| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಮಂಗಳೂರು: ಗೋಹತ್ಯೆ ನಿಷೇಧ ಬಿಜೆಪಿಯ ಕುಟಿಲ ರಾಜಕೀಯ ತಂತ್ರ: ಗೋಹತ್ಯೆ ನಿಷೇಧದ ವಿರುದ್ಧ ನಡೆದ ಸಿಪಿಎಂ, ಸಿಪಿಐ, ಜೆಡಿಎಸ್ ಪ್ರತಿಭಟನೆಯಲ್ಲಿ ನಾಗರಾಜ್ |
ಪ್ರಕಟಿಸಿದ ದಿನಾಂಕ : 2010-03-10
ಮಂಗಳೂರು, ಮಾ.೯: ರಾಜ್ಯದಲ್ಲಿ ಬಿಜೆಪಿ ಗೋಹತ್ಯೆ ನಿಷೇಧ ಮಸೂದೆಯನ್ನು ಜಾರಿಗೆ ತರಲು ಯತ್ನಿಸುತ್ತಿರುವುದು ಅವರ ಕುಟಿಲ ರಾಜಕೀಯ ತಂತ್ರಗಾರಿಕೆಯಾಗಿದೆ ಎಂದು ಸಿಪಿಎಂ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಿ.ಎನ್. ನಾಗರಾಜ್ ಟೀಕಿಸಿದ್ದಾರೆ. ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಗೋಹತ್ಯೆ ಕಾಯ್ದೆ ನಿಷೇಧ ಮಸೂದೆಯನ್ನು ಕೈ ಬಿಡಲು ಆಗ್ರಹಿಸಿ ಸಿಪಿಎಂ, ಸಿಪಿಐ, ಜೆಡಿಎಸ್ ನೇತೃತ್ವದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಅಲ್ಪಸಂಖ್ಯಾತರನ್ನು ದ್ವೇಷಿಸುವ ರಾಜಕೀಯವನ್ನು ನಡೆಸುತ್ತಿದೆ, ಗೋಹತ್ಯೆ ನಿಷೇಧ ಅವರ ಮುಖ್ಯ ಗುರಿ ಅಲ್ಲ. ಆ ಮೂಲಕ ಮುಸಲ್ಮಾನರನ್ನು ದ್ವೇಷಿಸುವ, ಅವರನ್ನು ಹಿಂಸಿಸುವ ಕೃತ್ಯದಲ್ಲಿ ತೊಡಗುವ ಉದ್ದೇಶವನ್ನು ಹೊಂದಿದೆ. ಇದಲ್ಲದೆ ಸಂಘ ಪರಿವಾರ ಚರ್ಚ್ ದಾಳಿಯ ಮೂಲಕ ಕ್ರಿಶ್ಚಿಯನ್ನರನ್ನು, ‘ಲವ್ ಜಿಹಾದ್’ ಎಂಬ ಸುಳ್ಳು ಸುದ್ದಿಯ ಮೂಲಕ ಮುಸಲ್ಮಾನರನ್ನು ಗುರಿ ಮಾಡಲಾಯಿತು. ಇದೀಗ ಪೊಲೀಸ್ ಅಧಿಕಾರಿಗಳೇ ‘ಲವ್ ಜಿಹಾದ್’ ವದಂತಿಯಲ್ಲಿ ಸತ್ಯಾಂಶ ಇಲ್ಲ ಎಂದು ಸರಕಾರಕ್ಕೆ ವಿವರ ನೀಡಿದ್ದಾರೆ ಎಂದು ಜಿ.ಎನ್.ನಾಗರಾಜ್ ತಿಳಿಸಿದರು. ಗೋಹತ್ಯೆ ನಿಷೇಧ ಜಾರಿಯಾದರೆ ಕರ್ನಾಟಕದ ಶೇ.೪೦ ರಷ್ಟಿರುವ ಗೋಮಾಂಸ ಸೇವಿಸುವವರಲ್ಲದೆ ರೈತರು, ಮಾಂಸಾ ಹಾರಿಗಳು ತೊಂದರೆUಡಾಗುತ್ತಾರೆ. ರೈತರ ಮೇಲೆ ಹೊರೆ ಹೆಚ್ಚಾಗುತ್ತದೆ. ಭಾರತದ ಚರಿತ್ರೆಯನ್ನು ದಾಖಲಿಸಿರುವ ಇಲ್ಲಿನ ಇತಿಹಾಸಕಾರರು ಪ್ರಾಚೀನ ಕಾಲದಲ್ಲಿ ಜನವಸತಿ ಇದ್ದ ಕಡೆಗ ಳಲ್ಲಿ ದನದ ಮಾಂಸ ಸೇವನೆಯೂ ನಡೆಯುತ್ತಿತ್ತು ಎನ್ನುವ ಆಧಾರ ದೊರೆತಿದೆ. ಆದರೆ, ಈ ಸತ್ಯವನ್ನು ಮರೆಮಾಚಿ ಗೋವು ಪೂಜನೀಯ ಎನ್ನುವ ನೆಪದಲ್ಲಿ ರೈತರ ಬದುಕಿನ ಜೊತೆ ಅಲ್ಪಸಂಖ್ಯಾತರ, ಮಾಂಸಾಹಾರಿಗಳ ಬದುಕಿನ ಜೊತೆ ಚೆಲ್ಲಾಟವಾಡಲು ಸರಕಾರ ತೊಡಗಿದೆ, ಇದರಿಂದ ಸರಕಾರ ಗಂಭೀರ ಪರಿಣಾಮ ಎದುರಿಸಬೇ ಕಾದೀತು ಎಂದು ಜಿ.ಎನ್. ನಾಗರಾಜ್ ಎಚ್ಚರಿಕೆ ನೀಡಿದರು. ಆಹಾರ ಪದ್ಧತಿಯ ಮೇಲೆ ದಾಳಿ: ಬಿಜೆಪಿ ಗೋಹತ್ಯೆ ನಿಷೇಧ ಮಸೂದೆ ಜಾರಿಗೆ ತರುವ ಮೂಲಕ ಸಂವಿಧಾನ ವಿರೋಧಿ ನೀತಿ ಅನುಸರಿಸಲು ಹೊರಟಿದೆ. ಜನ ಸಾಮಾನ್ಯರ ಆಹಾರ ಪದ್ಧತಿ, ಸೌಹಾರ್ದತೆಗೆ ಇದರಿಂದ ತೊಡಕಾಗಲಿದೆ ಎಂದು ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಜೆ.ಎಸ್. ನೊರೊನ್ಹ ತಿಳಿಸಿದರು.
ಜನಸಾಮಾನ್ಯರ ಸಮಸ್ಯೆ ಮರೆತ ಸರಕಾರ: ಬೆಲೆ ಏರಿಕೆ ಸಮಸ್ತ ನಾಡಿನ ಜನರ ನೆಮ್ಮದಿ ಕೆಡಿಸುತ್ತಿರುವ ಸಂದರ್ಭದಲ್ಲಿ ಸರಕಾರ ಗೋ ಹತ್ಯೆ ನಿಷೇಧ ಜಾರಿ ಮಾಡಲು ಹೊರಟಿರುವುದು ಸರಕಾರದ ನೀತಿಯನ್ನು ತಿಳಿಸುತ್ತಿದೆ. ಮನುಷ್ಯ ಸಮಾಜದ ಮೇಲೆ ಪ್ರೀತಿ ಇಲ್ಲದ ಇವರು ಗೋವುಗಳ ಮೇಲೆ ಕಪಟ ಪ್ರೀತಿ ತೋರಿಸುತ್ತಿದ್ದಾರೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಂಜೀವ ಆರೋಪಿಸಿದರು.
ಮಾಂಸ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಲಿ ಹಸನ್, ಜೆಡಿಎಸ್ ನಗರ ಸಮಿತಿ ಅಧ್ಯಕ್ಷ ಅಝೀಝ್ ಕುದ್ರೋಳಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಿ. ಮಾಧವ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್. ಶ್ರೀಯಾನ್, ಸಿಪಿಐ ಮುಖಂಡ ವಿಶ್ವನಾಥ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಾದವ ಶೆಟ್ಟಿ ವಂದಿಸಿದರು. ಇದಕ್ಕೂ ಮುನ್ನ ಮಂಗಳೂರು ಪುರಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-10 00:00:00
|
|
| MOAHAMMAD YASIR, SAUDI ARABYA | 2010-03-10 | | FIRST OF ALL THEY SHULD KNOW WHTATS THIER RELIGION THEY SHULD MAKE SURE WHAT IS IN THIER HOLY BOOK THEN CAN THEN ARGUEMENT OF FOLLOWING.ESPECIALLY BRAMINS THEY KNOW WHICH IS WRONG AND WRITE THE PERSON WHO IS MAKING MORE AVOID OF THESE THINGS HE KNOWS ALL AND THEY MAKING DRAMA TO MAKE COMUNIAL IN THE CITY............ |
|
|
|