ಕಾರ್ಕಳದ ವಿವಾಹಿತೆ ತನುಜಾ ಭಂಡಾರಿ ಆತ್ಮಹತ್ಯೆಗೆ ಶರುಣು?... ಇದು ನಿಯೋಜಿತ ಕೊಲೆ ಪ್ರಕರಣ: ತನುಜಾ ಕುಟುಂಬಸ್ಥರು |
ಪ್ರಕಟಿಸಿದ ದಿನಾಂಕ : 2010-03-07
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬೈ: ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಇಲ್ಲಿನ ಲೀಲಾವತಿ ನಿಲಯದ ನಿವಾಸಿ ದಿವಂಗತ ಮಂಜಪ್ಪ ಭಂಡಾರಿ ಮತ್ತು ಶ್ರೀಮತಿ ಶ್ಯಾಮಲಾ ಮಂಜಪ್ಪ ಭಂಡಾರಿ ಇವರ ಏಕೈಕ ಸುಪುತ್ರಿ ಶ್ರೀಮತಿ ತನುಜಾ ಮಂಜಪ್ಪ ಭಂಡಾರಿ ಯಾನೆ ತನುಜಾ ರತೀಶ್ ಸಗ್ಗಮ್ (29.) ಇವರು ಕಳೆದ ೨೦೧೦ರ ಮಾರ್ಚ್ 03ನೇ ಬುಧವಾರ ಪೂರ್ವಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಇದು ಆತ್ಮಹತ್ಯೆ ಪ್ರಕರಣವೇ ಆಗಿರದೆ ಇದೊಂದು ಕೊಲೆಯಾಗಿದೆ ಎಂದು ತನುಜಾ ಪರಿವಾರವು ಆರೋಪಿಸಿದೆ.
ಕಳೆದ ಏಳು ವರ್ಷಗಳ ಹಿಂದೆ ತನ್ನ ಪದವಿ ಮುಗಿಸಿ ಕೊಂಡು ಹೈದರಬಾದ್ ಮೂಲದ ಸಾಫ್ಟ್‌ವೇರ್ ಪ್ರೋಗ್ರಮರ್ ಆಗಿ ಕೆಲಸ ಮಾಡಿತ್ತಿದ್ದ ರತೀಶ್ ಸಗ್ಗಮ್ ಇವರೊಂದಿಗೆ ಪ್ರೇಮವಿವಾಹ ಮಾಡಿಸಿಕೊಂಡು ಸದ್ಯ ಚಾರ್ಟರ್ಡ್ ಎಕೌಂಟೆಂಟ್ (ಸಿಎ) ಅಭ್ಯಾಸ ನಿರತ, ನಾಲ್ಕುವರೆ ವರ್ಷದ ಶ್ರುತಿ ನಾಮದ ಸುಪುತ್ರಿಯನ್ನು ಹೊಂದಿದ್ದ ತನುಜಾ ಭಂಡಾರಿ ಕಳೆದ ಬುಧವಾರ ಮುಂಬಯಿ ಉಪನಗರದ ಚೆಂಬೂರು ಇಲ್ಲಿನ ಗೋವಂಡಿಯ ಶಿವಾಜಿನಗರದ ಬಾಡಿಗೆ ಮನೆಯಲ್ಲಿ ಕ್ರೂರ ವಿಧಿಯಲೀಲೆಗೆ ಬಲಿಯಾದ ವಿದ್ರವಕ ಘಟನೆ ನಡೆದಿತ್ತು.

ತನ್ನ ಮಾವ-ಅತ್ತಿಗೆ ಕುಟುಂಬದ ಜೊತೆ ಪತಿ ರತೀಶ್ ಮತ್ತು ಸುಪುತ್ರಿ ಶ್ರುತಿ ಜೊತೆ ಚೆಂಬೂರ್‌ನ ದೇವನಾರ್ ಇಲ್ಲಿ ತನುಜಾ ವಾಸಿಸುತ್ತಿದ್ದರು. ನಂತರದ ವರುಷ್ಗಳಲ್ಲಿ ಪತಿ ರತೀಶ್ ತನಗೆ ಡೈವೋರ್ಸ್ ನೀಡುವಂತೆ ಪೀಡಿಸಿ, ಹಲವಾರು ಭಾರಿ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡುತ್ತಿದ್ದ ಎಂದು ಹಲವು ಸಲ ಮನೆಮಂದಿಗೆ ತಿಳಿಸಿದ್ದಳು. ರತೀಶ್ ಅನೇಕಭಾರಿ ವಿಪರೀತ ಕಿರುಕುಳವನ್ನು ನೀಡಿ ಪೀಡಿಸುತ್ತಿದ್ದು, ಕಳೆದ ಸಪ್ಟೆಂಂಬರ್ ತಿಂಗಳಲ್ಲಿ ಹಲ್ಲೆಗೊಳಗಾಗಿ ಮತಿಹೀನಳಾದ ತನುಜಾಳನ್ನು ಸ್ಥಳಿಯ ಶಿವಾಜಿನಗರದ ಖಾಸಾಗಿ ಆಸ್ಪತ್ರೆಗೆ ದಾಖಲಾಗಿಸಗಾಗಿತ್ತು ಈ ಬಗ್ಗೆ ಶಿವಾಜಿನಗರದ ಪೋಲಿಸ್ ಠಾಣೆಯಲ್ಲಿ ಎನ್‌ಸಿ ಕೂಡಾ ದಾಖಲಾಗಿಸಲಾಗಿದೆ. ತದನಂತರ ತನುಜಾ ಮತ್ತು ಪುತ್ರಿಯ ಜೊತೆ ಗೋವಂಡಿಯ ಶಿವಾಜಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಎನ್‌ಸಿ ದೂರು ಸ್ವೀಕರಿಸಿದ ಪೋಲಿಸು ಅಧಿಕಾರಿಗಳು ಕೂಡಾ ಕುಟುಂಬಸ್ಥರ ಸಮ್ಮುಖದಲ್ಲಿ ಸಮಜಾಯಿಸಿ ಮಾತುಕತೆ ನಡೆಸಿ ಈ ಬಾಡಿಗೆ ಮನೆಯನ್ನು ಖಾಲಿ ಮಾಡುವಂತೆಯೂ ರತೀಶ್‌ಗೆ ಎಚ್ಚರಿಸಿದ್ದರು ಎನ್ನಲಾಗಿದೆ. ಮಗಳ ಸಂಕಷ್ಟದ ಜೀವನದಿಂದ ನೊಂದ ತಂದೆ ಮಂಜಪ್ಪ ಭಂಡಾರಿಯವರೂ ಕೂಡಾ ನೊಂದು ಇತ್ತೀಚೆಗಷ್ಟೇ ಹೃದಯಾಘಾತಕ್ಕೆ ಬಲಿಯಾದರು ಎಂದು ತನುಜಾಳ ಸಹೋದರ ಸಂತೋಷ್ ಜೈನ್ (ಭಂಡಾರಿ) ತಿಳಿಸಿದ್ದಾರೆ.
ನಾವು ಜೈನ ಸಮೂದಾಯದವರಾಗಿದ್ದು ಸಸ್ಯಹಾರಿಗಳಾಗಿದ್ದು ಅಂತೆಯೇ ರತೀಶ್ ಸಗ್ಗಮ್ ಕೂಡಾ ತನುಜಾಳೊಂದಿಗೆ ಸಸ್ಯಹಾರಿಯಾಗಿಯೇ ಜೀವನ ಸಾಗಿಸುತ್ತಿದ್ದ. ಆದರೆ ಕಳೆದ ಅನೇಕ ತಿಂಗಳುಗಳಿಂದ ರತೀಶ್ ಅತಿಯಾಗಿ ಮದ್ಯಸೇವನೆಗೈದ್ದು ತನಗೂ ಕೂಡ ಸೇವಿಸುವಂತೆ ಮತ್ತು ಮಾಂಸಹಾರಿ ಖಾದ್ಯಗಳನ್ನು ಮಾಡಿಕೊಡಲು ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಮೈದುನ ರವೀಂದ್ರ ಸಗ್ಗಮ್ ಕೂಡಾ ರತೀಶ್‌ನಲ್ಲೇ ಹೊಂದಿಕೊಂಡು ಜೀವನ ನಡೆಸುತ್ತಿದ್ದು, ಕಳೆದ ಭಾರಿ ರತೀಶ್‌ನ ಕ್ರೆಡೀಟ್ ಕಾರ್ಡ್ ಮೂಲಕ ಹಣ ವಂಚನೆಗೈದಿದ್ದು, ಈ ಬಗ್ಗೆ ತನುಜಾಳೊಂದಿಗೆ ತಕರಾರು ನಡೆಸಿದ್ದ ಎನ್ನಲಾಗಿದೆ.

ಆದರೆ ಅನಿವಾರ್ಯ ಎಂಬಂತೆ ಕಳೆದ ಬುಧವಾರ ಪೂರ್ವಾಹ್ನ ನಿನ್ನ ಸಹೋದರಿ ಆತ್ಮಹತ್ಯೆಗೆ ಶರಣು ಆಗಿದ್ದಾಳೆ ಎಂದು ಪರವ್ಯಕ್ತಿಯೋರ್ವರು ನನಗೆ ಪೋನ್ ಮೂಲಕ ಮಾಹಿತಿ ನೀಡಿದ್ದು, ನಾವು ಕುಟುಂಬ ಸಹಿತರಾಗಿ ತನುಜಾಳ ನಿವಾಸಕ್ಕೆ ಸೇರುವಷ್ಟರಲ್ಲಿ ರತೀಶ್ ಕಡೆಯವರು ನಮ್ಮನ್ನು ಅಥವಾ ಪೊಲಿಸು ಅಧಿಕಾರಿಗಳನ್ನು ಲೆಕ್ಕಿಸದೆ ಬಾಗಿಲು ಒಡೆದಿದ್ದರು. ಗಂಡ ರತೀಶ್ ಸಗ್ಗಮ್ ಸ್ಥಳಿಯ ಸಾಯಿ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಭರ್ತಿಗೊಂಡಿದ್ದ ಮಾತ್ರವಲ್ಲದೆ ತಾನು ಸಾಕಿನಾಕದ ಸಂಸ್ಥೆಯೊಂದರಲ್ಲಿ ನೌಕರಿಗಾಗಿ ಇಂಟರ್‌ವ್ಯೂ ನೀಡಲು ಹೋಗಿದ್ದೆ (ಕಳೆದ ೨-೩ ತಿಂಗಳುಗಳಿಂದ ನಿರುದ್ಯೋಗಿ ಆಗಿ ಮನೆಯಲ್ಲೆ ಇದ್ದನು) ಮನೆ ಸೇರುವಷ್ಟರಲ್ಲೆ ಘಟನೆ ನೋಡಿ ಮೈ ನಡುಕ ಬಂದು ತಲೆಸುತ್ತು ಬಂದಿತು. ಎನ್ನುತ್ತಾ ತನ್ನ ಇಂಟರ್‌ವ್ಯೂ ಕಾರ್ಡ್‌ನ್ನೇ ಪದೇ ಪದೇ ತೋರಿಸಿ ಏನನ್ನೋ ಅಡಗಿಸಿ ಮಾತನಾಡುತ್ತಿದ್ದು, ಮರುದಿನ ನೋಡಿದಾದ ಆಸ್ಪತ್ರೆ ಯಿಂದ ಬಿಡುಗಡೆಗೊಂಡು ತನ್ನ ದೇವನಾರ್‌ನಲ್ಲಿನ ಮನೆಯಲ್ಲಿದ್ದ. ವಿಚಿತ್ರ ಎಂದರೆ ರತೀಶ್‌ನ ಮಾತಾಪಿತರು (ತನುಜಾ ಅತ್ತೆ-ಮಾವ) ಅನಿರೀಕ್ಷಿತವಾಗಿ ಊರಿಗೆ ಹೋಗಿದ್ದಾರೆ.
ಪೋಲಿಸರೂ ಕೂಡಾ ನಮ್ಮ ಎಫ್‌ಐಆರ್ ಸ್ವೀಕರಿಸದೆ, ಘಾಟ್ಕೋಪರ್ ನಲ್ಲಿನ ರಾಜವಾಡಿ ಸರಕಾರಿ ಆಸ್ಪತ್ರೆಗೆ ದಾಖಲಿಸ ಲಾಗಿದ್ದ ಮೃತದೇಹವನ್ನು ನೀವು ಒಯ್ದು ಅಂತ್ಯಕ್ರೀಯೆ ನಡೆಸುವಂತೆ ಒತ್ತಾಯಿಸು ತ್ತಿದ್ದರು. ನಿಮ್ಮ ತಕರಾರು ಮುಗಿಸಿರಿ ಎನ್ನುತ್ತಿ ದ್ದರು. ನನ್ನ ಪತಿ ರತೀಶ್ ಸಗ್ಗಮ್ ಬಗ್ಗೆ ನಾನು ಶಿವಾಜಿನಗರದ ಪೋಲಿಸ್ ಠಾಣೆಯಲ್ಲಿ ಬರೆಸಿದ್ದ ಎನ್‌ಸಿಯನ್ನು ಹಿಂದೆಗೆದು ಕೊಂಡು ನನ್ನ ಎಲ್ಲಾ ಹಣ-ಒಡವೆಗಳನ್ನು ನನ್ನ ಮಗಳು ಶ್ರುತಿಗೆ ನೀಡಿರಿ. ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದ ಪತ್ರ ವೊಂದು ಸಿಕ್ಕಿದ್ದು ಈ ಆಧಾರದ ಮೇಲೆಯೇ ಇದು ಸ್ವಯಂಪ್ರೇರಿತ ಆತ್ಮಹತ್ಯೆ ಎಂದು ನಾವು ಐಪಿಎಸ್ ಪ್ರಕರಣ ೪೯೮ (ಂ), ೩೦೬,೩೪ ಪ್ರಕಾರ ಕೇಸು ದಾಖಲಿಸಿದ್ದೇವೆ ಎಂದು ಸಂತೋಷ್ ಜೈನ್ ವಿವರಿಸಿದ್ದಾರೆ.

ಸುಪುತ್ರಿ ಶ್ರುತಿ ಹೇಳಿಕೆ: ಏನೂ ಅರಿಯದ ಮುಗ್ಧೆ, ಜನನಿದಾತೆಯನ್ನು ಕಳಕೊಂಡ ನಾಲ್ಕುವರೆ ವರ್ಷದ ಶ್ರುತಿ ಹೇಳುವಂತೆ ತನ್ನ ಹೆತ್ತವರಿಬ್ಬರೂ ಎಂದಿನಂತೆ ನಿನ್ನೆ ರಾತ್ರಿ ಮತ್ತು ಇಂದು ಮುಂಜಾನೆಯೂ ತೀವ್ರವಾಗಿ ಜಗಳವಾದುತ್ತಿದ್ದರು. ಈ ಮಧ್ಯೆ ಚೂರಿಯೂ ಕೂಡಾ ಪ್ರವೇಶಿಸಿತ್ತು. ನಾನು ಬೆಳಿಗ್ಗೆ ಸ್ಕೂಲ್‌ಗೆ ಹೋದ ಬಳಿಕ ಏನಾಯಿತೋ ತಿಳಿದಿಲ್ಲ. ಅಂತೂ ನಾನು ಮಾತೆಯನ್ನು ಕಲಕೊಂಡ ತಬ್ಬಲಿಯಾದೆ. ತನುಜಾ ಕುಟುಂಬಿಕರು ಸದ್ಯ ಶ್ರುತಿಯನ್ನು ತಮ್ಮ ಮನೆಯಲ್ಲಿರಿಸಿದ್ದಾರೆ ಆದರೂ ಈ ವರೇಗೆ ರತೀಶ್ ಕಡೆಯವರು ಮಗಳ ಬಗ್ಗೆ ಮೌನವಾಗಿದ್ದಾರೆ.
ತನುಜಾ ಕುಟುಂಬಿಕರ ಆರೋಪ ಮತ್ತು ಒತ್ತಾಯ : ನಮ್ಮ ತನುಜಾಳು ಆತ್ಮಹತ್ಯೆಗೈಯುವಷ್ಟು ಕೀಳು ಮನೋ ಭಾವದ ಹುಡಿಗಿಯಲ್ಲ. ಎಲ್ಲಾ ವಿಷಯಗಳಲ್ಲೂ ಸೂಕ್ಷ್ಮವಾಗಿದ್ದು, ಜಾಣ್ಮೆತನ ದಿಟ್ಟತನ ಹೊಂದಿದ್ದಳು. ನಾವು ಶುಕ್ರವಾರ ಮುಂಜಾನೆ ತನುಜಾಳ ಅಂತಿಮಕ್ರಿಯೆ ನಡೆಸಿದ್ದು ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ತಿಳಿಸಿದ್ದರೂ ಇದು ಕೊಲೆ ಪ್ರಕರಣ ವಾಗಿದೆ. ಮೃತ ದೇಹದ ಕೊಠಡಿಯಲ್ಲಿ ರಕ್ತದ ನಿಶಾನೆಗಳು ಹಾಗೂ ಹಗ್ಗದಿಂದ ಕುತ್ತಿಗೆ ಬಿಗಿದ ಗುರುಗಳು ಮೇಲ್ನೋಟಕ್ಕೆ ಕಂಡಿದ್ದು, ಈ ಬಗ್ಗೆ ನಾವೂ ಅನೇಕ ಪುರಾವೆಗಳ ಆಧಾರವಾಗಿರಿಸಿ ಕೂಲಂಕುಷವಾಗಿ ತನಿಖೆ ನಡೆಸಿ ನ್ಯಾಯಕ್ಕಾಗಿ ಕೊಲೆ ಪ್ರಕರಣ ಎಂದು ದೂರು ದಾಖಲಿಸಿದ್ದೇವೆ. ಘಟನೆಯ ಹಿಂದಿನ ನಿಜವಾದ ಪಿತೂರಿ ಬಯಲಿಗೆಳೆದು ಆರೋಪಿಗಳಿಗೆ ಸೂಕ್ತವಾದ ಶಿಕ್ಷೆಗೆ ಒತ್ತಾಯಿಸಿದ್ದೇವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಘಟನೆಯನ್ನು ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ಇದರ ಅಧ್ಯಕ್ಷ ಬಿ.ಮುನಿರಾಜ್ ಜೈನ್ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ತೀವ್ರವಾಗಿ ಖಂಡಿಸಿದ್ದು ಸೂಕ್ತವಾದ ಕ್ರಮಕ್ಕೆ ಸಂಬಂಧಿತ ಅಧಿಕಾರಿ, ಸಚಿವರ್ಯರನ್ನು ಒತ್ತಾಯಿಸಿದ್ದಾರೆ.
ನಿಮಗೆ ಸೂಕ್ತವಾದ ನ್ಯಾಯ ಒದಗಿಸಿ ಕೊಡುತ್ತೇವೆ. ನಾವು ಮುಂಬಯಿ ನಗರದ ಹೆಸರಾಂತ ಸಮಾಜ ಸೇವಕರು. ನೀವು ನಮಗೆ ದೂರು ನೀಡಿರಿ. ಈ ಬಗ್ಗೆ ನಮ್ಮಲ್ಲಿ ದೂರು ನೀಡಲು ಏಕೆ ಅಂಜುತ್ತೀರಿ. ನೀವು ನಮ್ಮ ಅಂಧೇರಿ ಆಫೀಸಿಗೆ ಬನ್ನಿ. ಎಲ್ಲವನ್ನೂ ಕುಳಿತು ಮಾತನಾಡಿ ಸರಿ ಪಡಿಸುವ ಎಂದು ಅಂಧೇರಿಯ ಶಂಕರ್ ಪೂಜಾರಿ ಇವರು ತನುಜಾಳ ಸಹೋದರ ಸಂತೋಷ್ ಜೈನ್ ಇವರಲ್ಲಿ ಒತ್ತಡ ಹಾಕುತ್ತಿದ್ದರು ಎನ್ನುವುದು ಮತ್ತೊಂದು ವಿಶೇಷತೆ ಎನ್ನಲಾಗಿದೆ.
ವರದಿಯ ವಿವರಗಳು |
 |
ಕೃಪೆ : ಚಿತ್ರ / ವರದಿ : ರೋನ್ಸ್ ಬಂಟ್ವಾಳ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-07 00:00:00
|
|
| ASHU KATEEL, BAHRAIN | 2010-03-09 | | I agree with Amar. Love is nothing It\'s Sweet Poison.Never neglet parants. They will hide all thire problem and keep childrens feture bright upto 20 years.
We never think about then for few minits.
It\'s a good moral to Girls. |
| dhanajaya gurpur, manglore | 2010-03-09 | | well, it is more or less good story. keep light on same news. |
| amar, udupi | 2010-03-08 | | ninage bekitha love .it is good msg msg for all love birds .amma appa nodida hudugannanu marriage agi love is only attraction (only sex) |
|