ಭಾರತ ದೇಶದ ಒಡಲು ಸರ್ವ ಧರ್ಮಗಳ ಮಡಿಲು |
ಪ್ರಕಟಿಸಿದ ದಿನಾಂಕ : 2010-03-08
ಬ್ರಿಟೀಷರ ದಬ್ಬಾಳಿಕೆಯಿಂದ ತತ್ತರಿಸಿದ ನಮ್ಮ ದೇಶವನ್ನು ಅಂದು ಮಹಾತ್ಮರು ಸ್ವಾತಂತ್ರ್ಯ ಹೋರಾಟಗಾರರು ವೀರ ಮರಣ ನೀಡಿ ಸ್ವಾತಂತ್ರ್ಯವನ್ನು ನಮ್ಮ ದೇಶಕ್ಕೆ ತಂದು ಕೊಟ್ಟರು. ಒಂದು ಪ್ರಜಾಪ್ರಭುತ್ವ ಜಾತ್ಯತೀತ ರಾಷ್ಟ್ರ ನಿರ್ಮಾಣ ಅವರ ಕನಸಾಗಿತ್ತು.
ಮಹಮ್ಮದಾಲಿ ಜಿನ್ನಾರ ಅಶೆಯಂತೆ ಮುಸ್ಲಿಮರೇ ಹೆಚ್ಹಾಗಿ ವಾಸಿಸುತ್ತಿರುವ ಪಾಕಿಸ್ತಾನ ಪ್ರತ್ಯೇ ಕ ರಾಷ್ಟ್ರವಾಯಿತು. ಅದರ ಪರಿಣಾಮವಾಗಿಯೇ ಮಹಾತ್ಮಾಗಾಂಧಿಯವರು ಹುತಾತ್ಮರಾದರು. ಅಂದಿನಿಂದ ಶುರುವಾಯಿತು ಜಾತಿ ಜನಾಂಗ, ಮತ ಬೇಧದ ಹೆಸರಲ್ಲಿ ರಕ್ತಪಾತ.
ಈ ದೇಶವು ಹಲವು ಜಾತಿ ಮತ ಧರ್ಮಗಳ ಬೀಡಾಗಿದೆ. ಇಲ್ಲಿನ ವ್ಯೆವಿದ್ಯೆಗಳು ಪ್ರಪಂಚದ ಇನ್ನಿ ತರ ಯಾವುದೇ ದೇಶಗಳಲ್ಲಿ ಕಂಡು ಬರಲು ಸಾದ್ಯವಿಲ್ಲ. ಹಲವು ಭಾಷೆ ಸಂಸ್ಕ್ರತಿಗಳಿಂದ ಕೂಡಿ ದ ನಮ್ಮ ದೇಶದ ಬಗ್ಗೆ ನಾವು ಬಹಳಷ್ಟು ಹೆಮ್ಮೆ ಪಡಬೇಕಾಗಿದೆ.
ಮಾನವ ಧರ್ಮದ ಸಹೋದರರಾಗಿ ಜೀವಿಸಬೇಕಾದುದು ಇಲ್ಲಿನ ಪ್ರತಿಯೊಬ್ಬ ನಾಗರಿಕನ ಕರ್ತ ವ್ಯ. ಜನಾಂಗಿಯ ಕಲಹ ಇಲ್ಲಿ ಕಂಡು ಬರುವಂತ ಅತ್ಯಂತ ದೊಡ್ಡ ಸಮಸ್ಯೆ. ಇಂದಿನವರಗೆ ಯಾ ವ ಕಾನೂನಿಗೂ ಯಾವ ರಾಜಕೀಯ ಪಕ್ಷಕ್ಕೂ ಈ ಸಮಸ್ಯೆ ನಿವಾರಣೆ ಸಾಧ್ಯವಾಗಿಲ್ಲ. ಕೇವಲ ಬೆರಳೆಣಿಕೆಯಷ್ಟು ಪ್ಯಾಸಿಸ್ಟ್ ಶಕ್ತಿಗಳು ಈ ದೇಶದ ಸಾಮಾಜಿಕ ಸ್ಥಿತಿಯನ್ನು ಅಜಗಜಾಂತರ ಗೊಳಿಸುತ್ತಿವೆ.

ಸಮಾಜದಲ್ಲಿ ವಿಷ ಬೀಜಗಳನ್ನು ಬಿತ್ತಿ ಜಾತಿ ಕಲಹಗಳನ್ನುಂಟು ಮಾಡಿ ಈ ದೇಶದಲ್ಲಿ ಶಾಂತಿ ಬಯಸುವ ಜನರ ಭಾವನೆಯನ್ನು ಘಾಸಿಗೊಳಿಸುತ್ತಿವೆ. ವಿಶಾಲ ಮನೋಧರ್ಮದ ಈ ದೇಶದ ನಾಗರಿಕರು ಎಂದೂ ಜನಾಂಗಿಯ ಕಲಹಗಳನ್ನು ಸಹಿಸುವುದಿಲ್ಲ. ಪರಸ್ಪರ ಸಹೋದರರಾಗಿ ಜೀವಿಸಲು ಇಷ್ಟಪಡುತ್ತಾರೆಯೇ ಹೊರತು ಈ ದೇಶದ ಸಂಸ್ಕೃತಿಗೆ ಕಳಂಕ ತರಲು ಆತನೆಂದೂ ಮುಂದಾಗಲಾರನು.
ಇಲ್ಲಿ ಯಾವನೇ ಒಬ್ಬ ದುಷ್ಕರ್ಮಿ ಇಲ್ಲಿನ ಒಂದು ಜನಾಂಗದ ಮೇಲೆ ಕುಕ್ರತ್ಯ ನಡೆಸಿದರೆ, ಅವ ಹೇಳನಕಾರಿಯಾಗಿ ಮಾತನಾಡಿದರೆ, ಕಿರುಕುಳ ನೀಡಿ ಈ ದೇಶದಿಂದ ಓಡಿಸಿ ಎಂಬುದಾಗಿ ಬೊಬ್ಬೆ ಹಾಕಿದರೆ ಅದಕ್ಕೆ ಸೊಪ್ಪು ಹಾಕುವವರು ಎಷ್ಟು ಜನರಿರಬಹುದು? ಈ ದೇಶದ ನಿಜ ಜೀವನದಲ್ಲಿ ಎಂದಾದರೂ ಈ ರಚನಾತ್ಮಕವಲ್ಲದ ಬೊಗಳೆಗಳು ಸಾದಿಸಬಹುದೇ?
ಪಾಕಿಸ್ತಾನ ಇಬ್ಭಾಗವಾದಾಗ ನಡೆದ ನರಮೇಧ, ನಂತರದ ದಿನಗಳಲ್ಲಿ ಜಾತಿ ಹೆಸರಿನಲ್ಲಿ ನಡೆದ ಹತ್ಯಾಕಾಂಡ, ಗರ್ಭಿಣಿ ಸ್ತ್ರೀಯರ ಹೊಟ್ಟೆಯನ್ನು ಬಾಣದಿಂದ ಚುಚ್ಚಿದ ಅಮಾನವೀಯ ಹ್ರದಯ ವಿದ್ರಾವಕ ಘಟನೆಗಳು, ಮಂದಿರ ಮಸೀದಿ ವಿಚಾರದಲ್ಲಿ ಸಾವಿರಾರು ಕಂದಮ್ಮಗಳ ಸ್ತ್ರೀಯರ ಮಾರಣಹೋಮದ ವರದಿ ನಮ್ಮ ಮುಂದಿಲ್ಲವೇ?
ಗೋದ್ರ ಹತ್ಯಾಕಾಂಡದ ರಕ್ತ ಸಿಕ್ತ ಘಟನೆಗಳು, ಕೊಳ್ಳೆ ದೊಂಬಿ, ಒಬ್ಬಂಟಿಯಾಗಿರುವಾಗ ಹೊಂ ಚು ಹಾಕಿ ಕಡಿದು ಕೊಂದಂಥ ಹತ್ತು ಹಲವು ಘಟನೆಗಳ ಸವಿಸ್ತಾರ ವರದಿ ನಮ್ಮ ಮುಂದಿರು ವಾಗ ಇದನ್ನು ಕಂಡು ಇಲ್ಲಿನ ರಾಜಕೀಯ ಶಕ್ತಿಗಳು, ಕಾನೂನು, ನ್ಯಾಯಾಂಗ ಎಲ್ಲವೂ ವ್ಯರ್ಥ ಲಾಪವನ್ನೇ ಮಾಡಿದವು.

ಇತ್ತೀಚಿನ ದಿನಗಳಲ್ಲಿ ನಡೆದ ಚರ್ಚ್ ದಾಳಿ, ನಿರಾಶ್ರಿತರ ಆಶ್ರಮಗಳನ್ನು ಬಿಡದೇ ಆಕ್ರಮಣ ನಡೆಸಿದ ರಾಕ್ಷಸಿಗಳು ಇಲ್ಲಿರುವಾಗ ಜಾತ್ಯತೀತ ಸಮಾಜದ ಕನಸು ನನಸಾಗಲು ಎಂದು ಸಾದ್ಯ?
ಕೆಲವರು ಮತಾಂತರ ಭಯೋತ್ಪಾದನೆ ಮಾಡುವವರಿರುವರು. ಇವೆಲ್ಲದಕ್ಕೂ ಕಾನೂನುಗಳಿವೆ, ರಕ್ಷಣಾ ವ್ಯವಸ್ಥೆಗಳಿವೆ. ಭಯೋತ್ಪಾದಕನನ್ನು ಶಿಕ್ಷಿಸಬಾರದೆಂದು ಇಲ್ಲಿ ಯಾವನಾದರೂ ಕರೆ ನೀಡುತ್ತಾನೆಯೇ?
ತಪ್ಪಿತಸ್ಥನಿಗೆ ಇಲ್ಲಿ ಶಿಕ್ಷೆ ಆಗುತಿಲ್ಲ. ಆದುದರಿಂದಲೇ ಶಾಂತಿ ಭಂಜಕರು, ಭಯೋತ್ಪಾದಕರು ಇಲ್ಲಿ ರಾರಾಜಿಸುತ್ತಿರುವುದು. ಒಂದು ಕಡೆ ಕೋಮು ವಿಷ ಬೀಜ ಬಿತ್ತುವವರಿದ್ದಾರೆ, ಇನ್ನೊಂಡದೆ ವಿಧ್ವಂಸಕರು, ಭಯೋತ್ಪಾದಕರು ಈ ದೇಶವನ್ನು ಅಸ್ಥಿರಗೊಳಿಸುತ್ತಿದ್ದಾರೆ. ಬಲಾಡ್ಯರು ಇಲ್ಲಿ ಯಾವುದೇ ಶಿಕ್ಷೆಗೆ ಗುರಿಯಾಗದೇ ವೀರರಾಗಿ ತಮ್ಮ ದುಷ್ಕ್ರತ್ಯಗಳನ್ನು ಮುಂದುವರಿಸುತ್ತಲೇ ಇದ್ದಾರೆ.
ಈ ದೇಶ ಯಾವತ್ತೂ ಜಾತ್ಯತೀತ ರಾಷ್ಟ್ರ. ಇಲ್ಲಿನ ನಾಗರಿಕರ ರಕ್ತದಲ್ಲೂ ಅದೇ ಇರುತ್ತದೆ. ಯಾವ ಪ್ಯಾಸಿಸ್ಟ್ ಶಕ್ತಿಗಳಿಗೂ ಇಲ್ಲಿ ಅದಿಪತ್ಯ ಸ್ಥಾಪಿಸಿ ಎಲ್ಲವನ್ನೂ ಮನಬಂದಂತೆ ಪರಿವರ್ತಿ ಸಲು ಸಾದ್ಯವಿಲ್ಲ. ಇಲ್ಲಿ ಸಾಮಾಜಿಕ ಅರಾಜಕತೆಯ ಮೂಲಕ ಶಾಂತಿ ಕೆಡಿಸಿ ಆರ್ಥಿಕವಾಗಿ ಬಲ ಹೀನಗೊಳಿಸುವ ಯಾವನೇ ಶಕ್ತಿಗೆ ಈ ನಾಗರಿಕರು ಎಂದೂ ಬೆಲೆ ಕೊಡುವುದಿಲ್ಲ.

ಮುಸ್ಲಿಮರು ಪಾಕಿಸ್ತಾನದ ಧ್ವಜವನ್ನು ಹಾರಿಸುತ್ತಾರೆ ಎಂಬ ಅಪವಾದ ಆಗಿಂದಾಗ್ಗೆ ಕೇಳಿ ಬರು ವುದೂ ಉಂಟು. ಅಂತವರನ್ನು ಕೂಡಲೇ ಶಿಕ್ಷಿಸಬೇಕು. ಅವರಿಗೆ ಬುದ್ದಿ ಇಲ್ಲವೇ? ಇದ್ದಲ್ಲಿ ಈ ನೆಲದಲ್ಲಿ ಉಂಡು ಬೇರೆ ರಾಷ್ಟ್ರದ ಧ್ವಜ ಹಾರಿಸುತ್ತಿದ್ದರೆ?
ಇಲ್ಲಿನ ಪ್ರಜೆಗಳನ್ನು ಪಾಕಿಸ್ತಾನಕ್ಕೆ ಅಟ್ಟಿ ಎಂದೂ ಹೇಳುವವರಿದ್ದಾರೆ. ಅವರಿಗೂ ಬುದ್ದಿ ಇಲ್ಲ ಎಂದೇ ಹೇಳಬೇಕು. ಬುದ್ದಿ ಇದ್ದಲ್ಲಿ ಆ ರೀತಿಯಾಗಿ ಹೇಳುತಿರಲಿಲ್ಲ. ಅದೇ ರೀತಿ ಮಹಾತ್ಮ ಗಾಂಧೀಜಿಯ ಪ್ರತಿಮೆಗೆ ಚಪ್ಪಲಿ ಹಾರ ಹಾಕುವವರು ಇದ್ದಾರೆ.
ಈ ರೀತಿಯ ಮೂರ್ಖರಿಗೆಲ್ಲಾ ಸರಿಯಾದ ಶಿಕ್ಷೆ ಸಿಗಲೇಬೇಕು. ಆಗ ಮಾತ್ರ ನಮ್ಮ ದೇಶದಲ್ಲಿ ನ್ಯಾಯಾಂಗ, ಕಾರ್ಯಾಂಗ ಇದೆ ಎನ್ನುವುದು ಇಲ್ಲಿನ ಪ್ರಜ್ಞಾವಂತ ನಾಗರಿಕರಿಗೆ ಮನದಟ್ಟಾ ಗಬಹುದು.....................................
ವರದಿಯ ವಿವರಗಳು |
 |
ಕೃಪೆ : ಇಬ್ರಾಹಿಂ ಹಂಚುಮನೆ , ಮಂಚಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-08 00:00:00
|
|
|