ಕುವೆಂಪು ವಿವಿ: 6 ಮಂದಿಗೆ ಗೌರವ ಡಾಕ್ಟರೇಟ್ |
ಪ್ರಕಟಿಸಿದ ದಿನಾಂಕ : 2010-03-08
ಕುವೆಂಪು ವಿಶ್ವವಿದ್ಯಾಲಯ ಈ ಬಾರಿಯ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಆರು ಜನ ಮಹನೀಯರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ.
ಶಿವಮೊಗ್ಗ: ಸಾಹಿತಿ ಪ್ರೊ. ನಿಸಾರ್ ಅಹಮದ್, ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಮನೋವೈದ್ಯ ಡಾ.ಕೆ.ಎ. ಅಶೋಕ್ ಪೈ, ಶೃಂಗೇರಿಯ ಶಾರದಾ ಪೀಠದ ಆಡಳಿತಾಧಿಕಾರಿ ವಿ.ಆರ್. ಗೌರಿಶಂಕರ್, ಸಾಹಿತಿ ಬಿ.ಟಿ. ಲಲಿತಾ ನಾಯಕ್, ನಾಡೋಜ ಎಸ್.ಆರ್. ರಾವ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. ಈ ಸಂಬಂಧ ವಿವಿ ಸಲ್ಲಿಸಿದ ಪ್ರಸ್ತಾವನೆಗೆ ರಾಜ್ಯಪಾಲ ಎಚ್. ಭಾರದ್ವಾಜ್ ಅವರು ಅನುಮೋದನೆ ನೀಡಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಗೆ ಪ್ರೊ.ನಿಸಾರ್ ಅಹಮದ್‌ಗೆ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದ್ಲಲಿನ ಸೇವೆ ಪರಿಗಣಿಸಿ ವಿ.ಆರ್. ಗೌರಿಶಂಕರ್‌ಗೆ, ವೈದ್ಯಕೀಯ ಮತ್ತು ಸಮಾಜ ಸೇವೆಗೆ ಡಾ.ಕೆ.ಎ. ಅಶೋಕ್ ಪೈಗೆ, ಸಾಹಿತ್ಯ ಮತ್ತು ಸಮಾಜ ಸೇವೆ ಪರಿಗಣಿಸಿ ಬಿ.ಟಿ. ಲಲಿತಾ ನಾಯಕ್‌ಗೆ, ಚಿತ್ರರಂಗದಲ್ಲಿ ಮಾಡಿದ ಸೇವೆ ಪರಿಗಣಿಸಿ ಗಿರೀಶ್ ಕಾಸರವಳ್ಳಿ, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರದಲ್ಲಿನ ಸೇವೆಗೆ ಎಸ್.ಆರ್. ರಾವ್ ಅವರಿಗೆ ವಿವಿಯು, ಮಾರ್ಚ್ 14ರಂದು ನಡೆಯಲಿರುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಲಿದೆ ಎಂದು ಕುವೆಂಪು ವಿವಿ ಮೂಲಗಳು ತಿಳಿಸಿವೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-08
|
|
|