ಉಡುಪಿ ಕೃಷ್ಣ ಮಠದ ಊಟಕ್ಕೂ ಈಗ ಡ್ರೆಸ್ ಕೋಡ್? |
ಪ್ರಕಟಿಸಿದ ದಿನಾಂಕ : 2010-03-09
ಉಡುಪಿ: ಇಲ್ಲಿನ ಪ್ರಸಿದ್ದ ಕೃಷ್ಣ ದೇಗುಲ ದಲ್ಲಿನ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣರ ಊಟದ ಪಂಕ್ತಿಯಲ್ಲಿ ಕುಳಿತುಕೊಳ್ಳಲು ಮಹಿಳೆಯರಿಗೆ ಡ್ರೆಸ್‌ಕೋಡ್ ಅಳವಡಿಸಲಾಗಿದೆಯೆಂದು ತಿಳಿದು ಬಂದಿದೆ.
ಪುತ್ತಿಗೆ ಶ್ರೀಗಳ ಪರ್ಯಾಯ ಮುಕ್ತಾಯ ವಾಗುವವರೆಗೆ ಚೌಕಿ ಊಟಕ್ಕೆ ಡ್ರೆಸ್ ಕೋಡ್ ಇರಲಿಲ್ಲ. ಸ್ವಾಮಿಜಿಗಳೂ ಕುಳಿತು ಊಟ ಮಾಡುವ ಈ ಚೌಕಿ ಊಟಕ್ಕೆ ಶಿವಳ್ಳಿ ಮಾಧ್ವ ಬ್ರಾಹ್ಮಣ ಸಮು ದಾಯಕ್ಕೆ ಸೇರಿದ ಮಹಿಳೆಯರು, ಯುವತಿಯರು ವಿವಿಧ ರೀತಿಯ ಡ್ರೆಸ್ ಧರಿಸಿ ಕೊಂಡು ಬಂ ದು ಊಟ ಮಾಡಿ ಹೋಗುತ್ತಿದ್ದರು.
ಇಲ್ಲಿ ಹತ್ತು ಹಲವಾರು ಬಗೆಯ ಪದಾರ್ಧಗಳಲ್ಲಿ ಸಿಹಿ ತಿಂಡಿಗಳು ಪ್ರತಿದಿನ ಇದ್ದು, ಈ ಊಟಕ ಮಾಧ್ವ ಬ್ರಾಹ್ಮಣರನ್ನು ಹೊರತು ಪಡಿಸಿ ಉಳಿದ ಬ್ರಾಹ್ಮಣ ಜಾತಿಯ ಜನರಿಗೂ ಪ್ರವೇಶಾವ ಕಾಶವೇ ಇರಲಿಲ್ಲ. ಇದೀಗ ಶಿರೂರು ಮಠಾಧೀಶರ ಪರ್ಯಾಯವಾಗಿದ್ದು, ಶಿರೂರು ಮಠಾಧೀಶ ರು ಚೌಕಿ ಊಟಕ್ಕೆ ಡ್ರೆಸ್ ಕೋಡ್ ಜಾರಿಗೆ ತಂದಿದ್ದಾರೆಂದು ಹೇಳಲಾಗಿದೆ.
ಪ್ರಸ್ತುತ ಚೌಕಿಯ ಭೂರಿಭೋಜನ ಬಯಸುವ ತುಳುಶಿವಳ್ಳಿ ಮಾಧ್ವಬ್ರಾಹ್ಮಣ ಮಹಿಳೆಯರು ಎಲ್ಲರೂ ಒಂದೇ ರೀತಿಯ ಡ್ರೆಸ್ ಧರಿಸಿಕೊಂಡು ಬರುವುದು ಕಡ್ಡಾಯವಾಗಿದೆ.
ಚೌಕಿ ಊಟಕ್ಕೆ ಬರುವವರು ಸಾರಿ ಧರಿಸುವುದು ಅನಿವಾರ್ಯವಾಗಿದ್ದು, ಈ ಕಡ್ಡಾಯದಿಂದಾಗಿ ಸಾರಿ ಧರಿಸದ ಯುವತಿಯರು ಚೌಕಿಯ ಊಟದಿಂದ ವಂಚಿತರಾಗಿದ್ದಾರೆ.
ಭೂರಿಭೋಜನದಿಂದ ವಂಚಿತರಾಗುತ್ತಿರುವ ಯುವತಿಯರು ಇದೀಗ ಶಿರೂರು ಲಕ್ಷ್ಮೀ ವರ ತೀರ್ಥ ಸ್ವಾಮಿಜಿ ವಿರುದ್ಧ ಅಸಮಾಧಾನ ಹೊರ ಹಾಕಲಾರಂಭಿಸಿದ್ದಾರೆ.
ಸಾರಿ ಧರಿಸಿ ಅಭ್ಯಾಸವಿಲ್ಲದ ಚೂಡಿದಾರ ಹಾಕುವ ಯುವತಿಯರು ಇದೀಗ ಇದೇ ಕಾರಣಕ್ಕೆ ಚೌಕಿ ಊಟದ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಚೌಕಿ ಊಟಕ್ಕೆ ಡ್ರೆಸ್ ಕೋಡ್ ಅನುಷ್ಠಾನ ಗೊಳಿಸಿರುವುದು ಸರಿಯಲ್ಲ ಎಂದೂ ಶಿವಳ್ಳಿ ಜಾತಿಯ ಪುರುಷರೂ ಹೇಳ ತೊಡಗಿದ್ದಾರೆ.
ಸಂಪೂರ್ಣ ದೇಹವನ್ನು ಮುಚ್ಚುವ ಚೂಡಿದಾರ್ ಧರಿಸಿ ಬಂದವರಿಗೆ ಚೌಕಿ ಊಟ ನಿಷೇಧಿಸಿ ರುವುದು ಸರಿಯಲ್ಲವೆಂದು ಸಮಾಜ ಬಾಂಧವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಿರೂರು ಮಠಾಧೀಶರು ಚೌಕಿ ಊಟಕ್ಕೆ ಡ್ರೆಸ್ ಕೋಡ್ ಅಳವಡಿಸಿರುವುದು ಶಿವಳ್ಳಿ ಜಾತಿಯ ಮಹಿಳೆಯರ ಹಾಗೂ ಯುವತಿಯರ ನಡುವೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-09 00:00:00
|
|
| ಶ್ರೀನಿವಾಸ್, ಉಡುಪಿ | 2010-03-10 | | ಶ್ರೀಕೃಷ್ಣ ಪರಮಾತ್ಮ ರುಕ್ಮಿಣಿ ಸತ್ಯಭಾಮೆಯೊಂದಿಗೆ ಊಟಕ್ಕೆ ಬಂದರೆ ಯಾವ ಡ್ರೆಸ್ ಕೋಡ್, ನಿಯಮದಂತೆ ಡ್ರೆಸ್ ಇಲ್ಲದಿದ್ದರೆ ಹೊಟ್ಟೆಗೆ ತಣ್ಣಿರುಬಟ್ಟೆ ಹಾಕಿಕೊಂಡು ವಾಪಸ್ಸಾ.... |
|