ಉಡುಪಿ: ಜಯಂಟ್ಸ್‌ನಿಂದ ಇನಾಯತ್ ಗ್ಯಾಲರಿಯಲ್ಲಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಪ್ರಕಟಿಸಿದ ದಿನಾಂಕ : 2010-03-10
ಉಡುಪಿ, ಮಾ.೯: ಜಯಂಟ್ಸ್ ಇಂಟರ್ ನ್ಯಾಶನಲ್ ಗ್ರೂಫ್ ಉಡುಪಿ, ಉಡುಪಿಯ ಆರ್ಟಿಸ್ಟ್ ಫೋರಂ ಹಾಗೂ ಇನಾಯತ್ ಆರ್ಟ್ ಗ್ಯಾಲರಿ ಕುಂಜಿಬೆಟ್ಟು ಇವುಗಳ ಸಂಯುಕ್ತ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಯೊಂದು ಮಾ.೧೪ರಂದು ಇನಾಯತ್ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ.
ಐದು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಎಲ್‌ಕೆಜಿ ಹಾಗೂ ಯುಕೆಜಿಯ ಮಕ್ಕಳು ತಮಗೆ ತೋಚಿದ ಚಿತ್ರ ಬರೆಯಬಹುದು. ೧,೨,೩ ತರಗತಿಯ ಮಕ್ಕಳು ಯಾವುದೇ ಚಿತ್ರ ಬಿಡಿಸಬಹುದು.
೪ರಿಂದ ೬ನೆ ತರಗತಿ ಮಕ್ಕಳು ಯಾವುದೇ ಹಬ್ಬ ಅಥವಾ ಕಾಡು ಪ್ರಾಣಿಗಳ ಚಿತ್ರ ಬರೆಯ ಬಹುದು. ೭ರಿಂದ ೯ನೆ ತರಗತಿ ವಿದ್ಯಾರ್ಥಿಗಳು ಹಣ್ಣಿನ ಅಂಗಡಿ, ಜಲಪಾತಗಳ ಚಿತ್ರ ಬರೆಯಬಹುದು. ೧೦ ಹಾಗೂ ಪಿಯುಸಿ ವಿದ್ಯಾರ್ಥಿಗಳು ಬಸ್ ನಿಲ್ದಾಣ, ಇಂದಿನ ವಿಜ್ಞಾನ ವಿಷಯದ ಕುರಿತು ಚಿತ್ರ ಬರೆಯ ಬಹುದು.
ಚಿತ್ರ ಬರೆಯಲು ಕಾಗದವನ್ನು ವ್ಯವಸ್ಥಾಪಕರು ನೀಡಲಿದ್ದು, ಉಳಿದ ಸಾಮಗ್ರಿಗಳನ್ನು ಸ್ಪರ್ಧಿಗಳೇ ತರಬೇಕು.
ಪ್ರತಿ ವಿಭಾಗದಲ್ಲಿ ಮೂರು ಬಹುಮಾನ ಗಳಲ್ಲದೇ, ತೀರ್ಪುಗಾರರ ಮೆಚ್ಚುಗೆಯ ಚಿತ್ರಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು. ವಿಜೇತರಿಗೆ ಅದೇ ದಿನ ಸಂಜೆ ೪:೩೦ಕ್ಕೆ ಹಿರಿಯ ಕಲಾವಿದ ಮಂಗಳೂರಿನ ಗಣೇಶ ಸೋಮಯಾಜಿ ಬಹುಮಾನ ವಿತರಿಸಲಿದ್ದಾರೆ.
ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಜಯಂಟ್ಸ್ ಗ್ರೂಪ್‌ನ ಅಧ್ಯಕ್ಷ ಜಗದೀಶ್ ಅಮೀನ್ (೯೯೦೧೭ ೩೦೫೪೪), ಆರ್ಟಿಸ್ಟ್ ಪೋರಂನ ಅಧ್ಯಕ್ಷ ರಮೇಶ್ ರಾವ್ (೯೯೦೦೪೧೦೮೯೯) ಅಥವಾ ಇನಾಯತ್ ಆರ್ಟ್ ಗ್ಯಾಲರಿಯ ಲಿಯಾಕತ್ ಅಲಿ (೯೮೪೫೦ ೪೯೮೭೦) ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.