ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ. |
ಪ್ರಕಟಿಸಿದ ದಿನಾಂಕ : 2010-03-10
ಮಂಗಳೂರು,ಮಾ.10 : ಮಾ.15, 16 ಮತ್ತು 17 ರಂದು ಮಂಗಳೂರು ಪುರಭವನದಲ್ಲಿ ನಡೆಯಲಿರುವ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ "ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ"ವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಯೋಜಿಸಿದೆ ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್‌ನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕುರ ಅವರು ತಿಳಿಸಿದರು.
ಅವರು ನಗರದಲ್ಲಿ ಇಂದು ೧೬ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಡಿಸಲಾದ "ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮದ ಅಹ್ವಾನ ಪತ್ರಿಕೆ"ಯನ್ನು ಬಿಡುಗಡೆಗೊಳಿಸಿದ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ವಿವರ ನೀಡಿದರು.
ಸಾಂಸ್ಕ್ರತಿಕ ಸಂಭ್ರಮದ ಉದ್ಘಾಟನೆಯು ಮಾ.15ರಂದು ಸಂಜೆ ಗಂಟೆ 7ಕ್ಕೆ ಜರಗಲಿದ್ದು, ಪದ್ಮಶ್ರೀ ಡಾ| ಕದ್ರಿ ಗೋಪಾಲನಾಥ ಇವರು ದೀಪ ಪ್ರಜ್ವಲನ ಗೈಯಲಿದ್ದಾರೆ. ಡಾ| ಮೋಹನ್ ಆಳ್ವ ಇವರು ಸಂಭ್ರಮವನ್ನು ಉದ್ಘಾಟಿಸಲಿದ್ದಾರೆ. ಬಿ.ನಾಗರಾಜ ಶೆಟ್ಟಿ, ಕ್ಯಾ| ಗಣೇಶ್ ಕಾರ್ಣಿಕ್, ಮನಪಾ ಉಪಮೇಯರ್ ರಾಜೇಂದ್ರ ಕುಮಾರ್, ಮನಪಾ.ವಿಪಕ್ಷ ನಾಯಕ ಆಶೋಕ್.ಡಿ.ಕೆ, ಹೆಚ್.ದುಂಡಿರಾಜ್, ಎ.ಜೆ.ಶೆಟ್ಟಿ, ಪಿ.ಜಯರಾಮ್, ಹಾಜಿ.ಯೇನೆಪೋಯ ಅಬ್ದುಲ್ಲ ಕುಜ್ನಿ ಮುಂತಾದ ಗಣ್ಯರು ಅಥಿತಿಗಳಾಗಿರುತ್ತಾರೆ ಎಂದು ಅವರು ತಿಳಿಸಿದರು.
ವೈಶಿಷ್ಟ್ಯ ಪೂರ್ಣವಾಗಿ ಅಹೋರಾತ್ರಿ ನಡೆಯಲಿರುವ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮದಲ್ಲಿ ವಿವಿಧ ಕಲಾ ಪ್ರಕಾರಗಳಲ್ಲಿ ಪರಿಣತರಾದ ಕಲಾವಿದರು ಹಾಗೂ ಕಲಾ ತಂಡಗಳು ತಮ್ಮ ಪ್ರತಿಭೆ ಹಾಗೂ ಸಾಧನೆಗಳನ್ನು ಅಭಿವ್ಯಕ್ತಿಗೊಳಿಸಲಿದ್ದಾರೆ. ಯಕ್ಷಗಾನ, (ತೆಂಕು-ಬಡಗು) ಯಕ್ಷಗಾನಗೊಂಬೆಯಾಟ, ಹರಿಕಥೆ, ಭರತನಾಟ್ಯ, ಭಕ್ತಿಗೀತ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ನಾಗಸ್ವರ ವಾದನ, ಸ್ಯಾಕ್ಸೋ ಫೋನ್ ವಾದನ, ಗಮಕ ವಾಚನ, ಚಿಂತನ, ಸಮೂಹ ನ್ರತ್ಯ, ಏಕಪಾತ್ರಭಿನಯ, ನೆಗೆಗೆರೆ ಹಬ್ಬ, ಯುಗಾದಿ ಸಂಭ್ರಮ ಮುಂತಾದ ವೈವಿಧ್ಯಮಯ ಸಾಂಸ್ಕ್ರತಿಕ ಸಂಭ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರ ನೀಡಿದರು.
ಸಾಂಸ್ಕ್ರತಿಕ ಸಮಿತಿ ಸಂಚಾಲಕರಾದ ಶ್ರೀಧರ್ ಹೊಳ್ಳ, ಕಸಾಪ,ಪ್ರಧಾನ ಕಾರ್ಯದರ್ಶಿ ಗಣೇಶ್ ಅಮಿನ್ ಸಂಕಮಾರ್, ಬಂಟ್ವಾಳ ತಾಲೂಕು ಅಧ್ಯಕ್ಷ ತಮ್ಮಯ್ಯ, ಜನಾರ್ಧನ ಹಂದೆ, ಜಿ.ಕೆ.ಭಟ್.ಸೆರಾಜೆ ಮೊದಲಾದವರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-10 00:00:00
|
|
|