| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಮಂಜನಾಡಿ ಉಸ್ತಾದ್ ಶೈಖುನಾ ಸಿ.ಪಿ.ಮುಹಮ್ಮದ್ ಕುಂಞಿ ಮುಸ್ಲಿಯಾರ್‌ರಿಗೆ ಸನ್ಮಾನ |
ಪ್ರಕಟಿಸಿದ ದಿನಾಂಕ : 2010-03-11
ಕಾಞಂಗಾಡ್, ಮಾ.೧೦: ಮಂಜನಾಡಿ ಉಸ್ತಾದ್ ಶೈಖುನಾ ಸಿ.ಪಿ.ಮುಹಮ್ಮದ್ ಕುಂಞಿ ಮುಸ್ಲಿಯಾರ್‌ರನ್ನು ಕಾಞಂಗಾಡ್ ಸುನ್ನಿ ಕೋ ಆರ್ಡಿನೇಶನ್ ವತಿಯಿಂದ ಸನ್ಮಾನಿಸಲಾಯಿತು.
ಪಿ.ಎ.ಉಸ್ತಾದ್ ವೇದಿಕೆಯಲ್ಲಿ ನಡೆದ ಸಮಾರಂಭ ವನ್ನು ಸಅದಿಯಾ ಕಾಲೇಜು ಪ್ರಾಂಶುಪಾಲ ಎ.ಕೆ.ಅಬ್ದುರ್ರಹ್ಮಾನ್ ಮುಸ್ಲಿಯಾರ್ ಉದ್ಘಾಟಿಸಿದರು.
ಖಮರುಲ್ ಉಲಮಾ ಶೈಖುನಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಮದ್‌ಹುರ್ರಸೂಲ್ ಪ್ರಭಾಷಣ ಮಾಡಿದರು. ಈ ಸಂದರ್ಭ ಮಂಜನಾಡಿ ಉಸ್ತಾದರ್‌ನ್ನು ಎ.ಪಿ.ಅಬೂಬಕರ್ ಮುಸ್ಲಿಯಾರ್ ಸನ್ಮಾನ ಫಲಕ ನೀಡುವ ಮೂಲಕ ಗೌರವಿಸಿದರು.
ಪೊಸೋಟ್ ಸಯ್ಯಿದ್ ಉಮರುಲ್ ಫಾರೂಕ್ ಅಲ್ ಬುಖಾರಿ ತಂಙಳ್ ಉಸ್ತಾದರಿಗೆ ವಿಶೇಷ ಪೋಷಾಕು ಧರಿಸಿದರು. ಕಾಞಂಗಾಡ್ ಸಂಯುಕ್ತ ಜಮಾಅತ್ ಅಧ್ಯಕ್ಷ ಮೆಟ್ರೊ ಮುಹಮ್ಮದ್ ಹಾಜಿ ಸ್ಮರಣಿಕೆಯಿತ್ತು ಗೌರವಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಮಂಜನಾಡಿ ಉಸ್ತಾದರನ್ನು ಹಳೆ ಕಡಪುರದ ನಿವಾಸದಿಂದ ಬೃಹತ್ ವಾಹನಗಳ ಮೆರವಣಿಗೆಯಲ್ಲಿ ಸನ್ಮಾನ ವೇದಿಕೆಗೆ ಕರೆತರಲಾಯಿತು. ಕರ್ನಾಟಕದ ಪ್ರಚಾರ ಸಮಿತಿಯ ಚೆಯರ್‌ಮೆನ್ ಹೈದರ್ ಪರ್ತಿಪ್ಪಾಡಿ ಮತ್ತು ಕನ್ವೀನರ್ ಹಾಜಿ ಅಲಿಕುಂಞಿ ಪಾರೆ ನೇತೃತ್ವದಲ್ಲಿ ಮಂಜನಾಡಿ ದರ್ಗಾದಿಂದ ವಾಹನ ರ‍್ಯಾಲಿಯ ಮೊಲಕ ಸನ್ಮಾನ ಸ್ಥಳಕ್ಕೆ ಸಾವಿರಾರು ಅಭಿಮಾನಿಗಳು ಆಗಮಿಸಿದರು.
ಅಬ್ದುರ್ರಹ್ಮಾನ್ ಮದನಿ ಪರಿಚಯ ಭಾಷಣ ಮಾಡಿದರು. ಉಡುಪಿ ಸಂಯುಕ್ತ ಖಾಝಿ ಬೇಕಲ್ ಇಬ್ರಾಹೀಂ ಮುಸ್ಲಿಯಾರ್, ಅಲ್ ಮದೀನಾದ ಶೈಖುನಾ ಅಬ್ಬಾಸ್ ಉಸ್ತಾದ್, ಸಯ್ಯಿದ್ ಜಮಾಲುಲ್ಲೈಲಿ ತಂಙಳ್, ಮಂಜನಾಡಿ ಮುದರ್ರಿಸ್ ಎನ್.ಎಂ.ಅಬ್ದುರ್ರಹ್ಮಾನ್ ಮುಸ್ಲಿಯಾರ್, ಸಿ.ಅಬ್ದುಲ್ಲಾ ಮುಸ್ಲಿಯಾರ್ ಉಪ್ಪಳ, ಬಿ.ಎಸ್.ಅಬ್ದುಲ್ಲಾ ಕುಂಞಿ ಫೈಝಿ, ನ್ಯಾಯವಾದಿ ಎನ್.ಎ.ಖಾಲಿದ್, ಇ.ಕೆ.ಕೆ.ಪಡನಕಾಡ್ ಮುಂತಾದವರು ಶುಭ ಹಾರೈಸಿದರು.
ಹಮೀದ್ ಬಸರ, ಎನ್.ಎಸ್.ಕರೀಂ, ಎನ್.ಎಸ್. ಮಹ್ಮೂದ್ ಹಾಜಿ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಮೂಸ ಸಖಾಫಿ, ಅಬ್ದುರ್ರಹ್ಮಾನ್ ಅಹ್ಸನಿ ಮುಹಿಮ್ಮಾತ್, ಸಾದು ಕುಂಞಿ ಮಾಸ್ಟರ್, ಕೆ.ಎಂ.ಕೆ.ಮಂಜನಾಡಿ, ಅಬ್ದುಲ್ಲಾ ಹಾಜಿ ಚಿತ್ತಾರಿ, ಹಸನಬ್ಬ ಹಾಜಿ ಕಲ್ಕಟ್ಟ, ಏಶಿಯನ್ ಬಾವ ಹಾಜಿ ಉಪಸ್ಥಿತರಿದ್ದರು.
ಅಬ್ದುಸ್ಸಮದ್ ಅಮಾನಿ ಪಟ್ಟುವಂ ಸನ್ಮಾನ ಕಾವ್ಯ ವಾಚಿಸಿದರು. ಪಲ್ಲಂಗೋಡ್ ಅಬ್ದುಲ್ ಖಾದಿರ್ ಮದನಿ ಸ್ವಾಗತಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|
|
|