ಸ್ಲ೦ ಡಾಗ್‍ನಲ್ಲಿ ಮಿ೦ಚಿದ ಫ್ರಿದಾ ಪಿಂಟೋಗೆ ಹಾಲಿವುಡ್‍ನ ಬಾಂಡ್ ಚಿತ್ರದಲ್ಲಿ ಅವಕಾಶ |
ಪ್ರಕಟಿಸಿದ ದಿನಾಂಕ : 2010-03-08
ಯಾರಿಗುಂಟು ಯಾರಿಗಿಲ್ಲ ಈ ಅದೃಷ್ಟ. ಸ್ಲಮ್‌ಡಾಗ್‌ನಲ್ಲಿ ಮಿಂಚಿದ್ದೇ ಮಿಂಚಿದ್ದು. ಅದೆಲ್ಲಿತ್ತೋ ಏನೋ ಲಕ್ಕು ಬೆಂಬಿಡದೇ ಹುಡುಕಿಕೊಂಡು ಬರ್ತಾನೇ ಇದೆ. ಈಗಿನ ಸುದ್ದಿ ಏನಂದ್ರೆ ಸ್ಲಮ್ ಡಾಗ್ ನಾಯಕಿ ಫ್ರಿಡಾ ಪಿಂಟೋಗೆ ಬಾಂಡ್ ಚಿತ್ರದಲ್ಲಿ ಅವಕಾಶ ಸಿಕ್ತಿದೆಯಂತೆ. ಅದೂ ಈ ಆಫರ್ ಹಾಲಿವುಡ್‌ನ ಸದ್ಯದ ಶ್ರೇಷ್ಠ ನಟಿಯರನ್ನೆಲ್ಲಾ ಪಕ್ಕಕ್ಕೆ ತಳ್ಳಿ ಪಿಂಟೋ ಬಳಿ ಬಂದಿದೆ.
ಏನಮ್ಮಾ ಈ ಪರಿ ಅವಕಾಶ ಬಂದಿದೆ. ಒಪ್ಕೋತೀಯಾ ಅಂದ್ರೆ `ಇಲ್ಲಪ್ಪಾ, ನಾನಿನ್ನೂ ಸಣ್ಣೋ ಳು. ಈಗ್ಲೇ ಇಂಥ ಪಾತ್ರ ಮಾಡ್ಬಾರ್ದು. ನಂಗಿನ್ನೂ ಅಂಥ ಮೆಚ್ಯೂರಿಟಿ ಬಂದಿಲ್ಲ' ಅಂಥಾ ನೆಪ ಹೇಳ್ತಾಳೆ.
ಏನೇ ಆಗ್ಲಿ ಫ್ರಿಡಾ ಒಪ್ಪಿಕೊಳ್ಳಲಿ ಅಥವಾ ಬಿಡ್ಲಿ, ಇಂಥಾ ದೊಡ್ಡ ಪಾತ್ರ ಹುಡುಕಿಕೊಂಡು ಬಂತಲ್ಲ ಅನ್ನೋ ಸಂತಸ ಇವಳ ಫ್ಯಾನ್ಸಿಗೆ.ಅಂದಹಾಗೆ ಫ್ರಿಡಾ ಈಗ ಫುಲ್ ಬ್ಯುಸಿ. ಮಿಕ್ಕಿ ರೌರ್ಕೆ ಜೊತೆ ಆಯಕ್ಷನ್ ಎಪಿಕ್ `ಡಾನ್ ಆಫ್ ವಾರ್' ಚಿತ್ರದಲ್ಲಿ ಅಭಿನಯಿಸ್ತಿದ್ದಾಳೆ. ಗ್ರೀಕ್ ಕಾವ್ಯದ ಕಥೆ ಇರೋ ಈ ಫಿಲ್ಮ್‌ನಲ್ಲಿ ಈಕೆಯದ್ದೇ ಮಹಾರಾಣಿ ಪಾತ್ರ.
ಈ ವರ್ಷ ಇನ್ನೂ ಹೆಚ್ಚು ಹೆಚ್ಚು ಅವಕಾಶಗಳು ಹುಡುಕಿಕೊಂಡು ಬರೋ ಸಾಧ್ಯತೆ ಇದೆ. `ಡಾನ್ ಆಫ್ ವಾರ್' ಮುಗಿದ ಮೇಲೆ ವೂಡಿ ಅಲೆನ್‌ನ `ಯು ವಿಲ್ ಮೀಟ್ ಎ ಟಾಲ್ ಡಾರ್ಕ್ ಸ್ಟ್ರೇಂಜ ರ್'ನಲ್ಲಿ ನಟಿಸ್ತಾಳಂತೆ. ಇದರಲ್ಲಿ ೧೫ ಕೋಟಿ ಸಂಭಾವನೆ ಪಡೆಯೋ ಸಾಧ್ಯತೆ ಇದೆ ಅಂತ ಹಾಲಿವುಡ್ ಮಂದಿ ಮಾತಾಡ್ಕೋತ್ತಿದ್ದಾರಂತೆ. ಏನೇ ಆಗ್ಲಿ ಸ್ಲಮ್‌ಡಾಗ್‌ನ ಹುಡುಗಿ ಈಗ ಮಿಲೇ ನಿಯರತ್ತ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-08 00:00:00
|
|
|