| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್ |
ಪ್ರಕಟಿಸಿದ ದಿನಾಂಕ : 2010-03-11
ಉಡುಪಿ, ಮಾ.೧೦: ಮುಖ್ಯಮಂತ್ರಿ ಯಡಿಯೂರಪ್ಪ ತಮಗೆ ಬೇಕಾದಂತೆ ಮಠ ಮಂದಿರ ಹಾಗೂ ಟ್ರಸ್ಟ್‌ಗಳಿಗೆ ಸರಕಾರದ ಹಣ, ಭೂಮಿಗಳನ್ನು ಹಂಚುತ್ತಿದ್ದಾರೆ. ಇದೆಲ್ಲ ಯಾರ ಮನೆಯ ಸೊತ್ತು ಎಂದು ಇವರು ಈ ರೀತಿ ವರ್ತಿಸುತ್ತಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ, ನಾಟಕಕಾರ ಹಾಗೂ ನಿರ್ದೇಶಕ ಪ್ರೊ.ರಾಮದಾಸ್ ಪ್ರಶ್ನಿಸಿದ್ದಾರೆ.
ಉಡುಪಿ ಅಮೋಘ ಆಶ್ರಯದಲ್ಲಿ ಬುಧವಾರ ಉಡುಪಿ ಎಂಜಿಎಂ ಕಾಲೇಜಿನ ಸಭಾಂಗಣದಲ್ಲಿ ನಡೆದ ರಂಗಕರ್ಮಿ ಕಾಸರಗೋಡು ಚಿನ್ನಾ ಭಾಷಾಂತರಿಸಿದ ತ್ರಿಭಾಷಾ ನಾಟಕ ಪುಸ್ತಕಗಳ ಅನಾವರಣ ಸಮಾರಂಭ ದಲ್ಲಿ ‘ಸಂಹಾರ’ ಎಂಬ ಕನ್ನಡ ನಾಟಕ ವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಹಂಪಿಯನ್ನೇ ಅಭಿವೃದ್ಧಿ ಪಡಿಸಿ ಪ್ರವಾಸಿಗರನ್ನು ಆಕರ್ಷಿತರನ್ನಾಗಿಸುವ ಬದಲು ವಿವಿಯ ಭೂಮಿ ನೀಡುತ್ತಿ ರುವುದು ಸರಿಯಲ್ಲ. ಪ್ರವಾಹ ಪೀಡಿತರಿಗೆ ಸಂಗ್ರಹಿಸಿರುವ ಧನ ಸಂಗ್ರಹ ಎಲ್ಲಿ ಹೋಯಿತು ಎಂಬುದು ಯಾರಿಗೂ ತಿಳಿದಿಲ್ಲ. ಸಂತ್ರಸ್ತರಿಗೆ ಮನೆ ಕಟ್ಟಿಕೊಟ್ಟವರಿಗೆ ಹಣ, ಭೂಮಿ ನೀಡಲಾಗುತ್ತಿದೆ ಎಂದು ರಾಮದಾಸ್ ಟೀಕಿಸಿದರು.
ಇಲ್ಲದವರು ಒಂದು ಹೊತ್ತಿನ ಊಟಕ್ಕಾಗಿ ಹೋರಾಡುವುದು ಎಡ ಪಂಥೀಯವಾದರೆ, ಉಳ್ಳವರು ತಮ್ಮ ಲ್ಲಿರುವುದನ್ನು ಉಳಿಸಿಕೊಳ್ಳಲು ಮಾಡುವ ಕುತಂತ್ರವನ್ನು ಬಲ ಪಂಥೀಯ ಎಂಬುದನ್ನು ಈ ಕೃತಿ ಎತ್ತಿ ಹೇಳುತ್ತದೆ ಎಂದು ಅವರು ತಿಳಿಸಿದರು.
ವಿಮಾನ ಅವಘಡದಲ್ಲಿ ಸತ್ತವರಿಗೆ ಲಕ್ಷಗಟ್ಟಲೆ ಪರಿಹಾರ ನೀಡುವ ಸರಕಾರ, ರೈಲು, ಬಸ್ ಮೊದಲಾದ ವಾಹನ ಅಪಘಾತಕ್ಕೆ ಬಲಿಯಾದ ಬಡವರಿಗೆ ಚಿಲ್ಲರೆ ಹಣ ನೀಡುತ್ತಿದೆ. ಈ ರೀತಿಯ ವ್ಯವಸ್ಥೆ ಯನ್ನು ಸಂಹಾರ ನಾಟಕ ಬಯಲು ಗೊಳಿಸುತ್ತದೆ ಎಂದರು.
ವಿದ್ವಾಂಸ ಬಿ.ಶಾಂತಾರಾಮ ಬಾಳಿಗಾ ‘ಆಯ್ಲೊರೇ ಆಯ್ಲೋ’ ಕೊಂಕಣಿ ನಾಟಕ ಹಾಗೂ ತುಳು ಸಾಹಿತಿ ಡಾ.ಭಾಸ್ಕರಾನಂದ ಕುಮಾರ್ ‘ಕಾಸ್ ಪಾತೆರುಂಡು’ ತುಳು ನಾಟಕವನ್ನು ಬಿಡುಗಡೆ ಗೊಳಿಸಿದರು. ಪ್ರಾಧ್ಯಾಪಕ ಡಾ.ಗಣನಾಥ ಎಕ್ಕಾರು ಕನ್ನಡ ಕೃತಿ, ಪ್ರಾಧ್ಯಾಪಕ ಡಾ.ರಾಮಭಟ್ಟ ಸಜಂಗದ್ದೆ ಕೊಂಕಣಿ ಕೃತಿ ಹಾಗೂ ಪತ್ರಕರ್ತ ತಿಲಕನಾಥ ಮಂಜೇಶ್ವರ ತುಳು ಕೃತಿಗಳ ಪರಿಚಯ ಮಾಡಿದರು.
ಅಧ್ಯಕ್ಷತೆಯನ್ನು ಮಣಿಪಾಲ ಅಕಾಡಮಿ ಆಫ್ ಜನರಲ್ ಎಜು ಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್. ಶಾಂತಾರಾಮ ವಹಿಸಿದ್ದರು.
ಶಿಲ್ಪಾ ಜೋಶಿ ಸ್ವಾಗತಿಸಿದರು. ಅಮೋಘ ಆಡಳಿತ ನಿರ್ದೇಶಕಿ ಪೂರ್ಣಿಮ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಸುಮನಸ ಕೊಡವೂರು ತಂಡದಿಂದ ರಂಗUತೆಗಳನ್ನು ಹಾಡಲಾಯಿತು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-11 00:00:00
|
|
| shrinivas, India | 2010-03-11 | | Idu Saahithya kruthi bidugade sammelanavo alla raajakeeya bhaashaNave ivaru maadiddu. miku sikkidaaga maathaduvavara hanebaraha idu. |
|
|
|