ಆಸ್ಟ್ರೇಲಿಯಾದಲ್ಲಿ ಭಾರತೀಯ ಬಾಲಕನ ಸಾವು, ಕೊಲೆ ಶಂಕೆ |
ಪ್ರಕಟಿಸಿದ ದಿನಾಂಕ : 2010-03-05
ಆಸ್ಟ್ರೇಲಿಯಾದಲ್ಲಿ ಮೂರು ವರ್ಷದ ಭಾರತೀಯ ಮಗು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.
ಮೆಲ್ಬರ್ನ್ (ಐಎಎನ್ಎಸ್): ಇಲ್ಲಿನ ವಿಮಾನನಿಲ್ದಾಣದಲ್ಲಿ ಮೂರು ವರ್ಷದ ಭಾರತೀಯ ಮಗುವಿನ ಶವ ದೊರೆತಿದೆ. ಈತ ಮನೆಯಿಂದ ಕಾಣೆಯಾದ ನಂತರ 30 ಕಿಲೋಮೀಟರ್ ದೂರದ ಮೆಲ್ಬರ್ನ್ ವಿಮಾನನಿಲ್ದಾಣದಲ್ಲಿ ಸಾವನ್ನಪ್ಪಿದ್ದು ಹೇಗೆ ಎಂಬುದು ಕೂತುಹಲಕ್ಕೆ ಕಾರಣವಾಗಿದೆ. ಇದೊಂದು ಕೊಲೆ ಎಂಬ ಶಂಕೆ ದಟ್ಟವಾಗತೊಡಿಗಿದ್ದು, ಪೊಲೀಸರು ಅಪರಾಧಿಗಳ ಬಂಧನಕ್ಕೆ ವ್ಯಾಪಕ ಜಾಲ ಬೀಸಿದ್ದಾರೆ.
ಗುರ್ಷನ್ ಸಿಂಗ್ ಎಂದು ಬಾಲಕನನ್ನು ಗುರುತಿಸಲಾಗಿದೆ. ಈ ಘಟನೆ ಬಗ್ಗೆ ಆಸ್ಟ್ರೇಲಿಯಾದಲ್ಲಿನ ಭಾರತೀಯ ಸಮುದಾಯದ ಸದಸ್ಯರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-05
|
|
|