ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ - ದಾಳಿ ಖಂಡಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿಭಟನೆ. ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹ |
ಪ್ರಕಟಿಸಿದ ದಿನಾಂಕ : 2010-03-08
ಮಂಗಳೂರು,ಫೆ.08:ಮಾ.2ರಂದು ರಾತ್ರಿ ನಗರದ ಪತ್ರಿಕಾ ಕಛೇರಿಗಳ ಮೇಲೆ ದುಷ್ಕರ್ಮಿಗಳು ನಡೆಸಿರುವ ದಾಳಿಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಂದು ಮಂಗಳೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ನಗರದ ಕನ್ನಡ ಪ್ರಭ ಹಾಗೂ ಜಯ ಕಿರಣ ಪತ್ರಿಕಾ ಕಛೇರಿಗೆ ಮಾ.೨ ಮಂಗಳವಾರದಂದು ರಾತ್ರಿ ಮುಸುಕುದಾರಿ ದುಷ್ಕರ್ಮಿಗಳು ಅಕ್ರಮ ಪ್ರವೇಶಗೈದು ದಾಂದಲೇ ನಡೆಸಿದ್ದು, ಮಾತ್ರವಲ್ಲದೇ, ಪೆಟ್ರೋಲ್ ಬಾಂಬ್ ಎಸೆದು ಕಛೇರಿಯ ಕಂಪ್ಯೂಟರ್ ಹಾಗೂ ಇನ್ನಿತರ ಸೊತ್ತುಗಳನ್ನು ನಾಶಪಡಿಸಿ, ಪತ್ರಿಕಾ ಕಛೇರಿಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಶ್ಚಿಮ ವಲಯ ಐಜಿಪಿ ಗೋಪಾಲ್ ಹೊಸೂರ್ ಹಾಗೂ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸುಬ್ರಹ್ಮಣ್ಯೇಶ್ವರ ರಾವ್ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿತ್ತು.ಆದರೆ ಘಟನೆ ನಡೆದು ಐದು ದಿನಗಳದರೂ ಇದುವರೆಗೆ ಯಾವುದೇ ವ್ಯಕ್ತಿಗಳ ಬಂದನವಾಗಿಲ್ಲ.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಪ್ರೆಸ್ ಕ್ಲಬ್‌ನ ಕಾರ್ಯದರ್ಶಿ ಹರೀಶ್ ರೈ ದ.ಕ.ಜಿಲ್ಲೆಯಲ್ಲಿ ಮೂರು ತಿಂಗಳಲ್ಲಿ ಪತ್ರಕರ್ತರ ಮೇಲೆ ಮೂರು ಹಲ್ಲೆ ಪ್ರಕರಣಗಳು ನಡೆದಿವೆ, ಇತ್ತೀಚೆಗೆ ಐದು ದಿನಗಳ ಹಿಂದೆ ಪತ್ರಿಕಾ ಕಛೇರಿಗಳ ಮೇಲೆ ದಾಳಿ ನಡೆಸಿ ಪತ್ರಿಕಾ ಸ್ವಾತಂತ್ರವನ್ನೇ ದಮನ ಮಾಡುವಂತಹ ಪ್ರಕರಣ ನಡೆದಿದೆ, ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿದ್ದರೂ ಬಂಧಿಸದಿರುವುದು ಜಿಲ್ಲಾ ಪೊಲೀಸ್ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು. ಇನ್ನೆರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ತೀವ್ರ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಜಿಲ್ಲಾಧಿಕಾರಿಗಳಿಗೆ ನೀಡುವ ಮನವಿಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಉಪಧ್ಯಾಕ್ಷ ವೆಂಕಟೇಶ್ ಬಂಟ್ವಾಳ್ ವಾಚಿಸಿದರು.
ಮಂಗಳೂರಿನ ಪತ್ರಿಕೆಯ, ಚಾನೆಲ್ ಗಳ ಹಾಗೂ ವೆಬ್ ಮೀಡಿಯಾಗಳ ಪತ್ರಕರ್ತರು ಮತ್ತು ಸಂಪಾದಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಈ ಬಗ್ಗೆ ದ.ಕ.ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವರದಿಯ ವಿವರಗಳು |
 |
ಕೃಪೆ : ಕರೀಶ್ಮ ಶೆಟ್ಟಿ.ಎಸ್.ಕಾಪಿಕಾಡ್ ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-08
|
|
| sekara.udupi, udupi | 2010-03-09 | | pathrika swatantya ondo somudayada acharana swatantyake addipadisidare a samudaya nimma pathrikyannu nasha madudaralli yaradu matilla BEKARFUL............. |
|