ಉಡುಪಿ: ಹಿಂದೂ ಯುವತಿಯನ್ನು ಮದುವೆಯಾದ ಕುಟು೦ಬಕ್ಕೆ ಚರ್ಚ್‍ನಿ೦ದ ಬಹಿಷ್ಕಾರ ! |
ಪ್ರಕಟಿಸಿದ ದಿನಾಂಕ : 2010-03-09
ಉಡುಪಿ : ಹಿಂದೂ ಯುವತಿಯನ್ನು ಮದುವೆಯಾದ ಕಾರಣಕ್ಕೆ ಚರ್ಚ್ ಆಡಳಿತ ಮಂಡಳಿ ಹಾ ಗೂ ಫಾದರ್‌ರವರು ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಿದ ಘಟನೆ ಶಂಕರಪುರದಲ್ಲಿ ನಡೆದಿದೆ. ಶಂಕರಪುರ ಸೈಂಟ್‌ಜಾನ್ಸ್ ಚರ್ಚ್‌ನ ಫಾದರ್ ಹೆರಾಲ್ಡ್ ಡಿ ಸೋಜ ಹಾಗೂ ಆಡಳಿತ ಮಂಡ ಳಿಯೇ ತಮ್ಮದೇ ಮತಕ್ಕೆ ಸೇರಿದ ಯುವಕನ ಕುಟುಂಬಕ್ಕೆ ಬಹಿಷ್ಕಾರ ಹಾಕಿದವರಾಗಿದ್ದಾರೆ.
ಶಂಕರಪುರದ ಟೆಲಿಫೋನ್ ಎಕ್ಸ್ ಚೇಂಜ್ ಬಳಿಯ ಇನ್ನಂಜೆ ಕಂಪೌಂಡ್‌ನಲ್ಲಿ ವಾಸವಾಗಿರುವ ಜೋಸೆಫ್ ಮೆಂಡೊ ನ್ಸಾರವರ ಕುಟುಂಬವೇ ಬಹಿಷ್ಕಾರಕ್ಕೆ ಒಳಗಾದುದಾಗಿದೆ. ಜೋಸೆಫ್ ಮೆಂಡೋನ್ಸಾ (45) ಬಾರ್ ಒಂದರಲ್ಲಿ ವೈಟರ್ ಆಗಿದ್ದು, ಬಿಡುವಿನ ಸಮಯದಲ್ಲಿ ಹೂವಿನ ವ್ಯಾಪಾರವನ್ನು ಮಾಡುತ್ತಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಹಿಂದೂ ಮತಕ್ಕೆ ಸೇರಿದ ಗಿರಿಜಾ ಎಂಬಾ ಕೆಯನ್ನು ಪ್ರೇಮಿಸಿ ಬಳಿಕ ರಿಜಿಸ್ಟರ್ಡ್ ವಿವಾಹವಾಗಿ ಮನೆಗೆ ಕರೆದುಕೊಂಡು ಬಂದಿದ್ದರು. ಕ್ರೈಸ್ತ ಸಮುದಾಯದ ರೀತಿ, ರಿವಾಜು ಪ್ರಕಾರ ವರ್ಷಕ್ಕೊಂದು ಬಾರಿ ಕ್ರೈಸ್ತ ಮತಸ್ಥರ ಮನೆಗಳಿಗೆ ಭೇಟಿ ನೀಡುವ ಫಾದರ್ ರವರು ಪ್ರಾರ್ಥನೆ ಮಾಡಿ ತೀರ್ಥ ಪ್ರಸಾದ ನೀಡಬೇಕಾಗಿದೆ. ಅನಾದಿ ಕಾಲದಿಂದಲೂ ಈ ಸಂಪ್ರ ದಾಯ ಕ್ರೈಸ್ತರಲ್ಲಿ ನಡೆದುಕೊಂಡು ಬಂದಿದೆ.
ಶಂಕರಪುರ ಚರ್ಚ್‌ನ ಫಾದರ್ ಹೆರಾಲ್ಡ್ ಡಿ ಸೋಜರವರು ತಮ್ಮ ಶಿಷ್ಯರು ಹಾಗೂ ಬೆಂಬಲಿಗ ರೊಂದಿಗೆ ಫೆ 18ರಂದು ಶಂಕರಪುರದ ಟೆಲಿಫೋನ್ ಎಕ್ಸ್‌ಚೇಂಜ್ ಸುತ್ತಮುತ್ತಲಿನ ಎಲ್ಲಾ ಕ್ರೈಸ್ತ ಮತಸ್ಥರ ಮನೆಗಳಿಗೂ ಭೇಟಿ ನೀಡಿದ್ದಾರೆ. ಕುಟುಂಬದವರ ಸುಖ, ಸಂತೋಷ, ನೆಮ್ಮದಿ, ಅಭಿ ವೃದ್ಧಿಗಾಗಿ ಪ್ರಾರ್ಥಿಸಿದ್ದಾರೆ. ತೀರ್ಥ ಪ್ರಸಾದ ನೀಡಿದ್ದಾರೆ. ಆದರೆ ಜೋಸೆಫ್ ಮೆಂಡೊನ್ಸಾರವರ ಮನೆಗೆ ಮಾತ್ರ ಫಾದರ್ ಭೇಟಿ ನೀಡಲಿಲ್ಲವೆಂದು ಹೇಳಲಾಗಿದೆ. ಈ ಬಗ್ಗೆ ಸ್ವತಹಾ ಜೋಸೆಫ್ ಮೆಂಡೊನ್ಸಾರವರೇ ಫಾದರ್‌ರವರ ವಿರುದ್ಧ ಆರೋಪ ಮಾಡಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-09
|
|
| ಸಂತೋಷ್ , ಮಂಗಳೂರು | 2010-03-10 | | ಓ ಸರ್ವಶಕ್ತನಾದ ದೇವರೆ, ಅವರು ಮಾಡಿದ ತಪ್ಪನ್ನು ಕ್ಷಮಿಸಿ, ಅವರು ಏನು ಮಾಡುತಿದ್ದಾರೆಂದು ಅವರಿಗೆ ತಿಳಿಯದು, ಅವರಿಗೆ ಜ್ಞಾನ, ಸದ್ಬುದ್ದಿಯನ್ನು ಕೊಟ್ಟು ನಂಬಿದವರನ್ನು ಕೈಬಿಡದಂತೆ ನೋಡುವ ಶಕ್ತಿಯನ್ನು ಕೊಡಿ.
|
|