃತ ನಾಗರಕಟ್ಟೆ ನಿರ್ಮಾಣ: ಪಿಡಬ್ಲುಡಿ ಇಲಾಖೆಯ ವರ್ತನೆಗೆ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ | | »ಮಂಡ್ಯ: ಮಕ್ಕಳ ಹಬ್ಬದಲ್ಲಿ ಜಿಲ್ಲೆಯ ಸಾಂಸ್ಕೃತಿಕ ಸೊಗಡು ಅನಾವರಣ | | »ವಕ್ಕಲೇರಿ ಮಾರ್ಕಂಡೇಶ್ವರಸ್ವಾಮಿ ಬ್ರಹ್ಮರಥೋತ್ಸವ | | »ಹಾಸನದ ಆರು ತಾಲೂಕುಗಳು ಬರಪೀಡಿತ: ಬೇಸಿಗೆ ಸಮಸ್ಯೆ ನಿವಾರಣೆಗೆ ಕ್ರಮ: ನೂತನ ಜಿಲ್ಲಾಧಿಕಾರಿ ಮೋಹನ್‌ರಾಜ್ | | »ರೈತರ ಮೇಲೆ ನಿರಂತರ ದಬ್ಬಾಳಿಕೆ ತಡೆಗೆ ಸರಕಾರ ವಿಫಲ: ಕುಮಾರಸ್ವಾಮಿ ಆರೋಪ | |