|
ಪ್ರಕಟಿಸಿದ ದಿನಾಂಕ : 2010-03-10
ದುಬೈ (ಪಿಟಿಐ): ಪ್ರಸಿದ್ಧ ವರ್ಣಚಿತ್ರ ಕಲಾವಿದ ಎಂ.ಎಫ್. ಹುಸೇನ್ ಭಾರತೀಯ ಪೌರತ್ವ ತ್ಯಜಿ ಸಿರಬಹುದು. ಆದರೆ ತಮಗೆ ಜನ್ಮ ನೀಡಿದ ಈ ದೇಶದೊಂದಿಗಿನ ಸಂಪರ್ಕ ಕಡಿದುಕೊಳ್ಳಲು ಅವರು ತಯಾರಿಲ್ಲ. ಹೀಗಾಗಿ ಈಗ ಅವರು ಸಾಗರೋತ್ತರ ಪೌರತ್ವವನ್ನು ದಯಪಾಲಿಸುವಂತೆ ಭಾರತ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.
“ಭಾರತ ನನ್ನ ತಾಯ್ನಾಡಾಗಿದ್ದು ನಾನು ಸುಮ್ಮನೆ ಆ ದೇಶವನ್ನು ಬಿಡಲಾರೆ. ನಾನು ಹಿಂತಿರು ಗಿಸಿರುವುದು ಕೇವಲ ತುಂಡು ಕಾಗದವನ್ನಷ್ಟೇ” ಎಂದು ಅವರು ತಿಳಿಸಿರುವುದನ್ನು ಇಲ್ಲಿನ ಮಾಧ್ಯ ಮಗಳು ಮಂಗಳವಾರ ಪ್ರಕಟಿಸಿವೆ.
“ನಾನು ಭಾರತಕ್ಕೆ ಪ್ರವಾಸ ಮಾಡುವುದನ್ನು ಮುಂದುವರಿಸಲಿದ್ದೇನೆ. ಭಾರತದ ಕಾನೂನಿನಲ್ಲಿ ದ್ವಿಪೌರತ್ವಕ್ಕೆ ಅವಕಾಶವಿಲ್ಲದ ಕಾರಣ ಭಾರತೀಯ ಸಾಗರೋತ್ತರ ಪೌರತ್ವಕ್ಕಾಗಿ (ಓಐಸಿ) ಅರ್ಜಿ ಸಲ್ಲಿಸಿದ್ದೇನೆ. ನಾನು, ನನ್ನ ವೃತ್ತಿ ಬದ್ಧತೆಯನ್ನು ಪೂರ್ಣಗೊಳಿಸಲು ಇಲ್ಲಿಗೆ ಬಂದಿದ್ದೇನೆ. ಪೌರತ್ವ ನೀಡುವ ಮೂಲಕ ನನ್ನ ಬೆಂಬಲಕ್ಕೆ ಬಂದಿರುವ ಕತಾರ್ ಸರ್ಕಾರಕ್ಕೆ ಕೃತಜ್ಞನಾಗಿ ದ್ದೇನೆ” ಎಂದು ಅವರು ಹೇಳಿದ್ದಾರೆ.
95 ವರ್ಷದ ಹುಸೇನ್ ದೋಹಾದಲ್ಲಿನ ಭಾರತೀಯ ರಾಯಭಾರ ಕಚೇರಿಗೆ ತಮ್ಮ ಪಾಸ್‌ಪೋ ರ್ಟ್ ಹಿಂತಿರುಗಿಸಿದ ನಂತರ ಮಾಧ್ಯಮಗಳಿಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ. ಭಾರತೀಯ ನಾಗರಿಕತೆಯನ್ನು ತ್ಯಜಿಸಿರುವ ಹುಸೇನ್ ಕ್ರಮದ ಬಗ್ಗೆ ಕೊಲ್ಲಿಯಲ್ಲಿರುವ ಭಾರತೀಯರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹುಸೇನ್ ನಿಲುವಿನ ಕುರಿತು ಇಲ್ಲಿನ ರಾಯಭಾರ ಕಚೇರಿ ವಿಷಾದಿಸಿದ್ದು ಪಾಸ್‌ಪೋರ್ಟ್ ಹಿಂತಿರುಗಿಸದಂತೆ ಕತಾರ್‌ನಲ್ಲಿನ ಭಾರತೀಯ ರಾಯಭಾರಿ ದೀಪಾ ಗೋಪಾಲನ್ ವಾಧ್ವಾ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಭಾರತ ಸರ್ಕಾರದ ಗೃಹ ಸಚಿವ ಪಿ. ಚಿದಂಬರಂ ಅವರು ಕೂಡಾ ಇತ್ತೀಚೆಗೆ ಸ್ವದೇಶಕ್ಕೆ ಮರಳುವಂತೆ ಹುಸೇನ್‌ಗೆ ಮನವಿ ಮಾಡಿದ್ದರು.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-10 00:00:00
|
|
|