| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ರಿಯಾದ್ : ಜಯಕಿರಣ ಮತ್ತು ಕನ್ನಡ ಪ್ರಭ ಪತ್ರಿಕಾ ಕಚೇರಿ ಮೇಲಿನ ದಾಳಿಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ |
ಪ್ರಕಟಿಸಿದ ದಿನಾಂಕ : 2010-03-04
ರಿಯಾದ್ .ಮಾರ್ಚ್ ೩ : ಮಂಗಳೂರಿನಲ್ಲಿ ಜಯಕಿರಣ ಮತ್ತು ಕನ್ನಡ ಪ್ರಭ ಪತ್ರಿಕಾ ಕಛೇರಿಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದೆ.
ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಬುರ್ಖಾ ಮತ್ತು ಮುಸ್ಲಿಂ ಸಮಾಜವನ್ನು ಅವಹೇಳಿಸುವ ಲೇಖನದ ವಿರುದ್ಧ ಆರೋಗ್ಯ ಪೂರ್ಣ ಚರ್ಚೆ ನಡೆಸಿ ಪರಿಹಾರ ಕಂಡು ಕೊಳ್ಳುವ ಬದಲು ಕಾನೂ ನನ್ನು ಕೈಗೆತ್ತಿ ಪ್ರತಿಭಟಿಸುವುದು ಸರಿಯಲ್ಲ. ಈ ಲೇಖನದ ಬಗ್ಗೆ ಈಗಾಗಲೇ ಕನ್ನಡ ಪ್ರಭ ಪತ್ರಿಕೆಯ ಸಂಪಾದಕರು ವಿಷಾದವನ್ನು ವ್ಯಕ್ತಪಡಿಸಿದ್ದಾರೆ.
ಹೀಗಿದ್ದೂ ಶಾಂತಿಯನ್ನು ಕೆಡಿಸುವ ಉದ್ದೇಶದಿಂದ ಮತ್ತೆ ಈ ದಾಳಿ ನಡೆದಿದೆ. ಈ ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ಪತ್ರಕರ್ತರಿಗೆ ಹಾಗೂ ಪತ್ರಿಕಾ ಕಚೇರಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘದ ಸಂಚಾಲಕ ಅಶ್ರಫ್ ಮಂಜ್ರಾಬಾದ್ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಅಶ್ರಫ್ ಮು೦ಜ್ರಾಬಾದ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-04 00:00:00
|
|
| Ibrahim Hussain, Udipi, Karnataka | 2010-03-12 | | ಮುಸ್ಲಿಯಾರ್ ರವರೆ, ನಾನು ನಿಮ್ಮನ್ನು ಚರ್ಚಾ ಕೂಟಕ್ಕೆ ಕರೆದಿಲ್ಲ. ನನ್ನ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದೇನೇ ಹೊರತು, ನಿಮ್ಮಿಂದ ಯಾವೊಂದು ಸರ್ಟಿಫಿಕೇಟ್ ನೀಡುವಂತೆ ಪ್ರಸ್ತಾಪಿಸಲಿಲ್ಲ. ಭಾರತ ದೇಶದಲ್ಲಿ ಕಾನೂನು ಎಲ್ಲಿ, ಯಾರಿಗೆ, ಎಷ್ಟರ ಮಟ್ಟಿಗೆ ಉಪಲಭ್ದ ಎಂಬುದು ನಿಮಗೆ ತಿಳಿದಿಲ್ಲವೆಂದು ಕಾಣುತ್ತದೆ. ಅಂಕಣದಲ್ಲಿ ತಿರುಚಿ ಬರೆಯಬೇಕೆಂಬ ಅಭಿಲಾಶೆ ನನಗಿಲ್ಲ. ಪ್ರವಾದಿ ನಿಂದನೆ, ಕುರಾನ್ ಮತ್ತು ಹದೀಸನ್ನು ತುಚ್ಚಿಕರೀಸುವುದು, ನಿಮ್ಮ ಪ್ರಕಾರ ಸಣ್ಣ ತಪ್ಪೆಂದು ನೀವು ಭಾವಿಸಿದರೆ, ನಿಮ್ಮ ಮೂಡತನದ ಪರಮಾವಧಿ. ಮತ್ತೆ ಹಿರಿಯರು ನೆಟ್ಟ ಮರಕ್ಕೆ ಜೋತು ಬೀಳುವುದು ನಿಮ್ಮಂತಹ ಮುಸ್ಲಿಯಾರ್ಗಳು ಪ್ರವೀಣರು. ಕಾನೂನು ಮತ್ತು ಪತ್ರಿಕೊದ್ಯಮದ ಬಗ್ಗೆ ನನಗೆ ನಿಮ್ಮಿಂದ ಪಾಠ ಕಲಿಯುವ ಪ್ರಮೆಯೇ ಈ ತನಕ ಬಂದಿಲ್ಲ. ನೀವೆಂದ ಹಾಗೆ ಪತ್ರಿಕಾ ಮಂಡಳಿಗೆ ಮತ್ತು ಮಾನ ನಷ್ಟ ಮೊಕದ್ದಮೆ ಹೂಡಲು ನಿಮಗೆ ಕಾನೂನಿನಲ್ಲಿ ಅವಕಾಶವಿದೆಯಲ್ಲ? ನಿಮಗೆ ಪ್ರವಾದಿಯವರಮೇಲೆ ಪ್ರೀತಿ ಇಲ್ಲವೆ? ಕುರಾನ್ ಮತ್ತು ಹದೀಸ್ ಗ್ರಂಥಗಳ ಬಗ್ಗೆ ನಿಮಗೆ ತಾತ್ಸಾರವೆ? ನನಗನ್ನಿಸುವಂತೆ ನೀವು ಕನ್ನಡ ಪ್ರಭದ ಸ್ತಳೀಯ ಏಜಂಟರೆಂದು ತಿಳಿಯಬಹುದೆ? |
| Hamza musliyar, puttur | 2010-03-11 | | ಮಾನ್ಯ ಇಬ್ರಾಹಿಮ್ ಹುಸೇನ್ ಸಾಹೇಬರೇ ತಾವು ವಿಷಯವನ್ನು ತಮ್ಮ ಜಾಣ ತಾಣದಿಂದ ತಿರುಗಿಸುತಿದ್ದೀರ. ನಾನು ಎಲ್ಲೂ ಪ್ರವಾದಿ ನಿಂದಕರನ್ನು ಸಮರ್ಥಿಸಿಲ್ಲ. ಆದರೆ ನೀವು ಹಾಗೆ ಹೇಳಿ ಅದನ್ನು ಸಮರ್ಥಿಸುತಿದ್ದೀರಾ. ತಪ್ಪು ಮಾಡಿದವನಿಗೆ ಕ್ಷಮೆ ಇದೆ. ಅದಕ್ಕೆ ನೀವು ಕೊಟ್ಟ ಉದಾಹರಣೆ ಬ್ರಿಟಿಷರ ಕೆನ್ನೆಗೆ ಹೊಡೆಯುವ ಓದಿದರೆ ಏನೋ ಒಂದು ಕಡೆ ನೀವು ಚರ್ಚೆಯನ್ನು ದಾರಿ ತಪ್ಪಿಸುತ್ತಿದ್ದೀರ ಅಂತ ಅನಿಸುತ್ತದೆ. ಇಲ್ಲಿ ವಿಷ್ಯ ಇರುವುದು ಲೇಖನದ ಬಗ್ಗೆ ಅಲ್ಲ. ಕನ್ನಡ ಪ್ರಭದಲ್ಲಿ ಬರೆದ ಲೇಖನ ಖಂಡನೀಯ ಮತ್ತು ಅದು ತಪ್ಪು. ಅದನ್ನು ಪ್ರಶ್ನಿಸಲು ಕಾನೂನು ಇದೆ. ಮತ್ತು ಪತ್ರಿಕಾ ಮಂಡಳಿ ಇದೆ. ಜೊತೆಗೆ ಪತ್ರಿಕೆಗಳಿಗೆ ನೀತಿ ಸಂಹಿತೆ ಅನ್ನೋದು ಇದೆ. ಬಹುಶ ತಮಗೆ ಇದ್ದು ಗೊತ್ತಿಲ್ಲವೋ ಅಥವಾ ಭಾರತದ ಕಾನೂನಿನ ಮೇಲೆ ನಂಬಿಕೆ ಇಲ್ಲವೋ ಗೊತ್ತಿಲ್ಲ. ಅದಕ್ಕೆ ಕಾನೂನು ಬದ್ಧ ಹೋರಾಟದ ಮೂಲಕ ಪರಿಹಾರ ಕಂಡು ಕೊಳ್ಳ ಬೇಕೇ ವಿನಃ ದಾಲಿಯಿಂದಲ್ಲ ಎಂಬುವುದು ನನ್ನ ಭಾವನೆ. ಮತ್ತೆ ಸರ್ಕಾರ ಯಾವುದೇ ಇರಲಿ. ಭಾರತದ ಕಾನೂನ್ನು ಬಲಿಷ್ಟವಾಗಿದೆ. ಮತ್ತು ಅದರಲ್ಲಿ ನನಗೆ ಇನ್ನೂ ನಂಬಿಕೆ ಇದೆ. ಪತ್ರಿಕೆಗಳ ಮೇಲೆ ಪತ್ರಿಕಾ ಮಂಡಳಿಗೆ ದೂರು ಕೊಡಬಹುದು. ಮತ್ತು ಲೇಖಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬಹುದೂ. ಅದು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. |
| Ibrahim Hussain, Udipi, Karnataka | 2010-03-11 | | ಮಾನ್ಯ ಮುಸ್ಲಿಯಾರ್ ನಾನೇನು ಗಲಭೆಯನ್ನು ಸಮರ್ಥಿಸಲಿಲ್ಲ. ಪತ್ರಕರ್ತರು ಎಂದಮೇಲೆ ಅವರೇನು ಆಕಾಶದಿಂದಾಗಲಿ ಸ್ವರ್ಗದಿಂದಾಗಲಿ ಉದುರಿಬಿದ್ದವರಲ್ಲ. ಲೇಖನವು ಒಂದು ಜನಾಂಗದ ವಿರುದ್ದ ಬರೆಯಬಾರದು ಎಂಬುದು ಕಾನೂನು ಬಾಹಿರ ಎಂಬುದು ಪತ್ರಕರ್ತರು ಮನಗಾಣಬೇಕೇ ವಿನಹ ಮನ ಬಂದಂತೆ ಯಾವುದೇ ಧರ್ಮದ ಬಗ್ಗೆ ವಿರುದ್ಧವಾಗಿ ಬರೆಯಬಾರದು ಎಂದು ನೀವು ಪತ್ರಕರ್ತರಿಗೆ ಉಪದೇಶ ನೀಡಿ ಪುಣ್ಯ ಕಟ್ಟಿಕೊಳ್ಳಿ. ಇನ್ನು ಪ್ರವಾದಿ ನಿಂದನೆ, ಕುರಾನ್ ಮತ್ತು ಪ್ರವಾದಿಚರ್ಯೆಗಳನ್ನು ಹದಿಸ್ ಗ್ರಂಥವನ್ನು ಹೀಯಾಳಿಸುವುದು, ಮಹಾ ಪ್ರಮಾದವೆಂಬುದು ಮುಸ್ಲಿಯಾರ್ಗೆ ತಿಳಿಯದಿರುವೂದು ದುಖಃದ ಸಂಗತಿ. ಇನ್ನು ಮೂಲಭೂತವಾದಿವೆಂದು ನನ್ನನ್ನು ಸಂಭೊದಿಸಿರುವೂದು ಸಮಯೋಚಿತ. ಏಕೆಂದರೆ ಒಂದೆ ದೇವ, ಪವಿತ್ರ ಕುರಾನ್, ಪ್ರವಾದಿಚರ್ಯೆಯನ್ನು ಅನುಸರಿಸುವ ಎಲ್ಲ ಮುಸ್ಲಿಮರು ಮೂಲ ಭೂತವಾದಿಗಳು ವಿನಃ ಸಮಾದಿ ಪೂಜಕ ರನ್ನು ಹೊರತುಪಡಿಸಿ. ಅಂತೆಯೆ ದೇಶದ ಸಂವಿಧಾನ ಮತ್ತು ಕಾನೂನನ್ನು ಪಾಲಿಸುವುದು ಮುಸ್ಲಿಮರ ಪರಮ ಕರ್ತವ್ಯ. ಅವರಲ್ಲಿ ನಾನು ಒಬ್ಬನೆ. ಅಂಗ್ಲರು ಕೆನ್ನೆಗೆ ಬಾರಿಸಿ ಸಾರಿ ಎಂದು ಹೇಳಿದ ಹಾಗೆ, ರಾಜ್ಯದ ವಿವಿದೆಡೆಯಲ್ಲಿ ಉಂಟಾದ ಗಲಭೆ ಗಳಿಗೆ ಕಾರಣ ಭೂತರಾದ ಪತ್ರಕರ್ತರು ಸಾರಿ ಎಂದು ಹೇಳುವುದು ಇವರಿಗೆ ಪರಿಪಾಟವಾಗಿದೆ. ನಿಮಗೆ ನಿಜವಾಗಿಯೂ ಧಾರ್ಮಿಕ ತಿಳುವಳಿಕೆ ಇರುತ್ತಿದ್ದರೆ ನನ್ನನ್ನು ತೆಗಳುತ್ತಿರಲಿಲ್ಲ. ಪ್ರವಾದಿ ನಿಂದನೆ ಮಹಾ ಅಪರಾಧ ಎಂಬುದು ನಿಮ್ಮ ತಿಳುವಳಿಕೆಗೆ ಬರದಿರುವುದು ದುರದ್ರಶ್ಟ ಕರ. ಒಂದು ವೇಳೆ ಇತರ ಧರ್ಮಿಯರ ವಿರುದ್ಧ ಒಬ್ಬ ಮುಸ್ಲಿಮ್ ಲೇಖನನು ಬರೆದಿರುತಿದ್ದರೆ, ಲೇಖನನು ಕಂಬಿ ಎಣಿಸಬೇಕಿತ್ತು. ಈಗಿನ ಸರಕಾರದ ಕಾರ್ಯವೈಖರಿ ಇದೆ ತರನೇ. ನೀವು ನನ್ನನ್ನು ಕೀಳು ಅಥವಾ ಸಣ್ಣತನವೆಂದು ಕಾಣಲು ಅರ್ಹರಲ್ಲ ಎಂಬುದು ನನ್ನ ತಿರುಗೇಟು ನಿಮಗೆ. |
| Rihaan, Mangalore | 2010-03-11 | | ಪುರುಷೋತ್ತಮ ಹೇಳಿದ ಹಾಗೆ ಮಾಡಿ ನಮ್ಮ ಪ್ರಿಯ ಸಂಪಾದಕರೆ ಅಶ್ರಫ್ ನ ವರದಿಗಳು ಹಾಕಬಾರದು ಯಾಕೆಂದರೆ ಆತ ಒಬ್ಬ ಉತ್ತಮ ಲೇಖಕ ಸಮಾಜದ ಬಗ್ಗೆ ಒಳ್ಳೆ ಕಾಳಜಿ ಇರುವ ವ್ಯಕ್ತಿ , ಯೆಲ್ಲರಕ್ಕಿಂದ ಮೇಲೆ ಆತ ಒಬ್ಬ ಮುಸಲ್ಮಾನ .ಯಾವತ್ತು ಮುಸ್ಲಿಮರನ್ನು ಕಂಡು ವಿಷ ವನ್ನ್ನು ಉಗುಳುವ ಹಾಗು ಇತರ ಧರ್ಮ ವನ್ನು ದ್ವೇಷಿಸುವ ಪ್ರಮೋದ್ ಮತಲಿಕ್ ನಂತಹ ಸಮಾಜ ದ್ರೋಹಿ ಗಳ ಭಾಷಣವನ್ನು ಗಲ್ಫ್ ಕನ್ನಡಿಗ ಪ್ರಕಟಿಸಬೇಕು ಅಲ್ವೇ ಪುರುಷೋತ್ತಮ್ ರವರೆ? ಯಾವನೇ ಇರಲಿ ಸಮಾಜದ ನೆಮ್ಮದಿ ಕೆಡಿಸಿ ದವ ತಪ್ಪಿತಸ್ತನೆ ಆಗಿರುತ್ತಾನೆ. ಕನ್ನಡ ಪ್ರಭ ದಲ್ಲಿ ಪ್ರಕಟ ವಾದ ವರದಿ ಯನ್ನು ಪ್ರತಿಭಟಿಸಿ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿದ ಮುಸ್ಲಿಮನಗಲಿ ಅಥವ ವ್ಯವಸ್ತಿತ ವಾಗಿ ಇಂತಹ ಒಂದು ಸನ್ನಿವೇಶದ ಲಾಭ ಪಡೆಯಲು ಕಚೇರಿ ಮೇಲೆ ಹಟಾತ್ ದಾಳಿ ನಡೆಸಿ ಕೋಮು ಗಲಭೆ ಯಾ ಸಂಚು ರೂಪಿಸಿರುವ ಸಮಾಜ ದ್ರೋಹಿ ಯಾಗಲಿ ಅವನು ಶಿಕ್ಷೆ ಗೆ ಅರ್ಹ ನಾಗಿದ್ದಾನೆ .
|
| ಶೇಕ್ಸಪಿಯರ್, ಫ್ರಾಮ್... ಯು.ಕೆ. | 2010-03-11 | | ಪುರೋಸೋತ್ತಾಮ ಎಲ್ಲಾ ಓಕೆ . ಲೇಖನ ಓದಬೇಡಿ ಎಂಬ ನಿನ್ನ ಅಧಿಕ ಪ್ರಸಂಗ ಏಕೆ ?
ನೀನು ಓದಬೇಡ ಓಕೆ. ಬೇರೆಯವರಿಗೆ ಹೇಳುವುದು ಯಾಕೆ ?
ಗಲ್ಫ್ ಕನ್ನಡಿಗ ಪ್ರಕಟಿಸಲಿ ಓಕೆ. ಬೇಡ ಅನ್ನುವ ನಿನ್ನ ನೀಚ ಕೆಲಸ ಯಾಕೆ ?
ನಿನಗೆ ಓದಲು ಕಷ್ಟ ಓಕೆ. ಆದರೆ ಬೇರೆಯವರಿಗೆ ಬುದ್ಧಿವಾದ ಏಕೆ ?
ನೀನು ಸುಮ್ಮನಿರುವುದೇ ಓಕೆ. ಇಲ್ಲದ ತಲೆ ಹರಟೆ ಯಾಕೆ ?
|
| ಹನೀಫ್, ಸಕಲೇಶಪುರ. | 2010-03-11 | | ಮಾನ್ಯ ವಿಶಾಲ ಕಲ್ಯಾಣಪುರ ದುಬೈ ನಿಮ್ಮ ಹೆಸರಿನ ಹಾಗೆ ನಿಮ್ಮ ಮನಸ್ಸು ವಿಶಾಲ ಇಲ್ಲ ಅಂತ ಕಾಣುತ್ತೆ. crhcr
ಅಶ್ರಫ್ ಮಂಜ್ರಾಬಾದ್ ನ ಹೆಸರನ್ನು ಬಿಲಾಲ್ ಎಂಬ ಆ ಅರೆ ಓದುಗ ಕೇಳಿಯೇ ಇಲ್ಲ. ನೀವು ಹೆಸರು ಕೇಳಿದ್ದೀರಾ. ಮತ್ತೆ ಅನಿವಾಸಿ ಪತ್ರಕರ್ತರ ಸಂಘ ಕೊಲ್ಲಿ ರಾಷ್ಟ್ರದಲ್ಲಿ ಹೇಳ ಹೆಸರಿಲ್ಲದೆ ಹುಟ್ಟಿ ಕೊಂಡಿದೆಯಲ್ಲ ಎಂಬ ತಮ್ಮ ಪ್ರಶ್ನೆ ಬಾಲಿಶ. ಬಹುಶ ಅದರ ಸ್ಥಾಪನೆಗೆ ನಿಮ್ಮನ್ನು ಕರೆಯ ಬೇಕಿತ್ತು ಅಂತ ಕಾಣುತ್ತೆ. ಸರಿಯಾಗಿ ನಾಲ್ಕು ಜನರಿಗೆ ಗೊತ್ತಿಲ್ಲದ ನಿಮ್ಮನ್ನು ಕೇಳಿ ಗಲ್ಫ್ ನಾಡಿನಲ್ಲಿ ಸಂಘ ಕಟ್ಟಬೇಕೆ ?ಸರಿಯಾಗಿ ತಾವು ದುಬೈನಲ್ಲಿರುವ ತಮ್ಮ ಸ್ಥಳದ ಅಡ್ರೆಸ್ಸ್ ಬರೆಯುದು ಕಲಿಯಿರಿ. ಆನಂತರ ಅಶ್ರಫ್ ಅನಿವಾಸಿ ಕನ್ನಡಿಗರ ಪತ್ರಕರ್ತರ ಅಡ್ರೆಸ್ಸ್ ಕೇಳಿ . |
| Hamza musliyar, puttur. | 2010-03-11 | | ಇಬ್ರಾಹಿಮ್ ಹುಸೇನ್ ರವರೆ ಪತ್ರಕರ್ತರ ಮೇಲೆ ದಾಳಿ ನಡೆದಾಗ ಪತ್ರಕರ್ತರು ಖಂಡಿಸುವುದು ಸಾಮಾನ್ಯ . ಮತ್ತು ಅದು ಅವರ ಹಕ್ಕು ಕೂಡ. ನಿಮ್ಮ ಹೇಳಿಕೆ ನೋಡಿದರೆ ನೀವು ಪತ್ರಿಕೆಗಳ ಮೇಲಿನ ದಾಳಿಯನ್ನು ಸಮರ್ಥಿಸಿದಂತಿದೆ. ನಾಚಿಕೆಯಾಗಬೇಕು ನಿಮಗೆ. ಒಂದು ಪತ್ರಿಕೆ ತಪ್ಪು ಲೇಖನ ಪ್ರಕಟಿಸಿ ಕ್ಷಮೆ ಕೇಳಿದೆ. ತಪ್ಪು ಮಾಡಿ ಅದನ್ನು ಗೊತ್ತಾಗಿ ಮುಕ್ತ ಮನಸ್ಸಿನಿಂದ ಒಬ್ಬ ಕ್ಷಮೆ ಕೇಳಿದರೆ ಅಲ್ಲಾಹನು ಕ್ಷಮಿಸುತ್ತಾನೆ ಎಂದು ಧರ್ಮದಲ್ಲೇ ಇದೆ. ಹೀಗಿದ್ದೂ ಪತ್ರಿಕೆಯ ಸಂಪಾದಕರ ಅರಿವಿಗೆ ಬಂದೋ ಇಲ್ಲ ಸಿಂಧೂ ಎಂಬ ಆ ಅನುವಾದ ಮಾಡಿದ ಮಹಿಳೆ ತನ್ನ ಕೋಮುವಾದಿ ಮನಸ್ಸಿನಿಂದ ಬರೆದ ತಪ್ಪಿಗೆ ಸಂಪಾದಕ ಗಮನಕ್ಕೆ ಬರದೆ ಅದು ಪ್ರಕಟ ಆಗಿರಲೂ ಬಹುದು. ಒಟ್ಟಿಗೆ ಆತಪ್ಪಿಗೆ ಕ್ಷಮೆ ಕೇಳಿದ್ದಾರೆ. ಮತ್ತೆ ಪತ್ರಿಕಾ ಕಚೇರಿಯ ಮೇಲಿನ ದಾಳಿಯನ್ನು ಮುಸ್ಲಿಂ ಸಂಘಗಳು ಕೂಡ ಖಂಡಿಸಿವೆ. ಇದೆ ಅಶ್ರಫ್ ಮಂಜ್ರಾಬಾದ್ ಮತ್ತು ಅವರು ಸ್ಥಾಪಿಸಿದ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಕೆಲ ದಿನಗಳ ಹಿಂದೆ ಆರಿಫ್ ಎಂಬ ವಾರ್ತಾ ಭಾರತಿ ವರದಿಗಾರನ ಮೇಲೆ ದಾಳಿ ನಡೆದಾಗಲೂ ಖಂಡಿಸಿತ್ತು. ರಹೇಂ ಉಜಿರೆ ಮೇಲೆ (ಕಸ್ತೂರಿ.ಟಿ.ವಿ. ವರದಿಗಾರ) ಹಲ್ಲೆ ನಡೆದಾಗಲೂ ಖಂಡಿಸಿತ್ತು. ಆಗ ಮೌನವಾಗಿದ್ದ ತಾವು ಈಗ ಏಕಾ ಏಕಿ ಖಂದನೆಯನ್ನು ವಿರೋಧಿಸುತ್ತಿರುವುದು ತಮ್ಮ ಮೂಲಭೂತವಾದಿ ಮನೋಸ್ಥಿತಿಗೆ ಸಾಕ್ಷಿ ಎನ್ನಬಹುದು.
ಇಷ್ಟಕ್ಕೂ ಮಂಗಳೂರಿನ ಪತ್ರಿಕೆಗಳ ಮೇಲೆ ದಾಳಿ ನಡೆಸಿದವರು ಯಾರು ಎಂದು ಇನ್ನೂ ಗೊತ್ತಾಗಿಲ್ಲ. ಅದಾಗಲೇ ತಾವು ಮುಸ್ಲಿಮರು ಲೇಖನ ವಿರೋಧಿಸಿ ನಡೆಸಿದರು ಎನ್ನುವ ರೀತಿ ಕಾಮೆಂಟ್ ಬರೆದಿರುವುದು ತಮ್ಮ ಸಣ್ಣ ಬುದ್ದಿಗೆ ಸಾಕ್ಷಿ. ಈ ಅವಕಾಶ ಉಪಯೋಗಿಸಿ ಬೇರೆ ಕೋಮುವಾದಿ ಸಂಘಟನೆಗಳು ದಾಳಿ ಮಾಡಿರಬಹುದು. ದಯವಿಟ್ಟು ನೀವು ಮೂಲಭೂತವಾದಿ ಮನಸ್ಸಿನಿಂದ ಹೊರ ಬನ್ನಿರಿ .
http://www.gulfkannadiga.com/news-19309.html |
| ಅಭಿಮಾನಿ ಗಲ್ಫ್ ಕನ್ನಡಿಗ, ದುಬೈ | 2010-03-10 | | ಮಾನ್ಯ ಪುಣ್ಯಾತ್ಮ ಪುರುಷೋತ್ತಮ ಅಶ್ರಫ್ ಮಂಜ್ರಬಾದ್ ಲೇಖನ ಪ್ರಕಟಿಸಬೇಡಿ ಮತ್ತು ಅದನ್ನು ಓದಬೇಡಿ ಎಂದು ಹೇಳಲು ನೀನು ಯಾರು ? ಮತ್ತೆ ಗಲ್ಫ್ ಕನ್ನಡಿಗ ಸಂಪಾದಕರೆ ನಿಮ್ಮ ಗಲ್ಫ್ ಕನ್ನಡಿಗಕ್ಕೆ ವರದಿ ಕಳುಹಿಸುವ ಒಬ್ಬ ವರದಿಗಾರನ ಮೇಲೆ ಈ ರೀತಿ ಆತನ ಲೇಖನ ಹಾಕಬೇಡಿ ಮತ್ತು ಗಲ್ಫ್ ಕನ್ನಡಿಗ ಓದುಗರು ಅದನ್ನು ಓದಬೇಡಿ ಎಂದು ಈ ಪುರುಷೋತ್ತಮ ಹೇಳಿದಾಗಲೂ ಅದನ್ನು ಖಂಡಿಸದೆ ಇರುವ ತಮ್ಮ ಈ ಮೌನ ಪುರುಷೋತ್ತಮಾನ ಹೇಳಿಕೆಗೆ ಸಮರ್ಥನೆ ಎನ್ನಬಹುದೇ ? |
| RAFEEK, BELMA. MANGALORE | 2010-03-10 | | MR. BILAL, PURUSHOTTAMA AND RAVIRAJ I KNOW HIM.AND I HEARD HIS NAME.SO I KNOW WHO IS ASHRAF MANJARABAD. BUT I DONT KNOW WHO R U ? I HEARD ASHRAF MANJARABAD NAME IN MANY TIMES IN GULF KANNADIGA ALSO. BUT I DIDNT HEARD YOUR NAMES IN ANY PLACE. SO ITS BETTER DONT BLAME TO ANY PERSON FOR PUBLISITY. IF U WANT TO PUBLICITY WRITE GOOD ARTICLE IN GK. ADU BITTU IDU ELLAA YAAKE ? |
| ಹನೀಶ್ , ಕುವೈಟ್ | 2010-03-10 | | ಅಶ್ರಫ್ ಮಂಜರಾಬಾದ್ ಇತ ಯಾರೆಂದು ಗೊತ್ತಿಲ್ಲ ಅಂತ ಬರೆದಿದ್ದೀರ. ಪೇಪರ್ ಓದಲು ಬರುವವರಿಗೆ ಇತ ಯಾರೆಂದು ಗೊತ್ತು. ನಿಮ್ಮಂತ ತಿಂಗಳಿಗೊಮ್ಮೆ ಪೇಪರ್ ನೋಡುಗರಿಗೆ ಇವರ ಪರಿಚಯ ಇರಲಿಕ್ಕಿಲ್ಲ. ಇನ್ನಾದರೂ ದಿನಾಲೂ ಪೇಪರ್ ಓದಿ ಮಾರಾಯರೇ ........... |
| ವಿಶಾಲ್ ಕಲ್ಯಾಣ್ ಪುರ್, ದುಬೈ | 2010-03-10 | | ಶ್ರೀಯುತ ಬಿಲಾಲ್ ರವರು ಸರಿಯಾದ ಪ್ರಶ್ನೆಯನ್ನೇ ಎತ್ತಿದ್ದಾರೆ. ನಾನು ಕೂಡಾ ಹಲವು ಸಮಯದಿಂದ ಈ ಅಶ್ರಫ್ ಮುಂಜ್ರಾಬಾದ್ ಎಂಬ ಹೆಸರನ್ನು ಓದುತ್ತಿದ್ದೇನೆ. ಯಾರೀತ ? ಎಲ್ಲಿದೆ ಇವರ \"ಅನಿವಾಸಿ ಪತ್ರಕರ್ತರ ಸಂಘ?\" . ಹೇಳಹೆಸರಿಲ್ಲದೆ ಕೊಲ್ಲಿರಾಷ್ಟ್ರದಲ್ಲೊಂದು ಪತ್ರಕರ್ತರ ಸಂಘ ಹುಟ್ಟಿಕೊಂಡಿದೆ ಯಲ್ಲಾ ...ಈ ಸಂಘದ ವಿಳಾಸವನ್ನು (ಫೋನ್ ಕ್ರಮಾಂಕ, ಪೋಸ್ಟ್ ಬಾಕ್ಸ್ ಕ್ರಮಾಂಕ ಮತ್ತು ಈ ಮೇಲ್ ವಿಳಾಸ ಇತ್ಯಾದಿ ಗಳನ್ನು ಇದ್ದರೆ(?) ) ತಿಳಿಸಿದರೆ ಅನುಕೂಲವಾಗುತ್ತಿತ್ತು . ಈ ಅಶ್ರಫ್ ಮುಂಜ್ರಾಬಾದ್ ತಿಳಿಸದಿದ್ದರೆ ಅವರ ಪ್ರತಿಯೊಂದೂ ಬರಹಗಳನ್ನು \"ಕ್ರಪೆ\" ಅಶ್ರಫ್ ಮುಂಜ್ರಾಬಾದ್ ಎಂದು ಬರೆಯುತ್ತಿರುವ ಗಲ್ಫ್ ಕನ್ನಡಿಗ ದವರಿಗಂತೂ ಖಂಡಿತಾ ಗೊತ್ತಿರಲೇ ಬೇಕಲ್ಲಾ... ಸರಿಯಾದ ವಿಷಯವನ್ನು ಎತ್ತಿದುದಕ್ಕಾಗಿ ಧನ್ಯವಾದಗಳು ಬಿಲಾಲ್ ರವರಿಗೆ. |
| Ibrahim Hussain, Udipi, Karnataka | 2010-03-10 | | ಮಾನ್ಯ ಅಶ್ರಫ್ನವರೆ, ನಿಮ್ಮಲ್ಲಿ ಒಂದು ಪ್ರಶ್ನೆ. ಕನ್ನಡ ಪ್ರಭ ಒಂದು ರಾಜ್ಯಾದ ಪ್ರಧಾನ ವಾರ ಪತ್ರಿಕೆ. ಲೇಖನ ಪ್ರಕಟಿಸುವ ಮೊದಲು ಪ್ರಕಾಶಕರು ಲೇಖನದ ಸಾಧ್ಯತೆ ಮತ್ತು ಭಾಧ್ಯತೆ ಅಲ್ಲದೆ ಮುಂದಾಗುವ ಎಡರು ತೋಡರುಗಳನ್ನು ಅವಲೋಖಿಸಿ ಮುದ್ರಿಸಬೇಕೆಂದು ತಿಳಿದಿರಲಿಲ್ಲವೇ? ಪ್ರವಾದಿಯವರನ್ನು, ಅವರ ಪತ್ನಿಯರನ್ನು ತುಚ್ಚವಾಗಿ ಬರೆದುದನ್ನು ನೀವು ಓದಿರುವಿರೊ? ಅಲ್ಲದೆ ಖುರಾನ್ ಮತ್ತು ಪ್ರವಾದಿಚರ್ಯೆಯನ್ನು ತಿರುಚಿ ಬರೆದವರಿಗೆ, ಕಾನೊನಿನ ಪ್ರಜ್ನೆಯಿಲ್ಲವೆ? ಪ್ರಕಾಶಕರು ಮಾಡಿದ ಮಹಾ ಪ್ರಮಾದವನ್ನು ನೀವು ಸಮರ್ಥಿಸುವ ನೀವೆಂತಹ ಜಾಣರು? ಪತ್ರಿಕೆಯ ಮೇಲೆ ಈ ತನಕ ಸರಕಾರ ಏನು ಕ್ರಮ ಕೈಗೊಂಡಿರುತ್ತೆ? ಕಾನೂನು ಎಲ್ಲರಿಗೆ ಒಂದೇ ತಾನೆ? |
| Raviraj, Baharain | 2010-03-10 | | ಸರಿಯಾಗಿ ಹೇಳಿದಿರಿ ಬಿಲಾಲ್ . ಅಶ್ರಫ್ ಮಂಜರಾಬಾದ್ ಲೇಖನ ಮತ್ತು ಆತನ ಪತ್ರಿಕಾ ದಾಳಿ ಪ್ರಕರಣದ ಖಂಡನೆ ರೀತಿ ನೋಡಿದರೆ ಆತ ಒಬ್ಬ ಷೋ ಮ್ಯಾನ್ ಅಂತ ತಿಳಿಯುತ್ತದೆ. ಆತನ ಈ ಬರಹಗಳನ್ನು ವಿರೋಧಿಸಿದ ಏಕೈಕ ಮೊದಲ ವ್ಯಕ್ತಿ ನೀವು. ನಾನು ಇಲ್ಲಿ ಆತನ ಹಲವಾರು ಬರಹಗಳನ್ನು ನೋಡಿದ್ದೇನೆ. ಆದರೆ ಇದುವರೆಗೆ ಯಾರೂ ವಿರೋಧಿಸಿಲ್ಲ. ಬಹುಶ ಒಬ್ಬ ಪ್ರಗತಿಪರ ಮುಸ್ಲಿಂ ಆಗಿ ನೀವು ಆತನ ಬರಹ ವಿರೋಧಿಸಿರಬಹುದು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್, ಮಂತ್ರಿ ಮುಮತಾಜ್ ಅಲೀ ಖಾನ್ ತರಹ ನೀವು ಒಬ್ಬ ನೈಜ ಮುಸ್ಲಿಂ ಎಂಬುವುದು ನಿಮ್ಮ ಈ ಮುಕ್ತ ಅಭಿಪ್ರಾಯದಿಂದ ಗೊತ್ತಾಗುತ್ತದೆ. ಶಹಬಾಶ್. ಬಿಲಾಲ್ ಸಾಹೇಬರೇ. ನಿಮ್ಮ ಮಾತುಗಳು ಒಪ್ಪುವನ್ತಹದ್ದು. |
| ಪುರುಷೋತ್ತಮ. ಎಂ.ಎ, ಮಂಗಳೂರು | 2010-03-10 | | ಮಾನ್ಯ ಬಿಲಾಲ್. ರಿಯಾದ್ ರವರೆ ನೀವು ಹೇಳಿದ ಹಾಗೆ ಈ ಆಶರಫ್ ಮಂಜರಾಬಾದ್ ಯಾರು ಎಂಬುವುದು ಬಹುಶ ಯಾರಿಗೂ ಗೊತ್ತಿಲ್ಲ. ಈತನನ್ನು ನಮ್ಮ ಈ ಗಲ್ಫ್ ಕನ್ನಡಿಗ ಮಾತ್ರ ದೊಡ್ಡ ಲೇಖಕನ ಹಾಗೆ ಬೆಳೆಸುತ್ತಿದೆ. ಈತ ಇಲ್ಲಿ ವಿಶಿಷ್ಟ ಬರಹದಲ್ಲಿ ಬರೆದ ಲೇಖನಗಳನ್ನು ನೋಡಿ. ಈ ರೀತಿಯ ಲೇಖನ ಗಲ್ಫ್ ಕನ್ನಡಿಗ ಯಾಕೆ ಪ್ರಕಟಿಸುತ್ತದೆ ಎಂದು ತಿಳಿದಿಲ್ಲ. ಅದೇ ತರ ಸೌದಿ ಅರೇಬಿಯಾದ ಕಾಲಮಿನಲ್ಲಿ ಈತನ ಸುದ್ಧಿಗಳು ಗಲ್ಫ್ ಕನ್ನಡಿಗ ಪ್ರಕಟಿಸುತ್ತದೆ. ದಯವಿಟ್ಟು ಈ ವ್ಯಕ್ತಿಯ ಸುದ್ಧಿ ಮತ್ತು ಲೇಖನ ಪ್ರಕಟಿಸಬೇಡಿ. ಮತ್ತು ಓದುಗರು ಈತನ ಲೇಖನ ಓದಬೇಡಿ |
| Bilal, Riyadh | 2010-03-10 | | This is the first time I heard about this name, Ashraf Munjrabad, having a anivasi kannadiga patrakartara sangha. Is it just new one or just to make a show off |
|
|
ಎಲ್ಲಾ ವರದಿಗಳು [ಸೌದಿ ಅರೇಬಿಯ] |
|