| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಮಹಿಳಾ ಮಸೂದೆ: ಶಾಸಕರ ಎದೆಯಲ್ಲಿ ಡವ...ಡವ! |
ಪ್ರಕಟಿಸಿದ ದಿನಾಂಕ : 2010-03-09
ಬೆಂಗಳೂರು, ಮಾ.೮: ರಾಷ್ಟ್ರಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಬಂದರೆ ರಾಜ್ಯದ ಎಪ್ಪತ್ನಾಲ್ಕು ವಿಧಾನಸಭಾ ಕ್ಷೇತ್ರಗಳು ಮಹಿಳೆಯರ ವಶಕ್ಕೆ ಹೋಗಲಿದ್ದು ಇದರ ಪರಿಣಾಮವಾಗಿ ಸಚಿವರಾದ ಶ್ರೀರಾಮುಲು, ಮುರುಗೇಶ್ ನಿರಾಣಿ, ಜಗದೀಶ್ ಶೆಟ್ಟರ್, ಗೋವಿಂದ ಕಾರ್ಜೋಳ್, ಶಿವನಗೌಡ ನಾಯಕ್ ಹಾಗೂ ಶಿವರಾಜ್ ತಂಗಡಗಿ ಸೇರಿದಂತೆ ಹಲ ಪ್ರಮುಖರು ಬಲಿಯಾಗುವ ಸಾಧ್ಯತೆಗಳಿವೆ.
ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಬಂದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ೨೨೪ ಕ್ಷೇತ್ರಗಳ ಪೈಕಿ ೭೪ ಕ್ಷೇತ್ರಗಳಲ್ಲಿ ಮಹಿಳೆಯರು ವಿಧಾನಸಭೆಗೆ ಆರಿಸಿ ಬರಲಿದ್ದು, ಇದಕ್ಕಾಗಿ ಮೀಸಲು ಪಟ್ಟಿಗೆ ಸೇರುವ ಕ್ಷೇತ್ರಗಳ ಗಣನೆ ಈಗಾಗಲೇ ಪ್ರಾರಂಭವಾಗಿದೆ. ರಾಜ್ಯ ಹಾಗೂ ದೇಶಾದ್ಯಂತ ಮೀಸಲು ಮಸೂದೆ ಹೊಸ ಕ್ರಾಂತಿಯನ್ನೇ ಹುಟ್ಟು ಸೃಷ್ಟಿಸಲಿದೆ.
ಶೇ.೭೯.೪೯ಕ್ಕಿಂತ ಹೆಚ್ಚಿನ ಮಹಿಳಾ ಮತದಾರರು ಇರುವ ವಿಧಾನಸಭಾ ಕ್ಷೇತ್ರಗಳು ಮೀಸಲು ಕ್ಷೇತ್ರಗಳಾಗಿ ಪರಿವರ್ತನೆಯಾಗಲಿದ್ದು ಇದರ ಪರಿಣಾಮವಾಗಿ ೬ ಮಂದಿ ಸಚಿವರು ಸೇರಿದಂತೆ ಹಲವು ಪ್ರಮುಖರು ತಮ್ಮ ಕ್ಷೇತ್ರಗಳನ್ನು ಕಳೆದುಕೊಳ್ಳಲಿದ್ದಾರೆ.
ವಿಚಿತ್ರವೆಂದರೆ ಉತ್ತರ ಕನ್ನಡ, ಬೀದರ್, ಬಿಜಾಪುರ ಜಿಲ್ಲೆಗಳಲ್ಲಿ ಯಾವುದೇ ಬದಲಾವಣೆಯಿಲ್ಲ. ಏಕೆಂದರೆ ಇಲ್ಲೆಲ್ಲಾ ಮಹಿಳಾ ಮತದಾರರ ಸಂಖ್ಯೆ ನಿಗದಿ ಪಡಿಸಿರುವ ಮಾರ್ಗಸೂಚಿಗಿಂತ ಕಡಿಮೆಯಿದೆ.
ಉಳಿದಂತೆ ತುಮಕೂರು ಜಿಲ್ಲೆಯ ಕುಣಿಗಲ್, ತಿಪಟೂರು, ತುರುವೇಕರೆ, ಮೈಸೂರಿನ ನರಸಿಂಹರಾಜಾ (ತನ್ವೀರ್ ಸೇಠ್) ಕೃಷ್ಣರಾಜಾ (ರಾಮದಾಸ್) ಚಾಮರಾಜ (ಶಂಕರಲಿಂಗೇಗೌಡ) ಹಾಗೂ ಕೃಷ್ಣರಾಜ ನಗರ (ಸಾರಾ ಮಹೇಶ) ಕ್ಷೇತ್ರಗಳು ಮಹಿಳೆಯರ ಪಾಲಿಗೆ ಹೋಗಲಿವೆ.
ಮಂಡ್ಯ ಜಿಲ್ಲೆಯಲ್ಲಿ ಶ್ರೀರಂಗಪಟ್ಟಣ (ರಮೇಶ ಬಂಡೀಸಿದ್ದೇಗೌಡ) ಮಂಡ್ಯ(ಶ್ರೀನಿವಾಸ್) ನಾಗಮಂಗಲ (ಸುರೇಶ್ ಗೌಡ) ಮೇಲ್ಕೋಟೆ (ಪುಟ್ಟರಾಜು) ಅವರ ಕ್ಷೇತ್ರಗಳು ಮಹಿಳೆಯರ ಪಾಲಿಗೆ ಹೋಗಲಿದ್ದು ಉಳಿದಂತೆ ಮದ್ದೂರು ವಿಧಾನಸಭಾ ಕ್ಷೇತ್ರವೂ ಮಹಿಳಾ ಕ್ಷೇತ್ರವಾಗಿ ಮೀಸಲಾಗಲಿದೆಯಾದರೂ ಅಲ್ಲಿರುವುದು ಕಲ್ಪನಾ ಸಿದ್ದರಾಜು ಅವರಾದ್ದರಿಂದ ಅವರಿಗೆ ಕ್ಷೇತ್ರ ಕೈಬಿಟ್ಟು ಹೋಗುವುದಿಲ್ಲ.
ರಾಯಚೂರು-ಕೊಪ್ಪಳದ ವ್ಯಾಪ್ತಿಯಲ್ಲಿರುವ ಕ್ಷೇತ್ರಗಳ ಪೈಕಿ ಗಂಗಾವತಿ, ಕೊಪ್ಪಳ, ಕನಕಗಿರಿ, ರಾಯಚೂರು ಗ್ರಾಮೀಣ, ಮಸ್ಕಿ, ಮಾನ್ವಿ, ಸಿಂಧನೂರು, ದೇವದುರ್ಗ, ಲಿಂಗಸೂಗೂರು ಕ್ಷೇತ್ರಗಳು ಮಹಿಳೆಯ ವಶಕ್ಕೆ ಹೋಗಲಿದ್ದು ಇದರ ಪರಿಣಾಮವಾಗಿ ಕನಕಗಿರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಕ್ಕರೆ ಖಾತೆ ಸಚಿವ ಶಿವರಾಜ ತಂಗಡಗಿ ಹಾಗೂ ಗ್ರಂಥಾಲಯ ಖಾತೆ ಸಚಿವ ಶಿವನಗೌಡ ನಾಯಕ್ ಕ್ಷೇತ್ರ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಮಡಿಕೇರಿ ಮಹಿಳೆಯ ಪಾಲಿಗೆ ದಕ್ಕಲಿದ್ದು, ಹುಬ್ಬಳ್ಳಿ-ಧಾರವಾಡ ಪೂರ್ವ ಹಾಗೂ ಹುಬ್ಬಳ್ಳಿ ಧಾರವಾಡ ಕೇಂದ್ರ (ಜಗದೀಶ್ ಶೆಟ್ಟರ್) ವಿಧಾನಸಭಾ ಕ್ಷೇತ್ರಗಳು ಮಹಿಳೆಯ ಕೈಗೆ ದಕ್ಕಲಿವೆ.
ಮುದೋಳ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಣ್ಣ ನೀರಾವರಿ ಸಚಿವ ಗೋವಿಂದ ಕಾರ್ಜೋಳ್, ಬೀಳಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕೂಡಾ ಗಂಡಾಂತರ ಎದುರಿಸುತ್ತಿದ್ದಾರೆ.
ಯಮಕನ ಮರಡಿ, ಬೆಳಗಾಂ ಉತ್ತರ, ಬೆಳಗಾಂ ಗ್ರಾಮೀಣ, ಗೋಕಾಕ್, ಬಾದಾಮಿ, ಹುನಗುಂದ, ಜಮಖಂಡಿ, ಬಾಗಲಕೋಟೆ ಕ್ಷೇತ್ರಗಳು ಮೀಸಲಾತಿಗೆ ಒಳಗಾಗುತ್ತಿದ್ದು ಅರಭಾವಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಾಲಚಂದ್ರ ಜಾರಕಿಹೊಳಿಗೂ ವಲಸೆ ಹೋಗುವ ಅನಿವಾರ್ಯತೆ ಎದುರಾಗಿ ಬಿಟ್ಟಿದೆ.
ಗುರುಮಿಟ್ಕಲ್, ಚಿತಾಪೂರ್, ಯಾದಗಿರಿ, ಸೇಡಂ, ಷಹಾಪುರ, ಜೇವರ್ಗಿ, ಶೋರಾಪುರ, ಶಿರಗುಪ್ಪ, ಕಂಪ್ಲಿ, ಹಿರಿಯೂರು, ಚಿತ್ರದುರ್ಗ ಕ್ಷೇತ್ರಗಳು ಮೀಸಲಾಗುತ್ತಿದ್ದು ಬಳ್ಳಾರಿಯಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಹಾಗೂ ಬಳ್ಳಾರಿ ನಗರದಲ್ಲಿ ಕೆ.ಎಂ. ಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಗಂಟು ಮೂಟೆ ಕಟ್ಟುವ ಪರಿಸ್ಥಿತಿ ಎದುರಾಗಲಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ (ಬೇಳೂರು ಗೋಪಾಲಕೃಷ್ಣ) ಭದ್ರಾವತಿ (ಬಿ.ಕೆ. ಸಂಗಮೇಶ್) ಹಾಗೂ ತೀರ್ಥಹಳ್ಳಿಯ ಪಟಮಕ್ಕಿ ರತ್ನಾಕರ್ ಅವರಿಗೂ ಮಹಿಳೆಯರ ಹೊಡೆತ ಬೀಳಲಿದೆ.
ಬೈಂದೂರು, ಕಾರ್ಕಳ, ಕಾಪು, ಕುಂದಾಪುರ, ಉಡುಪಿ, ಮೂಡಿಗೆರೆ, ಶೃಂಗೇರಿ ಕ್ಷೇತ್ರಗಳು ಮೀಸಲಾಗಲಿದ್ದು ಚಿಕ್ಕಮಗಳೂರಿನ ಸಿ.ಟಿ. ರವಿ ಕೂಡಾ ಮಹಿಳೆಯರಿಗೆ ಕ್ಷೇತ್ರ ಬಿಟ್ಟು ಕೊಡುವ ಅನಿವಾರ್ಯತೆ ಇದೆ.
ಕುಣಿಗಲ್, ತಿಪಟೂರು, ತುರುವೇಕೆರೆ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕೆ.ಜಿ.ಎಫ್. ಶ್ರೀನಿವಾಸಪುರ, ಚನ್ನಪಟ್ಟಣ, ಸಕಲೇಶಪುರ, ಹಾಸನ, ಶ್ರವಣಬೆಳಗೊಳ, ಅರಸೀಕೆರೆ, ಮೂಡಬಿದ್ರೆ, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮಂಗಳೂರು ಹಾಗೂ ಬಂಟ್ವಾಳ ಕ್ಷೇತ್ರಗಳು ಮಹಿಳೆಯರ ಪಾಲಿಗೆ ಹೋಗಲಿದ್ದರೆ ಬೆಂಗಳೂರಿನಲ್ಲಿ ಶಾಂತಿ ವಿಧಾನಸಭಾ ಕ್ಷೇತ್ರವೊಂದೇ ಮಹಿಳೆಯರ ಪಾಲಿಗೆ ಹೋಗಲಿದೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-09 00:00:00
|
|
|
|
| »ಶೋಭಾ ತಂದೆ ವೈಕುಂಠಕ್ಕೆ ಯಡ್ಡಿ ಪಟಾಲಂ ಹಾಜರ್ | | »ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ' | | »ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು? | | »ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ | | »ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated) | | »ಮೈಸೂರು: ತೆರೆದ ತೊಟ್ಟಿಗೆ ಬಿದ್ದು ಆರು ವರ್ಷದ ಬಾಲಕ ಸಾವು | | »ಮಂಡ್ಯ: ನಗರಸಭೆ ಸಾವಾನ್ಯ ಸಭೆಗೆ ಅಡ್ಡಿ: ಜೆಡಿಎಸ್‌ನ ನಾಲ್ವರ ಅವಾನತು | | »ತುಮಕೂರಿನಲ್ಲಿ ಹೆಣ್ಣು ಮಕ್ಕಳ ಪತ್ತೆ: ಅನಾಥ ಮಕ್ಕಳ ಹಿಂದೆ ಭಿಕ್ಷಾಟನಾ ಜಾಲದ ಶಂಕೆ | | »ಮಂಡ್ಯ ಬಳಿ ಕಂದಕಕ್ಕೆ ಬಿದ್ದ ಟೆಂಪೊ: 10 ಮಂದಿಯ ದಾರುಣ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ | | »ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ | | »ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ | | »ಬೋಧಿ ದಮ್ಮ ಬಂತೇಜಿ ಬಿಡುಗಡೆಗೆ ಆಗ್ರಹಿಸಿ ಧರಣಿ | | »ಗಣಿಗಾರಿಕೆ ಸ್ಥಗಿತ : 20,000 ಕೋಟಿ ರು ನಷ್ಟ | | »ಕೆ.ಎಸ್.ಸಿ.ಎ. ಡೆಲ್ ಶಾಲಾ ಟೂರ್ನಿ ಬಳ್ಳಾರಿ ಶಾಲಾ ತಂಡ ಚಾಂಪಿಯನ್ | | »ಮಾಜಿ ಸಚಿವರ ಮೊಂಡು ವಾದ; ಕ್ಷಮೆ ಕೇಳುವಂತಹ ತಪ್ಪು ಮಾಡಿಲ್ಲ | | »ಕಾಂಗ್ರೆಸ್‌ನಂತೆ ನಾವು ಚಿಲ್ಲರೆ ರಾಜಕಾರಣ ಮಾಡಲ್ಲ: ಡಿ.ವಿ. ಸದಾನಂದ ಗೌಡ | | »ತಮಿಳುನಾಡು ರಾಜ್ಯಪಾಲ ರೋಸಯ್ಯರ ಸಂಬಂಧಿ ಮನೋಜ್ ಹತ್ಯೆ ಪ್ರಕರಣ: ಮೂವರು ವಶಕ್ಕೆ | | » ಬನ್ನೂರಮಠ ಲೋಕಾಯುಕ್ತ ಹುದ್ದೆ ನಿರಾಕರಣೆ: ರಾಜ್ಯ ಸರ್ಕಾರ ಯಾರ ಹೆಸರು ಶಿಫಾರಸು ಮಾಡಲಿದೆಂಬ ಕುತೂಹಲ | | »ಬಳೆ ಅತ್ತಿಗುಪ್ಪೆ: ನಿಧಿ ಆಸೆಗೆ ದೇವರ ವಿಗ್ರಹ ಭಗ್ನ | | »ಕುವೆಂಪು ವಿಶ್ವವಿದ್ಯಾಲಯದ 22ನೇ ವಾರ್ಷಿಕ ಘಟಿಕೋತ್ಸವ: ಕಷ್ಟ ಕಾರ್ಪಣ್ಯ; ಆದರೂ ಬಿಡಲಿಲ್ಲ ಚಿನ್ನದ ಬೇಟೆ | | »ನರಗುಂದ, ಅಥಣಿ ಬಂದ್: ಮೈಸೂರು, ಮಂಗಳೂರಿನಲ್ಲಿ ಆಕ್ರೋಶ | | »ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ.. | | »ಭಿಕ್ಷೆ ಎತ್ತಿದ ಹಣದಿಂದ ತುಮಕೂರಿನಲ್ಲಿ ರೇಣುಕಾ ಎಲ್ಲಮ್ಮ ದೇಗುಲ ನಿರ್ಮಿಸಿದ ಮಂಗಳಮುಖಿಯರು | | »ಅಶ್ಲೀಲ ಕಲಾಪಕ್ಕೆ ಸದನ ಬಲಿ | | »ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ | | »ವಿಧಾನಸೌಧದಲ್ಲಿ ಸಚಿವತ್ರಯರಿಂದ ಅಶ್ಲೀಲ ಚಿತ್ರ ವೀಕ್ಷಣೆ: ಸರಕಾರ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ | | »ಹಾಸನ: ವಿಟಿಯು ಕುಲಪತಿ ವಿರುದ್ಧ ಪ್ರತಿಭಟನೆ | | »ಬನ್ನೇರುಘಟ್ಟಕ್ಕೆ ಪಠಾಣ್, ಸಂದೀಪ್ ಪಾಟೀಲ್ ಭೇಟಿ | | »ಪಾವಗಡಕ್ಕೆ ಕುಡಿಯುವ ನೀರಿಗೆ ಆಗ್ರಹಿಸಿ ಪಾದಯಾತ್ರೆ: ‘ಬೆಂಗಳೂರು ಚಲೋ’ಗೆ ವಿದುಕ್ತ ಚಾಲನೆ | | »‘ಬ್ಲೂ ಫಿಲಂ’ ಸಚಿವರ ವಿರುದ್ಧ ಭುಗಿಲೆದ್ದ ಆಕ್ರೋಶ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ; ಶಾಸಕ ಸ್ಥಾನದಿಂದಲೂ ಅನರ್ಹಕ್ಕೆ ಒತ್ತಾಯ | | »ಶಾಸಕತ್ವ ಅನರ್ಹಗೊಳಿಸಲು ಆಗ್ರಹಿಸಿ ಸಿಪಿಐ ಧರಣಿ | | »ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ? | | »ನಾವೇಕೆ ಕ್ಷಮೆಯಾಚಿಸ್ಬೇಕು-ಡೀವಿ; ಕಳಂಕಿತರಿಗೆ ಬಿಜೆಪಿ ಬೆಂಬಲ | | »ಸದನದಲ್ಲಿ ‘ಬ್ಲೂಫಿಲಂ’ ವೀಕ್ಷಣೆ: ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ; ಸಿದ್ದರಾಮಯ್ಯ | | »ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ 'ಕೈ' ಪ್ರತಿಭಟನೆ, ಪ್ರತಿಕೃತಿ ದಹನ | | »ಬಿಬಿಎಂಪಿ ಹಗರಣ:ಎಲ್ಲ ಕಾಮಗಾರಿಗಳ ತನಿಖೆಗೆ ಸರ್ಕಾರ ಆದೇಶ | | »ಐಷಾರಾಮಿ ಪ್ರವಾಸಿ ರೈಲು 'ಗೋಲ್ಡನ್ ಚಾರಿಯಟ್' 'ಹೌಸ್ ಫುಲ್ ಜರ್ನಿ' ಆರಂಭ: ರೈಲಿನಲ್ಲಿ ಅಮೆರಿಕ, ಆಸ್ಟ್ರಿಯಾದ 80 ಪ್ರವಾಸಿಗರು | | »ಅನುದಾನ ಬಿಡುಗಡೆಗೆ ಆಗ್ರಹಿಸಿ ಆಮರಣ ಉಪವಾಸ : ಕಣ್ತೆರೆಯದ ಸರ್ಕಾರ: ಅತಂತ್ರರಾದ ಶಿಕ್ಷಕರು | | »ಯೋಗ ವಿಜ್ಞಾನ ಶಿಬಿರ: ಬಜೆಟ್‌ನಲ್ಲಿ ಯೋಗಕ್ಕೆ ವಿಶೇಷ ಒತ್ತು: ಸಿಎಂ | | »ನನ್ನ ಮೇಲಿನ ಆರೋಪಗಳೆಲ್ಲ ನಿರಾಧಾರ: ಮಾಜಿ ಸಿಎಂ ಯಡಿಯೂರಪ್ಪ ನನ್ನ ಸಂಬಂಧಿಕರಲ್ಲ: ನ್ಯಾ. ಬನ್ನೂರಮಠ ( Update) | | »ಸದನದಲ್ಲಿ ಮೊಬೈಲ್ ಫೋನ್ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್ ಮಂತ್ರಿ ಸ್ಥಾನಕ್ಕೆ ರಾಜಿನಾಮೆ | | »ಹೂವಿನಹಡಗಲಿಯಲ್ಲಿ ಪ್ರತ್ಯೇಕ ದುರಂತ : ಅಪಘಾತದಲ್ಲಿ 8, ತೆಪ್ಪ ಮುಳುಗಿ 5ಸಾವು | | »ಆಧಾರ್ ಕಾರ್ಡ್‌ಗೆ ಲಂಚವೇ ಆಧಾರ: ಸರ್ಕಾರದಿಂದ ತನಿಖೆ ಭರವಸೆ | | »50 ಕೋಟಿ ಯುವಕರಿಗೆ ಕೌಶಲ ತರಬೇತಿ: ಖರ್ಗೆ | | »ಏಡ್ಸ್ ಜಾಗೃತಿ ಜಾಥಾಕ್ಕೆ ಡಾ.ಸಲೀಂ ಚಾಲನೆ | | »ಕಲ್ಲಡ್ಕ ಭಟ್ಟರ ಗಡಿಪಾರಿಗೆ ಒತ್ತಾಯ: ಸದನದಲ್ಲಿ ಕೋಲಾಹಲ; ವಿಪಕ್ಷದಿಂದ ಸಭಾತ್ಯಾಗ | | »ತರಕಾರಿ ಸೇವಿಸಿ; ರೋಗ ತಡೆಗಟ್ಟಿ: ಡಾ.ಎಂ.ಆರ್. ಹುಲಿನಾಯ್ಕರ್ | | »ಸರಕಾರಿ ಜಾಗದಲ್ಲಿ ಅನಧಿಕೃತ ನಾಗರಕಟ್ಟೆ ನಿರ್ಮಾಣ: ಪಿಡಬ್ಲುಡಿ ಇಲಾಖೆಯ ವರ್ತನೆಗೆ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ | | »ಮಂಡ್ಯ: ಮಕ್ಕಳ ಹಬ್ಬದಲ್ಲಿ ಜಿಲ್ಲೆಯ ಸಾಂಸ್ಕೃತಿಕ ಸೊಗಡು ಅನಾವರಣ | | »ವಕ್ಕಲೇರಿ ಮಾರ್ಕಂಡೇಶ್ವರಸ್ವಾಮಿ ಬ್ರಹ್ಮರಥೋತ್ಸವ | |