ಮಂಗಳೂರು: ನಗರದಲ್ಲಿ ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟ: ಆಳ್ವಾಸ್ ಕಾಲೇಜು ಚಾಂಪಿಯನ್ |
ಪ್ರಕಟಿಸಿದ ದಿನಾಂಕ : 2010-03-08
(ವಿಶೇಷ ವರದಿ ಹಾಗೂ ಚಿತ್ರ: ಸತೀಶ್ ಕಾಪಿಕಾಡ್)
ಮಂಗಳೂರು, ಮಾ.08: ಮಂಗಳಾ ಫ್ರೆಂಡ್ಸ್ ಸರ್ಕಲ್(ರಿ) ಉರ್ವಸ್ಟೋರ್ ಇವರ ಅಶ್ರಯದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಅಹ್ವಾನಿತ ತಂಡಗಳ "ವಾಲಿಬಾಲ್ ಪಂದ್ಯಾಟ ಮತ್ತು ಕ್ರೀಡಾಂಗಣ ಉದ್ಘಾಟನಾ" ಕಾರ್ಯಕ್ರಮವು ಉರ್ವಸ್ಟೋರ್‌ನ ವಾಲಿಬಾಲ್ ಮೈದಾನದಲ್ಲಿ ನಡೆಯಿತು.
ಲ್ಯಾನ್ಸಿ ಕನ್‌ಸ್ಟ್ರಕ್ಷನ್ ಮಾಲಕ ಲ್ಯಾನ್ಸಿ ಮಸ್ಕರೆನ್ಹಸ್ ರವರು ಕ್ರೀಡಾಂಗಣವನ್ನು ಉದ್ಘಾಟಿಸಿದರು. ಹೇಮಚಂದ್ರ ಶೆಟ್ಟಿ ಬೋಳೂರು ಇವರು ಪಂದ್ಯಾಟದ ಉದ್ಘಾಟನೆಯನ್ನು ನೆರೆವೇರಿಸಿದರು.
ಮಹಾನಗರ ಪಾಲಿಕೆಯ ಮಹಾ ಪೌರರಾದ ರಜನಿ ದುಗ್ಗಣರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮ.ನ.ಪಾ ಸದಸ್ಯ ಅಶ್ವಿನ್ ಕುಮಾರ್, ಪ್ರವೀಣ್ ಕುಮಾರ್, ದ.ಕ.ಜಿಲ್ಲಾ ಬೀಚ್ ವಾಲಿಬಾಲ್ ಅಕಾಡೆಮಿಯ ಅಧ್ಯಕ್ಷರಾದ ಎ.ಎಲ್.ಉದಯಕುಮಾರ್, ದ.ಕ ಜಿಲ್ಲಾ ಬಾಸ್ಕೆಟ್ ಬಾಲ್ ಅಸೋಸಿಯೇಶನ್ ಮತ್ತು ವಿ4 ಮೀಡಿಯ ಕ್ರೀಡಾ ವಿಶ್ಲೇಷಕರಾದ ನವೀನ್ ಶೆಟ್ಟಿ, ದ.ಕ.ಜಿಲ್ಲಾ ಬೀಚ್ ವಾಲಿಬಾಲ್ ಅಕಾಡೆಮಿ ಉಪಾಧ್ಯಕ್ಷ ಐವನ್ ಮಿಸ್ಕಿತ್, ದಿಲ್ಲು ಎಂಟರ್‌ಪ್ರೈಸಸ್ ಕುಳೂರು ಇದರ್ ಮಾಲಕ ಪಿ.ಆರ್.ಉದಯನ್, ಮಾಜಿ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ ಮರ್ವಿನ್ ಡಿ.ಕುನ್ಹಾ, ಎನ್.ಐ.ಎಸ್ ವಾಲಿಬಾಲ್ ತರಬೇತುದಾರ ರಾಜಾರಮ್ ಬಿ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು.
ಮಂಗಳಾ ಫ್ರೆಂಡ್ಸ್ ಸರ್ಕಲ್(ರಿ) ಇದರ ಅಧ್ಯಕ್ಷ ನಾಗೇಶ್ ಎ, ಕಾರ್ಯದರ್ಶಿ ಗುರುಪ್ರಸಾದ್ ರಾವ್ , ಖಜಾಂಚಿ ಥೋಮಸ್ ಎಮ್.ಎ, ಉಪಾಧ್ಯಕ್ಷರಾದ ರಮೇಶ್.ಎಲ್.ಶೆಟ್ಟಿ, ಲಕ್ಷಣ್, ರಮೇಶ್ ಬಾಬು, ಜಗದೀಶ್ ಅಂಚನ್, ಶಾಮ್‌ಸನ್ ಎ, ಜೊತೆ ಕಾರ್ಯದರ್ಶಿಗಳಾದ ಸದಾಶಿವ ಸಲಿಯಾನ್, ಪದ್ಮನಾಭ್, ಸುಭಾಷ್ ಬಿ, ಹರೀಶ್ ಸನಿಲ್, ದಿನಕರ್ ಎ, ಕ್ರೀಡಾ ಕಾರ್ಯದರ್ಶಿಗಳಾದ ಅಶೋಕ್, ಅರುಣ್ ಬ್ಯಾಪಿಸ್ಟ್, ಸಂಘಟನಾ ಕಾರ್ಯದರ್ಶಿ ಸತೀಶ್ ಎಮ್, ಮನೋಜ್ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು.
ಲೀಗ್ ಹಂತದಲ್ಲಿ ನಡೆದ ಈ ಪಂದ್ಯದಲ್ಲಿ ವಿವಿ ಮಟ್ಟದ ಸುಮಾರು 9 ಕಾಲೇಜುಗಳು ಭಾಗವಹಿಸಿದ್ದವು.
ಅಂತಿಮವಾಗಿ ಮೂಡಬಿದ್ರೆಯ ಆಳ್ವಾಸ್ ಕಾಲೇಜು ಪ್ರಥಮ ಸ್ಥಾನವನ್ನು, ಯುನಿರ್ವಸಿಟಿ ಕ್ಯಾಂಪಸ್ ದ್ವಿತೀಯ ಸ್ಥಾನವನ್ನು, ಮಂಗಳೂರಿನ ಎಸ್.ಡಿ.ಎಮ್ ಕಾಲೇಜಿನ ಬಿಬಿಎಮ್ ತಂಡ ತ್ರತೀಯ ಸ್ಥಾನ ಹಾಗೂ ಎಸ್.ಡಿ.ಎಮ್. ಕಾಲೇಜು ಉಜಿರೆ ನಾಲ್ಕನೇಯ ಸ್ಥಾನವನ್ನು ಪಡೆಯಿತು.
ವರದಿಯ ವಿವರಗಳು |
 |
ಕೃಪೆ : ಕರೀಶ್ಮ.ಶೆಟ್ಟಿ ಎಸ್ ಕಾಪಿಕಾಡ್ ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-08 00:00:00
|
|
|