ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜುವೆಲ್ಲರ್ಸ್‌ ವ್ಯಾಪಾರಿಯ ಹತ್ಯೆ; ಮೂವರು ಆರೋಪಿಗಳ ಸೆರೆ
Latest news item ಮಂಡ್ಯ ಬಳಿ ಕಂದಕಕ್ಕೆ ಬಿದ್ದ ಟೆಂಪೊ: 10 ಮಂದಿಯ ದಾರುಣ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಮಹಿಳಾ ಮೀಸಲಾತಿ: ಲೋಕಸಭೆ, ರಾಜ್ಯಸಭೆಯಲ್ಲಿ ಕೋಲಾಹಲ; ಸಮಾಜವಾದಿ, ಆರ್‌ಜೆಡಿ ಬೆಂಬಲ ವಾಪಸ್; ಮಸೂದೆ ಮುಂದಕ್ಕೆ; ಪ್ರಧಾನಿಯಿಂದ ಸರ್ವಪಕ್ಷ ಸಭೆ...

ಮಹಿಳಾ ಮಸೂದೆ ಕುರಿತಂತೆ ಎಸ್‌ಪಿ(ಸಮಾಜವಾದಿ ಪಕ್ಷ),ಆರ್‌ಜೆಡಿ(ರಾಷ್ಟ್ರಿಯ ಜನತಾದಳ), ಜೆಡಿ(ಯು) ಸದಸ್ಯರು ರಾಜ್ಯಸಭೆ ಮತ್ತು ಲೋಕ ಸಭೆಗಳಲ್ಲಿ ಕೋಲಾಹಲ ಮೂಡಿಸಿದಾಗ ಕಲಾಪವನ್ನು ಮುಂದೂಡ ಬೇಕಾ ಯಿತು.ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಜೆ ಸರ್ವ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ.   


ನವದೆಹಲಿ(ಪಿಟಿಐ): ಮಹಿಳಾ ಮಸೂದೆ ಅಂಗೀಕಾರ ಕುರಿತಂತೆ ಸೋಮವಾರ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ವಿವಿಧ ಪಕ್ಷಗಳ ಪ್ರತಿಭಟನೆಯ ಕಾರಣ ಕೋಲಾಹಲ ನಡೆದು ಸಂಜೆಯವರೆಗೆ ಕಲಾಪವನ್ನು ಹಲವು ಬಾರಿ ಮುಂದೂಡಲಾಯಿತು.

ಮಸೂದೆ ಅಂಗೀಕಾರ ಕುರಿತು ಒಮ್ಮತ ಮೂಡಿಸುವ ಸಲುವಾಗಿ, ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಜೆ ಸರ್ವ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ.

 ಈಗಿರುವ ಸ್ವರೂಪದಲ್ಲಿ ಮಸೂದೆಯನ್ನು ಅಂಗೀಕರಿಸಬಾರದೆಂದು ಎಸ್ ಪಿ (ಸಮಾಜವಾದಿ ಪಕ್ಷ), ಆರ್‌ಜೆಡಿ(ರಾಷ್ಟ್ರಿಯ ಜನತಾದಳ), ಮತ್ತು ಜೆಡಿ(ಯು) ಸದಸ್ಯರು ಲೋಕಸಭೆಯಲ್ಲಿ ಘೋಷಣೆಗಳನ್ನು ಕೂಗಿ ಕೋಲಾಹಲ ಉಂಟುಮಾಡಿದ್ದರಿಂದ ಕಲಾಪವನ್ನು ಸಂಜೆಯವರೆಗೆ ಹಲವಾರು ಬಾರಿ ಮೂಂದೂಡಲಾಯಿತು.  
 
 
ಬೆಂಬಲ ವಾಪಸ್: ಈ ಮಸೂದೆಯ ಕಾರಣವಾಗಿ ಸಮಾಜವಾದಿ ಪಕ್ಷ ಮತ್ತು ಆರ್‌ಜೆಡಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆಯಲು ನಿರ್ಧರಿಸಿರುವುದಾಗಿ ತಿಳಿಸಿವೆ.

ತೊಂದರೆ ಇಲ್ಲ: ಆದರೆ, ಎಸ್‌ಪಿಯ 21 ಮಂದಿ ಮತ್ತು ಆರ್‌ಜೆಡಿಯ 4 ಮಂದಿ ಬೆಂಬಲ ವಾಪಸಾತಿಯಿಂದ ಸರ್ಕಾರಕ್ಕೆ ಯಾವುದೆ ತೊಂದರೆ ಇಲ್ಲ ಎಂದು ಸರ್ಕಾರದ ವಕ್ತಾರರು ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯಸಭೆ: ರಾಜ್ಯಸಭೆಯಲ್ಲಿ ಎಸ್.ಪಿ, ಆರ್ ಜೆಡಿ ಮತ್ತು ಜೆಡಿ(ಯು) ಸದಸ್ಯರು ಗದ್ದಲ ಉಂಟುಮಾಡಿದಾಗ ಅಲ್ಲಿಯೂ ಕಲಾಪವನ್ನು ಸಂಜೆಯವರೆಗೆ ಮುಂದೂಡಲಾಯಿತು. ಮಸೂದೆಯ ಪ್ರತಿಗಳನ್ನು  ಹರಿದು ಸಭಾಧ್ಯಕ್ಷರತ್ತ ತೂರಿದ ಪ್ರಕರಣವೂ ನಡೆಯಿತು. ನಂತರ ಆ ಸದಸ್ಯರು ತಮ್ಮ ನಡವಳಿಕೆಯ ಬಗೆಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದರು.

ದಲಿತರ ವಿರೋಧಿ: ಈ ಮಸೂದೆ ರಾಜಕೀಯ ದುರುದ್ದೇಶದಿಂದ ಕೂಡಿದ್ದು ದಲಿತ ಮತ್ತು ಮುಸ್ಲಿಂರ ವಿರೋದಿಯಾಗಿದೆ ಅದ್ದರಿಂದ ನಮ್ಮ ಬೆಂಬಲ ವಾಪಸ್ ಪಡೆದಿದ್ದೇವೆ ಎಂದು ಲಾಲೂ ಪ್ರಸಾದ್ ತಿಳಿಸಿದ್ದಾರೆ. ಅವರ ನಿಲುವನ್ನು ಸಮರ್ಥಿಸಿದ ಮುಲಾಯಂಸಿಂಗ್ ಯಾದವ್ ಅವರು ಆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 ದಲಿತರಿಗೆ, ಅಲ್ಪಸಂಖ್ಯಾತರಿಗೆ ಯಾವುದೆ ತೊಂದರೆ ಆಗುವುದಿಲ್ಲವೆಂದು ಸಚಿವರೊಬ್ಬರು ತಿಳಿಸಿದ್ದಾರೆ.  ಮಹಿಳೆಯರ ಸಾಮಾಜಿಕ ಹಾಗೂ ರಾಜಕೀಯ ಸಬಲೀಕರಣ ಮಾಡುವುದೇ ನಮ್ಮ ಪ್ರಯತ್ನ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಚರ್ಚೆ ನಡೆಯಬೇಕು:

ಈ ನಡುವೆ, ರಾಜ್ಯ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದ ನಂತರವೇ ತಾನು ಮಸೂದೆಯನ್ನು ಬೆಂಬಲಿಸುವುದು ಎಂದು ಬಿಜೆಪಿ ಹೇಳಿದೆ.

ಆಗ್ರಹ: ದಲಿತರು, ಮುಸ್ಲೀಂರು ಮತ್ತು ಇತರೆ ಹಿಂದುಳಿದ ವರ್ಗದವರಿಗೆ ಮಹಿಳಾ ಮೀಸಲಾತಿಯಲ್ಲಿ ಒಳಮೀಸಲಾತಿ ಕಲ್ಪಿಸಬೇಕೆಂದು ಕೆಲವು ಮುಸ್ಲೀಂ ಸಂಘಟನೆಗಳು ಆಗ್ರಹಪಡಿಸಿವೆ

ಕರುಣಾ, ಮಮತಾರೂ ಕೈಕೊಟ್ಟರೆ?; ಇದು ಕಾಂಗ್ರೆಸ್ ಚಿಂತೆ..!   
 
ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ರಾಜ್ಯಸಭೆ ಮತ್ತು ಲೋಕಸಭೆಗಳಲ್ಲಿ ಸರಕಾರದ ಪರ ಲೆಕ್ಕಕ್ಕಿಂತ ಹೆಚ್ಚೇ ಬಹುಮತವಿದ್ದರೂ ರಾಷ್ಟ್ರೀಯ ಜನತಾದಳ ಮತ್ತು ಸಮಾಜವಾದಿ ಪಕ್ಷಗಳು ಸರಕಾರದಿಂದ ಬೆಂಬಲ ವಾಪಸ್ ಪಡೆಯುತ್ತೇವೆ ಎಂದು ಘೋಷಿಸಿದ ತಕ್ಷಣವೇ ವಿಧೇಯಕದ ಮೇಲಿನ ಮತದಾನವನ್ನು ಒಮ್ಮಿಂದೊಮ್ಮೆಲೇ ಮುಂದೂಡಿದ್ದು ಸರಕಾರದ ದೂರದೃಷ್ಟಿಯೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಇಂದು ರಾಜ್ಯಸಭೆಯಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ವಿಧೇಯಕ ಮಂಡನೆಯಾದ ಬಳಿಕ ಮುಲಾಯಂ ಸಿಂಗ್ ಅವರ ಸಮಾಜವಾದಿ ಪಕ್ಷ, ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷ, ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳ ಮತ್ತು ಶರದ್ ಯಾದವ್ ಅವರ ಸಂಯುಕ್ತ ಜನತಾದಳಗಳು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದರೂ ಮಸೂದೆಯ ಮೇಲಿನ ಮತದಾನವನ್ನು ಮುಂದೂಡುವ ಅಗತ್ಯ ಪ್ರಬಲ ಯುಪಿಎ ಸರಕಾರಕ್ಕಿರಲಿಲ್ಲ.

ರಾಜ್ಯಸಭೆಯಲ್ಲಿ ವಿಧೇಯಕವನ್ನು ಚರ್ಚೆಗೊಳಪಡಿಸದೆ ನೇರ ಮತದಾನಕ್ಕೆ ಒಳಪಡಿಸುವ ಅವಕಾಶವಿರುವುದರಿಂದ ಯುಪಿಎ ಸರಕಾರಕ್ಕೆ ಸುಲಭವಾಗಿ ಮಸೂದೆಗೆ ಅಂಗೀಕಾರ ಪಡೆದುಕೊಳ್ಳಬಹುದಿತ್ತು. ಪ್ರತಿರೋಧ ಒಡ್ಡುತ್ತಿರುವ ಪಕ್ಷಗಳು ವಿರುದ್ಧ ಮತದಾನ ಮಾಡಿದರೂ ಕಾಯ್ದೆ ಅಂಗೀಕಾರಕ್ಕೆ ಯಾವುದೇ ಅಡ್ಡಿಯಾಗುತ್ತಿರಲಿಲ್ಲ. ಆದರೂ ಸರಕಾರ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಂದು ಹೆಜ್ಜೆ ಹಿಂದಕ್ಕಿಟ್ಟಿದೆ.

ಡಿಎಂಕೆ, ಟಿಸಿಗಳೂ ಬ್ಲ್ಯಾಕ್‌ಮೇಲ್ ಮಾಡುತ್ತಿವೆ...

ಯುಪಿಎ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ವಿಚಾರದಲ್ಲಿ ಮಗ್ಗುಲ ಮುಳ್ಳಾಗುತ್ತಿರುವ ಕರುಣಾನಿಧಿಯವರ ಡಿಎಂಕೆ ಮತ್ತು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಇತ್ತೀಚಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಕೆಯನ್ನೂ ತೀವ್ರವಾಗಿ ವಿರೋಧಿಸುತ್ತಿವೆ. ಅಲ್ಲದೆ ಈ ಕುರಿತ 2010-11ರ ಸಾಲಿನ ಬಜೆಟ್ ಸದನದಲ್ಲಿ ಇನ್ನೂ ಅಂಗೀಕಾರ ಪಡೆದುಕೊಂಡಿಲ್ಲ.

ಈಗ ಲೆಕ್ಕಕ್ಕಿಲ್ಲ ಎಂದೇ ಮೇಲ್ನೋಟಕ್ಕೆ ಭಾವಿಸಲಾಗುತ್ತಿರುವ ಸಮಾಜವಾದಿ (22) ಮತ್ತು ರಾಷ್ಟ್ರೀಯ ಜನತಾದಳ ಪಕ್ಷಗಳು (4) ತಮ್ಮ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡರೆ, ಅತ್ತ ಯುಪಿಎ ಬಲಾಬಲ ಸುಮಾರು 290ಕ್ಕೆ ಕುಸಿಯುತ್ತದೆ. ಸುಭದ್ರ ಸರಕಾರಕ್ಕೆ ಬೇಕಾಗಿರುವುದು 272 ಮಾತ್ರ. ಲೆಕ್ಕಾಚಾರದ ನಿಟ್ಟಿನಲ್ಲಿ ಇದು ಸರಿಯೆನಿಸುತ್ತದೆ.

ಆದರೆ ಬೆಲೆಯೇರಿಕೆಯನ್ನೇ ಮುಂದಿಟ್ಟುಕೊಂಡು ಡಿಎಂಕೆ (18) ಮತ್ತು ತೃಣಮೂಲ ಕಾಂಗ್ರೆಸ್‌ಗಳು (19) ಬ್ಲ್ಯಾಕ್‌ಮೇಲ್ ಮಾಡಿದರೆ ಆಗ ಸರಕಾರವೇ ಅತಂತ್ರವಾಗಬಹುದು (253ಕ್ಕೆ ಇಳಿಯಬಹುದು) ಎಂಬುದು ಯುಪಿಎ ಸರಕಾರದ ದೂರದೃಷ್ಟಿ. ಇದೇ ಕಾರಣದಿಂದ ಮಹಿಳಾ ಮೀಸಲಾತಿ ವಿಧೇಯಕಕ್ಕೆ ತೀವ್ರ ಪ್ರತಿರೋಧ ತೋರಿಸುತ್ತಿರುವ ಲಾಲೂ ಮತ್ತು ಮುಲಾಯಂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ ಎಂದು ಹೇಳಲಾಗುತ್ತಿದೆ.

ಪ್ರಧಾನಿಯಿಂದ ಸರ್ವಪಕ್ಷ ಸಭೆ...

ಅಂತಾರಾಷ್ಟ್ರೀಯ ಮಹಿಳಾ ದಿನದಂದೇ ಮಹಿಳಾ ಮೀಸಲಾತಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದರೂ, ಅಂಗೀಕಾರಕ್ಕಾಗಿನ ಮತದಾನವನ್ನು ನಾಳೆಯವರೆಗೆ ಮುಂದೂಡಲಾಗಿದೆ.

ಅದಕ್ಕೂ ಮೊದಲು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಸರ್ವಪಕ್ಷಗಳ ಸಭೆಯನ್ನು (ಮಾರ್ಚ್ 9ರಂದು) ಕರೆದಿದ್ದಾರೆ. ಅತೃಪ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಈ ಸಭೆ ಕರೆಯಲಾಗಿದೆ ಎಂದು ಪ್ರಧಾನಿಯವರು ಹೇಳಿಕೊಂಡಿದ್ದಾರೆ.

ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಮಹಿಳಾ ಮೀಸಲಾತಿಯಲ್ಲಿಯೇ ಒಳ ಮೀಸಲಾತಿ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದ್ದು, ಮಹಿಳಾ ಮೀಸಲಾತಿಯನ್ನೇ ನೇರವಾಗಿ ವಿರೋಧಿಸುತ್ತಿಲ್ಲ ಎಂದು ಅತ್ತ ಸಮಾಜವಾದಿ ಮತ್ತು ರಾಷ್ಟ್ರೀಯ ಜನತಾದಳಗಳು ಹೇಳಿರುವುದರಿಂದ ಈಗಿರುವ ಮಸೂದೆಗೆ ಮತ್ತೆ ತಿದ್ದುಪಡಿ ತರುವ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.

ಸಮಾಜವಾದಿ, ಆರ್‌ಜೆಡಿ ಬೆಂಬಲ ವಾಪಸ್; ಮಸೂದೆ ಮುಂದಕ್ಕೆ 

ನವದೆಹಲಿ, ಸೋಮವಾರ, 8 ಮಾರ್ಚ್ 2010

ಮಹಿಳಾ ಮೀಸಲಾತಿ ಮಸೂದೆಯನ್ನು ಈಗ ಇರುವ ರೂಪದಲ್ಲಿ ಸ್ವೀಕರಿಸಲು ತೀವ್ರ ವಿರೋಧ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾದಳಗಳು, ಕೇಂದ್ರದ ಯುಪಿಎ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಳ್ಳುತ್ತಿರುವುದಾಗಿ ಘೋಷಿಸಿವೆ. ಇದರ ಬೆನ್ನಿಗೆ ಮಸೂದೆಯ ಮೇಲಿನ ಮತದಾನವನ್ನು ಸ್ಪೀಕರ್ ನಾಳೆಗೆ ಮುಂದೂಡಿದ್ದಾರೆ.

ಲೋಕಸಭಾ ಮತ್ತು ವಿಧಾನಸಭಾ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ.33ರ ಮೀಸಲಾತಿ ಒದಗಿಸುವ ಮಹಿಳಾ ಮೀಸಲಾತಿ ವಿಧೇಯಕವನ್ನು ರಾಜ್ಯಸಭೆಯಲ್ಲಿ ಮಂಡಿಸಿದ ಬಳಿಕ ತೀವ್ರ ಗದ್ದಲ ಎಬ್ಬಿಸಿದ ಈ ಪಕ್ಷಗಳು, ಮಸೂದೆಯನ್ನು ಅಂಗೀಕರಿಸಲು ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿವೆ. ಒಂದು ಹಂತದಲ್ಲಿ ಸಭಾಧ್ಯಕ್ಷರಿಗೆ ಮುತ್ತಿಗೆ ಹಾಕಿದ ಆಕ್ರೋಶಿತ ಸದಸ್ಯರು, ಮಸೂದೆಯ ಪ್ರತಿಗಳನ್ನೂ ಹರಿದು ಹಾಕಿದ್ದಾರೆ.

ಮಹಿಳಾ ಮೀಸಲಾತಿ ಕಾಯ್ದೆಯನ್ನು ಅಲ್ಪಸಂಖ್ಯಾತ ವಿರೋಧಿ ಎಂದು ಲಾಲೂ ಪ್ರಸಾದ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಆರೋಪಿಸಿದ್ದು, ಕಾಂಗ್ರೆಸ್ ಜನ ವಿರೋಧಿ ನೀತಿಯನ್ನು ಜಾರಿಗೊಳಿಸಲು ಯತ್ನಿಸುತ್ತಿದೆ; ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ. ಕಾಯ್ದೆಯನ್ನು ಈ ರೂಪದಲ್ಲಿ ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ ಎಂದಿದ್ದಾರೆ.

ಯಾವುದೇ ಒತ್ತಡಕ್ಕೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಬಗ್ಗದೇ ಇರುವುದನ್ನು ಮನಗಂಡಿರುವ ಸಮಾಜವಾದಿ ಮತ್ತು ರಾಷ್ಟ್ರೀಯ ಜನತಾದಳಗಳು, ಮಹಾ ಚುನಾವಣೆ ನಂತರ ಎದ್ದುಬಿದ್ದು ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಳ್ಳುವುದಾಗಿ ಹೇಳಿವೆ.

ಸರಕಾರಕ್ಕೆ ಧಕ್ಕೆಯಿಲ್ಲ...

ಲೋಕಸಭೆಯಲ್ಲಿ 22 ಸ್ಥಾನಗಳನ್ನು ಹೊಂದಿರುವ ಸಮಾಜವಾದಿ ಪಕ್ಷ ಮತ್ತು ನಾಲ್ಕು ಸ್ಥಾನಗಳನ್ನು ಹೊಂದಿರುವ ರಾಷ್ಟ್ರೀಯ ಜನತಾದಳಗಳು ಯುಪಿಎಗೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದರೂ ಸರಕಾರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.

ಕಾಂಗ್ರೆಸ್ (208), ತೃಣಮೂಲ ಕಾಂಗ್ರೆಸ್ (19), ಡಿಎಂಕೆ (18), ಎನ್‌ಸಿಪಿ (9), ನ್ಯಾಷನಲ್ ಕಾನ್ಫರೆನ್ಸ್ (3)ಗಳೊಂದಿಗೆ ಪ್ರಸಕ್ತ ಯುಪಿಎ ಮೈತ್ರಿಕೂಟವು 257 ಲೋಕಸಭಾ ಸದಸ್ಯರನ್ನು ಹೊಂದಿದೆ.

ಬಿಎಸ್‌ಪಿ (21), ಮುಸ್ಲಿಂ ಲೀಗ್ (2), ಜಾರ್ಖಂಡ್ ವಿಕಾಸ್ ಮೋರ್ಛಾ (1), ಜೆಡಿಎಸ್ (3)ಗಳು ಸರಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದು, ಯುಪಿಎ ಬಲಾಬಲ 284ರಲ್ಲಿದೆ. ಇತರ ಕೆಲವು ಸ್ವತಂತ್ರ ಅಭ್ಯರ್ಥಿಗಳೂ ಯುಪಿಎಗೆ ಬೆಂಬಲ ಸೂಚಿಸಿರುವುದರಿಂದ ಲೋಕಸಭೆಯಲ್ಲಿನ ಒಟ್ಟು ಸಂಖ್ಯಾಬಲ 290ಕ್ಕೇರುತ್ತದೆ.

543 ಲೋಕಸಭಾ ಸ್ಥಾನಗಳಲ್ಲಿ ಸರಕಾರಕ್ಕೆ ಬೇಕಾಗಿರುವುದು 272 ಸ್ಥಾನಗಳು ಮಾತ್ರ. ಹಾಗಾಗಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳಿಂದ ಸರಕಾರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.

ರಾಜ್ಯಸಭೆಯಲ್ಲಿ ಮಂಡನೆ...
ಬಹುನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆಯನ್ನು ಇಂದು ಬೆಳಿಗ್ಗೆ 11 ಗಂಟೆಗೆ ರಾಜ್ಯಸಭೆಯ ಅಧ್ಯಕ್ಷ ಹಮೀದ್ ಅನ್ಸಾರಿಯವರು ಸಭೆಯ ಮುಂದಿಟ್ಟರು.

ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದರು. ಇದರ ಬೆನ್ನಿಗೆ ಆರಂಭವಾದ ಚರ್ಚೆಯಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ, ಮಾಯಾವತಿ ನಾಯಕತ್ವದ ಬಹುಜನ ಸಮಾಜವಾದಿ ಪಕ್ಷ ಹಾಗೂ ಲಾಲೂ ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು.

ಈ ಹಿನ್ನೆಲೆಯಲ್ಲಿ ಹಲವು ಬಾರಿ ಕಲಾಪನ್ನು ಮುಂದೂಡಲಾಯಿತು. ಸಂಖ್ಯಾಬಲದ ಪ್ರಕಾರ ಯುಪಿಎ ಸರಕಾರದ ಈ ಮಸೂದೆ ಸುಲಭವಾಗಿ ಅಂಗೀಕಾರ ಪಡೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಮತದಾನ ಮುಂದೂಡಿಕೆ....
ಮಹಿಳಾ ಮೀಸಲಾತಿ ವಿಧೇಯಕಕ್ಕೆ ಅಂಗೀಕಾರ ಪಡೆಯುವ ನಿಟ್ಟಿನಲ್ಲಿ ಸಂಜೆ ಆರು ಗಂಟೆಗೆ ರಾಜ್ಯಸಭೆಯಲ್ಲಿ ಮತದಾನ ನಡೆಯಲಿದೆ ಎಂದು ಮಧ್ಯಾಹ್ನ ಎರಡು ಗಂಟೆಗೆ ಪ್ರಕಟಿಸಲಾಗಿತ್ತು.

ಆದರೆ ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಯವರು ಸರ್ವಪಕ್ಷಗಳ ಸಭೆ ಕರೆದಿದ್ದು, ಈ ಹಿನ್ನೆಲೆಯಲ್ಲಿ ಮಸೂದೆಯ ಮೇಲಿನ ಮತದಾನವನ್ನು ನಾಳೆಗೆ ಮುಂದೂಡುವ ನಿರ್ಧಾರಕ್ಕೆ ಸ್ಪೀಕರ್ ಬಂದಿದ್ದಾರೆ.

ಕಾಂಗ್ರೆಸ್, ಬಿಜೆಪಿ, ಎಡಪಕ್ಷಗಳು ಸೇರಿದಂತೆ ಹೆಚ್ಚಿನ ಪಕ್ಷಗಳು ಮಸೂದೆಯ ಪರವಾಗಿರುವುದರಿಂದ ಬಹುಮತದಿಂದ ಕಾಯ್ದೆಯು ಅಂಗೀಕಾರವಾಗಲಿದೆ ಎಂಬ ನಿರೀಕ್ಷೆಗಳಿದ್ದರೂ ಪ್ರತಿಪಕ್ಷಗಳ ಭಾರೀ ಗದ್ದಲದ ಹಿನ್ನೆಲೆಯಲ್ಲಿ ಸರಕಾರ ನಿಲುವು ಬದಲಾಯಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

ಲೋಕಸಭೆಯಲ್ಲೂ ಗದ್ದಲ...
ರಾಜ್ಯಸಭೆಯಲ್ಲಿ ವಿಧೇಯಕ ಮಂಡನೆಯಾಗುತ್ತಿದ್ದಂತೆ ಇತ್ತ ಲೋಕಸಭೆಯಲ್ಲೂ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾದಳಗಳ ಸದಸ್ಯರು ಭಾರೀ ಗದ್ದಲ ಎಬ್ಬಿಸಿವೆ.

ಲೋಕಸಭೆ ಸ್ಪೀಕರ್ ಮೀರಾ ಕುಮಾರ್ ಪ್ರಶ್ನೋತ್ತರ ವೇಳೆ ಪ್ರಕಟಿಸುತ್ತಿದ್ದಂತೆ ಸದನದ ಬಾವಿಗಿಳಿದ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾದಳಗಳ ಸದಸ್ಯರು, ಮಹಿಳಾ ಮೀಸಲಾತಿ ಮಸೂದೆಯಲ್ಲಿ ಹಿಂದುಳಿದ ವರ್ಗಗಳು, ದಲಿತರು ಮತ್ತು ಮುಸ್ಲಿಂ ಮಹಿಳೆಯರಿಗೂ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು.

ಹಲವಾರು ಬಾರಿ ಸದನವನ್ನು ಮುಂದೂಡಿದ ಬಳಿಕವೂ ಸದಸ್ಯರು ತಮ್ಮ ಪಟ್ಟು ಬಿಡದ ಹಿನ್ನೆಲೆಯಲ್ಲಿ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-08 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»ನವದೆಹಲಿ: ಮಹಿಳೆಯರಿಗೆ ಇಂದು ಮಸೂದೆ ಉಡುಗೊರೆ : ಮೀಸಲಿಗೆ ಎಡ-ಬಲ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಸಂಸತ್

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ಮೇಧಾರಿಂದ ಬಸವ ಪ್ರಶಸ್ತಿ ತಿರಸ್ಕಾರ
»ತುರ್ತು ಪರಿಸ್ಥಿತಿ ಸಂದರ್ಭದ ದಾಖಲೆಗಳು ಪ್ರಧಾನಿ ಕಚೇರಿಯ ಕಡತಗಳಲ್ಲಿ ಇಲ್ಲ: ಪತ್ತೆ ಹಚ್ಚಲು ಮಾಹಿತಿ ಆಯೋಗದ ನಿರ್ದೇಶನ
»ಒಂಬತ್ತು ಸರಕಾರಿ ವೆಬ್‌ಸೈಟ್‌ಗಳಿಗೆ ಕನ್ನ: ಎನ್‌ಐಸಿ
»ದೇವತೆಯ ಒಲಿಸಲು ನಾಲಗೆ ಕತ್ತರಿಸಿಕೊಂಡ ಯುವಕ!
»ಶಿರ್ಡಿ ಸಾಯಿಬಾಬಾಗೆ ರೂ. 401 ಕೋಟಿ ನಗದು, 36 ಕೆ.ಜಿ. ಚಿನ್ನ ದೇಣಿಗೆ
»ಮಕ್ಕಳನ್ನು ಸುಮ್ಮನಾಗಿಸಲು ಅಫೀಮು ನೀಡುವ ಕಾರ್ಮಿಕ ತಾಯಿಂದಿರು
»ಜಯಲಲಿತಾ ಪ್ರಕರಣದಲ್ಲಿ ಬಿಜೆಪಿಯ ಒತ್ತಡ: ಅಡ್ವೊಕೇಟ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದ ಬಿ.ವಿ. ಆಚಾರ್ಯ
»ಬಾಂಬೆ ಹೈಕೋರ್ಟ್‌ನಿಂದ ದೇಶ್‌ಮುಖ್ ತರಾಟೆಗೆ: ಸಿನಿಮಾ ಸಂಸ್ಥೆಯ ಜಾಗ ಹಿಂದಿರುಗಿಸಲು ಘಾಯ್‌ಗೆ ಆದೇಶ
»ಮೋದಿಗೆ ಕ್ಲೀನ್ ಚಿಟ್: ಸಿಟ್ ವರದಿ ಬೇಸರ ತರಿಸಿದೆ: ಝಕಿಯಾ
»ಮುಂದಿನ ಮಹಾ ಚುನಾವಣೆಯಲ್ಲಿ ಮೋದಿ ಪ್ರಧಾನಿ ಅಭ್ಯರ್ಥಿ: ಗಡ್ಕರಿ
»ಗುಜರಾತ್ ದಂಗೆಯಲ್ಲಿ ಧಾರ್ಮಿಕ ಸ್ಥಳಗಳಿಗೆ ಹಾನಿ: ಎನ್‌ಎಚ್‌ಆರ್‌ಸಿ ವರದಿಯನ್ನು ವಿಧಾನ ಸಭೆಯಲ್ಲಿ ಏಕೆ ಮಂಡಿಸಿಲ್ಲ?: ಮೋದಿ ಸರಕಾರಕ್ಕೆ ಹೈಕೋರ್ಟ್ ತರಾಟೆ
»ಚೆನ್ನೈ: ಕ್ಲಾಸ್‌ರೂಂನಲ್ಲೇ ಶಿಕ್ಷಕಿಯನ್ನೇ ಹತ್ಯೆಗೈದ ವಿದ್ಯಾರ್ಥಿ
»ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
»ಮಾಜಿ ಸಚಿವರ ವಿರುದ್ಧ ವಿರುದ್ಧ ಸೂಕ್ತ ಕ್ರಮ: ಗಡ್ಕರಿ
»‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
»ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸಲು ಅನುಮತಿ ಕೋರಿ ಸಿವಿಸಿಯಿಂದ ಸರಕಾರಕ್ಕೆ ಮನವಿ
»ವಾರಣಾಸಿ: ಕುಸಿದ ನಿತಿನ್ ಗಡ್ಕರಿ ವೇದಿಕೆ
»ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ: ಆಂಧ್ರ ಪೊಲೀಸರಿಗೆ ಸಮನ್ಸ್ ಜಾರಿಗೊಳಿಸಿದ ಸಿಬಿಐ
»ಆಂಧ್ರ ಅಬಕಾರಿ ಸಚಿವ ಮದ್ಯ ಲಾಬಿಯ ಕೈಗೊಂಬೆ: ಎಸಿಬಿ ವರದಿ ಆರೋಪ
»ಶೀಘ್ರವೇ ಅಡ್ಡ ಹಾಯ್ಕೆ ಕ್ಷಿಪಣಿಯ ಪುನಃ ಪರೀಕ್ಷೆ
»‘ಲಕ್ಷ-1’ ಪರೀಕ್ಷೆ ಯಶಸ್ವಿ
»ದಯಾನಿಧಿ ಮಾರನ್ ವಿರುದ್ಧ ಇನ್ನೊಂದು ಪ್ರಕರಣ ದಾಖಲು
»ಸಬ್ಸಿಡಿ ಭೂತ ನಿದ್ದೆಗೆಡಿಸುತ್ತಿದೆ: ಪ್ರಣವ್
»ಗೋಧ್ರಾ ಗಲಭೆ: ಧಾರ್ಮಿಕ ಕಟ್ಟಡಗಳ ಹಾನಿ ಬಗ್ಗೆ ನಿರ್ಲಕ್ಷ್ಯ- ಮೋದಿ ಸರ್ಕಾರಕ್ಕೆ ತರಾಟೆ
» ಜೀವವೈವಿಧ್ಯ ತಾಣ: `ಪಶ್ಚಿಮ ಘಟ್ಟದಲ್ಲಿ ಬೇಡ ಗಣಿಗಾರಿಕೆ’
»ರೈಲ್ವೆ ಟಿಕೆಟ್ ಕಾದಿರಿಸುವಿಕೆ ಅವಧಿ 120 ದಿನಗಳವರೆಗೆ ವಿಸ್ತರಣೆ
»ಚುನಾವಣೋತ್ತರ ಸಮೀಕ್ಷೆ, ಅಭಿಪ್ರಾಯ ಸಂಗ್ರಹ ಸಮೀಕ್ಷೆ ನಿಷೇಧಕ್ಕೆ ಚುನಾವಣಾ ಆಯೋಗದ ಸುತ್ತೋಲೆ
»ಚಿಕಿತ್ಸೆ ವೆಚ್ಚ ಭರಿಸಲಾಗದ ತಾಯಿಯಿಂದ ಮಗನಿಗೆ ದಯಾ ಮರಣ ಕೋರಿ ಅರ್ಜಿ
»ಪತ್ರಕರ್ತೆಯ ಮೇಲೆ ದಾಳಿ: ಚುನಾವಣಾಧಿಕಾರಿ, ಪೊಲೀಸರ ವಿರುದ್ಧ ಕ್ರಮಕ್ಕೆ ಶಿಫಾರಸು
»ರಾಬರ್ಟ್ ವಾದ್ರಾರನ್ನು ತಡೆದ ಚುನಾವಣಾಧಿಕಾರಿಯ ವರ್ಗಾವಣೆ
»ಪ್ರಾಥಮಿಕ ಶಾಲೆಗಳ ಕಾರ್ಯ ನಿರ್ವಹಿಸುತ್ತಿರುವ ಅಝಂಗಡದ ಮಸೀದಿಗಳು
»ಆಂಧ್ರ ಪ್ರದೇಶ: ಸಚಿವರ ವಿರುದ್ಧ ಒಂದಾದ ಐಎಎಸ್ ಅಧಿಕಾರಿಗಳು
»ಅಂತರ್ಜಾಲಾಧಾರಿತ ಔಷಧಿ ವ್ಯಾಪಾರ ತಡೆಗೆ ಸಮಿತಿ
»ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ: ಆರೋಪಿ ಘೋಷ್ ಜಾಮೀನು ಬಿಡುಗಡೆ
»ಮಾ. 16ಕ್ಕೆ ಕೇಂದ್ರ ಬಜೆಟ್
»ಕಚ್ಚಾ ತೈಲ ಆಮದು: ಭಾಗಶಃ ಪಾವತಿ ವ್ಯವಸ್ಥೆಗೆ ಇರಾನ್ ಸಮ್ಮತಿ
»2ಜಿ: ಸೋನಿಯಾ ತಂಗಿಯರಿಗೆ ಸಿಕ್ಕಿದ್ದು 18000ಕೋಟಿ - ಸ್ವಾಮಿ ಆರೋಪ
»ದುಡಿಯದ' ಅಧಿಕಾರಿಗಳಿಗೆ 15 ವರ್ಷದಲ್ಲೇ ನಿವೃತ್ತಿ: ಕೇಂದ್ರದ ಹೊಸ ನಿಯಮಾವಳಿ
»ಕಪ್ಪುಹಣ; ಕೈ, ಬಿಜೆಪಿ ಜನರನ್ನು ತಪ್ಪು ದಾರಿಗೆಳೆಯುತ್ತಿವೆ: ಮಾಯಾವತಿ
»ಆಕ್ಷೇಪಾರ್ಹ ವಿಷಯ ಅಳಿಸಲು ಜಾಲತಾಣಗಳಿಗೆ ಇನ್ನೂ 15 ದಿನ ಕಾಲಾವಕಾಶ
»ಬಜೆಟ್‌ಗೆ ಗಣಿ ಬಂಪರ್: 49 ಕಂಪೆನಿಗಳ ಗುತ್ತಿಗೆ ರದ್ದು. ಗಣಿ ಧಣಿಗಳತ್ತ ಸಿಇಸಿ ಕೆಂಗಣ್ಣು
»ಅಕ್ರಮ ಗಣಿಗಾರಿಕೆ: ಜಾರ್ಖಂಡ್ ಸರಕಾರಕ್ಕೆ ಎನ್‌ಎಚ್‌ಆರ್‌ಸಿ ನೋಟಿಸ್
»3000 ಬೆಲ್ಜಿಯಂ ಶೆಫರ್ಡ್ಸ್‌ಗಳಿಗೆ ತರಬೇತಿಗೆ ಸಿಆರ್‌ಪಿಎಫ್ ನಿರ್ಧಾರ
»ಪೊಲೀಸ್ ಅಧಿಕಾರಿ ಸಹಿತ ಇಬ್ಬರು ಹಿಮಪಾತದಲ್ಲಿ ಸಮಾಧಿ
»ಮಧ್ಯಪ್ರದೇಶದ ಬಿಜೆಪಿ ಸರಕಾರದಿಂದ ರೂ. 250 ಕೋಟಿ ಗೋ ಹಗರಣ: ಕಾಂಗ್ರೆಸ್
»ಜೀವಂತವಾಗಿ ಬಂದ ‘ಸಾವನ್ನಪ್ಪಿದ’ ಮಹಿಳೆ!
»ಹರೇನ್ ಪಾಂಡ್ಯ ಹತ್ಯೆ ಪ್ರಕರಣ: ಮರು ತನಿಖೆಗೆ ಗುಜರಾತ್ ಹೈಕೋರ್ಟ್ ನಕಾರ
»ಮೊಬೈಲ್ ಸಂಪರ್ಕ ಮಾರ್ಗಸೂಚಿ ಟ್ರಾಯ್‌ಗೆ ಕಡೆಯ ಅವಕಾಶ
»ರೂ. 36,900 ಕೋಟಿ ಇಂಧನ ಸಬ್ಸಿಡಿ ನೀಡಲು ಮುಂಚೂಣಿ ತೈಲ ಸಂಸ್ಥೆಗಳಿಗೆ ಕೇಂದ್ರದ ಮನವಿ
»2ಜಿ ಪರವಾನಿಗೆ ರದ್ದತಿ ತೀರ್ಪು ಸರಕಾರಿ ಮಟ್ಟದಲ್ಲಿ ಚರ್ಚಿಸಲು ನಾರ್ವೆಯ ಇಚ್ಛೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri