ಶನಿವಾರ, 11-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಾಂಗ್ರೆಸ್ಸಿಗರಿಂದ ವಿನಾ ಕಾರಣ ನನ್ನ ಟಾರ್ಗೆಟ್ : ರಾಜೀನಾಮೆ ನೀಡಲು ನಾನೇನು ಅಶ್ಲೀಲತೆಯಲ್ಲಿ ತೊಡಗಿಲ್ಲ : ಕಾಂಗ್ರೆಸ್ ಆರೋಪಕ್ಕೆ ರಘುಪತಿಭಟ್ ಅಸಮಾಧಾನ
Latest news item ಅಶುದ್ದವಾದ ಸೇಂಟ್ ಮೇರಿಸ್ ದ್ವೀಪಕ್ಕೆ ಕಾಂಗ್ರೇಸ್ ನಿಂದ ಗಣಹೋಮ
Latest news item ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ'
Latest news item ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು?
Latest news item ವಿಜೃಂಬಣೆಯಿಂದ ಸಂಪನ್ನಗೊಂಡ ಹೆರ್ಗ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ
Latest news item `ಹಾಲ್ ಆಫ್ ಫೇಮ್'ಗೆ ಗಾವಸ್ಕರ್
Latest news item ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ
Latest news item ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ
Latest news item ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
‘ಮಲಬಾರ್ ಪೈಡ್ ಹಾರ್ನ್ ಬಿಲ್’ ಗಳಿಗೂ ಆಗಾಗ ‘ನಶೆ’ ಏರುತ್ತದೆ!

ಹಾರ್ನ್ ಬಿಲ್ ಹಕ್ಕಿಗೆ ‘ನಶೆ’ ಏರುತ್ತದೆಯೇ?! ಆಗಾಗ ಏರುತ್ತದೆ! ಏರಿದ್ದು ಇಳಿಯುವವರೆಗೆ ಆಗಸಕ್ಕೆ ಲಗ್ಗೆ ಹಾಕಬಲ್ಲ ಈ ಕೌತುಕದ ಪಕ್ಷಿ ಭೂಮಿಗಿಳಿಯುತ್ತದೆ!

ವನ್ಯಜೀವಿಗಳ ಖ್ಯಾತ ಛಾಯಾಗ್ರಾಹಕ ನರೇಂದ್ರ ಪಾಟೀಲ್ ಕವಳೇಶ್ವರ ಗುಡ್ಡದಲ್ಲಿ ಕ್ಲಿಕ್ಕಿಸಿದ ಅಪರೂಪದ ಫೊಟೋ ಇದು. ಖ್ಯಾತ ಪರಿಸರಪ್ರೇಮಿಗಳಾದ ಪ್ರೊ. ಗಂಗಾಧರ ಕಲ್ಲೂರ ಹಾಗೂ ಪ್ರೊ. ಆಂಟೋನಿ ಅವರೊಂದಿಗೆ ಕವಳೇಶ್ವರ ಗುಡ್ದದಲ್ಲಿ ಚಾರಣ ಕೈಗೊಂಡಾಗ ‘ನಶೆ ಏರಿದ್ದ ರಿಂದ’ ಸುಸ್ತು ಹೊಡೆದು - ಬಳಲಿ, ನೆಲಕ್ಕೊರಗಿದ್ದ ಮಲಬಾರ್ ಪೈಡ್ ಹಾರ್ನ್ ಬಿಲ್ ಪಕ್ಷಿ ಕೈಗೆ ಸಿಕ್ಕಾಗ ತೆಗೆದ ಛಾಯಾಚಿತ್ರವದು. ಆಕಸ್ಮಿಕವಾಗಿ ಕೈಗೆ ಸಿಕ್ಕ, ನಿಸರ್ಗದ ಕೌತುಕವೊಂದರ ಆರೈಕೆಯಲ್ಲಿ ಅವರು ತೊಡಗಿದ ಮಾನವೀಯ ಕಳಕಳಿಯ ದೃಷ್ಯವಿದು.

ಮಲಬಾರ್ ಪೈಡ್ ಹಾರ್ನ್ ಬಿಲ್ (ಮಂಗಟ್ಟೆ ಹಕ್ಕಿ) ಪಶ್ಚಿಮ ಘಟ್ಟದ ಕಾಡುಗಳಿಗೆ ಹೊಂದಿಕೊಂ ಡಿರುವ ಹಳಿಯಾಳ, ದಾಂಡೇಲಿ ಹಾಗೂ ಅಂಬಿಕಾನಗರಗಳಲ್ಲಿ ಕಾಡಿನ ಆರೋಗ್ಯ ಸೂಚಕ ಪಕ್ಷಿಯಾಗಿ ಗುರುತಿಸಲ್ಪಡುತ್ತದೆ. ಈ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರೆ ಕಾಡು ಆರೋಗ್ಯಪೂರ್ಣವಾಗಿದೆ ಎಂದರ್ಥ. ಸಂಖ್ಯೆ ಕ್ಷೀಣಿಸಿದ್ದರೆ ಕಾಡಿನ ಯಾವುದೋ ಭಾಗದಲ್ಲಿದ್ದ ಹಣ್ಣಿನ ಮರಗಳು ಆಹುತಿಯಾಗಿವೆ; ಹಾಗಾಗಿ ಕಾಡಿನ ಸಮತೋಲನ ತಪ್ಪಿ ಅನಾರೋಗ್ಯ ಅಪ್ಪಳಿಸಿದೆ ಎಂದು ಗಣಿಸಲಾಗುತ್ತದೆ.

ಮಲಬಾರ್ ಪೈಡ್ ಹಾರ್ನ್ ಬಿಲ್ ಹಕ್ಕಿಗೆ ಹಿಂದಿ ಭಾಷೆಯಲ್ಲಿ ‘ಧನ್ ಛಿರಿ’, ಬಂಗಾಳಿಯಲ್ಲಿ ‘ಬಾಗ್ಮಾ ಧನೇಶ್’, ಓರಿಯಾದಲ್ಲಿ ‘ಕುಛಲಾ ಖಾ’, ಮರಾಠಿಯಲ್ಲಿ ‘ವಯೇರಾ’, ಕೊಂಕಣಿಯಲ್ಲಿ ‘ಕನಾರಿ’, ತಮಿಳಿನಲ್ಲಿ ‘ಇರಟ್ಟಾಯ್ ಛೋಂಡು ಕುರುವಿ’, ಮಲಯಾಳಿಯಲ್ಲಿ ‘ವೆಝಂಬಾಲ್’ ಎಂದು ಕರೆಯಲಾಗುತ್ತದೆ. ಅಂಜೂರ ಜಾತಿಯ ಅತ್ತಿ, ಆಲ, ಬಸರಿ ಸೇರಿದಂತೆ ಎಲ್ಲ ತರಹದ ಕಾಡಿನ ಹಣ್ಣಿನ ಮರಗಳಲ್ಲಿ ಗುಂಪು ಗೂಡಿ ಮಕ್ಕಳಂತೆ ಗಲಾಟೆ ಎಬ್ಬಿಸಿ ಹಣ್ಣುಗಳನ್ನು ಹೆಕ್ಕುವು ದು ನಯನ ಮನೋಹರ ದೃಷ್ಯ.

ಅನಿವಾರ್ಯ ಪ್ರಸಂಗಗಳಲ್ಲಿ ಹಲ್ಲಿ, ಓತಿಕ್ಯಾತ, ಇಲಿ, ಮರಿ ಹೆಗ್ಗಣ ಮರಿ ಪಕ್ಷಿಗಳನ್ನು ಸಹ ಹಾರ್ನ್ ಬಿಲ್ ಕಬಳಿಸಬಲ್ಲುದು ಎನ್ನುತ್ತಾರೆ ಡಾ. ಸಲೀಂ ಅಲಿ. ಮಂಗಟ್ಟೆ ಹಕ್ಕಿ ಕೂಗಿದಾಗ ಕೇಕೆ ಹೊಡೆದು ನಕ್ಕ ಹಾಗೆ ಭಾಸವಾಗುತ್ತದೆ. ಮರದಿಂದ ಮರಕ್ಕೆ ಹಾರುವಾಗ ರೆಕ್ಕೆ ಬಡಿದು ತೇಲುವ ಅವುಗಳ ಕ್ಷಮತೆ ಹೆಲಿಕಾಪ್ಟರ್ ನೆನಪಿಸುವಂತಿರುತ್ತದೆ.

ಮಲಬಾರ್ ಪೈಡ್ ಹಾರ್ನ್ ಬಿಲ್ ತಿನ್ನುವ ಹಣ್ಣುಗಳು ಅತ್ಯಂತ ಮಾಗಿದ್ದು, ಕಳೆತ ಹಾಗೂ ಇನ್ನೇನು ಕೊಳೆಯುವ ಸ್ಥಿತಿ ತಲುಪಿದ್ದರೆ; ಮತ್ತು, ಅದು ದೀರ್ಘ ಕಾಲದ ಉಪವಾಸದ ನಂತರ ಏಕಾಏಕಿ ಗರಿಷ್ಠ ಪ್ರಮಾಣದಲ್ಲಿ ಅಂತಹ ಕಳೆತ ಹಣ್ಣುಗಳನ್ನು ತಿಂದಾಗ ಆಯ ತಪ್ಪಿ ನೆಲಕ್ಕೊರ ಗುತ್ತದೆ. ಹಾಗೆ ತಲೆ ಸುತ್ತಿದಾಗ ಕೂಡಲೇ ಸುಧಾರಿಸಿಕೊಳ್ಳಲು ಅದಕ್ಕೆ ನೀರು ದೊರಕದೇ ಹೋದಾಗ ಹಕ್ಕಿಯ ಜಠರದಲ್ಲಿ ಕಳೆತ-ಕೊಳೆತ ಹಣ್ಣುಗಳ ‘Firmentation‘ ದಿಂದಾಗಿ ‘ಅಲ್ಕೋ ಹಾಲ್’ ಉತ್ಪತ್ತಿಯ ಪ್ರಮಾಣ ಹೆಚ್ಚಾಗಿ ಬವಳಿ ಬಂದಂತಾಗಿ ಬೃಹತ್ ದೇಹಿ ಧರಾಶಾಯಿ ಆಗುತ್ತ ದೆ ಎನ್ನುತ್ತಾರೆ ಪ್ರೊ. ಗಂಗಾಧರ ಕಲ್ಲೂರ.

ಹೀಗೆ ಆಯತಪ್ಪಿ ನೆಲಕ್ಕೊರಗಿದ ಸಂದರ್ಭದಲ್ಲಿ ಕಾಡಿನ ಸೀಳು ನಾಯಿಗಳಿಗೆ, ನರಿ, ತೋಳಗ ಳಿಗೆ, ಹೈನಾ ಹಾಗೂ ಈ ಭಾಗದ ಕಪ್ಪು ಚಿರತೆಗಳಿಗೆ ಮಲಬಾರ್ ಪೈಡ್ ಹಾರ್ನ್ ಬಿಲ್ ಆಹುತಿ ಯಾಗುವ ಸಂಭವ ಹೆಚ್ಚು. ಬೃಹದಾಕಾರದ ಈ ಪಕ್ಷಿ ತನ್ನೆಲ್ಲ ಶಕ್ತಿ ಒಗ್ಗೂಡಿಸಿಕೊಂಡು ಹಾರಲು ಕನಿಷ್ಟ ವಿಶಾಲ ಜಾಗೆಯ ವರೆಗೆ ತೆವಳಬೇಕಾಗುತ್ತದೆ. ಕವಳೇಶ್ವರ ಗುಡ್ಡದಲ್ಲಿ ಹೀಗೆ ನೆಲಕ್ಕೊರಗಿ ಹಾರಲು ಪ್ರಯಾಸ ಪಡುತ್ತಿದ್ದ ಹಾರ್ನ್ ಬಿಲ್ ಸುದೈವದಿಂದ ಇವರಿಗೆ ಸಿಕ್ಕಿತ್ತು. ಅತ್ಯಂತ ಜಾಗ ರೂಕತೆಯಿಂದ ಬಂಧಿಸಿದ ಪ್ರೊ. ಕಲ್ಲೂರ್ ಸುಮಾರು ೨ ಲೀಟರ್ ನೀರಿನಲ್ಲಿ ಗ್ಲುಕೋಸ್ ಸೇರಿಸಿ ಬಾಟಲಿಯಿಂದ ಕೊಕ್ಕಿನ ಮೂಲಕ ಕುಡಿಸಿ ಪ್ರಥಮ ಚಿಕಿತ್ಸೆ ನೀಡಿದಾಗ ಪ್ರಜ್ಞಾ ಸ್ಥಿತಿಗೆ ಮರಳಿತು. ಒಂದು ಗಂಟೆಯ ನಂತರ ಹಕ್ಕಿಯ ಜಠರದಲ್ಲಿದ್ದ ಎಲ್ಲ `firmented' ದ್ರವ ಉಚ್ಛಿಷ್ಠ ರೂಪದಲ್ಲಿ ಹೊರಬಂದು ಹಾರ್ನ್ ಬಿಲ್ ತುಸು ಗೆಲುವಾಯಿತು.

ಖುಷಿಯಿಂದ ಚಾರಣ ಪ್ರಿಯರೆಲ್ಲ ಈ ಮಂಗಟ್ಟೆಯನ್ನು ಕವಳೇಶ್ವರದ ಸಾವಿರ ಮೆಟ್ಟಿಲುಗಳ ಮೇಲೆ ಒಯ್ದು ಅಲ್ಲಿಂದ ರೆಕ್ಕೆ ಅಗಲಿಸಿ ಹಾರಿ ಬಿಟ್ಟರು. ಗೆಲುವಾಗಿದ್ದ ಹಾರ್ನ್ ಬಿಲ್ ತುಸು ದೂರ ಕೆಳ ಮಟ್ಟದಲ್ಲಿ ಹಾರಿ ನಂತರ ಆಗಸಕ್ಕೆ ಚಿಮ್ಮಿ ಹಾರಿತು!

ರಣ ಹದ್ದಿನ ಗಾತ್ರದ ಈ ಹಕ್ಕಿಗೆ ಅಗಾಧವಾದ ಕೊಕ್ಕಿನ ಮೇಲೆ ಖಡ್ಗ ಮೃಗಕ್ಕಿರುವಂತೆ ಕೊಂಬು. ಕುತ್ತಿಗೆ ಹಾಗೂ ರೆಕ್ಕೆಗಳ ಬಣ್ಣ ಕಪ್ಪು. ಕೆಲವು ಮಂಗಟ್ಟೆಗಳಿಗೆ ಕುತ್ತಿಗೆ ಹಾಗೂ ಎದೆಯ ಮೇಲೆ ಬಿಳಿ ಪಟ್ಟಿಗಳಿರುತ್ತವೆ. ಗಲ್ಲದ ಬಳಿ ಕೆಂಪು ಪಟ್ಟಿ ಸಹ ಇರಬಹುದು. ಉದ್ದವಾದ ಬಿಳಿ ಬಾಲದ ತುದಿಯಲ್ಲಿ ಕಪ್ಪು ಪಟ್ಟಿಗಳು ಹಕ್ಕಿಯ ಸೌಂದರ್ಯಕ್ಕೆ ಕಿರೀಟವಿಟ್ಟಂತೆ ಭಾಸವಾಗುತ್ತದೆ. ರೆಕ್ಕೆಗಳ ಅಂಚಿನಲ್ಲಿರುವ ಬಿಳಿ ಪಟ್ಟಿಗಳು ಹಕ್ಕಿ ಹಾರಿದಾಗ ಸ್ಪಷ್ಟವಾಗಿ ಕಾಣುತ್ತವೆ. ನಮ್ಮ ದೇಶದ ಹಿಮಾಲಯದ ತಪ್ಪಲಿನಲ್ಲಿ, ಕರ್ನಾಟಕದ ಮುಕುಟವಾಗಿರುವ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಇವು ಕಂಡುಬರುತ್ತವೆ. ಪರಿಸರ ಹಾನಿ, ಹಣ್ಣಿನ ಮರಗಳ ಕೊರತೆ ಹಾಗೂ ಶಿಕಾರಿಗಳ ದೆಸೆಯಿಂದ ಈ ದೊಡ್ಡ ಮಂಗಟ್ಟೆ ಹಕ್ಕಿಗಳು ವಿನಾಶದ ಅಂಚಿಗೆ ತಲುಪಿವೆ ಎನ್ನುತ್ತಾರೆ ತಜ್ಞರು.

ಪ್ರೊ. ಕಲ್ಲೂರ್ ಅಭಿಪ್ರಾಯ ಪಡುವಂತೆ -"ಮಾರ್ಚ್ ತಿಂಗಳಿನಿಂದ ಜೂನ್ ವರೆಗೆ ಮಂಗಟ್ಟೆಗಳು ಸಂತಾನಾಭಿವೃದ್ಧಿಯಲ್ಲಿ ತೊಡಗಿಕೊಳ್ಳುತ್ತವೆ. ಕೆಲವೊಮ್ಮೆ ಫೆಬ್ರುವರಿ ತಿಂಗಳಿನಲ್ಲಿಯೂ ಅವುಗಳ ಸಂಸಾರ ಆರಂಭಗೊಳ್ಳಬಹುದು. ಆದರೆ, ಕಾಡು ಈಗ ಮೊದಲಿನಂತೆ ಉಳಿದಿಲ್ಲ. ಮಾನವ ನಿರ್ಮಿತ ‘ಮ್ಯಾನ್ ಗ್ರೋವ್’ಮಾದರಿ ಪಶ್ಚಿಮ ಘಟ್ಟದ ಅಳಿದು-ಉಳಿದ ಕಾಡಿನಲ್ಲಿ ಸಾಮಾಜಿಕ ಅರಣ್ಯೀಕರಣದ ಹೆಸರಿನಲ್ಲಿ ಸ್ಥಳೀಯ ಜೈವಿಕ ಸಂರಚನೆ ಹಾಗೂ ಸೂಕ್ಷ್ಮತೆ ಅರಿಯದೇ (ಇದು ನಮ್ಮ ಅರಿವಿಗೆ ಮೀರಿದ ವಿಚಾರವೂ ಹೌದು; ಮಿತಿಯೂ ಹೌದು.

ಲಕ್ಷಾಂತರ ಸೂಕ್ಷ್ಮ ಕೊಂಡಿಗಳನ್ನು ತನ್ನೊಳಗೆ ಬೆಸೆದುಕೊಂಡಿರುವ ಸಂಕೀರ್ಣ ವ್ಯವಸ್ಥೆ ಅದು.) ವೃಕ್ಷಾರೋಪಣ ಕಾರ್ಯಕ್ರಮ ಮಾಡಿದೆವು. ಫಲವಾಗಿ ಕಾಡಿನ ಹಣ್ಣಿನ ಗಿಡಗಳು ಹೇಳಹೆಸರಿಲ್ಲ ದಂತಾದವು. ಹಾಗಾಗಿ ಬದುಕಲು ಅನಿವಾರ್ಯವಾಗಿ ಹಣ್ಣಿನ ಗಿಡಗಳನ್ನು ಅರಸಿಕೊಂಡು ನೂರಾರು ಕಿಲೋ ಮೀಟರ್ ಗಂಡು ಮಂಗಟ್ಟೆ ಹಕ್ಕಿ ಕ್ರಮಿಸಬೇಕಾದ ಅನಿವಾರ್ಯತೆ ಇಂದು ಬಂದೊದಗಿದೆ. ಇದು ಕಾಡಿಗೆ ತಗುಲಿರುವ ಅನಾರೋಗ್ಯದ ಸೂಚಕವಲ್ಲದೇ ಮತ್ತೇನು?"

ಮಲಬಾರ್ ಪೈಡ್ ಹಾರ್ನ್ ಬಿಲ್ ಹಕ್ಕಿಯ ವಿಶೇಷವೆಂದರೆ ಸಂತಾನಾಭಿವೃದ್ಧಿ ಕಾಲಕ್ಕೆ ಹೆಣ್ಣು ಹಕ್ಕಿ ಕಾಡಿನ ಮಧ್ಯದ ದೊಡ್ಡ ಮರವನ್ನು ಹುಡುಕುತ್ತದೆ. ಅತ್ಯಂತ ಎತ್ತರದಲ್ಲಿ ಪೊಟರೆ ಕೊರೆದು ತಾನು ಅದರೊಳಗೆ ಇಳಿಯುತ್ತದೆ. ಘೇಂಡಾಮೃಗದಂತೆ ಕೊಕ್ಕಿನ ಮೇಲೆ ದೊಡ್ಡ ಕೊಂಬಿರುವ ಕಾರಣ ಆ ಹದ್ದಿನ ಗಾತ್ರದ ಹಕ್ಕಿಗೆ ಇಡಿಯಾಗಿ ಆ ಬಿಲದೊಳಗೆ ತೂರಿಕೊಳ್ಳುವುದು ಸಾಧ್ಯವಾ ಗದ ಮಾತು. ಹಾಗಾಗಿ ಹೆಣ್ಣು ಮಂಗಟ್ಟೆ ಸಮರ್ಪಕವಾದ ಆಕಾರಕ್ಕೆ ಗೂಡನ್ನು ತರಲು ಗಂಡಿನ ಸಹಾಯದಲ್ಲಿ ಪೊಟರೆ ಕೊರೆಯುತ್ತ ಹೋಗುತ್ತದೆ. ಗೂಡು ಸಮರ್ಪಕವಾಗಿದೆ ಎನಿಸಿದಾಗ ಹೆಣ್ಣು ಮಂಗಟ್ಟೆ ಒಳಹೊಕ್ಕು ಕೇವಲ ಒಂದು ಮೊಟ್ಟೆ ಇಡುತ್ತದೆ. (ಕೆಲವೊಮ್ಮೆ ೨ ಮೊಟ್ಟೆಗಳನ್ನು ಸಹ ಇಟ್ಟ ಉದಾಹರಣೆಗಳಿವೆ; ನಾಲ್ಕು ಮೊಟ್ಟೆ ಇಟ್ಟ ದಾಖಲೆ ಸಹ ಇದೆ, ಆದರೆ ಮರಿ ಮಾತ್ರ ಒಂದು ಬದುಕಬಹುದು) ಮೊಟ್ಟೆಯ ಬಣ್ಣ ಬಿಳಿ ಹಾಗೂ ಕಟ್ಟಿಗೆ ಕಂದು ಬಣ್ಣ ಹೋಲುತ್ತದೆ.

ಮೊಟ್ಟೆ ಇಟ್ಟ ತಕ್ಷಣ ಕೇವಲ ಕೊಕ್ಕು ಮಾತ್ರ ಹೊರಬರುವಂತೆ ವ್ಯವಸ್ಥೆ ಮಾಡಿಕೊಂಡು ಬಾಯಿ ಯ ಜೊಲ್ಲು, ಗಿಡದ ರಾಳ ಹಾಗೂ ಅಂಟು ಬಳಸಿ ಇಡೀ ಬಾಗಿಲನ್ನು ಭದ್ರವಾಗಿ ಮುಚ್ಚಿಕೊಂಡು ಬಿಡುತ್ತದೆ. ಗಂಡು ಮಂಗಟ್ಟೆ ತನ್ನ ಪತ್ನಿಗೆ ಆಹಾರ ಒದಗಿಸುವ ಸೇವಕನ ಕೆಲಸಕ್ಕೆ ಅಣಿಯಾಗು ತ್ತದೆ. ಇತ್ತ ಪೊಟರೆಯೊಳಗೆ ಹೆಣ್ಣು ಮಂಗಟ್ಟೆ ಮೊಟ್ಟೆಗೆ ಕಾವು ಕೊಡುತ್ತ, ತನಗೆ ಹಾಗೂ ಮೊಟ್ಟೆ ಒಡೆದು ಜೀವ ತಳೆಯಲಿರುವ ಮರಿಗೆ ಜಾಗೆ ಸಾಲದು ಎಂಬ ಕಾರಣಕ್ಕೆ ತನ್ನೆಲ್ಲ ಪುಕ್ಕಗಳನ್ನು ಕಿತ್ತು ಹೊರಗೆಸೆದು ಸಂಪೂರ್ಣ ಬೋಳಾಗಿ ಹಾರಲಾಗದ ಸ್ಥಿತಿಗೆ ತಲುಪುತ್ತದೆ.

ಹಾಗೆಯೇ, ಚಿಕ್ಕ ಗರಿಗಳನ್ನು ಬಳಸಿ ತನ್ನ ಮರಿಗೆ ಪೊಟರೆಯ ಒಳಗೆ ‘ಬೆಡ್’ಸಹ ನಿರ್ಮಾಣ ಮಾಡುತ್ತದೆ. ಮೊಟ್ಟೆಯೊಡೆದು ಮರಿ ಹೊರಬಂದು ಹಾರುವ ಸ್ಥಿತಿ ತಲುಪುವ ವೇಳೆಗೆ ತಾಯಿ ಹಕ್ಕಿ ಸಹ ತನ್ನ ರೆಕ್ಕೆಯ ಗರಿಗಳನ್ನು ಮರಳಿ ಪಡೆದುಕೊಂಡಿರುತ್ತದೆ. ಈ ಮಧ್ಯೆ, ಗಂಡು ಹಕ್ಕಿ ತನ್ನ ಕೊಕ್ಕಿನಲ್ಲಿ ನೀರನ್ನು ಹಿಡಿದು ತರಲು ಸಾಧ್ಯವಾಗದ್ದರಿಂದ ನೀರಿನ ಅಂಶ ಹೇರಳವಾಗಿರುವ ಹಣ್ಣುಗಳನ್ನೇ ಹುಡುಕಿ ತನ್ನ ಕೊಕ್ಕಿನಲ್ಲಿ ಸಿಕ್ಕಿಸಿಕೊಂಡು ತಂದು ತಾಯಿ ಹಾಗೂ ಮರಿ ಹಕ್ಕಿಗೆ ಉಣಬಡಿಸುತ್ತದೆ. ಸಮಯ ಸಿಕ್ಕಾಗ ತಾನೂ ತನ್ನ ಉದರಂಭರಣ ಮಾಡಿಕೊಳ್ಳುತ್ತದೆ. ಕೆಲ ವೊಮ್ಮೆ ತಾನು ಉಪವಾಸ ಉಳಿದು ತನ್ನವರಿಗಾಗಿ ಹಣ್ಣನ್ನು ಸಹ ಹೆಕ್ಕಿತರುತ್ತದೆ ಗಂಡು ಮಲ ಬಾರ್ ಪೈಡ್ ಹಾರ್ನ್ ಬಿಲ್!

ಮರಿ ಹಾರುವ ಹಂತ ತಲುಪಿದಾಗ ತಾಯಿ ಹಕ್ಕಿ ಗೂಡಿನ ಬಾಗಿಲನ್ನು ತನ್ನ ಕೊಕ್ಕಿನಿಂದ ಒಡೆದು ತೆಗೆಯುತ್ತದೆ. ಈ ಹಂತದಲ್ಲಿ ತಾಯಿ ಹಕ್ಕಿ ಹಾಗೂ ಮರಿಯ ರೆಕ್ಕೆಗಳು ಬಲಿತದ್ದರಿಂದ ಪೊಟರೆ ಅತ್ಯಂತ ಚಿಕ್ಕದಾಗುತ್ತ ಸಾಗಿರುತ್ತದೆ. ತಂದೆ ಹಕ್ಕಿಯ ಸುಪರ್ದಿಯಲ್ಲಿ ಮರಿ ತಾನು ಕಾಡಿನ ಬದುಕಿಗೆ ಅಣಿಗೊಳ್ಳುತ್ತದೆ. ತನಗೊಂದು ಸಂಗಾತಿ ಜತೆಯಾಗುವ ವರೆಗೆ ತಂದೆ-ತಾಯಿ ಹಕ್ಕಿಗಳೊಂದಿಗೆ ಮರಿ ಅನ್ಯೋನ್ಯವಾಗಿ ಸ್ವಚ್ಛಂದವಾಗಿ ಹಾರಾಡುತ್ತ ಬಾಳುತ್ತದೆ. ಹತ್ತಾರು ಬಾರಿ ಇದೇ ಗೂಡನ್ನು ಸಂತಾನಾಭಿವೃದ್ಧಿಗೆ ತಂದೆ-ತಾಯಿ ಹಕ್ಕಿಗಳು ಬಳಸಬಹುದು ಅಥವಾ ಆ ಪೊಟರೆಯಲ್ಲಿ ಜೀವ ತಳೆದಿದ್ದ ಮರಿ ಹಕ್ಕಿ ತನ್ನ ಸಂಗಾತಿಯೊಂದಿಗೆ ಇದೇ ಪೊಟರೆಗೆ ಆಗಮಿಸಿ ಹೊಸ ಸಂಸಾರ ಹೂಡಬಹುದು!

ಕಾಡನ್ನು ಬಿಟ್ಟು ಕಾಂಕ್ರೀಟ್ ನಗರಕ್ಕೆ ಹಣ್ಣಿನ ಗಿಡಗಳನ್ನು ಹುಡುಕಿ ದೊಡ್ಡ ಕೊಕ್ಕಿನ ಹಕ್ಕಿ ಹಾರಿ ಬಂದರೆ? ದೇವರ ದಯೆಯಿಂದ ಕೆಲ ಹಣ್ಣುಗಳನ್ನು ಅದು ಸಂಗ್ರಹಿಸಿದರೂ ತನ್ನ ಪತ್ನಿಯ ಗೂಡಿಗೆ ಮರಳುವ ವರೆಗೆ ಕೊಕ್ಕಿನಲ್ಲಿ ಕಾಯ್ದಿಟ್ಟುಕೊಳ್ಳಲು ಪಡುವ ಬವಣೆ ಆ ದೇವರಿಗೇ ಪ್ರೀತಿ. ಮಾರ್ಗ ಮಧ್ಯೆ ಗಂಡು ಮಲಬಾರ್ ಪೈಡ್ ಹಾರ್ನ್ ಬಿಲ್ ಹಸಿವೆಯಾಗಿದೆ ಎಂದು ಹಣ್ಣುಗಳನ್ನು ನುಂಗು ವಂತಿಲ್ಲ! ಹೈ ಟೆನ್ಶನ್ ವಿದ್ಯುತ್ ವಾಯರ್ ಗಳ ಬಗ್ಗೆ ಅರಿವಿರದ ಈ ಹಕ್ಕಿ ಅಪ್ಪಿ ತಪ್ಪಿ ಹಾರಿ ಬಂದು, ಕುಳಿತಲ್ಲಿ ಅಥವಾ ಆಯ ತಪ್ಪಿ ರೆಕ್ಕೆಗಳು ಬಡಿದಲ್ಲಿ ಅದು ಸತ್ತೇ ಹೋಗುವ ಅಪಾಯ ವಿದೆ. ನಗರ ಪರಿಸರಕ್ಕೆ ಹೊಂದಿಕೊಂಡಿರುವ ಪಕ್ಷಿಗಳು ಅದನ್ನು ಅಟ್ಟಿಸಿಕೊಂಡು ಹೋಗುವ ಭೀತಿ ಯಾವತ್ತೂ ಆವರಿಸಿರುತ್ತದೆ.

ನಗರ ಭೇಟಿಯ ಸಂದರ್ಭದಲ್ಲಿ ಗಂಡು ಹಕ್ಕಿ ಆಕಸ್ಮಿಕವಾಗಿ ಸಾವನ್ನಪ್ಪುವ ಅವಘಡ ಸಂಭವಿಸಿ ದರೆ....ರೆಕ್ಕೆ ಕಳೆದುಕೊಂಡು ಪೊಟರೆಯೊಳಗೆ ಬಂಧಿಯಾಗಿರುವ ಹೆಣ್ಣು ಹಕ್ಕಿ, ಜೀವ ತಳೆದಿರುವ ಅಥವಾ ತಳೆಯುತ್ತಿರುವ ಹಕ್ಕಿ ಮರಿ ಹತ್ತಾರು ದಿನಗಳು ಹಸಿವಿನಿಂದ ಬಳಲಿ ಪೊಟರೆಯೊಳಗೆ ಸಾವನ್ನಪ್ಪುತ್ತವೆ. ಆ ಪೊಟರೆ ಸ್ಮಶಾನವಾಗಿ ಪರಿವರ್ತಿತಗೊಳ್ಳುತ್ತದೆ. ಏಕ ಪತಿ ಹಾಗೂ ಪತ್ನಿ ವೃತಸ್ಥ ಮಂಗಟ್ಟೆಗಳು ಹಾಗೇನಾದರೂ ಅಕಾಲಿಕವಾಗಿ ಸಾವನ್ನಪ್ಪಿದರೆ ಬದುಕುಳಿದ ಹಕ್ಕಿ ಏಕಾಂಗಿಯಾಗಿ ಜೀವನ ಸವೆಸುತ್ತದೆ. ಬೇರೆ ಯಾವುದೇ ಮಂಗಟ್ಟೆ ದಂಪತಿ ಹಾಗೆ ಸ್ಮಶಾನ ವಾಗಿ ಪರಿವರ್ತಿತಗೊಂಡ ಪೊಟರೆಯನ್ನು ಸಂತಾನಾಭಿವೃದ್ಧಿಗೆ ಎಂದಿಗೂ ಬಳಸುವುದಿಲ್ಲ. ಅದು ಶಾಶ್ವತವಾಗಿ ತ್ಯಜಿಸಲ್ಪಟ್ಟ ಮನೆಯಾಗುತ್ತದೆ.

ಇತ್ತ ಗೂಡಿನಲ್ಲಿ ಹಾರಲಾಗದ ಸ್ಥಿತಿಯಲ್ಲಿ ಬಂಧಿಯಾದ ಹೆಣ್ಣು ಮಂಗಟ್ಟೆಗೆ ಬೇಟೆಗಾರರ ಕಾಟ ಸಹ ಇಲ್ಲವೆಂದಲ್ಲ. ಕಾಡು ಬೋಳಾಗಿ ಕೆಲವೇ ಎತ್ತರದ ಮರಗಳು ಉಳಿದಿರುವ ‘ಹೆಸರಿಗೆ ಕಾಡು’ಗಳಲ್ಲಿ ಬೇಟೆಗಾರರ ಹದ್ದಿನ ಕಣ್ಣುಗಳಿಗೆ ಎತ್ತರದ ಮರದ ಮೇಲೆ ಪೊಟರೆಯೊಳಗಿಂದ ತನ್ನ ದೊಡ್ಡ ಕೊಂಬನ್ನು ಹೊರ ಚಾಚಿ ಕುಳಿತ ತಾಯಿ ಹಕ್ಕಿಯನ್ನು ಗುರುತಿಸುವುದು ಕಷ್ಟದ ಕೆಲಸವೇನಲ್ಲ. ಸಹಜವಾಗಿ ಬೇಟೆಗಾರರ ಬಲಿಗೆ ಆಹುತಿಯಾಗುವ ಹೆಣ್ಣು ಹಕ್ಕಿ, ಅದರ ಮರಿ ಅಥವಾ ಮೊಟ್ಟೆ, ಗಂಡು ಹಕ್ಕಿಯನ್ನು ಜೀವನಪರ್ಯಂತ ಏಕಾಂಗಿ ಆಗಿಸಿಬಿಡುತ್ತದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಹರ್ಷವರ್ಧನ ಎನ್.
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-07 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
»ಈ ಗುಲಾಬಿ ಇರುವುದು ನಿನಗಾಗಿ...
»ನಿಮ್ಮ ಪ್ರೇಮ ಚಿರಾಯುವಾಗಲಿ...
»ಶಂಕರ್ ಸಾವಿಗೆ ಕಾರಣಳಾದ ಆ ಮಾಯಾವಿ ಯಾರು?
»ಮನಃಶಾಸ್ತ್ರಕ್ಕೆ ವೇದಾಂತದ ಅಡಿಗಲ್ಲು...
»ಪಳೆಯುಳಿಕೆಗಳಾಗುತ್ತಿರುವ ಗ್ರಾಮೀಣ ಪರಿಕರಗಳು: ಸಾಂಪ್ರದಾಯಿಕ ಪರಿಕರಗಳು ಆಧುನಿಕತೆಯ ಸೋಗಿನಲ್ಲಿ ಕಣ್ಮರೆ
»ಕೋಮುವಾದದತ್ತ ಜಾರುತ್ತಿದೆಯೇ ಭಾರತ?...
»ವಿದೇಶದಲ್ಲಿದ್ದವನ ಭಾರತದ ಮೆಲುಕುಗಳು..!
»ಮಾತು ಬೇರೆ ಬೇಕೆ ಗೆಳೆಯ ...
»ಕೋಡಗನ ಕೋಳಿ ನುಂಗಿತ್ತಾ....
»ರಾಜಕೀಯ ನನಗೆ ಆಶ್ರಯ ತಾಣ ಅಲ್ಲ!
» ಜರ್ಮನಿಯಲ್ಲಿ ದೇವುಪೂಂಜ, ಜುಮಾದಿ : ಕಟ್ಟ್ ನಿಘಂಟುಗಳ ಕೋಲ ನೇಮಗಳಲ್ಲಿ ಪದಭೂತಗಳ ನಲಿಕೆ
»ಮನೆಯ ಪರಿಸರ ಚೆನ್ನಾಗಿರ್ಬೇಕಂದ್ರೆ ಕುಡಿತ ಬಿಡಬೇಕು:ಸಾಲುಮರದ ತಿಮ್ಮಕ್ಕ
» ಸುಗ್ಗಿಯ ಕಾಲದ ಹಬ್ಬ: ಉತ್ತರಾಯಣದ ಪುಣ್ಯಕಾಲ ಮಕರ ಸಂಕ್ರಾಂತಿ
»ಪ್ರಕೃತಿ-ಚಾರಣ ಪ್ರಿಯರ ಸ್ವರ್ಗ ಕುಮಾರಪರ್ವತ...
»ಫ್ರೀಲಾನ್ಸ್ ಪತ್ರಕರ್ತನಾಗುವುದು ಹೇಗೆ?...
»ಹೊಸವರ್ಷದಲ್ಲಿ ನಾವೂ ಹೊಸಬರಾಗೋಣ...
»ಕನ್ನಡಪ್ರೇಮಿ ಕರ್ನಾಟಕ ಕ್ರೈಸ್ತರಿಗೆ ಜಯಹೆ
»ಸುತ್ತೂರಿನಲ್ಲೊಂದು ಕೃಷಿ ಬ್ರಹ್ಮಾಂಡ...
»ಆತನೂ ಅನಿವಾರ್ಯ. . .
»ಜವರಾಯನ ಲೋಕಕ್ಕೆ `ಪತ್ತೇದಾರ'ನ ಪಯಣ ( ಪರಿಷ್ಕ್ತತ ವರದಿ )
»ಸುರೇಶ್ ಗೌಡ ಮಾತ್ರ ಯಾಕೆ ಉಡುಗೊರೆಗೆ ಯೋಗ್ಯ!
»ಅಟಲ್‌ಜೀ ಒಡನಾಟದ ಝಲಕು-ಮೆಲುಕು
»ಶೂನ್ಯ ಬಂಡವಾಳ ಪ್ರತಿಪಾದಕ ಬಡಗರ ಸಿದ್ದಾಶ್ರಮದ ಶ್ರೀ. ಮೋಹನಕುಮಾರ್ ಸ್ವಾಮೀಜಿ
»ಮದ್ಯಪಾನದ ಮೋಜಲ್ಲಿ ಆರೋಗ್ಯ ಮರೆಯದಿರಿ
»ಮಡಿಕೇರಿಯಲ್ಲಿ ಮಂಜಿನ ಚಿತ್ತಾರ...
»ಮಲೇರಿಯಾ ತಡೆಯೋದಕ್ಕೆ ಕೆರೆ ಮುಚ್ಚಿದ್ರು, ಗೊತ್ತಾ?
»ಕರ್ಮವೀರ ಪುರಸ್ಕಾರ ಪ್ರಶಸ್ತಿ ವಿಜೇತ ಕೊಡಕ್ಕಲ್ ಶಿವಪ್ರಸಾದ್
» ಕoದ....
»ಸರ್ಕಾರವೇ ಭೂ ದಲ್ಲಾಳಿಯಾದರೆ ಜನರ ಗತಿ ಏನು?
»ಸುಳ್ಯದ ಸಮ್ಮೇಳನದಲ್ಲಿ ಕನ್ನಡ ನಾಡಗೀತೆ ಹಾಡಿದ ಸ್ವೀಡನ್ನಿನ ಸಿಸಿಲಿಯಾ
»ಗೋಬಿ ಮಂಚೂರಿ : ಎಚ್ಚರ !
»ಶಾಲೆ ಮುಚ್ಚುವ ನಿರ್ಧಾರದಲ್ಲಿ ಗೊಂದಲಗಳಿವೆ : ಮುಖ್ಯಮ೦ತ್ರಿ ಚ೦ದ್ರು ಅವರೊ೦ದಿಗೆ ಸ೦ದರ್ಶನ
»ಮೈಕ್ರೋ ವೇವ್ ಕುಕ್ಕಿಂಗ್
»ಹೆಣ್ಣೇ ನಿನಗೆ ನಮೋ ನಮಃ...
»ಮಡೆಸ್ನಾನ: ತಿಳಿಹೇಳುವುದನ್ನು ಬಿಟ್ಟು ನಂಬಿಕೆ ನೆಪವೇಕೆ? ...
»ಸಾಮಾಜಿಕ ತಾಣಗಳಲ್ಲೂ ಬೇಕಲ್ಲವೇ ಸ್ವಾಸ್ಥ್ಯದ ಪರಿಕಲ್ಪನೆ?...
»ಮೂಲಭೂತ ಸೌಕರ್ಯವಿಲ್ಲದೆ ನರಳುತ್ತಿರುವ ರೆಡ್‌ಕ್ರಾಸ್ ಶಾಲಾ ವಿದ್ಯಾರ್ಥಿಗಳು: 17 ತಿಂಗಳಿನಿಂದ ಸಂಬಳವಿಲ್ಲದೆ ಕಂಗಾಲಾದ ಸಿಬ್ಬಂದಿ
»ಹಾಲಿ - ಮಾಜಿ ಮುಖ್ಯ ಮಂತ್ರಿಗಳಿಗೊಂದು ಬಹಿರಂಗ ಪತ್ರ...
»ನೂರೆಂಟು ನೋಟ: ಪ್ರೇಮ ಚಲನೆಯ ಸಂಕೇತ, ಮದುವೆ ನಿಶ್ಚಲದ ಪ್ರತೀಕ!
»ಎಲ್ಲಕ್ಕೂ ಒಂದು ಕೊನೆಯಿದೆ, ಮಡೆಸ್ನಾನಕ್ಕೂ ಇರಲಿ
»ಪುಣ್ಯಕೋಟಿಯ ಹಾಡು....
» ಪೌರಾಣಿಕ ಹಿನ್ನಲೆಯಲ್ಲೂ ಪ್ರಸಿದ್ದ: ಅದ್ಬುತ ಪ್ರವಾಸಿ ತಾಣ; ಶಿರಸಿಯ ಯಾಣ
»ಒಂದು ಕ್ಷಣದ ಆತುರದಿಂದ ತನ್ನ ಜೀವವನ್ನೇ ತೆತ್ತ ಆ ಚಿಕ್ಕ ಹುಡುಗ.
»ಭಾಷಾ ದುರಾಭಿಮಾನಿಗಳನ್ನು ಕನ್ನಡದ ನೆಲದಿಂದ ದೂರವಿಡಿ..!
»ಪರಮಾತ್ಮ ಸ್ವರೂಪ ...
»ಕಣ್ಣಾಲಿಗಳು ತೇವವಾಗುತ್ತದೆ...
»ಕನಕದಾಸರ ಜನ್ಮದಿನದ ಜಿಜ್ಞಾಸೆ : ಆಧ್ಯಾತ್ಮ ಕ್ಷೇತ್ರ: ಕನಕದಾಸರ ಕೊಡುಗೆ ಅಪಾರ
»ಕುಂಬಾರರೀಗ ಕುಲಕಸುಬು ನೆಚ್ಚಿಕೊಳ್ಳುವಂತಿಲ್ಲ...
»ಕಳಪೆ ರಸ್ತೆ ಕಾಮಗಾರಿ ಮತ್ತು ಮಾಹಿತಿ ಹಕ್ಕು ಕಾನೂನು............

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri