ಮು೦ಬೈ: ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುತ್ತಿರುವ ಲಾಲೂ ವಿರುದ್ದ ಪ್ರತಿಭಟನೆ |
ಪ್ರಕಟಿಸಿದ ದಿನಾಂಕ : 2010-03-09
ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುತ್ತಿರುವ ಆರ್‍ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವರ ಪ್ರತಿಕ್ರತಿಯನ್ನು ಕನ್ನಡತಿ ಶ್ರೀಮತಿ ಜನೆಟ್ ಡಿಸೋಜಾ ಮತ್ತು ಕಾ೦ಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತರು ಮು೦ಬೈಯಲ್ಲಿ ಸೋಮವಾರ ದಹಿಸಿದರು.

ಮಹಿಳಾ ದಿನಾಚರಣೆಯ ದಿನದ೦ದು ಮಹಿಳೆಯರು ತಮ್ಮ ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಸರಕಾರದ ವಿರುದ್ದ ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.

ಮಹಿಳಾ ಮೀಸಲಾತಿ ವಿರುದ್ದ ಸಮರ ಸಾರಿದ ಲಾಲು
ಪಾಟ್ನಾ, ಮಾ.೮: ಮಹಿಳಾ ಮೀಸಲಾತಿ ಮಸೂದೆಯ ವಿರುದ್ದ ತಾನು ಅಮೂಲಾಗ್ರವಾಗಿ ಹೋರಾಡಲಿದ್ದೇನೆ ಎಂದು ಆರ್‌ಜೆಡಿಯ ವರಿಷ್ಠ ಲಾಲು ಪ್ರಸಾದ್ ಯಾದವ್ ರವಿವಾರ ಘೋಷಿಸಿದ್ದಾರೆ.
``ಯುದ್ದ ಯೋಗ್ (ಇದೊಂದು ಯುದ್ದವಾಗಲಿದೆ)" ಎಂದು ಅವರು ಗುಡುಗಿದರು ಹಾಗೂ ಈ ಮಸೂದೆಯ ವಿರುದ್ದ ಇತರ ಹಿಂದುಳಿದ ವರ್ಗದ ಪಡೆ ಯುದ್ದ ಸಾರಲಿದೆ ಎಂದು ಹೇಳಿದ್ದಾರೆ. ಪ್ರಸಕ್ತ ಮಾದರಿಯಲ್ಲೇ ಮಸೂದೆಗೆ ಮತ ನೀಡುವಂತೆ ತಮ್ಮ ಸಂಸದರಿಗೆ ಸಚೇತಕಾಜ್ಞೆ ಜಾರಿಗೊಳಿಸುವ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ `ಚಾರಿತ್ರಿಕ ಪ್ರಮಾದ' ಎಸಗಿದೆ ಎಂದು ಲಾಲು ಹೇಳಿದ್ದಾರೆ.
``ಮಹಿಳೆಯರ ಮತ ಸಿಗುತ್ತದೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಭಾವಿಸಿದರೆ, ಅದು ತಪ್ಪು. ಇದು ಪುರುಷ ಪ್ರಧಾನ ಸಮಾಜ. ನಾನು ನನ್ನ ಪತ್ನಿ ರಾಬ್ರಿ ದೇವಿಯಲ್ಲಿ ನಿರ್ದಿಷ್ಟ ಪಕ್ಷಕ್ಕೆ ಮತ ಹಾಕು ಎಂದು ಕೇಳಿಕೊಂಡರೆ, ಬೇರೊಂದು ಪಕ್ಷಕ್ಕೆ ಮತ ಹಾಕುತ್ತಾರೆ ಎಂದು ನಾವು ಭಾವಿಸ ಬಹುದೇ" ಎಂದು ಅವರು ಪತ್ರಕರ್ತರನ್ನು ಪ್ರಶ್ನಿಸಿದರು. ಒಂದು ವೇಳೆ ಮಹಿಳೆಯರಿಗೆ ಮೀಸ ಲಾತಿ ನೀಡಿದರೆ, ಈ ಮೀಸಲಾತಿಯಲ್ಲಿ ಹಿಂದುಳಿದವರಿಗೆ ಒಳ ಮೀಸಲಾತಿ ನೀಡಬೇಕು ಎಂದು ಲಾಲು ಹೇಳಿದ್ದಾರೆ.
ಮಹಿಳಾ ಮೀಸಲಾತಿಯಲ್ಲಿ ಅಲ್ಪಸಂಖ್ಯಾತ, ಹಿಂದುಳಿದ ಜಾತಿ, ದಲಿತರು ಹಾಗೂ ಬುಡಕಟ್ಟು ಗಳಿಗೆ ಸೇರಿದ ಮಹಿಳೆಯರ ಮುಖ ಕಾಣಬೇಕು. ತಮ್ಮ ಸ್ವ ಸಾಮರ್ಥ್ಯದಿಂದ ಶಾಸಕಾಂಗಕ್ಕೆ ಪ್ರವೇಶಿಸಲು ಸಾದ್ಯವಾಗಬೇಕು ಎಂದು ಅವರು ತಿಳಿಸಿದ್ದಾರೆ.
ಮಸೂದೆಯನ್ನು ಪರಿಚಯಿಸುವ ಮೂಲಕ ಮುಖ್ಯ ವಿಷಯಗಳಾದ ಬೆಲೆ ಏರಿಕೆ, ನಿರುದ್ಯೋಗ, ಪ್ರಾದೇಶಿಕತೆಯ ಬೆಳವಣಿಗೆ ಹಾಗೂ ರಾಷ್ಟ್ರೀಯ ಭದ್ರತಾ ಬೆದರಿಕೆ ಯಂತಹ ವಿಚಾರಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಲಾಲು ಟೀಕಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಚಿತ್ರ-ರೋನ್ಸ್ ಬ೦ಟ್ವಾಳ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-09 00:00:00
|
|
|