ಲ೦ಡನ್: ಬಿಬಿಸಿ ಏಷ್ಯಾ ನೆಟ್‌ವರ್ಕ್ ಉಳಿಸಲು ಶಿಲ್ಪಾ ನೇತೃತ್ವ |
ಪ್ರಕಟಿಸಿದ ದಿನಾಂಕ : 2010-03-07
ಲಂಡನ್: ಬ್ರಿಟನ್‌ನಲ್ಲಿ ಭಾರೀ ಖ್ಯಾತಿ ಹೊಂದಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇದೀಗ ಬಿಬಿಸಿ ಏಷ್ಯಾ ನೆಟ್‌ವರ್ಕ್ ಉಳಿಸಿ ಆಂದೋಲನದ ನೇತೃತ್ವ ವಹಿಸಿದ್ದಾರೆ. ಹೆಚ್ಚುತ್ತಿರುವ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ತನ್ನ ಏಷ್ಯಾ ನೆಟ್‌ವರ್ಕ್ ಅನ್ನು ಶೀಘ್ರವೇ ಮುಚ್ಚುವುದಾಗಿ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೋರೇಷನ್(ಬಿಬಿಸಿ) ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಏಷ್ಯಾ ನೆಟ್‌ವರ್ಕ್‌ನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ನಟಿ ಶಿಲ್ಪಾಶೆಟ್ಟಿಗೆ ಬ್ರಿಟನ್ ಮತ್ತು ಏಷ್ಯಾದ ೧೦೦ ಪ್ರಮುಖರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಈ ಬಗ್ಗೆ ಬಿಬಿಸಿ ಟ್ರಸ್ಟ್ ಅಧ್ಯಕ್ಷ ಸರ್ ಮೈಕೆಲ್ ಲ್ಯಾನ್ಸ್ ಅವರಿಗೆ ಶಿಲ್ಪಾ ಶೆಟ್ಟಿ, ಒಲಿಂಪಿಕ್ ಬಾಕ್ಸರ್ ಅಮಿರ್ ಖಾನ್, ನಟಿ-ಬರಹಗಾರ್ತಿ ಮೀರಾ ಸ್ಯಾಲ್ ಅವರು ಪತ್ರ ಬರೆದು ಏಷ್ಯಾದ ಬಿಬಿಸಿ ರೇಡಿಯೋ ಸ್ಟೇಷನ್‌ಗಳನ್ನು ಉಳಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಬ್ರಿಟನ್‌ನ ಗಾರ್ಡಿಯನ್ ಪತ್ರಿಕೆಯಲ್ಲಿ ಈ ಪತ್ರ ಪ್ರಕಟವಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-07 00:00:00
|
|
|