ಮು೦ಬೈ: ರಾಮಯ್ಯ ರೈಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2010-03-09
ಮುಂಬಯಿ, ಮಾ. ೮: ನಗರದ ಹಿರಿಯ ಯಕ್ಷಗಾನ ಕಲಾವಿದ ರಾಮಯ್ಯ ರೈ ಅವರಿಗೆ ಕರ್ನಾ ಟಕ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.
ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಪ್ರಬುದ್ಧ ಕಲಾವಿದರಾಗಿ ದಶಕಗಳಷ್ಟು ಕಾಲ ಕಲಾಸೇವೆಗೈದು ಇದೀಗ ಆನಾರೋಗ್ಯದಿಂದ ನಿವೃತ್ತರಾಗಿದ್ದಾರೆ. ಅವರ ಋತುಪರ್ಣ, ಕರ್ಣ, ಅತಿಕಾಯ, ಕೃಷ್ಣ ಮೊದಲಾದ ಪೌರಾಣಿಕ ಪ್ರಸಂಗಗಳ ಪಾತ್ರಗಳು ಕಲಾರಸಿಕರ ಮನಸೂರೆ ಗೊಂಡಿವೆ.
ಇದು ಹೊರನಾಡ ಕಲಾವಿದರಿಗೆ ಲಭಿಸಿರುವ ಅಕಾಡಮಿಯ ಪ್ರಥಮ ಪ್ರಶಸ್ತಿಯೂ ಆಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾ. ೨೧ರಂದು ಧರ್ಮಸ್ಥಳದಲ್ಲಿ ನಡೆಯಲಿದ್ದು, ಪ್ರಶಸ್ತಿಯು ಹತ್ತು ಸಾವಿರ ರೂ. ನಗದು, ಸ್ಮರಣಿಕೆ ಹಾಗೂ ಸಮ್ಮಾನ ಪತ್ರವನ್ನೊಳಗೊಂಡಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಎಚ್. ಬಿ. ಎಲ್ ರಾವ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-09 00:00:00
|
|
|