ಕಾಸರಗೋಡು, ಮಾ.೯: ಬೆಲೆಯೇರಿಕೆ ಹಾಗೂ ಕೇಂದ್ರದ ನೀತಿ ವಿರುದ್ಧ ಸಿಪಿಎಂ ನಡೆಸುತ್ತಿರುವ ಪ್ರಧಾನ ಅಂಚೆ ಕಚೇರಿ ದಿಗ್ಬಂಧನ ಎರಡನೆ ದಿನಕ್ಕೆ ಕಾಲಿಟ್ಟಿದೆ. ಹಲವಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಅಂಚೆ ಕಚೇರಿ ಚಟುವಟಿಕೆ ಅಸ್ತವ್ಯಸ್ತಗೊಂಡಿದೆ.
ಕಾರಡ್ಕ ಏರಿಯಾ ಸಮಿತಿ ವತಿಯಿಂದ ಇಂದು ದಿಗ್ಬಂಧನ ನಡೆಯುತ್ತಿದ್ದು, ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಬಾಲಕೃಷ್ಣನ್ ಉದ್ಘಾಟಿಸಿದರು.
ಕಾರಡ್ಕ ಏರಿಯಾ ಸಮಿತಿ ಸದಸ್ಯ ಎ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಎಂ.ವಿ. ಕೋಮನ್ ನಂಬ್ಯಾರ್, ನ್ಯಾಯವಾದಿ ಪಿ.ರಾಘವನ್ ಮಾತನಾಡಿದರು. ಸಿ.ಕೆ ಕುಮಾರನ್ ವಂದಿಸಿದರು.
ನಾಳೆ ಕಾಸರಗೋಡು ಏರಿಯಾ ಸಮಿತಿ ನೇತೃತ್ವದಲ್ಲಿ ದಿಗ್ಬಂಧನ ನಡೆಯಲಿದೆ. ಕಾಞಂಗಾಡ್ ಪ್ರಧಾನ ಅಂಚೆ ಕಚೇರಿಗೆ ದಿಗ್ಬಂಧನ ಹೇರಲಾಗಿದ್ದು, ಮಾ.೧೦ರಂದು ಬೆಳಗ್ಗೆ ೧೦ ಗಂಟೆಗೆ ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿಣರಾಯಿ ವಿಜಯನ್ ಮೂರನೆ ದಿನದ ದಿಗ್ಬಂಧನವನ್ನು ಉದ್ಘಾಟಿಸುವರು. ೧೧ ಗಂಟೆಗೆ ಗೃಹ ಸಚಿವ ಕೋಡಿಯೇರಿ ಬಾಲಕೃಷ್ಣನ್ ಕಾಞಂಗಾಡ್‌ನಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡುವರು.