ಲಾಸ್ ಏ೦ಜಲೀಸ್ :ಈ ಬಾರಿ ಆಸ್ಕರ್ ನಿರಾಶೆ ಮಾಡಲ್ಲ ಯಾಕೆ೦ದರೆ ನಾಮನಿರ್ದೇಶನವಾದವರಿಗೆ 42 ಲಕ್ಷ ರು. |
ಪ್ರಕಟಿಸಿದ ದಿನಾಂಕ : 2010-03-08
ಲಂಡನ್/ಲಾಸ್ ಏಂಜಲೀಸ್: ಈ ಬಾರಿ ಆಸ್ಕರ್ ಪ್ರಶಸ್ತಿ ಯಾರಿಗೂ ನಿರಾಶೆ ಮಾಡಲ್ಲ. ಕಾರಣ- ಆಸ್ಕರ್‌ಗೆ ನಾಮನಿರ್ದೇಶನಗೊಂಡ ಎಲ್ಲರಿಗೂ ೪೨ ಲಕ್ಷ ರು. ಮೌಲ್ಯದ ಚೀಲವೊಂದನ್ನು ನೀಡಲು ಆಸ್ಕರ್ ಸಮಿತಿ ನಿರ್ಧರಿಸಿದೆ. ಎಲ್ಲರಿಗೂ ಇಂಥ ದುಬಾರಿ ಕೊಡುಗೆ ನೀಡುತ್ತಿರುವುದು ಆಸ್ಕರ್ ಇತಿಹಾಸದಲ್ಲೇ ಮೊದಲು. ೪೨ ಲಕ್ಷ ರು. ಮೌಲ್ಯದ ಚೀಲ ಆಫ್ರಿಕಾ ಪ್ರವಾಸಕ್ಕಾಗಿ ೨೦.೬೮ ಲಕ್ಷ ರು. ಮೌಲ್ಯದ ಟಿಕೆಟ್ ಸೇರಿದಂತೆ ವಿವಿಧ ಕೊಡುಗೆಗಳನ್ನು ಒಳಗೊಂಡಿದೆ. ೧೬ ಮಂದಿ ಇದರಲ್ಲಿ ಪ್ರವಾಸ ಕೈಗೊಳ್ಳಬಹುದಾಗಿದೆ.
ಇಂದು ಆಸ್ಕರ್ ಪ್ರದಾನ: ಈ ವರ್ಷದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಭಾರತೀಯ ಕಾಲಮಾನದ ಪ್ರಕಾರ ಸೋಮವಾರ ಮುಂಜಾನೆ ನಡೆಯಲಿದೆ. ಈ ಬಾರಿ ಆಸ್ಕರ್ ಹಣಾಹಣಿ ಅವತಾರ್ ಮತ್ತು ದಿ ಹರ್ಟ್ ಲಾಕರ್ ಚಿತ್ರಗಳ ನಡುವೆ ನಡೆಯಲಿದೆ. ಇದರ ವಿಶೇಷತೆ ಇಷ್ಟೆ- ಈ ಚಿತ್ರಗಳ ಪೈಕಿ ಅವತಾರ್ ನಿರ್ದೇಶಿಸಿದ್ದು ಜೇಮ್ಸ್ ಕ್ಯಾಮರಾನ್. ದಿ ಹರ್ಟ್ ಲಾಕರ್ ನಿರ್ದೇ ಶಿಸಿದ್ದು ಕ್ಯಾಮರಾನ್ ಅವರ ಮಾಜಿ ಪತ್ನಿ ಕ್ಯಾಥರೀನ್ ಬಿಜೆಲೋ.
ಬಾಕ್ಸ್ ಆಫೀಸ್‌ನಲ್ಲಿ ೯೧೦೦ ಕೋಟಿ ರು.ಗಳಿಗೂ ಅಧಿಕ ಹಣವನ್ನು ಬಾಚಿರುವ ಅವತಾರ್ ಗೋ ಲ್ಡನ್ ಗ್ಲೋಬ್ಸ್‌ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿತ್ತು. ದಿ ಹರ್ಟ್ ಲಾಕರ್ ಬಫ್ತಾಸ್, ಡೈರೆಕ್ಟರ್ಸ್ ಗಿಲ್ಡ್ ಪ್ರಶಸ್ತಿ ಬಾಚಿಕೊಂಡಿತ್ತು. ಬಿಜಿಲೋ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಗಳಿಸಿದರೆ ಮಹಿಳಾ ನಿರ್ದೇಶಕರಿಗಾಗಿಯೇ ನೀಡಲಾಗುವ `ಎಫ್‌ಒಇ' ಪ್ರಶಸ್ತಿ ಪಡೆಯುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-08 00:00:00
|
|
|