1983ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಕಪಿಲ್ ಪ್ರಧಾನ ಪಾತ್ರ: ಕಪಿಲ್ ದೇವ್‌ಗೆ 'ಹಾಲ್ ಆಫ್ ಫೇಮ್' ಗೌರವ |
ಪ್ರಕಟಿಸಿದ ದಿನಾಂಕ : 2010-03-10
ಬುಧವಾರ, 10 ಮಾರ್ಚ್ 2010
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ 'ಹಾಲ್ ಆಫ್ ಫೇಮ್' ಪಟ್ಟಿಗೆ ಭಾರತದ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್‌ರನ್ನು ಸೇರಿಸಿಕೊಂಡಿದೆ.
1983ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಕಪಿಲ್ ಪ್ರಧಾನ ಪಾತ್ರ ನಿರ್ವಹಿಸಿದ್ದರು.
ದುಬೈನಲ್ಲಿ ನಡೆದ ಸಮಾರಂಭದಲ್ಲಿ ಕಪಿಲ್‌ಗೆ ಕ್ಯಾಪ್ ಧರಿಸುವ ಮೂಲಕ ಐಸಿಸಿ ಅಧ್ಯಕ್ಷ ಡೇವಿಡ್ ಮೊರ್ಗನ್ ಗೌರವಿಸಿದರು. ಈ ಸಂದರ್ಭದಲ್ಲಿ ವೆಸ್ಟ್‌ಇಂಡೀಸ್ ಮಾಜಿ ನಾಯಕ ಕ್ಲೈವ್ ಲಾಯ್ಡ್ ಹಾಗೂ ಮತ್ತಿತರ ಐಸಿಸಿ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಗೌರವ ಸ್ವೀಕರಿಸಿ ಮಾತನಾಡಿದ ಮಾಜಿ ಆಲ್‌ರೌಂಡರ್ ಕಪಿಲ್, ಐಸಿಸಿಯು ಹಾಲ್ ಆಫ್ ಫೇಮ್ ಪಟ್ಟಿಗೆ ನನ್ನನ್ನು ಸೇರಿಸಿರುವುದು ಹೆಮ್ಮೆಯೊಂದಿಗೆ ಖುಷಿ ಕೊಟ್ಟಿದೆ. ಭಾರತದ ಶ್ರೇಷ್ಠ ಆಟಗಾರರಲ್ಲಿ ನನನ್ನು ಕೂಡಾ ಗುರುತಿಸಿರುವುದಕ್ಕೆ ಸಂತಸ ತಂದಿದೆ. ಸುನೀಲ್ ಗಾವಸ್ಕರ್ ಆಟ ನೋಡಿ ಬೆಳೆದ ನಾನೀಗ ಕ್ಲೈವ್ ಲಾಯ್ಡ್, ರಿಚರ್ಡ್ ಹ್ಯಾಡ್ಲಿ ಮತ್ತು ವಾಸೀಂ ಅಕ್ರಂ ಪಟ್ಟಿಗೆ ಸೇರಿಕೊಂಡಿರುವುದು ಅದ್ಭುತ ಕ್ಷಣ ಎಂದವರು ಹೇಳಿದರು.
1978ರಲ್ಲಿ ಕ್ರಿಕೆಟ್ ಪಾದಾರ್ಪಣೆಗೈದಿದ್ದ ಕಪಿಲ್ 1994ರಲ್ಲಿ ನಿವೃತ್ತಿ ಘೋಷಿಸಿದ್ದರು. ಹದಿನಾರು ವರ್ಷಗಳ ಕ್ರಿಕೆಟ್ ಜೀವನ ನಡೆಸಿದ ಕಪಿಲ್ 131 ಟೆಸ್ಟ್ ಹಾಗೂ 225 ಏಕದಿನ ಪಂದ್ಯಗಳನ್ನು ಆಡಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-10 00:00:00
|
|
|