ಮ೦ಗಳೂರು: `ಕೊ೦ಕಣ್ ಕೊಗುಲ್' ಎ೦ದೇ ಜನಪ್ರೀಯರಾಗಿದ್ದ ಗಾಯಕ ವಿಲ್ಫಿ ರೆಬಿ೦ಬಸ್ (67) ಇನ್ನಿಲ್ಲ |
ಪ್ರಕಟಿಸಿದ ದಿನಾಂಕ : 2010-03-09
ಮ೦ಗಳೂರು, ಮಾ, 9: ಕೊ೦ಕಣಿ ಸ೦ಗೀತ ಕ್ಷೆತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿದ ವಿಲ್ಫಿ ರೆಬಿ೦ಬಸ್ ಅವರು `ಕೊ೦ಕಣ್ ಕೊಗುಲ್' ಎ೦ದೇ ಪ್ರಸಿದ್ದರಾಗಿದ್ದರು. ಕ್ಯಾನ್ಸರ್ ರೋಗದಿ೦ದ ಬಳಲುತ್ತಿದ್ದ ಇವರನ್ನು ಫಾ.ಮುಲ್ಲರ್ ಆಸ್ಪತ್ರೆಗೆ ಸೇರಿಸಿದ್ದರು. ಇ೦ದು (ಮಾ, 9,2010) ಬೆಳಿಗ್ಗೆ 11.15ರ ಹೊತ್ತಿಗೆ ಆಸ್ಪತ್ರೆಯಲ್ಲೇ ತಮ್ಮ ಕೊನೆಯುಸಿರೆಳೆದರು.
ಕೊ೦ಕಣಿ ಸ೦ಗೀತ ಕ್ಷೇತ್ರವು ತನ್ನ ಪ್ರತಿಭಾವ೦ತ ಶ್ರೇಷ್ಠ ಗಾಯಕನನ್ನು ಕಳೆದುಕೊ೦ಡಿದೆ. ಈ ವರದಿಯನ್ನು ಕೇಳಿ ಕರ್ನಾಟಕ ಮಾತ್ರವಲ್ಲದೇ ಇಡೀ ಪ್ರಪ೦ಚಕ್ಕೆ ಶಾಕ್ ಆಗಿದೆ. ಯಾಕೆ೦ದರೆ ಅವರ ಮಧುರವಾದ ಧ್ವನಿಯು ಎಲ್ಲರ ಹ್ರದಯ, ಮನಸ್ಸಿನಲ್ಲಿ ಅಚ್ಚೊದ್ದಿತ್ತು. ಇವರು ಕೊ೦ಕಣಿ ಮಾತ್ರವಲ್ಲದೇ ತುಳು ಗೀತೆಗಳನ್ನು ಹಾಡುತ್ತಿದ್ದರು.

ಅವರು ಪತ್ನಿ ಮೀರಾ ರೆಬಿ೦ಬಸ್, ಮಗಳು ವೀಣಾ ಮತ್ತು ಮಗ ವಿಶ್ವಾಸ್ ಹಾಗೂ ಕುಟು೦ಬ ಸದಸ್ಯರನ್ನು ಅಭಿಮಾನಿಗಳನ್ನು ಅಗಲಿದ್ದಾರೆ.
Wilfy, who would have turned 68 on April 2 this year, was a multi-faceted and versatile personality. Known for his charming and affable nature, he was a gifted music composer, playwright and short story writer. He was a household name among all Konkani Catholics.
Born in Mangalore in a poor family, he came up in life the hard way and started composing and singing Konkani songs at the young age of 14. By 15, he had written his first Konkani play, ``Poishyamcho Somvsaar,’’ and got it staged through the St Joseph’s Natak Sabha in Mangalore.

He has contributed and enriched the Konkani music world for over 50 years composing over 3,000 songs, 500 stage shows and conducted as many as 248 musical nites in Mangalore and different parts of Karnataka and even abroad besides publishing 9 volumes of Song Books. In addition, he had brought out a book, ``Kogul Gaaithaa,’’ comprising 40 volumes in four editions, 40 highly popular music audio cassettes besides six volumes of devotional and one instrumental album. He has written three Konkani musical plays, Hazaar Umaalyamche Kazaar, Vechik Pooth and Mother Teresa.





ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಇನ್ನಿಲ್ಲ
ಮಂಗಳೂರು, ಮಾ. ೯: ಕಳೆದ ೫೦ ವರ್ಷಗಳಿಂದ ಕೊಂಕಣಿ ಹಾಡುಗಳನ್ನು ಬರೆದು, ರಾಗ ಸಂಯೋಜನೆ ಮಾಡಿ, ಹಾಡುವ ಮೂಲಕ ಕೊಂಕಣಿಗರ ಹೃದಯಗಳನ್ನು ತಟ್ಟುತ್ತಿದ್ದ ಖ್ಯಾತ ಕಲಾವಿದ, `ಕೊಂಕಣಿ ಕೋಗಿಲೆ' ಬಿರುದಾಂಕಿತ ವಿಲ್ಫಿ ರೆಬಿಂಬಸ್ (೬೭) ಅವರು ಮಂಗಳವಾರ ಇಲ್ಲಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಅವರು ೧ ವರ್ಷದಿಂದ ಅಸೌಖ್ಯದಿಂದ ಬಳಲುತ್ತಿದ್ದರು. ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಬಹುಮುಖ ಪ್ರತಿಭೆಯ ವಿಲ್ಫಿ ಅವರು ಸಂಗೀತ ಸಂಯೋಜನೆ, ಗೀತ ರಚನೆ, ನಾಟಕ, ಸಣ್ಣ ಕಥೆಗಾರರಾಗಿ ಪ್ರಸಿದ್ಧರಾಗಿದ್ದರು. ಕೊಂಕಣಿ ಮಾತ್ರವಲ್ಲದೆ ತುಳು ಗೀತೆಗಳನ್ನು ಕೂಡಾ ರಚಿಸಿ, ಹಾಡುವ ಮೂಲಕ ತುಳುವರ ಅಭಿಮಾನಕ್ಕೂ ಪಾತ್ರರಾಗಿದ್ದರು.
ಮಂಗಳೂರಿನ ಸಾಮಾನ್ಯ ಕುಟುಂಬವೊಂದರಲ್ಲಿ ೧೯೪೨ರ ಎಪ್ರಿಲ್ ೨ರಂದು ಜನಿಸಿದ್ದ ವಿಲ್ಫಿ ರೆಬಿಂಬಸ್ ೧೪ರ ಹರೆಯದಲ್ಲಿಯೇ ಕೊಂಕಣಿ ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿ ಹಾಡುವ ಮೂಲಕ ಪ್ರತಿಭೆ ಪ್ರದರ್ಶಿಸಿದ್ದರು. ೧೫ನೇ ವರ್ಷದಲ್ಲಿ ಮೊದಲ ಕೊಂಕಣಿ ನಾಟಕ `ಪಯ್ಶಾಂಚೊ ಸಂಸಾರ್' (ದುಡ್ಡಿನ ಜಗತ್ತು) ಬರೆದು ಸಂತ ಜೋಸೆಫ್ ನಾಟಕ ಸಂಘದ ಮೂಲಕ ರಂಗಕ್ಕೆ ತಂದಿದ್ದರು. ಆ ಬಳಿಕ ೮ ಕೊಂಕಣಿ ನಾಟಕಗಳನ್ನು ಬರೆದು ನಿರ್ದೇಶಿಸಿದ್ದರು.
ಕೊಂಕಣಿ ಸಂಗೀತ ನಾಟಕಗಳನ್ನು ಬರೆದು, ಹಾಡಿ ಪ್ರಚುರಪಡಿಸಿದವರಲ್ಲಿ ವಿಲ್ಫಿ ಮೊದಲಿಗರು. ಈ ಕಾಯಕದಿಂದಾಗಿ ಅವರು ಕೊಂಕಣಿ ಸಂಗೀತ ಲೋಕದ ಅನಭಿಷಿಕ್ತ ದೊರೆ ಎನಿಸಿದ್ದರು.
೨,೮೦೦ ಗೀತೆಗಳಿಗೆ ಸಂಗೀತ ಸಂಯೋಜನೆ
೧೯೫೬ರಲ್ಲಿ ಕಲಾ ಸೇವೆ ಪ್ರಾರಂಭಿಸಿದ ಅವರು, ೫೦ ವರ್ಷಗಳಲ್ಲಿ ೨,೮೦೦ ಕೊಂಕಣಿ ಗೀತೆ ಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ೫೦೦ ಸಂಗೀತ ಕಲಾ ಪ್ರದರ್ಶನ ನೀಡಿ ಲಕ್ಷಾಂತರ ಮಂದಿಯ ಮನಸೂರೆಗೈದಿದ್ದರು. ೨೪೫ `ವಿಲ್ಫಿ ನೈಟ್'ಗಳು ದೇಶ ವಿದೇಶಗಳಲ್ಲಿ ನಡೆದಿವೆ. ೪೦ ಸಂಗೀತ ಅಲ್ಬಂ, ೬ ಭಕ್ತಿ ಗೀತೆಗಳ ಆಲ್ಬಂ, ೩೭ ದೃಶ್ಯ- ಶ್ರಾವ್ಯ ಸಿ.ಡಿ.ಗಳು, ಒಂದು ಸಂಗೀತೋ ಪಕರಣ ಸಿ.ಡಿ., `ವಿಲ್ಫಿಯವರ ಆಯ್ದ ಹಾಡುಗಳ' ೯ ಸಂಗ್ರಹಗಳು ಬಂದಿವೆ. ಅಲ್ಲದೆ ಈ ಎಲ್ಲ ಗೀತೆಗಳ, ಭಕ್ತಿ ಗೀತೆಗಳ ಮತ್ತು ಚಿತ್ರ ಗೀತೆ ಒಳಗೊಂಡ `ವಿಲ್ಫಿ ಗಾಯ್ತಾ' (ವಿಲ್ಫಿ ಹಾಡುತ್ತಾರೆ) ಎಂಬ ಗ್ರಂಥ ಪ್ರಕಟವಾಗಿದ್ದು, ೪ ಆವೃತ್ತಿಗಳು ಹೊರ ಬಂದಿವೆ.
ಮೈಲಿಗಲ್ಲುಗಳು
೧೯೫೯-೧೯೭೦ರ ಅವಧಿಯಲ್ಲಿ ವಿಲ್ಫಿ ಅವರ ಸಂಗೀತ ಕಾರ್ಯಕ್ರಮಗಳು, ರಚಿಸಿದ ನಾಟಕಗಳು ಮಂಗಳೂರು, ಮುಂಬಯಿ ನಗರಗಳಲ್ಲಿ ಪ್ರದರ್ಶನ ಗೊಂಡಿದ್ದವು. ೧೯೮೧ರಲ್ಲಿ ಅವರ ಸಂಗೀತ ಸಂಜೆಯ ೫೦ನೇ ಪ್ರದರ್ಶನ, ೧೯೮೮ರಲ್ಲಿ ೧೦೦ನೇ ಪ್ರದರ್ಶನ, ೧೯೯೯ರಲ್ಲಿ ೨೦೦ನೇ ಪ್ರದ ರ್ಶನ, ೨೦೦೫ರಲ್ಲಿ ಕೆನಡಾದಲ್ಲಿ ವಿಲ್ಫಿ ನೈಟ್, ೨೦೦೮ರಲ್ಲಿ ೨೪೫ನೇ ವಿಲ್ಫಿ ನೈಟ್ ಜರಗಿವೆ.
ಮಂಗಳೂರು ಮತ್ತು ಮುಂಬಯಿ ಆಕಾಶವಾಣಿಗಳಲ್ಲಿ, ಬೆಂಗಳೂರು ದೂರದರ್ಶನದಲ್ಲಿ ಅವರ ಸಂಗೀತ ಕಾರ್ಯಕ್ರಮಗಳು ಪ್ರಸಾರವಾಗಿವೆ. ಅವರು ಬರೆದ `ಆಯ್ದ ಕೊಂಕಣಿ ಗೀತೆಗಳ ಪುಸ್ತಕ' ೯ ಆವೃತ್ತಿಗಳಲ್ಲಿ ಪ್ರಕಟವಾಗಿದೆ. `ಆಯ್ದ ಕಥೆಗಳು' ಮತ್ತು `ಪಿಂತ್ರಾಂ' ಕಥಾ ಸಂಕಲನ ಹೊರ ತಂದಿದ್ದರು.
ಪ್ರಶಸ್ತಿ/ ಪುರಸ್ಕಾರಗಳು
೧೯೭೧ರಲ್ಲಿ ಮಂಗಳೂರಿನ ಬಿಷಪ್ ಬಾಸಿಲ್ ಡಿ'ಸೋಜಾ ಅವರು ವಿಲ್ಫಿ ರೆಬಿಂಬಸ್ ಅವರನ್ನು `ಕೊಂಕಣ್ ಕೊಗುಳ್' (ಕೊಂಕಣಿ ಕೋಗಿಲೆ) ಬಿರುದನ್ನಿತ್ತು ಸಮ್ಮಾನಿಸಿದ್ದರು. ೧೯೯೧ರಲ್ಲಿ ಕರ್ನಾ ಟಕ ಸರಕಾರದಿಂದ `ರಾಜ್ಯೋತ್ಸವ ಪ್ರಶಸ್ತಿ' ಮತ್ತು ಅದೇ ವರ್ಷ ಅಮೆರಿಕದ ಇಂಟರ್‌ನ್ಯಾಶ ನಲ್ ಓರಿಯೆಂಟೇಶನ್ ಸೆಂಟರ್ ಸಂಸ್ಥೆಯಿಂದ `ಅವಾರ್ಡ್ ಆಫ್ ರೆಕೊಗ್ನಿಶನ್', ೧೯೯೨ರಲ್ಲಿ ಅಬುಧಾಬಿಯ ಕೊಂಕಣಿ ಸಂಸ್ಥೆಗಳಿಂದ `ಸಂಗೀತ ಚಕ್ರವರ್ತಿ' ಬಿರುದು, ೧೯೯೬ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪ್ರಥಮ ವರ್ಷದ ಕೊಂಕಣಿ ಸಂಗೀತ ಪುರಸ್ಕಾರ, ೧೯೯೮ರಲ್ಲಿ ದುಬಾನ `ನಮ ತುಳುವೆರ್' ಸಂಸ್ಥೆಯಿಂದ `ತುಳುವರ ಕೋಗಿಲೆ' ಪ್ರಶಸ್ತಿ, ೧೯೯೯ರಲ್ಲಿ ಕುವೈಟ್ ಕೊಂಕಣಿ ಸಂಸ್ಥೆಯಿಂದ `ಕೊಂಕಣಿ ಕಲಾ ರತ್ನ' ಹಾಗೂ `ಶತಮಾನದ ವ್ಯಕ್ತಿ' ಪುರಸ್ಕಾರ, ೨೦೦೬ ರಲ್ಲಿ ಪ್ರತಿಷ್ಠಿತ ಸಂದೇಶ ಸಾಹಿತ್ಯ ಪ್ರಶಸ್ತಿ, ೨೦೦೭ರಲ್ಲಿ ಯುಎಇ ಕೊಂಕಣಿ ಲೇಖಕರ ವೇದಿಕೆ ಯಿಂದ `ದಾಯ್ಜಿ' ಪುರಸ್ಕಾರ ಲಭಿಸಿತ್ತು.
೨೦೦೯ರಲ್ಲಿ ಮಾಂಡ್ ಸೊಭಾಣ್ ಸಂಸ್ಥೆಯು `ಜೀವಮಾನದ ಸಾಧನೆ'ಗಾಗಿ ಕೊಂಕಣಿ ಗ್ಲೋಬಲ್ ಮ್ಯೂಸಿಕ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು, ವಿಲ್ಫಿ ಅವರು ಈ ಪ್ರಶಸ್ತಿ ಮೊತ್ತವನ್ನು ಕೊಂಕಣಿ ಕೆಲಸಗಳಿಗೆ ವಿನಿಯೋಗಿಸಲು ಮಾಂಡ್ ಸೊಭಾಣ್ ಸಂಸ್ಥೆಗೇ ಹಿಂದಿರುಗಿಸಿದ್ದರು.
೨೦೧೦ ಜ. ೩೧ರಂದು ಬೆಂಗಳೂರಿನ ಫೆಡರೇಶನ್ ಆಫ್ ಕರ್ನಾಟಕ ಕ್ಯಾಥೊಲಿಕ್ ಅಸೋಸಿ ಯೇಶನ್ `ಶ್ರೇಷ್ಠ ಕಲಾವಿದ' ಪ್ರಶಸ್ತಿ ನೀಡಿ ಗೌರವಿಸಿದೆ.
ಯುನಾಟೆಡ್ ಯಂಗ್‌ಸ್ಟರ್‍ಸ್ ಕೊಂಕಣಿ ಸಾಂಸ್ಕೃತಿಕ ಸಂಘದ ಸ್ಥಾಪಕರಾಗಿದ್ದ ಅವರು ೨೦೦೨-೨೦೦೫ ಅವಧಿಯಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು.
ಚಲನ ಚಿತ್ರ: ೧೯೭೭ರಲ್ಲಿ ಚಿತ್ರೀಕರಣಗೊಂಡ `ಮೋಗ್ ಆನಿ ಮಯ್ಪಾಸ್', ೧೯೯೬ರಲ್ಲಿ `ಬೊ ಗ್ಸಾಣೆ', ೧೯೮೮ರಲ್ಲಿ `ಕಾಜಾರಾ ಉಪ್ರಾಂತ್', ೨೦೦೫ರಲ್ಲಿ `ಪಾದ್ರಿ' ಕೊಂಕಣಿ ಚಲನ ಚಿತ್ರಗಳಿಗೆ ಸಾಹಿತ್ಯ ಮತ್ತು ಸಂಗೀತ ರಚನೆ ಮಾಡಿದ್ದರು.
ಸಂಗೀತ ಕುಟುಂಬ
ಅರ್ಧ ಶತಮಾನದ ಸಂಗೀತ ಜೈತ್ರ ಯಾತ್ರೆಯನ್ನು ಮುಗಿಸಿದ ವಿಲ್ಫಿರೆಬಿಂಬಸ್ ಅವರದು ಸಂಗೀತ ಕುಟುಂಬ. ಪತ್ನಿ, ಪುತ್ರ, ಪುತ್ರಿ-ಎಲ್ಲರೂ ಸಂಗೀತ ಕಲಾವಿದರೇ ಆಗಿದ್ದಾರೆ. ಪತ್ನಿ ಮೀ ನಾ ರೆಬಿಂಬಸ್ `ಕೊಂಕಣ್ ಮೈನಾ' ಎಂದೇ ಪ್ರಸಿದ್ಧರಾಗಿದ್ದಾರೆ. ಪುತ್ರ ವಿಶ್ವಾಸ್ ಮತ್ತು ಪುತ್ರಿ ವೀಣಾ ಅವರು ಕೂಡಾ ಗಾಯಕರಾಗಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-09 00:00:00
|
|
| ಗಣೇಶ ರೈ , ಕೊಡಗು ಶಾರ್ಜಾ | 2010-03-10 | | ಕೊಂಕಣಿ ತುಳು ಭಾಷೆಯನ್ನು ಜನ್ಮಭೂಮಿಯಿಂದ ವಿಶ್ವದಾದಂತ್ಯ ತನ್ನ ಸುಮಧುರ ಕಂಠಶ್ರೀಯಿಂದ ಸಂಗೀತದ ಸೇವೆಯನ್ನು ಮಾಡಿದ ಕೊಂಕಣ್ ಕೊಗಿಲೆಯ ಭೌತಿಕ ದೇಹ ಮರೆಯಾದರೂ, ಧ್ವನಿಸುರುಳಿಯ ಮೂಲಕ ತನ್ನ ಗುರುತನ್ನು ಬಿಟ್ಟು ಹೋಗಿದ್ದು ಜನಮಾನಸದಲ್ಲಿ ಮರೆಯದೆ ಉಳಿಯುವ ವಿಲ್ಫಿ ರೆಮಿಂಬಸ್ ರವರಿಗೆ ಸಮಸ್ತ ಕಲಾಭಿಮಾನಿಗಳ ಪರವಾಗಿ ಗೌರವ ಪೂರ್ವಕ ಅಂತಿಮ ನಮನಗಳು. |
| Satish Edneer, Edneer, Kasaragod / Bahrain | 2010-03-09 | | May the soul rest in peace. |
|