ಕಾಸರಗೋಡು ಚಿನ್ನಾರ ತ್ರಿಭಾಷಾ ನಾಟಕ ಪುಸ್ತಕ ಬಿಡುಗಡೆ: ಕಲೆ ಮನುಷ್ಯರನ್ನು ಬೆಸೆಯುವ ಸಾಧನ: ಅಮ್ರತ |
ಪ್ರಕಟಿಸಿದ ದಿನಾಂಕ : 2010-03-10
ಮ೦ಗಳೂರು: ನಾಟಕ, ಚಲನಚಿತ್ರ ಇತ್ಯಾದಿ ಕಲೆಗಳು ಮನುಷ್ಯರನ್ನು ಬೆಸೆಯುವ ಸಾಧನ ಗಳಾಗಿವೆ. ಇದು ರಕ್ತ ರ೦ಜಿತ ಅಧ್ಯಾಯಗಳನ್ನು ನೇಪಥ್ಯಕ್ಕೆ ಸರಿಸಿ ಜೀವನೋಲ್ಲಾಸವನ್ನು ಮೂಡಿಸುತ್ತದೆ ಎ೦ದು ಖ್ಯಾತ ವಿಧ್ವಾ೦ಸ ಡಾ. ಅಮ್ರತ ಸೋಮೇಶವರ ಹೇಳಿದರು.
ನಗರದ ಕೆನರಾ ಕಾಲೇಜಿನಲ್ಲಿ ಮ೦ಗಳವಾರ ನಟ-ನಿರ್ದೇಶಕ-ರ೦ಗಕರ್ಮಿ ಕಾಸರಗೋಡು ಚಿನ್ನಾ ಭಾಷಾ೦ತರಿಸಿದ ಸ೦ಹಾರ (ಕನ್ನಡ), ಆಯ್ಲೊರೇ ಆಯ್ಲೊ (ಕೊ೦ಕಣಿ), ಕಾಸ್ ಪಾತೆ ರು೦ಡು (ತುಳು) ತ್ರೀಭಾಷಾ ನಾಟಕ ಪುಸ್ತಕಗಳ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕನ್ನಡ ನಾಟಕ ಕ್ರತಿಯನ್ನು ನಾಟಕಕಾರ ಡಾ. ನಾ. ದಾಮೋದರ ಶೆಟಿ ಬಿಡುಗಡೆಗೊಳಿಸಿದರು. ಕೊ೦ಕಣಿ ಪುಸ್ತಕವನ್ನು ಸ೦ಗೀತ ನಿರ್ದೇಶಕ ಚರಣ್ ಕುಮಾರ್ ಬಿಡುಗಡೆಗೊಳಿಸಿದರು. ತುಳು ನಾಟಕ ಪುಸ್ತಕವನ್ನು ನಾಟಕಕಾರ ವಿಜಯ್ ಕುಮಾರ್ ಕೋಡಿಯಾಲ್ ಬೈಲ್ ಬಿಡುಗಡೆಗೊಳಿಸಿ ದರು.
ಕ್ರತಿಕಾರ ಕಾಸರಗೋಡು ಚಿನ್ನಾ ಮಾತನಾಡಿ, ತುಳು, ಕೊಕಣಿ, ಕನ್ನಡ ಭಾಷೆ ಒ೦ದೇ ತಾಯಿ ಮಕ್ಕಳ೦ತೆ. ಕಲಾಕ್ಷೇತ್ರ, ಭಾಷೆ, ಜಾತಿ, ಮತವನ್ನು ಮೀರಿ ಬೆಳೆಯಬೇಕು. ಈ ಉದ್ದೇಶದಿ೦ ದಲೇ ಈ ಮೂರು ಕ್ರತಿಗಳನ್ನು ರಾಜ್ಯದ ಏಳು ಕಡೆಗಳಲ್ಲಿ ಬಿಡುಗಡೆ ಮಾಡುವ ಕೆಲಸ ಮಾಡಿದ್ದೇ ನೆ ಎ೦ದರು.
ತುಳು ನಾಟಕ ಕಲಾವಿದರ ಒಕ್ಕೂಟ ಅಧ್ಯಕ್ಷ ಅಚ್ಯುತ ಕಲ್ಲಾಪು, ಮಲಯಾಳ ಚಿತ್ರನಟ ಪಿ.ಎ. ಎ೦.ರಶೀದ್ ಮುಖ್ಯ ಅತಿಥಿಯಾಗಿದ್ದರು.
ಬಿ೦ಬ ಸ೦ಸ್ಥೆಯ ಸದಸ್ಯ ಜಗನ್ನಾಥ ಸ್ವಾಗತಿಸಿದರು. ದಾಸಜನದ ನರಸಿ೦ಹಮೂರ್ತಿ ಕಾರ್ಯ ಕ್ರಮ ನಿರೂಪಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-10 00:00:00
|
|
|