ನಾಲೆ ವ್ಯವಸ್ಥೆ ತೆರೆಗೊಳಿಸುವ ವಸ್ತುಗಳ ಮೇಲೆ ನಿಷೇಧ-ಕುವೈಟ್ ಸಹಾಕಾರಿ ಸಂಸ್ಥೆ. |
ಪ್ರಕಟಿಸಿದ ದಿನಾಂಕ : 2007-10-20
ಕುವೈಟ್. ಅಕ್ಟೋಬರ್ 20, ಕುವೈಟ್ ಸಹಾಕಾರಿ ಸಂಸ್ಥೆಗಳ ಮಳಿಗೆಗಳಲ್ಲಿ ಮಾರಾಟವಾಗುತ್ತಿರುವ ನಾಲೆ ವ್ಯವಸ್ಥೆ ತೆರೆಗೊಳಿಸುವ ವಸ್ತುಗಳನ್ನು (drainage systems' blockage removers ) ನಿಷೇದಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಶ್ಘರಾದ ಮಹಮ್ಮದ್ ಅಲ್-ಮುತೈರಿಯವರು ತಿಳಿಸಿದ್ದಾರೆ.
ಈ ವಸ್ತುಗಳಲ್ಲಿರುವ ಕೆಲವು ರಾಸಾಯನಿಕಗಳು ಬಳಕೆದಾರನಿಗೆ ಹಾನಿ ತಂದೊಡ್ಡಬಲ್ಲವೆಂದು ಸಾರ್ವಜನಿಕ ಪರಿಸರ ಪ್ರಾಧಿಕಾರ Environment Public Authority (EPA) ವಿಭಾಗವು ಕೊಟ್ಟ ಎಚ್ಚರಿಕೆಯ ಮೇಲೆ ಈ ಕ್ರಮವನ್ನು ತೆಗೆದುಕೊಳ್ಳಲಾಯಿತೆಂದು ಅವರು ತಿಳಿಸಿದ್ದಾರೆ. ಆ ಪ್ರಕಾರ ತಮ್ಮ ಸಹಾಕಾರಿ ಮಳಿಗಳಲ್ಲಿನ ಎಲ್ಲಾ ದಾಸ್ತಾನುಗಳನ್ನು ಹಿಂತೆಗೆದುಕೊಳ್ಳಲಾಗಿದೆಯೆಂದು ಅವರು ತಿಳಿಸಿದರು.
EPA ಅಧ್ಯಕ್ಷರಾದ ಕ್ಯಾಪ್ಟನ್ ಅಲಿ ಹೈದರ್ ಅವರು ಕುವೈಟ್ ಮಂತ್ರಿಮಂಡಲವನ್ನು ಸಂಪರ್ಕಿಸಿ ಆಮದಾಗುವ ಪ್ರತಿ ವಸ್ತುಗಳ ಮೇಲೆ ಕಠಿಣ ತಪಾಸಣೆಯ ನಂತರವೇ ಅವುಗಳನ್ನು ಮಾರುಕಟ್ಟೆಗೆ ಬಿಡುಗಡೆಮಾಡುವಂತೆ ಒತ್ತಾಯಿಸಿದ್ದಾರೆ ಎಂದೂ ಮುತೈರಿಯವರು ತಿಳಿಸಿದ್ದಾರೆ. ಅಲ್ಲದೇ EPA ಆಮದಗುವ ವಸ್ತುಗಳನ್ನು 400ಗ್ರಾಂಗಳ ಪೊಟ್ಟಣಗಳಿಗೆ ನಿಗದಿಪಡಿಸಿ ಇವುಗಳ ಬಳಕೆಯ ಬಗ್ಗೆ ಇಂಗ್ಲಿಷ್ ಹಾಗೂ ಅರೇಬಿಕ್ ಭಾಷೆಗಳಲ್ಲಿ ಸ್ಪಷ್ಟವಾಗಿ ವಿವರಗಳನ್ನು ನೀಡುವಂತಿರಬೇಕೆಂದು ಆಗ್ರಹಪಡಿಸಿದೆ ಎಂದು ಅವರು ತಿಳಿಸಿದ್ದಾರೆ.
ಇಂತಹ ವಸ್ತುಗಳ ಬಳಕೆಯ ಪ್ರಮಾಣಕ್ಕೆ ಅನುಗುಣವಾಗಿ ಅಳತೆಯ ಲೋಟವೊಂದನ್ನು ಜೊತೆಯಲ್ಲಿ ನೀಡಬೇಕೆಂದೂ EPA ಸಲಹೆ ನೀಡಿದೆ.
ವರದಿಯ ವಿವರಗಳು |
 |
ಕೃಪೆ : ಕುವೈಟ್ ಟೈಮ್ಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-10-20
|
|
|