ಭೂಸ್ಖಲನ: ಯಾರಿಗೆ ಬೇಕು ಈ ಲೋಕ? |
ಪ್ರಕಟಿಸಿದ ದಿನಾಂಕ : 2010-03-07
ಹವಾಮಾನ ವೈಪರೀತ್ಯದ ವಿಷಯ ಬಂದಾಗಲೆಲ್ಲಾ ಹಿಮಾಲಯದ ನೀರ್ಗಲ್ಲಿನದೇ ಯೋಚನೆ. ಪರಿಸರವಾದಿಗಳು ಹಿಮಾಲಯದ ನೀರ್ಗಲ್ಲುಗಳ ಮೇಲೆ `ಮಲಗಿಬಿಟ್ಟರು'. ಆದರೆ ಅದಕ್ಕಿಂತ ಪಶ್ಚಿಮ ಘಟ್ಟಗಳ ಮೇಲೆ ಹೆಚ್ಚು ಪರಿಣಾಮ ಆಗುತ್ತದೆ ಎಂಬ ಜಾಗೃತಿ ಕಾಣಲೇ ಇಲ್ಲ.
ಪಶ್ಚಿಮಘಟ್ಟವೆಂಬ ದೇವಲೋಕಕ್ಕೆ ನಿರಂತರವಾಗಿ ರಕ್ಕಸರ ದಾಳಿ ಆಗುತ್ತಲೇ ಇದೆ. ಈ ದೇವ ಲೋಕದ ವ್ಯಾಪ್ತಿ ಒಂದು ರಾಜ್ಯಕ್ಕೆ ಸೇರಿದ್ದಲ್ಲ. ಕರ್ನಾಟಕ, ಗೋವಾ, ತಮಿಳುನಾಡು, ಕೇರಳ ಸೇರಿ ೬ ರಾಜ್ಯಗಳನ್ನು ವ್ಯಾಪಿಸಿದೆ. ಈ ಲೋಕಕ್ಕೆ ಭಾಷಾ ವ್ಯಾಪ್ತಿ ಇಲ್ಲ, ನದಿಗಾಗಿ ಜಗಳವಿಲ್ಲ, ಗಡಿಯ ಸಮಸ್ಯೆ ಇಲ್ಲವೇ ಇಲ್ಲ. ಏಕೋಭಾವದ ಈ ಪರಿಸರಕ್ಕೆ ಹಲವು ದಶಕದಿಂದ ಆತಂಕ ಮಾತ್ರ ಇದ್ದೇ ಇದೆ.
ರಕ್ಕಸರ ದಾಳಿ ವಿರುದ್ಧ ಹೋರಾಟ ಮಾತ್ರ ನಿಂತಿಲ್ಲ. ೬ ರಾಜ್ಯಗಳಲ್ಲಿ ಒಂದರ ಹಿಂದೊಂದು ಯೋಜನೆಗಳು ಪಶ್ಚಿಮಘಟ್ಟ ಪ್ರವೇಶಿಸಿದಾಗ ಅದನ್ನು ತಡೆಯೊಡ್ಡುವ ಕೆಲಸ ನಡೆದೇ ಇದೆ. ಆದರೆ ಈಗ ಹೋರಾಟಕ್ಕೆ ಸಂಘಟಿತ ಮೂರ್ತರೂಪ ಸಿಕ್ಕಿದೆ. ಪರಿಸರವಾದಿಗಳು, ಹೋರಾಟ ಗಾರರು, ತಜ್ಞರು, ಪರಿಸರ ಪ್ರೇಮಿ ಸಂಘಟನೆಗಳು ಒಂದೆಡೆ ಸೇರಿರುವುದು ಸಂತಸದ ಸಂಗತಿ.
ಈ ಹೋರಾಟದ ನೇತೃತ್ವ ವಹಿಸಿರುವ `ಅಪ್ಪಿಕೋ ಚಳವಳಿ'ಯ ಪಾಂಡುರಂಗ ಹೆಗಡೆ ಮಾತಿನಲ್ಲಿ ವಾಸ್ತವವನ್ನು ಕೇಳುವುದಾದರೆ...
ಹವಾಮಾನ ವೈಪರೀತ್ಯದ ವಿಷಯ ಬಂದಾಗಲೆಲ್ಲಾ ಹಿಮಾಲಯದ ನೀರ್ಗಲ್ಲಿನದೇ ವರಿ. ಪರಿ ಸರವಾದಿಗಳು ಹಿಮಾಲಯದ ನೀರ್ಗಲ್ಲುಗಳ ಬಗ್ಗೆ ಹೆಚ್ಚು ಆತಂಕ ವ್ಯಕ್ತಪಡಿಸಿದರು. ಆದರೆ ಅದಕ್ಕಿಂತ ಪಶ್ಚಿಮ ಘಟ್ಟಗಳ ಮೇಲೆ ಹೆಚ್ಚು ಪರಿಣಾಮ ಆಗುತ್ತದೆ ಎಂಬುದು ಚರ್ಚೆ ಆಗಲೇ ಇಲ್ಲ. ಹೀಗಾಗಿ ೨೦೦೯ರಲ್ಲಿ ಮತ್ತೆ ಪಶ್ಚಿಮಘಟ್ಟ ಅಭಿಯಾನದ ಸದಸ್ಯರೆಲ್ಲಾ ಒಂದೆಡೆ ಸೇರಲು ತೀರ್ಮಾನಿಸಿದರು.
ಮತ್ತೆ ಗೋವಾದಿಂದಲೇ ಆಂದೋಲನ ಕೈಗೆತ್ತಿಕೊಳ್ಳಲು ಆರಂಭಿಸಲು ತೀರ್ಮಾನಿಸಿದರು. ಮೊ ದಲ ಸಭೆ ಗೋವಾದಲ್ಲಿ ನಡೆಯಿತು. ಗೋವಾ ಎಂದರೆ ಬೀಚ್ ಕಣ್ಣಮುಂದೆ ನಿಲುತ್ತದೆ. ಇಲ್ಲೇಕೆ ಹೋರಾಟ ಎಂದು ಮನಸ್ಸಿನಲ್ಲಿ ಬರುವುದು ಸಹಜ. ಆದರೆ ಗೋವಾದಲ್ಲಿರುವ ಪಶ್ಚಿಮಘಟ್ಟಕ್ಕೆ ಗಣಿಗಾರಿಕೆ ಕೊಡಲಿ ಪೆಟ್ಟುಕೊಟ್ಟಿತ್ತು.
ಸಭೆಯಲ್ಲಿ ಮುಂದಿನ ಒಂದು ವರ್ಷದಲ್ಲಿ ಏನೇನು ಕಾರ್ಯಕ್ರಮ ರೂಪಿಸುವ ಬಗ್ಗೆ ಚರ್ಚಿಸಲಾಯಿ ತು. ಈ ಪ್ರಯತ್ನಕ್ಕೆ ಮೊದಲ ಜಯವೂ ಸಿಕ್ಕಿದೆ.
ಪಶ್ಚಿಮಘಟ್ಟ ಉಳಿಸಲು ಪ್ರಾಧಿಕಾರ ರಚಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾ ಯಿತು. ಅದರ ಪ್ರತಿಫಲ ಈಗ ಸಹ್ಯಾದ್ರಿ ಪರಿಸರ ಪ್ರಾಧಿಕಾರ ರಚನೆಗೆ ಕೇಂದ್ರ ಸಚಿವರು ಅಸ್ತು ಎಂದಿದ್ದಾರೆ. ರಾಷ್ಟ್ರೀಯ ಹವಾಮಾನ ವೈಪರೀತ್ಯ ಕ್ರಿಯಾಯೋಜನೆ ಅಡಿ ೮ ಮಿಷನ್ ರಚಿಸಲಾ ಯಿತು. ಅದರಲ್ಲಿ ಪಶ್ಚಿಮಘಟ್ಟ ಸೇರಿಸಿರಲಿಲ್ಲ. ಇದನ್ನು ಸೇರಿಸಿ ಎಂಬ ದೊಡ್ಡ ಬೇಡಿಕೆಯೂ ಇದೆ.
ಪಶ್ಚಿಮಘಟ್ಟ ಪರವಾದ ಹೋರಾಟದಲ್ಲಿ ಗೆದ್ದಿದ್ದು ಸೋತಿದ್ದು ಎರಡೂ ಇದೆ. ಗೆದ್ದಿದ್ದು ಹಣಕೋಣ, ಗುಂಡ್ಯಾ (ಕರ್ನಾಟಕದಲ್ಲಿ) ಊಟಿ ಬಳಿಯಲ್ಲಿ ಭೂಗರ್ಭದಲ್ಲಿ ನಡೆಯಬೇಕಾಗಿದ್ದ ನ್ಯೂಟ್ರಿನೋ ಪ್ರಾಜೆಕ್ಟ್ ಸ್ಥಗಿತವಾಯಿತು. ಹುಬ್ಬಳ್ಳಿ-ಅಂಕೋಲ ಸದ್ಯಕ್ಕೆ ನಿಂತಿದೆ.
ಕುದುರೆಮುಖ ಗಣಿಗಾರಿಕೆ ಪುನಾರಂಭ ಆಗಲಿಲ್ಲ. ಕೇರಳದ `ಅತಿರಪಲ್ಲಿ ಪವರ್ ಪ್ರಾಜೆಕ್ಟ್' ಕೂಡ ಈ ಪಟ್ಟಿಯಲ್ಲಿ ಸೇರಿದೆ.
ಕಳೆದುಕೊಂಡಿರುವ ಪಟ್ಟಿಯೂ ದೊಡ್ಡದಿದೆ. ಮಹಾರಾಷ್ಟ್ರದಲ್ಲಿ ಪ್ರತಿ ೨೦ ಕಿಲೋಮೀಟರ್‌ಗೆ ಒಂದು ವಿದ್ಯುತ್ ಯೋಜನೆ ಬರುತ್ತಿದೆ. ಈ ಯೋಜನೆ ಮಾಡಿದರೆ ಉಪಯುಕ್ತ ಎಂಬ ವರದಿ ಯೂ ಬಂದಿದೆ. ಪವರ್ ಪ್ರಾಜೆಕ್ಟ್ ಮಾಡುವುದರಿಂದ ಅದರಿಂದ ಉತ್ಪಾದನೆಯಾಗುವ ಧೂಳು ಆಪೋಸ್ ಮ್ಯಾಂಗೋ ಇಳುವರಿ ಕೊಡಲು ಕಾರಣವಾಗುತ್ತಂತೆ.
ಪರಿಸರ ಪ್ರವಾಸದ ಹೆಸರಿನಲ್ಲಿ ಅಪಾಯ ಹೆಚ್ಚಾಗುತ್ತಲೇ ಇದೆ. ಸಬ್ಸಿಡಿ ಸಿಗುತ್ತದೆಂದು ಕಂಡ ಕಂಡಲೆಲ್ಲಾ ಪರಿಸರ ಪ್ರವಾಸೋದ್ಯಮಕ್ಕೆ ಮುಂದಾಗಿದ್ದಾರೆ. ಕಂಡ ಕಂಡ ಕಡೆ ಕಟ್ಟಡ ಕಟ್ಟುತ್ತಿ ದ್ದಾರೆ. ಇದರಿಂದ ಪರಿಸರ ಹಾಳಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಶೇಕಡಾ ೪೦ರಷ್ಟು ಪಶ್ಚಿಮಘಟ್ಟ ಹೊಂದಿರುವ ಕರ್ನಾಟಕದಲ್ಲಿ ಆತಂಕ ಹೆಚ್ಚೇ ಇದೆ. ೨೬೦ ಮೈಕ್ರೋ ಹರ್ಡಲ್ ಪ್ರಾಜೆಕ್ಟ್ ಸಿದ್ಧವಾಗಿದೆ. ಇದಕ್ಕಾಗಿ ಸೈಟ್ ಸಿದ್ಧವಾಗಿದೆ. ಇವುಗಳನ್ನು ಎಲ್ಲಿ ಮಾಡುತ್ತಿದ್ದಾರೆ ಎಂದರೆ, ಅರಣ್ಯದೊಳಗೇ ಮಾಡುತ್ತಿದ್ದಾರೆ. ಯೋಜನೆ ಸರ್ಕಾರ ರೂಪಿಸುವುದಲ್ಲ ಖಾಸಗಿಯದ್ದು.
ಈಗಾಗಲೇ ೭ ಯೋಜನೆಗಳು ಕಾರ್ಯರೂಪಕ್ಕೆ ಬಂದಿದೆ. ಘಟ್ಟದಲ್ಲಿರುವ ನದಿ ತೊರೆಗಳು ದಟ್ಟ ಅರಣ್ಯ ಪ್ರದೇಶದಲ್ಲಿ ಮಾಡುವುದರಿಂದ ಆ ಪ್ರದೇಶದ ವಾಸಸ್ಥಾನ ಹೊಂದಿದ ಪ್ರಾಣಿಗಳು ವಲಸೆ ಹೋಗಬೇಕಾಗುತ್ತದೆ. ವಲಸೆ ಹೋಗುವುದಾದರೂ ಎಲ್ಲಿಗೆ?
ಉತ್ತರ ಕರ್ನಾಟಕ, ಶಿವಮೊಗ್ಗ, ಉಡುಪಿ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿ ಯಲ್ಲೇ ಈ ಯೋಜನೆಗಳು ಮುಂದಿನ ದಿನಗಳಲ್ಲಿ ಕಾರ್ಯೋನ್ಮುಖವಾಗಲಿವೆ.
ದಟ್ಟ ಅರಣ್ಯದ ಕಡೆಯೇ ಪ್ರಾಜೆಕ್ಟ್ ಆರಂಭವಾಗುತ್ತದೆ. ಅಂದರೆ ಅಪರೂಪದ ಪ್ರಾಣಿಗಳು ಇರು ವುದೇ ಅಲ್ಲಿ. ಚಿಕ್ಕ ಚಿಕ್ಕ ತೊರೆಗಳಿರುವ ಕಡೆಯೇ ಪ್ರಾಣಿಗಳು ಹೆಚ್ಚಾಗಿರುತ್ತವೆ.
ಹಾಗಾದರೆ ನೀತಿ ನಿಯಮಗಳೆಲ್ಲಿ ಊರುಬಿಟ್ಟವೇ ಎಂಬ ಪ್ರಶ್ನೆ ಏಳಬಹುದು. ಆದರೆ ನಿಯಮ ಗಳಲ್ಲಿ ಅನೇಕ ತಪ್ಪಿಸಿಕೊಳ್ಳುವ ಉಪಾಯಗಳಿವೆ. ಇವನ್ನೇ ಉಪಯೋಗಿಸಿಕೊಂಡು ಸ್ಥಳೀಯ ವಾಗಿಯೇ ಅನುಮತಿ ಪಡೆದು ಯೋಜನೆ ಕಾರ್ಯರೂಪಕ್ಕೆ ಬರುತ್ತಿವೆ.
ಯೋಜನೆ ಅಂದ ಮೇಲೆ ಯಂತ್ರೋಪಕರಣಗಳು ಕಾಡಿನೊಳಗೆ ಪ್ರವೇಶ ಮಾಡಲೇಬೇಕು. ಇದಾದ ಮೇಲೆ ಕಟ್ಟಡ ನಿರ್ಮಾಣ, ಸಾಮಗ್ರಿ ಕೊಂಡೊಯ್ಯಲು ಏಕಾ ಏಕಿ ರಸ್ತೆ ಮಾಡಿಯೇ ಮಾಡುತ್ತಾರೆ. ಹೀಗೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಆದರೆ, ಅನೇಕ ಕಡೆಗಳಲ್ಲಿ ಜನ ಜಾಗೃತರಾಗಿ ಈ ಬೆಳವಣಿಗೆಗೆ ಅವಕಾಶ ಕೊಟ್ಟಿಲ್ಲ.
ಇನ್ನೊಂದು ಕುದಿಯುವ ವಿಚಾರವೆಂದರೆ ಸಿಡಿಎಂ- `ಕ್ಲೀನ್ ಡೆವಲಪ್‌ಮೆಂಟ್ ಮೆಕಾನಿಸಂ ಪ್ರಾಜೆಕ್ಟ್'ನಲ್ಲಿಯೇ ಯೋಜನೆ ರೂಪುಗೊಳ್ಳುತ್ತಿವೆ. ಇವಕ್ಕಾಗಿ ಸರ್ಕಾರದಿಂದ ಹೆಚ್ಚು ಅನುದಾನ ಇದೆ. ಇದು ಖಾಸಗಿ ಪ್ರಾಜೆಕ್ಟ್‌ಗಳು. ಗ್ರೀನ್ ಟೆಕ್ನಾಲಜಿ ಅಂತಾರೆ. ವಿದ್ಯುತ್ ಉತ್ಪಾದನೆ ಮಾಡಿ ಗ್ರಿಡ್‌ಗೆ ಕೊಟ್ಟು ಕಾಸು ಮಾಡಿಕೊಳ್ಳುತ್ತಾರೆ.
ಆತಂಕಗಳು ಹಲವು:
೧. ಮಹಾರಾಷ್ಟ್ರದ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಪ್ರತಿ ೨೦ ಕಿಲೋಮೀಟರ್‌ಗೆ ಒಂದು ಪವರ್ ಪ್ಲಾಂಟ್ ಬರುತ್ತಿದೆ.
೨. ಊಟಿ ಸೇರಿದಂತೆ ಪಶ್ಚಿಮಘಟ್ಟ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಭೂ ಕುಸಿತಗಳು ನಡೆಯು ತ್ತಿದೆ. ಹವಾಮಾನ ವೈಪರೀತ್ಯದ ಪರಿಣಾಮ ಇದು.
೩. ಕರ್ನಾಟಕದಲ್ಲಿ ೨೬೦ ಪವರ್ ಪ್ಲಾಂಟ್‌ಗೆ ಅನುಮತಿ ನೀಡಲಾಗಿದೆ.
೪. ಚಿಕ್ಕ ನದಿಗಳನ್ನು ಬಳಸಿಕೊಂಡು ಇರಿಗೇಷನ್ ಪ್ರಾಜೆಕ್ಟ್ ಜಾಸ್ತಿಯಾಗಿವೆ.
೫. ಕರ್ನಾಟಕ ಮತ್ತು ಇತರೆ ರಾಜ್ಯಗಳಲ್ಲಿ ವನ್ಯಜೀವಿ ಮತ್ತು ಮನುಷ್ಯನ ಸಂಬಂಧ ದುಸ್ಥರವಾ ಗಿದೆ. ಉದಾಹರಣೆ ಎಂಬಂತೆ ಆನೆದಾಳಿಗಳು ಕಣ್ಣಮುಂದಿವೆ.
೬. ಉಪಗ್ರಹ ಚಿತ್ರದ ಪ್ರಕಾರ ಶೇ.೧ರಷ್ಟು ಅರಣ್ಯ ಹೆಚ್ಚಾಗಿದೆ. ವೈಜ್ಞಾನಿಕವಾಗಿ ಶೇ.೬೬ ಅರಣ್ಯ ಇರಬೇಕು. ಆದರೆ ಶೇ.೩೦ಕ್ಕಿಂತ ಕಡಿಮೆ ಆಗಿದೆ. ಪ್ಲಾಂಟೇಶನ್ ಫಾರೆಸ್ಟ್ ಜಾಸ್ತಿ ಆಗಿದೆ. ಸಹಜ ವಾಗಿರುವುದು ಶೇ.೧೦ ಮಾತ್ರ.
೭. ಕಾಡು ಕಡಿಯುವ ಮಾಫಿಯಾ ಹೆಚ್ಚಾಗಿದೆ. ಇದಕ್ಕೆ ರಾಜಕೀಯ ಬೆಂಬಲ ಸಿಕ್ಕಿದೆ.
ನೀಲಗಿರೀಸ್ ಭಾಗದಲ್ಲಿ ಭೂಸ್ಖಲನ ಆಗುತ್ತಲೇ ಇದೆ. ಕಳೆದ ಮಳೆಗಾಲದಲ್ಲಿ ೫೦೦ ಕೋಟಿ ರುಪಾಯಿ ನಷ್ಟವಾಗಿದೆ. ೬೦ ಜನ ಮೃತಪಟ್ಟಿದ್ದಾರೆ. ಅದಕ್ಕಾಗಿ ತಮಿಳುನಾಡು ಸರ್ಕಾರ ೪೦ ಕೋಟಿ ಕೊಟ್ಟಿದೆ.
ಈ ಘಟನೆ ವಾತಾವರಣ ವೈಪರೀತ್ಯದ ಒಂದು ಬೆಳವಣಿಗೆಯಷ್ಟೇ.ಇದೇ ರೀತಿ ಇನ್ನೊಂದು ವಿಚಾರವೆಂದರೆ, ಜೇನು ಉತ್ಪಾದನಾ ಪ್ರಮಾಣದಲ್ಲಿ ತೀರಾ ಇಳಿಕೆ ಕಂಡಿದೆ. ಕಳೆದ ದಶಕದಲ್ಲಿ ಒಂದು ಸಾಮಾನ್ಯ ಜೇನುಗೂಡಿನಲ್ಲಿ ೨೦ ಲೀಟರ್‌ನಷ್ಟು ಜೇನು ತುಪ್ಪ ಸಿಗುತ್ತಿತ್ತು. ಈಗ ಅದರ ಪ್ರಮಾಣ ೭-೮ ಲೀಟರ್‌ಗೆ ಇಳಿದೆ. ಇದಕ್ಕೆ ಕಾರಣ ಹೆಜ್ಜೇನಿಗೆ ಪರಾಗವೇ ಸಿಗುತ್ತಿಲ್ಲ. ಮಳೆಗಾಲ ದಲ್ಲಿ ಚಳಿ, ಚಳಿಯಲ್ಲಿ ಬೇಸಿಗೆ... ಇದು ಒಂದು ಬದಲಾವಣೆಯ ಅಂಶ.
ಕರ್ನಾಟಕದಲ್ಲಿ ನೆಲ್ಲಿಕಾಯಿಗೆ ಬರ ಬಂದಿರುವುದೂ ಒಂದು ಪ್ರಮುಖಾಂಶ. ಇವೆಲ್ಲಾ ಹವಾಮಾನ ವೈಪರಿತ್ಯ ಪಶ್ಚಿಮಘಟ್ಟದ ಮೇಲಾಗಿರುವುದರ ಸೂಚನೆಗಳು. ಹಾಗೆಯೇ ಈ ಬೆಳವಣಿಗೆ ಹಿಮಾ ಲಯಕ್ಕಿಂತ ಅಪಾಯಕಾರಿ ಎಂಬುದನ್ನೂ ತೋರಿಸುತ್ತಿವೆ.
ಯೋಜನೆ ಬಂತೆಂದರೆ ಪರಿಸರ- ಅಭಿವೃದ್ಧಿ ನಡುವಿನ ಯುದ್ಧ, ಜನಸಂಖ್ಯೆ ಹೆಚ್ಚುತ್ತಿದೆ ಅಭಿವೃದ್ಧಿ ಬೇಕು ಅಂತಾರೆ? ಇದಕ್ಕೆ ಪರ್ಯಾಯ ಏನು? ಇದಕ್ಕೆ ಉತ್ತರವೇನು? ಆ ಜವಾಬ್ದಾರಿ ನಮ್ಮದು ಎಂದು ಹೇಳುವುದು ತಪ್ಪು ಎನ್ನುತ್ತಾರೆ ಪರಿಸರವಾದಿಗಳು. ನೀವು ಹಾಳುಮಾಡುವುದು, ನಮಗೆ ಪರ್ಯಾಯ ಕೊಡಬೇಕೆಂದರೆ ಹೇಗೆ? ಎಂಬುದು ಪ್ರಶ್ನೆ.
ಇನ್ನೊಂದು ಆತಂಕಕಾರಿ ವಿಚಾರಕ್ಕೆ ಬರುವುದಾದರೆ, ಇವತ್ತು ಉತ್ತಮ ಮಳೆ ಬಂದರೂ ಡ್ಯಾಂಗ ಳಲ್ಲಿ ಶೇ.೬೦ಕ್ಕಿಂತ ವಿದ್ಯುತ್ ಉತ್ಪಾದಿಸುತ್ತಿಲ್ಲ. ಈಗ ಶೇ.೬೦ಕ್ಕಿಂತ ಹೆಚ್ಚು ವಿದ್ಯುತ್ ತರದ ಯೋಜನೆ, ಮುಂದಿನ ಕಥೆ ಏನು?
ಇದ್ದ ಡ್ಯಾಂಗಳಿಂದಲೇ ಪೂರ್ಣ ಪ್ರಮಾಣದ ಉಪಯೋಗವಾಗುತ್ತಿಲ್ಲ. ಇನ್ನೂ ಪ್ರಾಜೆಕ್ಟ್ ಮಾಡೋ ಣ ಎಂದು ಸರ್ಕಾರ ಹೇಳುತ್ತವೇ ಇದೆ. ಪರ್ಯಾಯ ಸಾಕಷ್ಟಿದ್ದರೂ ಅದರ ಬಗ್ಗೆ ಯೋಚಿಸುತ್ತಿಲ್ಲ.
ಇದು ಯಾರ ತಪ್ಪು. ಪರಿಸರವಾದಿಗಳದ್ದೋ? ಸರ್ಕಾರದ್ದೋ? ಮುಗುಮ್ಮಾಗಿರುವ ಪಶ್ಚಿಮಘಟ್ಟ ದ ಸಾಲು ಉತ್ತರವನ್ನು ನಿರೀಕ್ಷಿಸುತ್ತಿದೆ.
ಪರ್ಯಾಯ ಇದೆ:
ಹೋರಾಟಗಾರರೆಂದರೆ ಅಭಿವೃದ್ಧಿ ವಿರೋಧಿಗಳೇ ಎಂದು ಹಣೆಪಟ್ಟಿ ಕಟ್ಟಲಾಗಿದೆ. ಆದರೆ ಪರಿಸರ ವಿರೋಧಿಗಳಿಗೆ ಪರ್ಯಾಯ ಇದೆ ಎಂದು ಪರಿಸರವಾದಿಗಳು ತೋರಿಸುವವರಿದ್ದಾರೆ. ಅನೇಕ ಉದಾಹರಣೆಗಳೂ ಇವೆ.
ಕೋಟಗಿರಿಯಲ್ಲಿ ಜೇನು ಕುರುಬ ಜನಾಂಗದೊಂದಿಗೆ ಸೇರಿ ಗ್ರೀನ್ ಎಕಾನಮಿಯನ್ನು ತೋರಿಸಿ ದ್ದಾಗಿದೆ. ಉತ್ತರ ಕರ್ನಾಟದಲ್ಲಿ ಸಿದ್ದಿ ಜನಾಂಗದೊಂದಿಗೆ ಅರಣ್ಯ ಉತ್ಪನ್ನಗಳ ಮೌಲ್ಯವೃದ್ಧಿ ಮಾಡಿ ತೋರಿಸಲಾಗಿದೆ. ಕೇರಳದ ಅತಿರಪಲ್ಲಿಯ ಬಂಬೂ ಬ್ಯಾಂಡ್ ಸಹ ಹೊಸ ಲೋಕ ಸೃಷ್ಟಿಸಿದೆ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-03-07
|
|
|