| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಉಡುಪಿ: ರೈಲು ಸೇವೆ: ಮಾತು ತಪ್ಪಿದ ಸಚಿವ ಮುನಿಯಪ್ಪರಿಗೆ ನೋಟಿಸ್ |
ಪ್ರಕಟಿಸಿದ ದಿನಾಂಕ : 2010-03-10
ಉಡುಪಿ, ಮಾ.೯: ಜಿಲ್ಲೆಯುದ್ದಕ್ಕೂ ಹಾದುಹೋಗುವ ಕೊಂಕಣ ರೈಲು ಮಾರ್ಗವಿದ್ದರೂ, ರೈಲ್ವೆ ಸೌಕರ್ಯದಿಂದ ವಂಚಿತರಾಗಿರುವ ಉಡುಪಿ ಜಿಲ್ಲೆಯ ಜನತೆಗೆ ಬಹಳಷ್ಟು ಭರವಸೆಯನ್ನು ನೀಡಿದರೂ, ಯಾವುದನ್ನೂ ಈಡೇರಿಸದ ಕೇಂದ್ರ ಸಹಾಯಕ ರೈಲ್ವೆ ಸಚಿವ ಕೆ.ಎಚ್.ಮುನಿಯಪ್ಪ ರಿಗೆ ನಗರದ ಹಿರಿಯ ನ್ಯಾಯವಾದಿ ಬೆನೆಡಿಕ್ಟ್ ನೊರೊನ್ಹ ಸಾರ್ವಜನಿಕರ ಪರವಾಗಿ ನೋಟಿಸು ಜಾರಿಗೊಳಿಸಿದ್ದಾರೆ.
ಬೆಂಗಳೂರು-ಮಂಗಳೂರು ರೈಲನ್ನು ಉಡುಪಿ- ಕುಂದಾ ಪುರ-ಕಾರವಾರ-ಗೋವಾವರೆಗೆ ಓಡಿಸುವ, ಬೆಂಗಳೂರು- ಮಂಗಳೂರು ನಡುವೆ ಹಗಲು ರೈಲು ಆರಂಭಿಸಿ ಅದನ್ನು ಕುಂದಾಪುರ-ಬೈಂದೂರು ತನಕ ವಿಸ್ತರಿಸುವ ಭರವಸೆಯನ್ನು ಸಚಿವರು ಕರಾವಳಿಯ ಜನತೆಗೆ ನೀಡಿದ್ದಾರೆ. ಇದರೊಂದಿಗೆ ಮುಂಬೈ-ಕಾರವಾರ ರೈಲನ್ನು ಮಂಗಳೂರು ವರೆಗೆ ವಿಸ್ತರಿಸುವ ಆಶ್ವಾಸನೆಯೂ ದೊರಕಿದೆ.
ಈ ಆಶ್ವಾಸನೆ, ಭರವಸೆಗಳು ಬಜೆಟ್ ಮಂಡನೆಗಿಂತ ಮೊದಲು ನೀಡಿರುವುದಾಗಿದೆ. ಈ ನಿಮ್ಮ ಹೇಳಿಕೆಗಳನ್ನು ಕೇಳಿ ನಾವು ತುಂಬಾ ಖುಷಿ ಪಟ್ಟಿದ್ದೇವು. ಆದರೆ ನೀವು ನೀಡಿದ ಯಾವುದೇ ಭರವಸೆ ರೈಲ್ವೆ ಬಜೆಟ್‌ನಲ್ಲಿ ಈಡೇರಿಲ್ಲ. ಮಂತ್ರಿ ಮಂಡಲದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ನೀವು, ಇಲ್ಲಿ ಹೇಳಿಕೆ ನೀಡಿ ದಿಲ್ಲಿಯಲ್ಲಿ ಸುಮ್ಮನಿರುತ್ತೀರಿ ಎಂದು ನಾವು ಭಾವಿಸಬೇಕಾಗುತ್ತದೆ ಎಂದು ನೊರೊನ್ಹ ನೋಟಿಸಿನಲ್ಲಿ ತಿಳಿಸಿದ್ದಾರೆ.
ಸಂಸತ್ ಸದಸ್ಯರಾಗಿ, ಜನರ ಹಿತಾಸಕ್ತಿಗಾಗಿ ದುಡಿಯುವ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನೀವು, ಜನತೆಗೆ ನೀಡಿದ ಭರವಸೆ, ಆಶ್ವಾಸನೆಗಳೊಂದಿಗೆ ಬದ್ಧತೆಯನ್ನು ಮರೆತಿದ್ದೀರಿ. ಇದು ಜನರನ್ನು ನೀವು ಸುಳ್ಳು ಭರವಸೆಗಳಿಂದ ವಂಚಿಸಿದಂತೆ. ಎಂಪಿಯಾಗಿ, ಸಚಿವನಾಗಿ ನಿಮಗೆ ಸಾಂವಿಧಾನಿಕ ಜವಾಬ್ದಾರಿಗಳಿವೆ.
ಆದುದರಿಂದ ಈ ಭಾಗದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು, ನೀವು ನೀಡಿರುವ ಭರವಸೆಗಳ ಈಡೇರಿಕೆಗಾಗಿ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರೊಂದಿಗೆ ಚರ್ಚಿಸಿ ಈ ಭಾಗದ ಜನರ ಬಯಕೆ ಈಡೇರಿಕೆಗೆ ಮುಂದಾಗಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ರಿಟ್ ಅರ್ಜಿ ಸಲ್ಲಿಸುವ ಅವಕಾಶವಿದ್ದು, ಅದಕ್ಕೆ ನೀವು ಅವಕಾಶ ನೀಡುವುದಿಲ್ಲವೆಂದು ಭಾವಿಸಿದ್ದೇನೆ ಎಂದು ಬೆನೆಡಿಕ್ಟ್ ನೊರೊನ್ಹಾ ಹೇಳಿದ್ದಾರೆ.
ನೊರೊನ್ಹಾ ನೋಟಿಸಿನ ಪ್ರತಿಗಳನ್ನು ಲೋಕಸಭೆಯ ಸ್ವೀಕರ್ ಮೀರಾಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಕಳುಹಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-10 00:00:00
|
|
| ramesh, mysore | 2010-03-12 | | ಸಾಮಾಜಿಕ ಕಾಳಜಿ ಈ ರೀತಿಯಲ್ಲಿ ವ್ಯಕ್ತಪಸಬೇಕಷ್ಟೇ, ರಾಜಕಾರಣಿಗಳು ಯಾವಾಗಲೂ ಸುಳ್ಳು ಭರವಸೆಗಳನ್ನು ಕೊಡುವುದರಲ್ಲಿ ಸಿದ್ದಹಸ್ತರು, ಕರ್ನಾಟಕದ ಪಾಲಿಗೆ ಕೇವಲ ಭರವಸೆಗಳಿಂದ ಕಾಯ್ದು ಕುಳಿತಿರಬೇಕು, ಕನ್ನಡಿಗರು ಈಗಲಾದರು ಎಚ್ಚೆತ್ತರೆ ಮಾತ್ರ ಕನ್ನಡಿಗರಿಗೆ ಕರ್ನಾಟಕಕ್ಕೆ ಉಳಿಗಾಲ, ಈ ವಿಚಾರಕ್ಕೆ ಒಕ್ಕೊರಲಿನ ಹೋರಾಟ ಅನಿವಾರ್ಯ. |
| Ronald, Udupi | 2010-03-11 | | Good intention & action! But voters are more interested with the candidates of more religious offers!!! Man! religion card is the most valuable card today! Forget the development and future generation!! Count the money with the agenda!! That\'s the business deal if you consider the state govt!! |
| ಪ.ರಾಮಚಂದ್ರ , ರಾಸ್ ಲಫ್ಫಾನ್, ಕತಾರ್ | 2010-03-10 | | ಸಂಸತ್ ಸದಸ್ಯರಾಗಿ, ಜನರ ಹಿತಾಸಕ್ತಿಗಾಗಿ ದುಡಿಯುವ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕರ್ನಾಟಕ ರಾಜ್ಯದ ಜನತೆಯ ಪ್ರತಿನಿಧಿ, ಮಂತ್ರಿ ಮಂಡಲದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಹಾಯಕ ರೈಲ್ವೆ ಸಚಿವ ಕೆ.ಎಚ್.ಮುನಿಯಪ್ಪ ಅವರ ಸಾಂವಿಧಾನಿಕ ಜವಾಬ್ದಾರಿಯನ್ನು ಸಾರ್ವಜನಿಕರ ಪರವಾಗಿ ನೋಟಿಸು ಜಾರಿಗೊಳಿಸಿ ನೆನಪು ಮಾಡಿಸಿದ ಕರಾವಳಿ ಕರ್ನಾಟಕದ ಹಿರಿಯ ನ್ಯಾಯವಾದಿ ಬೆನೆಡಿಕ್ಟ್ ನೊರೊನ್ಹ ಅವರಿಗೆ ವಂದನೆಗಳು.
|
| ರೋಶನ್, ಮಂಗಳೂರು | 2010-03-10 | | ಶಹಬಾಸ್ ಬೆನೆಡಿಕ್ಟ್ ನೊರೊನ್ಹಾ ರವರೇ, ರೈಲ್ ಬಿಡುವ ರೈಲ್ವೆ ಸಚಿವರಿಗೆ ನೋಟಿಸ್ ಬಿಟ್ಟಿದ್ರಿ. ಸಚಿವರು ಇನ್ನಾದರೂ ರೈಲ್ ಬಿಡೋದು ಬಿಟ್ಟು ಪ್ರಯಾಣಿಕರ ಬೇಡಿಕೆ ಈಡೆರಿಸುವರೆ?
|
|
|
|