ಬೆ೦ಗಳೂರು: ಕಮಲಾ ಗೋಯೆಂಕಾ ಫೌಂಡೇಶನ್ ಪ್ರಶಸ್ತಿಗೆ ಆಯ್ಕೆ: ವೈದೇಹಿ ಅವರಿಗೆ 'ಗೋಯೆಂಕಾ ಕನ್ನಡ ಸಾಹಿತ್ಯ ಸಾರಸ್ವತ ಸನ್ಮಾನ' |
ಪ್ರಕಟಿಸಿದ ದಿನಾಂಕ : 2010-03-10
ಬೆಂಗಳೂರು: ಕಮಲಾ ಗೋಯೆಂಕಾ ಫೌಂಡೇಶನ್ ಹಿಂದಿಯಿಂದ ಕನ್ನಡಕ್ಕೆ ಅನುವಾದಿತ ಪುಸ್ತಕಕ್ಕೆ ನೀಡುವ ಪ್ರಶಸ್ತಿಯನ್ನು ಡಿ.ಎನ್.ಶ್ರೀನಾಥ ಅವರ 'ಭೀಷ್ಮ ಸಹಾನಿಯವರ ಪ್ರಾತಿನಿಧಿಕ ಕಥೆಗಳು' ಕೃತಿಗೆ ನೀಡಲಾಗಿದೆ.
ಏ.೧೮ರಂದು ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಎಸ್.ಎಸ್.ಗೋಯೆಂಕಾ ಮತ್ತು ರಾಜ್ಯಪಾಲ ಹಂಸ ರಾಜ್ ಭಾರದ್ವಾಜ್ ೨೧ಸಾವಿರ ನಗದನ್ನು ಬಹುಮಾನವಾಗಿ ನೀಡಿ ಸನ್ಮಾನಿಸಲಿದ್ದಾರೆ.
ಈ ಕಾರ್ಯಕ್ರಮವು ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿ ದೆ. ಈ ಸಂದರ್ಭದಲ್ಲಿ 'ಪ್ರೊ| ಪಂಚಾಕ್ಷರಿ ಹೀರೆಮಠ' ಅವರಿಗೆ 'ಗೋಯೆಂಕಾ ಹಿಂದಿ ಸಾಹಿತ್ಯ ಸಾರಸ್ವತ್ ಸನ್ಮಾನ್' ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತೆ ವೈದೇಹಿ ಅವರಿಗೆ 'ಗೋ ಯೆಂಕಾ ಕನ್ನಡ ಸಾಹಿತ್ಯ ಸಾರಸ್ವತ ಸನ್ಮಾನ' ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-10
|
|
|